Homeಕರ್ನಾಟಕಸುಳ್ಳು ಜಾತಿ ಪ್ರಮಾಣ ಪತ್ರ: ಶಿಕ್ಷಿಸಲು ಪ್ರತ್ಯೇಕ ಕಾಯ್ದೆಯಾಗಲಿ

ಸುಳ್ಳು ಜಾತಿ ಪ್ರಮಾಣ ಪತ್ರ: ಶಿಕ್ಷಿಸಲು ಪ್ರತ್ಯೇಕ ಕಾಯ್ದೆಯಾಗಲಿ

- Advertisement -
- Advertisement -

ಶಾಸಕ ರೇಣುಕಾಚಾರ್ಯ ಮಗಳು ಹಾಗೂ ಅವರ ತಮ್ಮನ ಮಕ್ಕಳು ಬೇಡ ಜಂಗಮ ಎಂದು ಸುಳ್ಳು ಜಾತಿ ದಾಖಲಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಮೂಲಕ ಸಂವಿಧಾನಬದ್ಧ ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸಿ ಖಾತ್ರಿಪಡಿಸಿಕೊಳ್ಳಬೇಕಾದ ಶಾಸಕರೇ ಅನ್ಯಾಯಕ್ಕಿಳಿದಿರುವುದು ಹಾಗೂ ಕಾನೂನು ವಿರೋಧಿ ಕಾರ್ಯವೆಸಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕೃತ್ಯ ಅಪರಾಧವೆಂಬುದರಲ್ಲಿ ಎರಡು ಮಾತಿಲ್ಲ.

ಶಾಸಕರು ಆ ಜಾತಿಪ್ರಮಾಣ ಪತ್ರದಿಂದ ಯಾವುದೇ ಸವಲತ್ತು ಪಡೆದಿಲ್ಲವೆಂದು ಸಮಜಾಯಿಷಿ ನೀಡಿದ್ದರೂ ಅಕ್ರಮವೆಸಗಿರುವುದಂತು ಸಾಬೀತಾಗಿದೆ. ಸಾಮಾನ್ಯ ಜನತೆಗೆ ಸಾವಿರ ದಾಖಲೆ ಕೇಳುವ ತಾಲ್ಲೂಕು ಆಡಳಿತ ಅಧಿಕಾರಿ ಶಾಸಕರ ಕುಟುಂಬಕ್ಕೆ ಸುಳ್ಳು ಜಾತಿಪ್ರಮಾಣ ಪತ್ರ ನೀಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ.

ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಜಾತಿಯನ್ನು ಹೇಳಿಕೊಂಡು ಸುಳ್ಳು ಜಾತಿಪ್ರಮಾಣ ಪತ್ರ ಪಡೆಯುವುದು ಇದೇ ಮೊದಲಲ್ಲ. ಸ್ವತಂತ್ರ ಭಾರತದ ಆರಂಭಿಕ ಕಾಲದಿಂದಲೂ ಈ ಹಾವಳಿ ಹೆಚ್ಚುತ್ತಲೇ ಬಂದಿದೆ. 2018ರಲ್ಲಿ ಇಂತಹುದೇ ಕೃತ್ಯವೆಸಗಿದ ನಾಲ್ವರನ್ನು ಕರ್ನಾಟಕ ಸರ್ಕಾರ ಅಮಾನತು ಮಾಡಿತ್ತು. ಆದರೆ ಈ ಅಪರಾಧಕ್ಕೆ ಸರಿಯಾದ ಕಾನೂನಿನ ನಿರ್ಬಂಧ ಇಲ್ಲದಿರುವ ಕಾರಣ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎಲ್ಲರಿಗೂ ಎದ್ದು ಕಾಣುವ ಶಾಸಕನ ಮಗಳೇ ಈ ಕೆಲಸ ಮಾಡಿರುವಾಗ ಕಾನೂನು ಅದೆಷ್ಟು ಸಡಿಲವಾಗಿದೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.

2015ರಲ್ಲಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ ಸುಳ್ಳು ಜಾತಿಪ್ರಮಾಣ ಪತ್ರದ ಬಗೆಗಿನ 6 ಲಕ್ಷ ದೂರುಗಳನ್ನು ಸ್ವೀಕರಿಸಿತ್ತು. ಹಿಂದೆ ಸುಪ್ರೀಂಕೋರ್ಟ್‌ನಲ್ಲಿ 50 ಸಾವಿರ ಪ್ರಕರಣಗಳ ಬಗ್ಗೆ ಪ್ರಸ್ತಾಪವಾಗಿತ್ತು. ರಾಜ್ಯಸಭೆಯಲ್ಲಿಯೂ ಇಂತಹುದೇ 1000 ಪ್ರಕರಣಗಳು ಸದ್ದು ಮಾಡಿದ್ದವು. 2020ರಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಸುಮಾರು 591 ಸುಳ್ಳು ಜಾತಿಪ್ರಮಾಣ ಪತ್ರಗಳ ಬಗ್ಗೆ ದೂರುಗಳನ್ನು ಪಡೆದಿತ್ತು.

ಅಷ್ಟೂ ಪ್ರಕರಣಗಳಲ್ಲಿ ಮೇಲ್ಜಾತಿಗಳವರು ಪರಿಶಿಷ್ಟರ ಹಾಗೂ ಹಿಂದುಳಿದ ಜಾತಿಗಳ ಪ್ರಮಾಣಪತ್ರ ಪಡೆದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಉದ್ಯೋಗವನ್ನು ಪಡೆದಿದ್ದರು. ಆಶ್ಚರ್ಯವೆಂದರೆ ಅವರಲ್ಲಿನ ಹೆಚ್ಚಿನವರು ಶಿಕ್ಷಣ ಹಾಗೂ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಗಳಾಗಿದ್ದರು. ಜೊತೆಗೆ ವಿದ್ಯಾರ್ಥಿವೇತನ ಹಾಗೂ ದಲಿತರ, ಹಿಂದುಳಿದ ಜಾತಿಗಳ ಭೂಮಿ ಪಡೆಯಲೂ ಬಳಸಿಕೊಂಡಿದ್ದರು. ಈ ಪ್ರಕರಣ ವಿಚಾರಣೆಗೆ ಬರುವಷ್ಟರಲ್ಲಿ 12 ಉದ್ಯೋಗಿಗಳು ನಿವೃತ್ತಿಯನ್ನೂ ಹೊಂದಿದ್ದರು. ಹಲವರ ಮೇಲೆ ಪ್ರಕರಣ ದಾಖಲಿಸಲಾಯಿತಾದರೂ ಯಾರನ್ನೂ ಸೇವೆಯಿಂದ ವಜಾಗೊಳಿಸಿದ್ದು ಕಂಡುಬರಲಿಲ್ಲ. ಸಂಬಂಧಪಟ್ಟ ತಹಸಿಲ್ದಾರ್ ಹಾಗೂ ಉದ್ಯೋಗಿಗಳ ನಡುವಿನ ಒಳಒಪ್ಪಂದಗಳು ಹಾಗೂ ಸರ್ಕಾರದ ಬೇಜವಾಬ್ದಾರಿತನದಿಂದ ನ್ಯಾಯ ನೇಣಿಗೇರಿತು.

ಇಂದು ರಾಷ್ಟ್ರೀಯ ಹಾಗೂ ರಾಜ್ಯ ಪರಿಶಿಷ್ಟರ ಆಯೋಗಗಳು, ವಿವಿಧ ರಾಜ್ಯಗಳ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮುಂದೆ ರಾಶಿಗಟ್ಟಲೆ ಸುಳ್ಳು ಜಾತಿಪ್ರಮಾಣ ಪತ್ರ ಪಡೆದ ಪ್ರಕರಣಗಳು ಬಿದ್ದಿವೆ. ಭಾರತದಾದ್ಯಂತ ಇಂತಹ ಕೋಟಿಗಟ್ಟಲೆ ಪ್ರಕರಣಗಳು ಕಂಡುಬರುತ್ತಿವೆ. ಆದರೆ ಸರ್ಕಾರ ಇದಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ.

ಶಾಸಕನೇ ಇಂತಹ ಕೆಲಸ ಮಾಡಿರುವುದು ಸರ್ಕಾರದ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ತನ್ನ ಘನತೆಯನ್ನು ಉಳಿಸಿಕೊಳ್ಳಲು ಸರ್ಕಾರ ಈ ಕೂಡಲೇ ಶಾಸಕರನ್ನು ಹಾಗೂ ಸಂಬಂಧಪಟ್ಟ ತಹಸೀಲ್ದಾರರನ್ನು ಅಮಾನತುಗೊಳಿಸಬೇಕಿದೆ. ಬಹುಮುಖ್ಯವಾಗಿ ಇದೇ ಜನವರಿಯಲ್ಲಿ ಕರ್ನಾಟಕ ಹೈಕೋರ್ಟ್ ಅಟ್ರಾಸಿಟಿ ಕಾಯ್ದೆಯನ್ವಯ ಶಿಕ್ಷೆ ನೀಡಲು ಸಾಧ್ಯಲ್ಲವೆಂದು ತೀರ್ಪಿತ್ತಿರುವುದರಿಂದ ಅಟ್ರಾಸಿಟಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿ ತಿದ್ದುಪಡಿಯಾಗುವವರೆಗೆ ಸುಳ್ಳು ಜಾತಿಪ್ರಮಾಣ ಪತ್ರದ ಅನ್ಯಾಯ ತಡೆಯಲು ಈ ಕೂಡಲೇ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯೊಂದನ್ನು ಜಾರಿಗೊಳಿಸಬೇಕಿದೆ. ಬಡವರ ತಟ್ಟೆಗೂ ಕೈ ಹಾಕುವ ಮೋಸಗಾರರಿಗೆ ತಕ್ಕ ಶಿಕ್ಷೆ ವಿಧಿಸಬೇಕಿದೆ.

ಸಿದ್ಧಾರ್ಥ ಎಂ.
ಸಾಮಾಜಿಕ ಕಾರ್ಯಕರ್ತರು


ಇದನ್ನೂ ಓದಿ: ನಕಲಿ ಜಾತಿ ಸರ್ಟಿಫಿಕೇಟ್‌: ಬಿಜೆಪಿ ಶಾಸಕ ರೇಣುಕಾಚಾರ್ಯ ಸಹೋದರನ ವಿರುದ್ಧ ಎಫ್‌ಐಆ‌‌ರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ತಾಯಿ ಲಿಂಗಾಯತ ಆಗಿದ್ದರೂ ಮಕ್ಕಳು ದಲಿತ ಗಂಡನಿಗೆ ಹುಟ್ಟಿದ್ದರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದರೆ ಸಿಂಧುತ್ವಕ್ಕೆ ಅಡ್ಡಿಯಿಲ್ಲ ಎಂದೆನಿಸುತ್ತದೆ. ನನ್ನ ಅಭಿಪ್ರಾಯ.

  2. ತಾಯಿ ಲಿಂಗಾಯತ ಆಗಿದ್ದರೂ ಮಕ್ಕಳು ದಲಿತ ಗಂಡನಿಗೆ ಹುಟ್ಟಿದ್ದರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದರೆ ಸಿಂಧುತ್ವಕ್ಕೆ ಅಡ್ಡಿಯಿಲ್ಲ ಎಂದೆನಿಸುತ್ತದೆ. ಇದು ನನ್ನ ಅಭಿಪ್ರಾಯ. ಕಾನೂನು ಏನು ಹೇಳುತ್ತೋ ಗೊತ್ತಿಲ್ಲ.

  3. ಈ ದೇಶದ ಸಂವಿಧಾನದ ಮೂಲವೇ  ಬ್ರಿಟಿಷ್ ರ Govt. of India Act 1935. ಅದರ ಪೂರ್ವದ 1921 ರ ಹೈದರಾಬಾದ್ ನಿಜಾಮರ Depressed Class ಪಟ್ಟಿಯಲ್ಲಿ Jangam ಬರುತ್ತದೆ. 1936 ರ ಭಂಡಾರ ಜಿಲ್ಲೆಗೆ ಸಂಬಂಧಿಸಿದಂತೆ Schedule Caste ಪಟ್ಟಿಯಲ್ಲೂ ಜಂಗಮ ಜಾತಿ ಇರುತ್ತದೆ. ಮರಾಠರ ಆಳ್ವಿಕೆಯಲ್ಲಿ ಮುಂಬೈ ಕರ್ನಾಟಕದ ಪ್ರದೇಶಗಳೂ ಸೇರಿದಂತೆ ಜಂಗಮ ಜಾತಿಯು Beggers ಪಟ್ಟಿಯಲ್ಲಿ, ಮೈಸೂರು ಸಂಸ್ಥಾನದಲ್ಲಿ Inferior Religious Mendicants ಪಟ್ಟಿಯಲ್ಲೂ ಜಂಗಮ ಜಾತಿ ಗುರ್ತಿಸಲ್ಪಟ್ಟಿದೆ. ಜಂಗಮರು ಯಾರು ಎಂಬುದು ಬ್ರಿಟಿಷ್ ಚಿಂತಕ C.P. Brown ಇವರ ಗ್ರಂಥದಲ್ಲಿ ವಿವರಿಸಲ್ಪಟ್ಟಿದೆ. ಇದೆಲ್ಲವೂ ಸ್ವತಂತ್ರ ಪೂರ್ವ ದಾಖಲೆಗಳು. ಇವು ಪ್ರಮಾಣೀಕೃತ ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಲವು ತೀರ್ಪುಗಳಲ್ಲಿ ವಿವರಿಸಿದೆ. “Pre-independent Documents are more reliable and they have got Probative Value”  ಎಂದಿದೆ. ಸರ್ಕಾರದ ಈವರೆಗಿನ ಎಲ್ಲ ಸುತ್ತೋಲೆಗಳು ವೀರಶೈವ ಜಂಗಮರೇ ಬೇಡಜಂಗಮರು ಎನ್ನುತ್ತವೆ. ಸೂರ್ಯನಾಥ ಕಾಮತರ ಅಧ್ಯಯನ ವರದಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷ್ಯವಾಗಿದೆ.

    ಜಂಗಮರು ಬೇಡಜಂಗಮರಲ್ಲದಿದ್ದರೆ, ಜಂಗಮ ಜಾತಿಯನ್ನು ಕೇಂದ್ರದ OBC ಮತ್ತು ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಕೊಡಲು ಸಂವಿಧಾನದ ಸದಾಶಯ ಜಾರಿ ವಿರೋಧಿಗಳು ಕ್ರಮವಹಿಸಬೇಕು.

    Article 147 ಅನುಸಾರ ಪ್ರಸ್ತುತ ಸಂವಿಧಾನದ ಜಾರಿಯ ತೊಂದರೆಯಲ್ಲಿ , ಅನುಸರಿಸಲು ದಾರಿ ತೋರಿದೆ. ಅದನ್ನು ಗ್ರಹಿಸಿ.

    ಜಂಗಮ ತನ್ನ ಹಕ್ಕುಗಳಿಂದ ವಂಚಿತನಾಗಿದ್ದು, ಯಾರ ಹಕ್ಕನ್ನೂ ಕಸಿಯುವ ಪ್ರಶ್ನೆ ಉದ್ಭವಿಸಿಯೇ ಇಲ್ಲ.

    ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ, ಕೇಂದ್ರವು ರಾಜ್ಯಕ್ಕೆ ಪ್ರತಿಕ್ರಿಯಿಸಲು ನಿರ್ದೇಶನ ನೀಡಿದರೂ, 6-7 ತಿಂಗಳಿನಿಂದ ರಾಜ್ಯ ಕೇಂದ್ರಕ್ಕೇ ಪ್ರತಿಕ್ರಿಯಿಸಿಲ್ಲ. ಇನ್ನು ಸಾಮಾನ್ಯರಿಗೆ ಏನು ಉತ್ತರ ಕೊಡುತ್ತಾರೆ..!?

    ಪರಿಶಿಷ್ಟ ಜಾತಿ ಪಟ್ಟಿ ಅನುಸೂಚಿತ ಜಾತಿಗಳ ಪಟ್ಟಿ ಮಾತ್ರವಾಗಿದ್ದು, ಅದಕ್ಕೆ ವಿಪರೀತ ಅರ್ಥವನ್ನು ಮಾನ್ಯ ಸಂವಿಧಾನ ಕೊಟ್ಟಿರುವುದಿಲ್ಲ.

    ಜಂಗಮರು, ಬೇಡಜಂಗಮರಲ್ಲ ಎಂದು ಮಾನ್ಯ ಸುಪ್ರೀಂ ಮುಂದೆ ಹೋಗಿ ವಾದ ಮಂಡಿಸಿದರೆ, ಸುಲಭದಲ್ಲಿ ಸಮಸ್ಯೆ ಪರಿಹಾರವಾಗಬಹುದಲ್ಲವೇ..!?

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...