“ಈ ವರ್ಷ ನನ್ನ ಜನ್ಮದಿನವನ್ನು ಆಚರಿಸುವ ಬದಲು, ರೈತರು ಹಾಗೂ ಸರ್ಕಾರದ ನಡುವೆ ನಡೆಯುತ್ತಿರುವ ಸಂಘರ್ಷ ಶೀಘ್ರವಗಿ ಬಗೆಹರಿಯಲಿ ಎಂದು ಹಾರೈಸುವೆ” ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ.
ಆದರೆ, ರೈತರ ಬೆಂಬಲವಾಗಿ ಕ್ರೀಡಾಪಟುಗಳು ಪ್ರಶಸ್ತಿಗಳನ್ನು ವಾಪಾಸು ಮಾಡುವ ಪರ ಹೇಳಿಕೆ ನೀಡಿದ್ದ ತನ್ನ ತಂದೆ ಯೋಗರಾಜ್ ಸಿಂಗ್ ಬಗ್ಗೆ ಅವರು ಅಂತರ ಕಾಯ್ದುಕೊಂಡಿದ್ದಾರೆ.
— Yuvraj Singh (@YUVSTRONG12) December 11, 2020
ಇದನ್ನೂ ಓದಿ: ರೈತರು ಮಾತುಕತೆಯಿಂದ ಹೊರನಡೆದರು ಎಂಬ ಸಚಿವರ ಮಾತು ದೊಡ್ಡ ಸುಳ್ಳು: ರೈತ ಸಂಘಟನೆಗಳ ಹೇಳಿಕೆ
ತಮ್ಮ ಹುಟ್ಟುಹಬ್ಬದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಬರೆದಿರುವ ಯುವರಾಜ್ ಸಿಂಗ್, “ಹುಟ್ಟುಹಬ್ಬಗಳು ನಮ್ಮ ಬಯಕೆಯನ್ನು ಪೂರೈಸಲು ಇರುವ ಅವಕಾಶ. ನಾನು ಈ ಬಾರಿಯ ಹುಟ್ಟುಹಬ್ಬವನ್ನು ಆಚರಿಸುವ ಬದಲಿಗೆ ರೈತರು ಹಾಗೂ ಕೇಂದ್ರ ಸರಕಾರದ ನಡುವೆ ಈಗ ನಡೆಯುತ್ತಿರುವ ಮಾತುಕತೆಯು ಫಲಪ್ರದವಾಗಲಿ ಎಂದು ಬಯಸುವೆ. ರೈತರು ದೇಶದ ಜೀವನಾಡಿ ಎನ್ನುವುದರಲ್ಲಿ ಅನುಮಾನವಿಲ್ಲ. ಶಾಂತಿಯುತ ಮಾತುಕತೆಯ ಮೂಲಕ ಸಮಸ್ಯೆ ಪರಿಹಾರವಾಗಲಿದೆ ಎಂದು ನಾನು ನಂಬಿದ್ದೇನೆ” ಎಂದು ಹೇಳಿದ್ದಾರೆ.
“ಹೆಮ್ಮೆಯ ಭಾರತೀಯನಾಗಿ, ಯೋಗರಾಜ್ ಸಿಂಗ್ ಅವರ ಹೇಳಿಕೆಗಳಿಂದ ನಾನು ನಿಜವಾಗಿಯೂ ದುಃಖಿತನಾಗಿದ್ದೇನೆ ಮತ್ತು ಅಸಮಾಧಾನಗೊಂಡಿದ್ದೇನೆ. ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ನನ್ನ ಹಾಗೂ ಅವರ ಸಿದ್ಧಾಂತಗಳು ಯಾವುದೇ ರೀತಿಯಲ್ಲಿ ಒಂದೇ ಆಗಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರೈತ ಸಂಘಟನೆ


