Homeನೂರರ ನೋಟಕೊರೋನಾ ಕೊನೆಗೊಳ್ಳಲಿ : ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ

ಕೊರೋನಾ ಕೊನೆಗೊಳ್ಳಲಿ : ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ

- Advertisement -
- Advertisement -

ಮೋದಿ ಷಾ ಅವರ ಮಟ್ಟಿಗೆ ಕೊರೋನಾ ಒಂದು ವರವಾಗಿ ಪರಿಣಮಿಸಿತು. ಅವರ ಮೇಲಿನ ಹೋರಾಟ ಮುಂದಕ್ಕೆ ಹೋಯಿತು. ಮುಂದಕ್ಕೆ ಹೋಯಿತೇ ಹೊರತು ನಿಲ್ಲುವುದಲ್ಲ. ಕೊರೋನಾ ಬರದಿದ್ದರೆ ಈ ವೇಳೆಗೆ ಮೋದಿ ಮತ್ತು ಷಾ ಜನಗಣತಿ ಆರಂಭಿಸುತ್ತಿದ್ದರು. ಯಾರು ಯಾರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬಹುದೆಂದು home work ಆರಂಭಿಸುತ್ತಿದ್ದರು. ಇದರ ಜೊತೆಜೊತೆಗೇ ಮೋದಿ ಸರ್ಕಾರದ ವಿರುದ್ಧ ಘರ್ಷಣೆ ಆರಂಭವಾಗುತ್ತಿತ್ತು. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಇತ್ಯಾದಿಗಳನ್ನು ಹಿಂಪಡೆಯಿರಿ ಎಂದು ದಲಿತರು, ಅದಿವಾಸಿಗಳು, ಮುಸ್ಲಿಮರು ದೇಶವ್ಯಾಪ್ತಿ ಚಳುವಳಿ ಆರಂಭಿಸುತ್ತಿದ್ದರು. ಕೊರೋನಾ ಸೈತಾನನ ಸಲುವಾಗಿ ಹಿಂದುತ್ವ ಮಂತಾಧರ ವಿರುದ್ಧ, ನಿಷ್ಕ್ರಿಯ ಸರ್ಕಾರದ ವಿರುದ್ಧ ನಡೆಯಬೇಕಿದ್ದ ಧರ್ಮಯುದ್ದವನ್ನು ಮುಂದೂಡಬೇಕಾದ ಅನಿವಾರ್ಯ ಸೃಷ್ಟಿಯಾಯಿತು.

ಮೋದಿ ಷಾ ನಮಗೆಲ್ಲ 5, 5 ಸಾವಿರ ಕೊಟ್ಟರು ಎಂದು ಜನ ಅಂದುಕೊಂಡಾರು ಎಂಬ ಬ್ರಾಂತಿ ಮೋದಿ-ಷಾಗಳಿಗಿದೆ. ಕೊರೋನಾ ನಮ್ಮ ಅನ್ನ ಕಿತ್ತುಕೊಂಡಿತು, ನಮ್ಮ ಉದ್ಯೋಗ ಕಿತ್ತು ಕೊಂಡಿತು, ನಾವು ನಮ್ಮೂರಿಗೆ ಹೋಗುತ್ತೇವೆ ಎಂದು ವಲಸೆ ಬಂದ ಕಾರ್ಮಿಕರು, ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಈ ಸಂದರ್ಭದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳನ್ನು ಈ ಜನ್ಮದಲ್ಲಿ ಅವರು ಮರೆಯುವುದಿಲ್ಲ. ಸರ್ಕಾರ ಇವರಿಗೆ ಅಷ್ಟೊ ಇಷ್ಟೋ ಹಣ ನೀಡಿದ್ದರೆ ಅದು ಸರ್ಕಾರದ ಹಣವೇ ಹೊರತು ಅವರ ಔದಾರ್ಯವಲ್ಲ. ಸರ್ಕಾರ ತಾನು ಎರಚಿದ ಪುಡಿಕಾಸಿನ ನೆರವನ್ನು ಮತಗಳಿಕೆಯ ಸಾಧನವನ್ನಾಗಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೆ ಈ ಬಗೆಯ ನೆರವು ನೀಡಿದ ಸರ್ಕಾರ ಶಿಸ್ತುಬದ್ಧನಾಗಿ ಎಲ್ಲ ತರದ ಬಡವರಿಗು ಹಂಚಿದ್ದರೆ ಭೇಷ್ ಅನ್ನಬಹುದಾಗಿತ್ತು. ಮೋದಿಯವರು ನಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಣ ಹಂಚಿದಾರಾದರೂ ಅದು ಬಕಾಸುರನ ಬಾಯಿಗೆ ಅರೆ ಮಜ್ಜಿಗೆ ಸುರಿದಂತೆ ಎಲ್ಲ ಜನಕ್ಕೂ ತಲುಪಲಿಲ್ಲ.

ಸರ್ಕಾರದ ವಿಚಾರದಲ್ಲಿ ಬಡಜನರ ಆಕ್ರೋಶ ಇದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿರುವುದು ಇಡೀ ಸಮಾಜಕ್ಕೆ ಗೊತ್ತಾಗಿದೆ. ವಿವಿಧ ರಾಜ್ಯಗಳಿಂದ ಬಂದ ಅಸಂಘಟಿತ ಲಕ್ಷಾಂತರ ಕಾರ್ಮಿಕರು ತಮ್ಮ ಸಂಪಾದನೆ ನಿಂತುಹೋದ ಕಾರಣದಿಂದ ನಮ್ಮನ್ನು ನಮ್ಮ ಊರುಗಳಿಗೆ ಕಳುಹಿಸಿ ಕೊಡಿ ಎಂದು ದುಂಬಾಲು ಬಿದ್ದರು. ಕೊರೋನಾ ಆರಂಭವಾದ ಹೊತ್ತಿನಲ್ಲೆ ಪ್ರಾರ್ಥಿಸಿದರೂ ಸರ್ಕಾರ ಅವರಿಗೆ ಹೋಗಲು ತಡೆಹಾಕಿತು. ಕೊನೆಯ ಪಕ್ಷ ಕೊರೋನಾ ಸೋಂಕಿಲ್ಲದವರನ್ನಾದರು ಕಳುಹಿಸಬೇಕಾಗಿತ್ತು. ಸರ್ಕಾರ ಅವರನ್ನೆಲ್ಲ ಇಲ್ಲೆ ಬಂಧನದಲ್ಲಿಟ್ಟಂತೆ ಇಟ್ಟು ಅವರಿಗೆ ಅತ್ತ ಕೂಲಿಯೂ ಇಲ್ಲ ಇತ್ತ ಪರಿಹಾರವೂ ಇಲ್ಲ ಎಂದು ಸರ್ಕಾರ ಕೈಚೆಲ್ಲಿತು. ಇವರಲ್ಲಿ ಕೆಲವರಿಗೆ ಪರಹಾರ ಸಿಕ್ಕಿರುವುದೂ ಕೊರೋನಾ ಅಮರಿಕೊಂಡ 2-3 ತಿಂಗಳ ಮೇಲೆ? ಅವರು ಅರೆಜೀವ, ಕೊರೆಜೀವ ಇಟ್ಟುಕೊಂಡೆ ಆ ದಿನಗಳನ್ನು ಕಳೆದರು.

ಆನಂತರ 2 ತಿಂಗಳ ಮೇಲೆ ಕರ್ನಾಟಕದ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ನಿರ್ಧಾರಕ್ಕೆ ಸರ್ಕಾರ ಬಂತು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಡಬಲ್ ಛಾರ್ಜ್ ವಸೂಲಿ ಮಾಡಿ ಎಂದು ಸರ್ಕಾರ ಹೇಳಿತು. ಅದಕ್ಕೆ ಪ್ರತಿಭಟನೆ ಬಂತು. ಆಗ ಸರ್ಕಾರ ಹೋಗುವ ಚಾರ್ಜ್ ಕೊಟ್ಟರೆ ಸಾಕು ಎಂದಿತು. ಕಾರ್ಮಿಕರು ನಾವೆಲ್ಲಿಂದ ತರೋಣ ಹಣ ಎಂದರು. ಸರ್ಕಾರ ತನ್ನ ಪಟ್ಟು ಬಿಡಲಿಲ್ಲ. ಆಗ ಕಾಂಗ್ರೆಸ್ ಸಂಸ್ಥೆಯವರು ನಾವು ಒಂದು ಕೋಟಿ ಚೆಕ್ ನೀಡುತ್ತೇವೆ ಅವರಿಂದ ಹಣ ವಸೂಲಿ ಮಾಡದೆ ಮರ್ಯಾದೆಯಿಂದ ಕಳುಹಿಸಿಕೊಡಿ ಎಂದು ಸವಾಲೊಡ್ಡಿತು. ಸರ್ಕಾರಕ್ಕೆ ಪೀಕಲಾಟ ಬಂತು.

ಟಿಕೆಟ್ ಹಣ ವಸೂಲಿ ಮಾಡದಿದ್ದರೆ ಕಾಂಗ್ರೆಸ್ಸಿನ ಒತ್ತಡಕ್ಕೆ ಸಿಲುಕಿದಂತಾಗುತ್ತದೆ. ವಸೂಲಿ ಮಾಡಿದರೆ ಆ ಜನ ಶಾಪ ಹಾಕುತ್ತಾರೆ. ಮುಂದಿನ ಚುನಾವಣೆಯಲ್ಲಿ ನಮಗೆ ಮತ ಹಾಕದೆಯೂ ಇರಬಹುದು. ಇತ್ತ ಪುಲಿ ಅತ್ತ ದರಿ ಎನ್ನುವ ಸನ್ನಿವೇಶಕ್ಕೆ ಕಾಂಗ್ರೆಸ್ ನಮ್ಮನ್ನು ದೂಡಿದೆ. ಇದರ ಫಲವಾಗಿ ಕಾರ್ಮಿಕ ವರ್ಗ ಚುನಾವಣೆ ವೇಳೆಯಲ್ಲಿ ನಮ್ಮ ಎದುರು ಬಿದ್ದರೆ ಗತಿ ಏನು? ಎಂದು ಯೋಚಿಸಿ ಉಚಿತವಾಗಿ ಅವರನ್ನು ಸಾಗಿಸುವುದೇ ಬುದ್ಧಿವಂತಿಕೆ ಎಂಬ ತೀರ್ಮಾನಕ್ಕೆ ಬಂದರು. ಕಾಂಗ್ರೆಸ್ ಈ ಸಂದರ್ಭದಲ್ಲಿ ಟ್ರಂಪ್‌ಕಾರ್ಡ್ ಹಾಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದಲ್ಲದೆ ಕಾರ್ಮಿಕರ ಕೃತಜ್ಞತೆಗೂ ಪಾತ್ರವಾಯಿತು.

ಕೊರೋನಾ ಆದಷ್ಟು ಬೇಗ ಮುಕ್ತಾಯಗೊಳ್ಳಲಿ ನಮ್ಮ ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ ಎಂದು ಆಶಿಸುತ್ತೇನೆ.


ಇದನ್ನೂ ಓದಿ: ಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು… 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...