Homeಅಂತರಾಷ್ಟ್ರೀಯಶಿಕ್ಷಣ ಮಾರಾಟ ದಂಧೆಯ ನಡುವೆ ಒಬ್ಬ ನಿಸ್ವಾರ್ಥ `ಖಾನ್'

ಶಿಕ್ಷಣ ಮಾರಾಟ ದಂಧೆಯ ನಡುವೆ ಒಬ್ಬ ನಿಸ್ವಾರ್ಥ `ಖಾನ್’

- Advertisement -
- Advertisement -

ಆತನ ಹೆಸರು ಸಲ್ಮಾನ್ ಖಾನ್. ಇಲ್ಲ, ಈತ ಬಾಲಿವುಡ್ ನಟನಲ್ಲ. ಬದಲಾಗಿ ಖ್ಯಾತ ಉದ್ಯಮಿ ಬಿಲ್ ಗೇಟ್ಸ್‌ಗೆ ಮಾತ್ರವಲ್ಲದೆ ಆತನ ಮಕ್ಕಳಿಗೂ ತನ್ನ “ಶಾಲೆ”ಯಲ್ಲಿ ಪ್ರತಿನಿತ್ಯ ‘ಪಾಠ’ ಹೇಳಿಕೊಡುತ್ತಿರುವ ‘ಶಿಕ್ಷಕ’!

ಅದಕ್ಕಿಂತ ಮುಖ್ಯವಾಗಿ ಈ ಸಲ್ಮಾನ್ ಖಾನ್ ನಡೆಸುತ್ತಿರುವ ‘ಶಾಲೆ’ಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಿಗೆಲ್ಲ ಪ್ರತಿನಿತ್ಯ ನೂರಾರು ಪಾಠಗಳನ್ನು ಬೋಧಿಸಲಾಗುತ್ತಿದೆ. ಆದರೂ ಈ ಶಾಲೆಯಲ್ಲಿ ಒಬ್ಬನೇ ಒಬ್ಬ ಅಧ್ಯಾಪಕನಿದ್ದಾನೆ. ಆತನೇ ಈ ಸಲ್ಮಾನ್ ಖಾನ್!

ಅಚ್ಚರಿ ಎನಿಸುತ್ತಿದೆಯೆ? ಬನ್ನಿ ಸಲ್ಮಾನ್ ಖಾನ್ ನಡೆಸುತ್ತಿರುವ ‘ವರ್‍ಚ್ಯು ಅಲ್’ ಶಾಲೆಗೆ. ಈ ಸಲ್ಮಾನ್ ಖಾನ್‍ನ ತಾಯಿ ಭಾರತದ ಕೊಲ್ಕತ್ತಾದವರು. ತಂದೆ ಬಾಂಗ್ಲಾದೇಶದವರು. ಅಮೆರಿಕದಲ್ಲಿ ಜನಿಸಿದ ಸಲ್ಮಾನ್ ಖಾನ್ ಅಲ್ಲೇ ವಿದ್ಯಾಭ್ಯಾಸ ಮಾಡಿ ದೊಡ್ಡ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅದು ಅಂತಿಂತಹ ಕೆಲಸವಲ್ಲ. ಜನರ ಅತಿ ಆಸೆಯನ್ನೇ ಬಂಡವಾಳ ಮಾಡಿಕೊಂಡು ಅವರು ವಿವಿಧ ಕಂಪನಿಗಳ ಶೇರುಗಳಲ್ಲಿ ಹಣ ಹೂಡುವಂತೆ ಮಾಡುವ ಕೆಲಸ. ಅದಕ್ಕೆಂದು ಖಾನ್‍ಗೆ ಕೈತುಂಬ ಸಂಬಳ ಬರುತ್ತಿತ್ತು.

ಆರು ವರ್ಷಗಳ ಹಿಂದೆ ಒಮ್ಮೆ ಏನಾಯಿತೆಂದರೆ, ಖಾನ್‍ನ ಚಿಕ್ಕಮ್ಮನ ಮಗಳಾದ ನಾಡಿಯಾ ಶಾಲೆಯಲ್ಲಿ ಗಣಿತದಲ್ಲಿ ಬೇರೆ ವಿದ್ಯಾರ್ಥಿಗಳಿಗಿಂತ ಹಿಂದೆ ಬಿದ್ದಿದ್ದಾಳೆ ಎಂದು ಖಾನ್‍ಗೆ ಗೊತ್ತಾಯಿತು. ಆದರೆ ಆಗ ಖಾನ್ ಅಮೆರಿಕದ ಪೂರ್ವ ಕಡಲತೀರದಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದರೆ, ನಾಡಿಯಾ ಪಶ್ಚಿಮ ಕಡಲತೀರದಲ್ಲಿರುವ ಮತ್ತೊಂದು ನಗರದಲ್ಲಿ ವಾಸಿಸುತ್ತಿದ್ದಳು. ಆದರೂ ಆಕೆಗೆ ಪ್ರತಿದಿನ ಫೋನ್ ಮೂಲಕವೇ ಗಣಿತದಲ್ಲಿ ಪಾಠ ಹೇಳಿಕೊಡಲು ಖಾನ್ ಪ್ರಾರಂಭಿಸಿದ. ಆದರೆ ಸ್ವಲ್ಪ ದಿನಗಳಲ್ಲೇ ಇದು ಕಷ್ಟವಾಗಲಾರಂಭಿಸಿತು. ಎರಡೂ ನಗರಗಳ ನಡುವೆ ನಾಲ್ಕು ಗಂಟೆಗಳ ವ್ಯತ್ಯಾಸ ಇತ್ತಲ್ಲದೆ, ಈತನ ಕೆಲಸದ ಸಮಯ-ನಾಡಿಯಾಳ ಶಾಲೆಯ ಸಮಯ ಇತ್ಯಾದಿಗಳು ನಿತ್ಯದ ಪಾಠಕ್ಕೆ ಅಡ್ಡಬರಲಾರಂಭಿಸಿದವು.

ಆಗ ಖಾನ್‍ಗೆ ಹೊಳೆದದ್ದೇ ಈ ವೀಡಿಯೋ ಪಾಠಕ್ರಮ. ನಾಡಿಯಾ ಎದುರಿಸುತ್ತಿದ್ದ ಗಣಿತದ ಸಮಸ್ಯೆಗೆ ಹೇಗೆ ಉತ್ತರವನ್ನು ಕಂಡುಹಿಡಿಯಬೇಕೆಂಬುದನ್ನು ಕುರಿತು ಖಾನ್ ಪುಟ್ಟ ವೀಡಿಯೋಗಳನ್ನು ತಯಾರಿಸಿ ಅವುಗಳನ್ನು ‘ಯೂಟ್ಯೂಬ್’ ಎಂಬ ವೆಬ್‍ಸೈಟಿನಲ್ಲಿ ಹಾಕಲಾರಂಭಿಸಿದ. ಅದರಿಂದಾಗಿ ನಾಡಿಯಾ ಯಾವಾಗ ಬೇಕಾದರೂ ಅವುಗಳನ್ನು ನೋಡಬಹುದಿತ್ತು ಮತ್ತು ಅಗತ್ಯವಿದ್ದರೆ ಹಳೆ ಪಾಠಗಳಿಗೂ ಮತ್ತೆ ಭೇಟಿ ನೀಡಬಹುದಿತ್ತು. ಇದರಿಂದಾಗಿ ನಾಡಿಯಾಳಿಗೆ ಎಷ್ಟು ಉಪಯೋಗವಾಯಿತೆಂದರೆ ಆಕೆ ಗಣಿತದಲ್ಲಿ ಉತ್ತಮ ಅಂಕಗಳನ್ನು ಪಡೆದಳು.

ಇದನ್ನೂ ಓದಿ: ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ ಗುರು!

ನಾಡಿಯಾಳ ನಂತರ ಆಕೆಯ ಸಹೋದರರಾದ ಆರ್ಮನ್ ಮತ್ತು ಆಲಿಗೂ ಖಾನ್ ಇದೇರೀತಿ ಪಾಠ ಮಾಡಲಾರಂಭಿಸಿದ. ಆದರೆ ಅಷ್ಟು ಹೊತ್ತಿಗೆ ಖಾನ್‍ನ ಇತರೆ ಸಂಬಂಧಿಕರ ಮಕ್ಕಳು ಮತ್ತು ಆ ಮಕ್ಕಳ ಸ್ನೇಹಿತರೂ ಈ ಪಾಠಗಳನ್ನು ನೋಡಿ ಕಲಿಯಲಾರಂಭಿಸಿದ್ದರು. ಇದಕ್ಕೆಲ್ಲ ಖಾನ್ ಬಳಸಿದ್ದು ತನ್ನ ಕಂಪ್ಯೂಟರ್ ಮತ್ತು ಅದಕ್ಕೆ ಅಳವಡಿಸಿದ್ದ 200 ಡಾಲರ್‌ಗಳ ಕ್ಯಾಮೆರಾ, 80 ಡಾಲರ್‌ಗಳ ಪ್ಯಾಡ್ ಮತ್ತು 20 ಡಾಲರ್‌ಗಳ ವೀಡಿಯೋ ರೆಕಾರ್ಡರ್ ಹಾಗೂ ಪುಕ್ಕಟೆ ಸಿಗುವ ಹಲವು ಸಾಫ್ಟ್‍ವೇರ್‌ಗಳನ್ನು.

ಇದು ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದಂತೆ ಖಾನ್ ತನ್ನದೇ ಒಂದು ವೆಬ್‍ಸೈಟ್ ಶುರು ಮಾಡಿ ಅವುಗಳನ್ನೆಲ್ಲ ಅದರಲ್ಲಿ ಸೇರಿಸಲಾರಂಭಿಸಿದ. ಕಾಲಕ್ರಮೇಣ ಇದು ಎಷ್ಟು ದೊಡ್ಡದಾಯಿತು ಎಂದರೆ ಇದರಲ್ಲಿ ಪಾಠಗಳನ್ನು ಹೇಳಿಕೊಡುವುದಕ್ಕೆ ಆತನಿಗೆ ದಿನದ ಇಪ್ಪತ್ತನಾಲ್ಕು ಗಂಟೆಗಳು ಸಾಲದಾಯಿತು. ಆಗ ಖಾನ್ ಯೋಚಿಸಿದ: “ನನಗೆ ಒಬ್ಬಳು ಸುಂದರ ಹೆಂಡತಿ ಇದ್ದಾಳೆ, ಇಬ್ಬರು ಮುದ್ದಿನ ಮಕ್ಕಳಿದ್ದಾರೆ, ವಾಸಿಸಲು ಒಂದು ಮನೆ ಇದೆ, ಎರಡು ಕಾರ್‌ಗಳಿವೆ, ಸಾಕಷ್ಟು ಉಳಿತಾಯವಿದೆ. ಇದಕ್ಕಿಂತ ಒಬ್ಬ ಮನುಷ್ಯನಿಗೆ ಜೀವನದಲ್ಲಿ ಇನ್ನೇನು ಬೇಕು? ನನಗೆ 80 ವರ್ಷ ವಯಸ್ಸಾದಾಗ ನನ್ನ ಹತ್ತಿರ ಎಷ್ಟು ದುಡ್ಡಿದೆ ಎಂಬುದಕ್ಕಿಂತ ನಾನು ಸಮಾಜಕ್ಕಾಗಿ ಏನನ್ನು ಮಾಡಿದೆ ಎಂಬುದು ಮುಖ್ಯವಾಗುತ್ತದೆ. ಈ ನನ್ನ ಪಾಠಗಳಿಂದ ಜನರಿಗೆ ಉಪಯೋಗವಾದರೆ ಅದಕ್ಕಿಂತ ಉತ್ತಮವಾದದ್ದೇನಿದೆ? ಬದುಕಿನಲ್ಲಿ ನೆಮ್ಮದಿ ಮತ್ತು ಸಂತೋಷ ಎಲ್ಲದಕ್ಕಿಂತ ಮುಖ್ಯ” ಎಂದು ಖಾನ್ ನಿರ್ಧರಿಸಿದ.

ಆಗ ಖಾನ್ ವರ್ಷಕ್ಕೆ ಮಿಲಿಯನ್ ಡಾಲರ್ ಸಂಬಳ ನೀಡುತ್ತಿದ್ದ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿ ‘ಖಾನ್ ಅಕಾಡೆಮಿ’ಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ. ಈತ ತನ್ನ ಪಾಠಗಳಿಗೆ ಶುಲ್ಕವನ್ನು ವಿಧಿಸದೆ ಬಿಟ್ಟಿಯಾಗಿ ಹೇಳಿಕೊಡುತ್ತಿದ್ದರಿಂದ ನಿಧಾನವಾಗಿ ಆತನ ಉಳಿತಾಯದ ಹಣವೆಲ್ಲ ಕರಗಲಾರಂಭಿಸಿತು. ಆದರೂ ಈತನ ಅಕಾಡೆಮಿಯ ಜನಪ್ರಿಯತೆಯನ್ನು ಕಂಡು ಅದೆಷ್ಟೋ ಉದ್ಯಮಿಗಳು ಅದನ್ನು ಆತನಿಂದ ಖರೀದಿಸಲು ಮುಂದಾದರು. ಆದರೆ ಅದನ್ನು ಕೊಂಡವರು ತನ್ನಂತೆ ಪುಕ್ಕಟೆಯಾಗಿ ಪಾಠ ಹೇಳಿಕೊಡುವುದಿಲ್ಲ ಎಂದು ಗೊತ್ತಿದ್ದರಿಂದ ಖಾನ್ ಅದನ್ನು ಮಾರಲು ನಿರಾಕರಿಸಿದ್ದ.

ಅದೃಷ್ಟವಶಾತ್ ಅದೇಹೊತ್ತಿಗೆ ಈ ಖಾನ್ ಅಕಾಡೆಮಿ ಬಗ್ಗೆ ಬಿಲ್ ಗೇಟ್ಸ್‌ನ ಮಕ್ಕಳಿಗೂ ಗೊತ್ತಾಗಿ ಅವರೂ ಇಲ್ಲಿದ್ದ ಮಾಹಿತಿಯನ್ನು ಆಧರಿಸಿ ಕಲಿಯಲಾರಂಭಿಸಿದ್ದರು. ಒಮ್ಮೆ ಇದರ ಬಗ್ಗೆ ತಮ್ಮ ತಂದೆಗೂ ಹೇಳಿದರು. ಆತ ಕೂಡ ಇದನ್ನು ನೋಡಿ ಮೆಚ್ಚಿಕೊಂಡ. ಎಷ್ಟರಮಟ್ಟಿಗೆ ಅಂದರೆ ಖಾನ್ ಅಕಾಡೆಮಿಗೆ ಬಿಲ್ ಗೇಟ್ಸ್ ಫೌಂಡೇಷನ್‍ನಿಂದ ದೊಡ್ಡಮೊತ್ತದ ದೇಣಿಗೆಯನ್ನು ನೀಡಿದೆ. ಬಿಲ್ ಗೇಟ್ಸ್ ಅಲ್ಲದೆ ಗೂಗಲ್ ಸಂಸ್ಥೆಯವರೂ ಖಾನ್ ಅಕಾಡೆಮಿಯ ಸಾಧನೆಯನ್ನು ಮೆಚ್ಚಿ ಅದಕ್ಕೆ ದೊಡ್ಡ ಮೊತ್ತದ ಪ್ರಶಸ್ತಿಯನ್ನು ನೀಡಿದರಲ್ಲದೆ ಅವರೂ ದೇಣಿಗೆಯನ್ನು ನೀಡಿದರು. ಇವತ್ತು ಅದಷ್ಟೋ ಅಭಿಮಾನಿಗಳು ತಮ್ಮ ಶಕ್ತಾನುಸಾರ ಖಾನ್‍ನ ಈ ವಿದ್ಯಾಸಂಸ್ಥೆಗೆ ಹಣ ಸಹಾಯವನ್ನು ಮಾಡುತ್ತಿದ್ದಾರೆ.

ಇದರ ಬಗ್ಗೆ ಇಷ್ಟೆಲ್ಲ ಹೇಳಿದ್ದಕ್ಕೆ ಕಾರಣವಿದೆ. ನಮ್ಮ ಪತ್ರಿಕೆಯ ಓದುಗರಲ್ಲಿ ಬಹಳಷ್ಟು ಜನ ಶಾಲಾ ಅಧ್ಯಾಪಕರಿದ್ದಾರೆ. ಅವರೆಲ್ಲರೂ ಸಲ್ಮಾನ್ ಖಾನ್ ಅವರ khanacademy.org ಎಂಬ ವೆಬ್‍ಸೈಟಿಗೆ ಭೇಟಿ ನೀಡಿದರೆ ನಮ್ಮ ರಾಜ್ಯದ ಶಾಲಾಮಕ್ಕಳಿಗೆ ಇವತ್ತು ಕಷ್ಟದ ಸಬ್ಜೆಕ್ಟ್ ಆಗಿರುವ ಗಣಿತವನ್ನು ಇನ್ನೂ ಚೆನ್ನಾಗಿ ಹೇಳಿಕೊಟ್ಟು ಅವರೆಲ್ಲ ಪರೀಕ್ಷೆಗಳಲ್ಲಿ ಇನ್ನೂ ಹೆಚ್ಚು ಯಶಸ್ವಿಯಾಗುವಂತೆ ಮಾಡಬಹುದಾಗಿದೆ. ಓರ್ವ ಗುರುವಿನ ಕರ್ತವ್ಯ ಅದೇ ಅಲ್ಲವೇ?

 ಗೌರಿ ಲಂಕೇಶ್
13 ಜುಲೈ, 2011 (ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ಬೆದರಿಕೆ: ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಕರೆ ಮಾಡಿ ಅಸಭ್ಯವಾಗಿ ನಿಂದಿಸಿ,...

ಭೀಮಾ ಕೋರೆಗಾಂವ್ ಪ್ರಕರಣ: ನಾಲ್ಕು ವರ್ಷಗಳ ನಂತರ ಇಬ್ಬರಿಗೆ ಬಾಂಬೆ ಹೈಕೋರ್ಟ್‌ನಿಂದ ಜಾಮೀನು

ಎಲ್ಗರ್ ಪರಿಷತ್ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಾಲ್ಕು ವರ್ಷಗಳ ನಂತರ, ಸಾಮಾಜಿಕ ಕಾರ್ಯಕರ್ತರಾದ ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಈಗಾಗಲೇ ಬಿಡುಗಡೆಯಾದ...

‘ಗುಜರಾತ್‌ನಂತೆಯೇ ಕೇರಳವೂ ಈಗ ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದೆ’: ಪ್ರಧಾನಿ ನರೇಂದ್ರ ಮೋದಿ 

ತಿರುವನಂತಪುರಂ: ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಿರುವನಂತಪುರಂ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ವಿಜಯವನ್ನು "ಬದಲಾವಣೆಗೆ ಮಹತ್ವದ ಜನಾದೇಶ" ಎಂದು ಶ್ಲಾಘಿಸಿದ್ದಾರೆ.  ಇದೇ ವೇಳೆ "ಜನಪರ ಮತ್ತು...

ರಾಜಸ್ಥಾನ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ನಡುವೆ ಪ್ರೀತಿ: ಮದುವೆಗಾಗಿ ಪೆರೋಲ್ ಮೇಲೆ ಹೊರ ಬಂದ ಕೊಲೆ ಅಪರಾಧಿಗಳು

ಜೈಪುರದ ಸಂಗನೇರ್ ಓಪನ್ ಜೈಲಿನಲ್ಲಿ(ಮುಕ್ತ ಜೈಲು) ಪ್ರಾರಂಭವಾದ ಇಬ್ಬರು ಕೊಲೆ ಅಪರಾಧಿಗಳ ನಡುವಿನ ಪ್ರಣಯವು ಸಾರ್ವಜನಿಕ ಜೀವನಕ್ಕೂ ಕಾಲಿರಿಸಿದೆ. ಕೊಲೆ ಪ್ರಕರಣಗಳಲ್ಲಿ ಜೀವಾವಧಿಗೆ ಒಳಗಾಗಿರುವ ಇಬ್ಬರು ಕೈದಿಗಳು ಮದುವೆಯಾಗಲು ಪೆರೋಲ್ ಮೇಲೆ ಹೊರಬಂದಿದ್ದಾರೆ. ಅಪರಾಧ...

‘ಅತ್ಯಾಚಾರ-ಕೊಲೆ ಸಣ್ಣ ಘಟನೆ’: ಸಂಸದ ರಾಜಶೇಖರ್ ಹಿಟ್ನಾಳ್ ವಿವಾದಾತ್ಮಕ ಹೇಳಿಕೆ: ಸಂಸದರ ಹೇಳಿಕೆಗೆ ವ್ಯಾಪಕ ಖಂಡನೆ 

ಕೊಪ್ಪಳ: ಒಂದು ವರ್ಷದ ಹಿಂದೆ ಸಾಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ವ್ಯಕ್ತಿಯ ಕೊಲೆ ಪ್ರಕರಣ ಸಣ್ಣದಾಗಿದ್ದರೂ ಮಾಧ್ಯಮಗಳು ವೈಭವೀಕರಿಸಿದ್ದರಿಂದ ಪ್ರವಾಸೋದ್ಯಮಕ್ಕೆ ವ್ಯಾಪಕ ಪೆಟ್ಟು ಬಿದ್ದಿದೆ ಎಂದು ಸಂಸದ ರಾಜಶೇಖರ...

ರಾಹುಲ್ ಕಡೆಗಣನೆ ಆರೋಪ: ಅಸಮಾಧಾನಗೊಂಡ ಶಶಿ ತರೂರ್, ಕೇರಳ ಕಾಂಗ್ರೆಸ್ ಕಾರ್ಯತಂತ್ರದ ಸಭೆಗೆ ಗೈರಾಗುವ ಸಾಧ್ಯತೆ!

ನವದೆಹಲಿ: ಕೇರಳ ಕಾಂಗ್ರೆಸ್ ಘಟಕದಲ್ಲಿ ಹೊಸ ಬಿಕ್ಕಟ್ಟು ಉಂಟಾಗಿದ್ದು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ಕಡೆಗಣಿಸಿದ್ದರಿಂದ ಅಸಮಾಧಾನಗೊಂಡಿರುವ ಹಿರಿಯ ಸಂಸದ ಶಶಿ ತರೂರ್, ಚುನಾವಣಾ...

ಒಡಿಶಾ| ಮದುವೆ ಪ್ರಸ್ತಾಪ ತಿರಸ್ಕರಿಸಿದ ಮಹಿಳೆ ಮೇಲೆ ಸೇಡು; ನಕಲಿ ಖಾತೆ ತೆರೆದು ಜಗನ್ನಾಥ ದೇಗುಲ ಸ್ಪೋಟಿಸುವ ಬೆದರಿಕೆ

ಮಹಿಳೆಯ ಹೆಸರಿನಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಖಾತೆಯನ್ನು ರಚಿಸಿ ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ...

ಬೈಕ್ ಟ್ಯಾಕ್ಸಿ ನಿಷೇಧ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ಪರ್ಮಿಟ್ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಜನವರಿ 23 ರಂದು ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಮತಿ ನೀಡಿದ್ದು, ಬೈಕ್ ಟ್ಯಾಕ್ಸಿ ಸಂಗ್ರಾಹಕರು, ವೈಯಕ್ತಿಕ ಬೈಕ್ ಟ್ಯಾಕ್ಸಿ ಮಾಲೀಕರು ಮತ್ತು ಇತರರು ಸಲ್ಲಿಸಿದ ಮೇಲ್ಮನವಿಗಳನ್ನು ಅಂಗೀಕರಿಸಿದೆ. ಮುಖ್ಯ...

ಮಧ್ಯಪ್ರದೇಶ: ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 22 ಮಂದಿ ಅಸ್ವಸ್ಥ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ ಕನಿಷ್ಠ 22 ಜನರು ಅಸ್ವಸ್ಥರಾಗಿದ್ದಾರೆ. ಕೆಲವೇ ವಾರಗಳ ಹಿಂದೆ ಕಲುಷಿತ ನೀರಿನಿಂದ ಹರಡುವ ರೋಗಗಳಿಂದ ಕನಿಷ್ಠ 23 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಆಸ್ಪತ್ರೆಗೆ ದಾಖಲಾಗಿದ್ದರು....

ರಾಜ್ಯಪಾಲರ ಭಾಷಣ ಪದ್ಧತಿ ಕೊನೆಗೊಳಿಸುವ ಸಮಯ ಬಂದಿದೆ: ಮುಖ್ಯಮಂತ್ರಿ ಸ್ಟಾಲಿನ್

ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಹೆಹ್ಲೋಟ್ ಸದನವನ್ನು ಉದ್ದೇಶಿಸಿ ಸಂಪೂರ್ಣ ಸಾಂಪ್ರದಾಯಿಕ ಭಾಷಣವನ್ನು ಓದದೆ ವಿಧಾನಸಭೆಯಿಂದ ನಿರ್ಗಮಿಸಿರುವುದು ಇದೀಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ...