Homeಮುಖಪುಟಮೇ 3 ರಂದು ರಾಜ್ಯಾದ್ಯಂತ ಬಸವ ಜಯಂತಿ ಆಚರಿಸಲು ನಿರ್ಧರಿಸಿದ ತೆಲಂಗಾಣ ಸರ್ಕಾರ

ಮೇ 3 ರಂದು ರಾಜ್ಯಾದ್ಯಂತ ಬಸವ ಜಯಂತಿ ಆಚರಿಸಲು ನಿರ್ಧರಿಸಿದ ತೆಲಂಗಾಣ ಸರ್ಕಾರ

ಇತ್ತೀಚಿನ ದಿನಗಳಲ್ಲಿ ದಾರ್ಶನಿಕ ಬಸವಣ್ಣನವರನ್ನು ನೆನಪಿಸಿಕೊಳ್ಳುವ ಕ್ರಿಯೆ ಕರ್ನಾಟಕ ಮಾತ್ರವಲ್ಲದೆ ದಕ್ಷಿಣದ ಇತರ ರಾಜ್ಯಗಳಲ್ಲಿಯೂ ಜರುಗುತ್ತಿದೆ.

- Advertisement -
- Advertisement -

ಮೇ 3 ರಂದು ರಾಜ್ಯದೆಲ್ಲೆಡೆ ಮಹಾತ್ಮ ಬಸವೇಶ್ವರ ಜಯಂತಿ ಆಚರಿಸುವಂತೆ ತೆಲಂಗಾಣ ಸರ್ಕಾರ ಆದೇಶಿಸಿದೆ. ಇನ್ನು ಮುಂದೆ ಅಕ್ಷಯ ತೃತೀಯದಂದು ಪ್ರತಿ ವರ್ಷ ತೆಲಂಗಾಣ ರಾಜ್ಯಾದ್ಯಂತ ಬಸವ ಜಯಂತಿ ನಡೆಯಲಿದೆ ಎಂದು ಘೋಷಿಸಿದೆ.

ತೆಲಂಗಾಣ ಸರ್ಕಾರದ ಈ ನಡೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಸ್ವಾಗತಿಸಿದೆ. ಈ ಕುರಿತು ಟ್ವೀಟ್ ಮಾಡಿದ್ದು, “ಬಸವ ಜಯಂತಿಯನ್ನು ತೆಲಂಗಾಣ ರಾಜ್ಯದಲ್ಲಿ ಆಚರಿಸಲು ನಿರ್ಧರಿಸಿದ್ದಕ್ಕಾಗಿ ಶರಣು ಶರಣಾರ್ಥಿ. ನಿಮ್ಮ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ತೆಲಂಗಾಣದ ಎಲ್ಲಾ ನಾಗರಿಕರಿಗೆ ಬಸವ ಜಯಂತಿ 2022ರ ಶುಭಾಶಯಗಳು” ಎಂದು ತಿಳಿಸಿದೆ.

 

ಇತ್ತೀಚಿನ ದಿನಗಳಲ್ಲಿ ದಾರ್ಶನಿಕ ಬಸವಣ್ಣನವರನ್ನು ನೆನಪಿಸಿಕೊಳ್ಳುವ ಕ್ರಿಯೆ ಕರ್ನಾಟಕ ಮಾತ್ರವಲ್ಲದೆ ದಕ್ಷಿಣದ ಇತರ ರಾಜ್ಯಗಳಲ್ಲಿಯೂ ಜರುಗುತ್ತಿದೆ. ಕಳೆದ ವರ್ಷ ಬಸವ ಜಯಂತಿಯ ದಿನ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರವರು ಕನ್ನಡದಲ್ಲಿ ಬಸವಣ್ಣನವರ ವಚನವನ್ನು ಟ್ವೀಟ್‌ ಮಾಡುವ ಮೂಲಕ ಸಾವಿರಾರು ಕನ್ನಡ ಅಭಿಮಾನಿಗಳ ಮನಗೆದ್ದಿದ್ದರು.

ಬಸವ ಜಯಂತಿ ಶುಭಾಷಯಗಳು ಎಂಬ ವಾಕ್ಯಗಳಿಂದ ಆರಂಭವಾಗಿದ್ದ ಅವರ ಟ್ವೀಟ್‌ “ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಮಹಾನ್‌ ಬಸವಣ್ಣನವರು ಮಾರ್ಗದರ್ಶಕರಾಗಲಿ. ನಾವು ವಿಭಜಿತವಾಗಿದ್ದರೆ ಈ ಸಾಂಕ್ರಾಮಿಕದ ವಿರುದ್ಧ ಜಯಿಸಲು ಸಾಧ್ಯವಿಲ್ಲ. ಗೆಲ್ಲಲ್ಲು ಅದು ನಮ್ಮ ಒಗ್ಗಟ್ಟನ್ನು ಕೇಳುತ್ತದೆ” ಎಂದು ಪಿಣರಾಯಿ ವಿಜಯನ್‌ ತಿಳಿಸಿದ್ದರು.

ಮುಂದುವರಿದು ”ಇವನಾರವ ಇವನಾರವ ಇವನಾರವನೆಂದು ಎನಿಸದಿರಯ್ಯ. ಇವ ನಮ್ಮವ ಇವ ನಮ್ಮವ, ಇವ ನಮ್ಮವನೆಂದು ಎನಿಸಯ್ಯ.” ಎಂಬ ಬಸವಣ್ಣನವರ ಖ್ಯಾತ ವಚನವನ್ನು ಟ್ವೀಟ್‌ ಮಾಡುವ ಮೂಲಕ ಬಸವಣ್ಣನವರನ್ನು ಸ್ಮರಿಸಿದ್ದರು.

ಇದನ್ನೂ ಓದಿ: ’ಅವ ನಮ್ಮವ, ಅವ ನಮ್ಮವ’ ಎಂದ ಕ್ರಾಂತಿಕಾರಿ ಬಸವಣ್ಣನ ಚಿಂತನೆಗಳು ಇಂದಿನ ವಿಷಮತೆಗೆ ಲಸಿಕೆ..: ಜಿ.ಬಿ ಪಾಟೀಲ್

ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿರುವ ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್ ಈ ವರ್ಷದಿಂದ ತೆಲಂಗಾನದಲ್ಲಿ ಬಸವ ಜಯಂತಿ ಆಚರಿಸಲು ಆದೇಶಿಸಿದ್ದಾರೆ. ಆ ಮೂಲಕ ಬಸವಣ್ಣನವರ ಸತ್ಯ, ನ್ಯಾಯ ಮತ್ತು ಸಮಾನತೆ ಪರವಾಗಿನ ವಿಚಾರಗಳು ಎಲ್ಲಾ ಜನರಿಗೂ ತಲುಪಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಾಮನಿರ್ದೇಶನ ರದ್ದು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿಯಿಂದ ಅರ್ಜಿ; ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಣೆ

0
ಪಶ್ಚಿಮ ಬಂಗಾಳದ ಬಿರ್ಭೂಮ್ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ದೇಬಾಶಿಶ್ ಧಾರ್ ಅವರು ತಮ್ಮ ನಾಮಪತ್ರಗಳನ್ನು ರದ್ದುಗೊಳಿಸುವುದರ ವಿರುದ್ಧ ಸಲ್ಲಿಸಿದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ...