Homeಕರೋನಾ ತಲ್ಲಣಮೂಗಿನಲ್ಲಿ ನಿಂಬೆರಸ ಶಿಕ್ಷಕನ ಬಲಿ ಪಡೆಯಿತೇ? ಸಂಕೇಶ್ವರ ಸಲಹೆ ಆಕ್ಷೇಪಿಸಿದ ಡಾ, ನರೇಂದ್ರ ನಾಯಕ್‌ರಿಗೆ ಫೇಸ್‌ಬುಕ್...

ಮೂಗಿನಲ್ಲಿ ನಿಂಬೆರಸ ಶಿಕ್ಷಕನ ಬಲಿ ಪಡೆಯಿತೇ? ಸಂಕೇಶ್ವರ ಸಲಹೆ ಆಕ್ಷೇಪಿಸಿದ ಡಾ, ನರೇಂದ್ರ ನಾಯಕ್‌ರಿಗೆ ಫೇಸ್‌ಬುಕ್ ನಿರ್ಬಂಧವೇಕೆ?

- Advertisement -
- Advertisement -

ಸಿಂಧನೂರಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮೂಗಿನಲ್ಲಿ ನಿಂಬೆರಸ ಸುರಿದುಕೊಂಡಿದ್ದೇ ಕಾರಣ ಎಂದು ಅವರ ಕುಟುಂಬಸ್ಥರು, ಸಹೋದ್ಯೋಗಿಗಳು ಅಪಾದಿಸಿದ್ದಾರೆ. ನಿಂಬೆರಸ ಮೂಗಿಗೆ ಸುರಿದುಕೊಂಡ ಶಿಕ್ಷಕ ಒದ್ದಾಡಿ ಸತ್ತರು ಎಂದು ಕನ್ನಡದ ಹಲವು ಪತ್ರಿಕೆಗಳು ವರದಿ ಮಾಡಿದೆ.

ಇನ್ನೊಂದು ಕಡೆ, ಸಂಕೇಶ್ವರರ ನಿಂಬೆರಸ ಸಲಹೆಯನ್ನು ಆಕ್ಷೇಪಿಸಿ, ವೈಜ್ಞಾನಿಕ ಮತ್ತು ವೈದ್ಯಕೀಯ ಅಂಶಗಳನ್ನು ಉಲ್ಲೇಖಿಸಿದ್ದ ಜೀವ ರಸಾಯನ ತಜ್ಞ, ಮೂಢನಂಬಿಕೆ ವಿರುದ್ಧ ಆಂದೋಲನ ನಡೆಸುತ್ತ ಬಂದಿರುವ ಡಾ, ನರೇಂದ್ರ ನಾಯಕ್, ನಿಂಬೆರಸದಿಂದ ಆಮ್ಲಜನಕ ಮಟ್ಟ ಹೆಚ್ಚುತ್ತದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಮೊನ್ನೆ ಪ್ರಕಟಿಸಿದ್ದ ಫೇಸ್‌ಬುಕ್ ವಿಡಿಯೋ ಕಾರಣಕ್ಕಾಗಿ, ಫೇಸ್‌ಬುಕ್ ಇಂದು ಅವರ ಖಾತೆಯನ್ನು 24 ಗಂಟೆ ಕಾಲ ನಿರ್ಬಂಧಿಸಿದೆ!

ಈ ಎರಡೂ ಘಟನೆಗಳು ಮತ್ತೆ ನಮ್ಮನ್ನು ವಿಜಯ ಸಂಕೇಶ್ವರ್ ಅವರ ನಿಂಬೆರಸ-ಆಮ್ಲಜನಕ ಕತೆಗೆ ತಂದ ನಿಲ್ಲಿಸುತ್ತವೆ.

ಶಿಕ್ಷಕರ ಸಾವಿಗೆ ನಿಂಬೆರಸವೇ ಕಾರಣವಾಗಿತ್ತೆ?

ಸಿಂಧನೂರಿನ ಶರಣಬಸವೇಶ್ವರ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ 43 ವಯಸ್ಸಿನ ಬಸವರಾಜ್ ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ. ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅವರು ಅಗಲಿದ್ದಾರೆ. ಅವರು ನಿನ್ನೆ ರಾತ್ರಿ ಮತ್ತು ಇವತ್ತು ಮುಂಜಾನೆ ಆಮ್ಲಜನಕ ಮಟ್ಟ ಹೆಚ್ಚಿಸಿಕೊಳ್ಳಲು ಮೂಗಿಗೆ ನಿಂಬೆರಸ ಹಾಕಿಕೊಂಡಿದ್ದೇ ಅವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು, ಅವರ ಸಹೋದ್ಯೋಗಿಗಳು ಆರೋಪಿಸಿದ್ದಾರೆ.

ಮೃತ ಬಸವರಾಜ್ ಅವರ ಸಹೋದ್ಯೋಗಿ ವೀರೇಶ್, ‘ನಮಗಂತೂ ಹಾಗೆ ಅನ್ನಿಸಿದೆ ಸರ್. ನಿನ್ನೆ ತಾನೇ ಬಿಇಒ ಕಚೇರಿಯಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರು ಸದಾ ಸದೃಢರಾಗಿದ್ದರು. ನಿಂಬೆರಸ ಪ್ರಮಾಣವನ್ನು ಜಾಸ್ತಿ ಹಾಕಿಕೊಂಡರು ಎನಿಸುತ್ತದೆ’ ಎಂದು ನಾನುಗೌರಿ.ಕಾಂಗೆ ತಿಳಿಸಿದರು.

‘ಸಾವಿನ ನಿಖರ ಕಾರಣ ನಂತರ ಗೊತ್ತಾಗಬಹುದು. ಆದರೆ ಸಂಕೇಶ್ವರ್ ಅವರು ಈ ನಿಂಬೆರಸ-ಆಮ್ಲಜನಕ ಕತೆ ಹೇಳಿದ ನಂತರ, ಸ್ವಲ್ಪ ಮೈ ಬಿಸಿಯಾದರೂ ಈ ನಿಂಬೆರಸಕ್ಕೆ ಬಹಳಷ್ಟು ಜನ ಒಡ್ಡಿಕೊಳ್ಳುತ್ತಿದ್ದಾರೆ. ನಾನೇ ಬಲ್ಲ ನಮ್ಮ ಕೆಲವು ಶಿಕ್ಷಕರು 20-25 ನಿಂಬೆ ಹಣ್ಣುಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ತಿಳಿದವರೇ ಇಂತಹ ಅವೈಜ್ಞಾನಿಕ ಸಂಗತಿಗೆ ಶರಣಾದರೇ ಹೇಗೆ?’ ಎಂದು ವೀರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಬಸವರಾಜ್ ಮೃತರಾಗಿದ್ದಾರೆ ಎಂದು ಘೋಷಿಸಿದ ಸಿಂಧನೂರಿನ ಶಾಂತಿ ಆಸ್ಪತ್ರೆಯ ವೈದ್ಯರು ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ. ಆಸ್ಪತ್ರೆಯ ಮಾಲೀಕ ನರೇಶ್ ನಮ್ಮೊಂದಿಗೆ ಮಾತನಾಡುತ್ತ, ‘ಇಲ್ಲಿಗೆ ಬರುವ ಮೊದಲೇ ಬಸವರಾಜ್ ಅವರು ಮೃತರಾಗಿದ್ದರು. ನಾವು ಸಹಜ ಕ್ರಮದಂತೆ ಇಸಿಜಿ ಮಾಡಿ, ಅವರು ಮೃತ ಎಂದು ಘೋಷಿಸಿದ್ದೇವೆ. ನಿಂಬೆರಸದಿಂದಾಗಿಯೇ ಸತ್ತರು ಎಂದು ದೃಢವಾಗಿಲ್ಲ. ಅವರಿಗೆ ಬೇರೇನೋ ಸಮಸ್ಯೆ ಇರಬಹುದು ಅಥವಾ ಮೊದಲೇ ಅವರಿಗೆ ಕೋವಿಡ್ ಇದ್ದು ಆ ಭಯಕ್ಕೆ ನಿಂಬೆರಸದ ಪ್ರಯೋಗ ಮಾಡಿರಬಹುದು. ಸಾವಿನ ನಿಖರ ಕಾರಣ ಗೊತ್ತಾಗಲು ಪೊಲೀಸರು ಪೋಸ್ಟ್ ಮಾರ್ಟಂ ಮಾಡಿಸಬೇಕು..’ ಎಂದರು.

ಸಿಂಧನೂರಿನ ಅನ್ನದಾನೀಶ್ವರ ಆಸ್ಪತ್ರೆಯ ಸರ್ಜರಿಯನ್ ಡಾ.ಬಿ.ಎನ್ ಪಾಟೀಲ್, ‘ಕೇಸ್ ಹಿಸ್ಟರಿ ಇಲ್ಲದೇ ಒಮ್ಮೆಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಮೃತರಿಗೆ ಬೇರೆ ಆರೋಗ್ಯ ಸಮಸ್ಯೆ ಇದ್ದು, ಅವರು ಈ ಪ್ರಯೋಗ ಮಾಡಿದಾಗ ಏನೋ ಎಡವಟ್ಟಾಗಿರಬಹುದು. ಆದರೆ ಈಗಲೇ ನಿಖರವಾಗಿ ಹೇಳಲಾಗದು. ಒಂದಂತೂ ಸ್ಪಷ್ಟ, ನಿಂಬೆರಸ ಮೂಗಿನಲ್ಲಿ ಹಾಕಿಕೊಂಡರೆ ಯಾವ ಘನಂದಾರಿ ಅನುಕೂಲವೂ ಇಲ್ಲ, ಹಾಗೆಯೇ ಅದರಿಂದ ಸಾವು ಸಂಭವಿಸುವಂತಹ ಅಪಾಯವಿಲ್ಲ. ತಿಳಿಯಾಗಿರುವ ರಸ ಶ್ವಾಸಕೋಶ ಸೇರಿದರೆ ಸಾವೇನೂ ಸಂಭವಿಸದು. ಆದರೆ, ಈ ನಿಂಬೆರಸ ಪ್ರಯೋಗ ಅವೈಜ್ಞಾನಿಕ. ಜನರು ಎಚ್ಚರವಾಗಿರಬೇಕು’ ಎಂದು ನಾನುಗೌರಿ.ಕಾಂ ಗೆ ತಿಳಿಸಿದರು.

ಕೋವಿಡ್ ಅಥವಾ ಉಸಿರಾಟದ ಸಮಸ್ಯೆ ಇದ್ದು, ಮೃತರು ನಿಂಬೆರಸ ಪ್ರಯೋಗಕ್ಕೆ ಒಡ್ಡಿಕೊಂಡಾಗ ಆರೋಗ್ಯದಲ್ಲಿ ಏರುಪೇರಾಗಿತೆ? ಇದು ನಿಜವಾದರೆ, ಸಂಕೇಶ್ವರ್ ಕ್ರಿಮಿನಲ್ ಅಪರಾಧ ಎಸಗಿದಂತೆ ಅಲ್ಲವೇ?

ಸತ್ಯ ಹೇಳಿದ ವಿಜ್ಞಾನಿಗೆ ಫೇಸ್‌ಬುಕ್ ನಿರ್ಬಂಧ!

ವಿಜಯ ಸಂಕೇಶ್ವರ್ ಅವರು ಸುದ್ದಿಗೋಷ್ಠಿ ಕರೆದು, ಆಮ್ಲಜನಕ ಮಟ್ಟ ವೃದ್ದಿಗೆ ನಿಂಬೆರಸವನ್ನು ಮೂಗಿನ ಮೂಲಕ ಹಾಕೊಕೊಳ್ಳುವುದು ಪರಿಣಾಮಕಾರಿ ಎಂದ ವಿಷಯ ಎಲ್ಲ ಮಾಧ್ಯಮಗಳಲ್ಲೂ ಪ್ರಕಟವಾಯಿತು. ಮರುದಿನ ಅಲ್ಲೇ ಧಾರವಾಡದಲ್ಲಿ ನಡೆದ ಮದುವೆಯೊಂದರಲ್ಲಿ ವಧು-ವರ ಸೇರಿ ಹಲವಾರು ಜನರ ಮೂಗಿನಲ್ಲಿ ಕೆಲವರು ನಿಂಬೆರಸ ಸುರಿಯುತ್ತ, ‘ಪೇಪರ್‌ನ್ಯಾಗ ಬಂದೈತೋ ಮಾರಾಯ. ಕೋವಿಡ್ ಬರಂಗಿಲ್ಲ’ ಎಂದು ಹೇಳುವ ವಿಡಿಯೋ ವೈರಲ್ ಆಗಿತ್ತು.

ಆದರೆ ಇದೊಂದು ಅವೈಜ್ಞಾನಿಕ ಕ್ರಮ, ಇದಕ್ಕೆ ಯಾವುದೇ ವೈದ್ಯಕೀಯ ಆಧಾರಗಳಿಲ್ಲ ಎಂದು ಸತ್ಯ ಪ್ರತಿಪಾದನೆ ಮಾಡಿದ ಮೌಢ್ಯ ವಿರೋಧಿ ಹೋರಾಟ ನಡೆಸಿಕೊಂಡು ಬಂದಿರುವ ಹಿರಿಯ ಜೀವ ರಸಾಯನ ಶಾಸ್ತ್ರಜ್ಞ ನರೇಂದ್ರ ನಾಯಕ್ ಅವರು, ಆ ವಿವರಗಳ ವಿಡಿಯೋವನ್ನು ಫೇಸ್‌ಬುಕ್ ಖಾತೆಗೆ ಹಾಕಿಕೊಂಡಿದ್ದರು.

ಈ ವಿಡಿಯೋ ಭರ್ಜರಿ ವೈರಲ್ ಆಗಿ ಜನರಲ್ಲಿ ಪ್ರಜ್ಞೆ ಮೂಡಿಸಲು ನೆರವಾಗಿತ್ತು. ಆದರೆ ಹಲವು ಜನರ ದೂರುಗಳ ಆಧಾರದ ಮೇಲೆ, ‘ಈ ವಿಡಿಯೋ ಫೇಸ್‌ಬುಕ್ ಕಮ್ಯುನಿಟಿ ಸ್ಟ್ಯಾಂಡರ್ಡ್‌ಗಳಿಗೆ ಅನುಗುಣವಾಗಿಲ್ಲ ಎಂಬ ಕಾರಣ ನೀಡಿ ಫೇಸ್‌ಬುಕ್ ಕಂಪನಿ ಅವರ ಖಾತೆಯನ್ನು 24 ಗಂಟೆ ಸ್ಥಗಿತಗೊಳಿಸಿದೆ.

ವೈಜ್ಞಾನಿಕ ಮನೋಭಾವ ಎತ್ತಿ ಹಿಡಿಯಬೇಕಾದ ಫೇಸ್‌ಬುಕ್ ಮೇಲೆ ಯಾವ ಶಕ್ತಿಗಳ ಒತ್ತಡವಿದೆ ಎಂಬುದು ನಗ್ನಸತ್ಯ ಅಲ್ಲವೇ?

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...