Homeಅಂಕಣಗಳುಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ

ಬಡಪಾಯಿ ಎಮ್ಮೆಗಳಿಗೂ ಥ್ಯಾಂಕ್ಸ್ ಹೇಳೋಣ ಬನ್ನಿ

- Advertisement -
- Advertisement -

ದುರ್ಗಾ- ಮಹಿಷ ಕದನ ಮತ್ತು ಮಹಿಷಾಸುರ ಮಧನದ ಪರಿಣಾಮ ಇದ್ದೀತು. ನಮ್ಮ ಎಲ್ಲ ಜಾನುವಾರುಗಳ ಪೈಕಿ ನಿಕೃಷ್ಟವೆಂದು ಕಳಂಕ ಹೊತ್ತ ಪ್ರಾಣಿಯಿದು. ಪರಮ ಕ್ರೌರ್ಯಕ್ಕೆ ಗುರಿಯಾಗುವ ಜೀವಿ. ಮನಸೇಚ್ಛೆ ಬಡಿತ ತಿನ್ನುತ್ತದೆ, ದೇವಿಯ ಮುಂದೆ ಕತ್ತು ಕಡಿಸಿಕೊಂಡು ಬಲಿಯಾಗುತ್ತದೆ. ಮೇವು ನೀರಿಲ್ಲದೆ ನೂರಾರು ಕಿ.ಮೀ. ದೂರ ಹಿಂಸೆಯ ಸಾಗಣೆಗೆ ತುತ್ತಾಗಿ ಕಸಾಯಿಖಾನೆಗಳಲ್ಲಿ ಅತ್ಯಂತ ಯಾತನೆಯ ಮರಣಕ್ಕೆ ಗುರಿಯಾಗುತ್ತದೆ.

ಕಪ್ಪು ವರ್ಣವನ್ನು ಕೀಳೆಂದೂ, ಗೌರವರ್ಣವನ್ನು ಮೇಲೆಂದೂ ನೂರಾರು ವರ್ಷಗಳಿಂದ ನಿತ್ಯ ಬದುಕಿನಲ್ಲಿ ಕಂಡೂಕಾಣದಂತೆ ಭೇದಭಾವ ಬಗೆಯುತ್ತ ಬಂದಿರುವ ವ್ಯವಸ್ಥೆ ಆಷಾಢಭೂತಿತನದ್ದು.

1890ರ ಆಪ್ಟೆ ಸಂಸ್ಕೃತ ನಿಘಂಟಿನ ಪ್ರಕಾರ ಕೃಷ್ಣ ಎಂಬ ಶಬ್ದಕ್ಕೆ ಕಪ್ಪು, ಕತ್ತಲೆ, ಕಡು ನೀಲಿ, ದುಷ್ಟ, ಅನಿಷ್ಟ, ಕೃಷ್ಣಮೃಗ, ಕೋಗಿಲೆ, ಕೃಷ್ಣಪಕ್ಷ, ವಿಷ್ಣುವಿನ ಎಂಟನೆಯ ಅವತಾರ ಕೃಷ್ಣ, ಕೃಷ್ಣನ ಮಗ ಪ್ರದ್ಯುಮ್ನ, ಮಹಾ ಭಾರತದ ಅರ್ಜುನ ಎಂಬ ಅರ್ಥಗಳಿವೆ. ಕೃಷ್ಣ ಎಂಬುದು ದೇಶದ ಅತಿ ಜನಪ್ರಿಯ ಹೆಸರುಗಳಲ್ಲೊಂದು.

ವಿಷ್ಣುವಿನ ಮೂರು ಅವತಾರಗಳಾದ ರಾಮ, ಕೃಷ್ಣ ಹಾಗೂ ಮೋಹಿನಿಯ ಮೈಬಣ್ಣ ಕಪ್ಪು ಇಲ್ಲವೇ ಕಡುನೀಲಿ. ಮೂವರ ಸೌಂದರ್ಯವನ್ನು ಪುರಾಣಗಳು, ಭಾಗವತಗಳು ಕೊಂಡಾಡಿವೆ.

ಭಾರತದ ಅರ್ಥವ್ಯವಸ್ಥೆ ಹೊಳೆಯಲು ಬಡಪಾಯಿ ಎಮ್ಮೆ ಕೋಣಗಳು ಕೂಡ ಶ್ರಮಿಸಿವೆ. ಬೈಸಿಕೊಳ್ಳುವುದಷ್ಟೇ ಅಲ್ಲ ಬೈಗುಳವೇ ಆಗಿ ಹೋಗಿರುವ ಈ ಪಶುವಿನ ಹಿರಿಮೆ ಗರಿಮೆಯ ನೆನೆವುದು ಮಾನವೀಯ ನಡವಳಿಕೆ.

ಕಪ್ಪೆಂದು ಜರೆಯುವ ಬೈಗುಳವೇ ಆಗಿ ಹೋಗಿರುವ ಎಮ್ಮೆಗಳು- ಕೋಣಗಳು ಗದ್ದೆ ಉಳುತ್ತವೆ, ಹೇರು ಎಳೆಯುತ್ತವೆ, ಕನಿಷ್ಠ ತಿಂದು ಗರಿಷ್ಠ ಹಾಲು ಕರೆಯುತ್ತವೆ. ಎಮ್ಮೆ ಹಾಲಿನಲ್ಲಿ ಹೃದಯಕ್ಕೆ ಮಾರಕವಾದ ಕೊಲೆಸ್ಟ್ರಾಲ್ ಪ್ರಮಾಣ ಶೇ.45ರಷ್ಟು ಕಡಿಮೆ, ಒಮೇಗ-3 ಮೇದಸ್ಸು ಹೆಚ್ಚಿನ ಪ್ರಮಾಣದಲ್ಲಿದೆ, ಪ್ರೊಟೀನು, ಕಬ್ಬಿಣಾಂಶ ಹೇರಳ. ಜಾನುವಾರು ತಜ್ಞರು ಎಮ್ಮೆಯನ್ನು ಭಾರತದ ಹೆಮ್ಮೆ ಎಂದು ಬಣ್ಣಿಸುವುದುಂಟು.

ನಮ್ಮ ದೇಶದಲ್ಲಿರುವ ಎಮ್ಮೆಗಳ ಸಂಖ್ಯೆ ಸುಮಾರು 12 ಕೋಟಿ. ಪ್ರಪಂಚದ ಅರ್ಧಕ್ಕಿಂತ ಹೆಚ್ಚು ಎಮ್ಮೆಗಳಿಗೆ ಭಾರತವೇ ತವರು. ವರ್ಷಕ್ಕೆ ಉತ್ಪತ್ತಿಯಾಗುತ್ತಿರುವ ಎಮ್ಮೆ ಮಾಂಸದ ಪ್ರಮಾಣ ಹನ್ನೊಂದು ಲಕ್ಷ ಟನ್ನುಗಳಷ್ಟು. ಎಮ್ಮೆ ಮಾಂಸದ ರಫ್ತಿನಿಂದ ಬೊಕ್ಕಸಕ್ಕೆ ಭರ್ತಿಯಾಗುತ್ತಿರುವ ವಾರ್ಷಿಕ ವರಮಾನ 30 ಸಾವಿರ ಕೋಟಿ ರೂಪಾಯಿ ಮೀರಿದ್ದು. ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಹಾಲನ್ನು ಉತ್ಪಾದಿಸುತ್ತಿರುವುದು ಎಮ್ಮೆಗಳೇ.

ಗೋಹತ್ಯೆ ವಿರುದ್ಧ ಸಿಡಿದೇಳುವವರನ್ನು ಮಹಿಷ ಹತ್ಯೆ ಯಾಕೆ ಬಾಧಿಸುವುದಿಲ್ಲ ಎಂದು ಕೇಳುತ್ತಾರೆ ಚಿಂತಕ ಕಂಚಾ ಐಲಯ್ಯ. ಗೋವುಗಳು, ದಲಿತರು-ಬಹುಜನರು ಈ ಎರಡೂ ಜಾನುವಾರುಗಳ ಕುರಿತು ತೋರುವ ಪ್ರೀತಿ ಮಮತೆಯನ್ನು ನೋಡಿದರೆ ಎರಡಕ್ಕೂ ಒಂದೇ ಬಗೆಯ ಸಮ್ಮಾನ ಸಿಗಬೇಕು ಎಂದು ವಾದಿಸುತ್ತಾರೆ. ಎಮ್ಮೆಯ ಹಾಲನ್ನು ಮೇಲ್ಜಾತಿಗಳೆಂದು ಹೇಳಿಕೊಳ್ಳುವವರೂ ಬಗೆಬಗೆಯಾಗಿ ಸೇವಿಸುವುದು ಸುಳ್ಳೇನೂ ಅಲ್ಲ. ಆದರೆ ಎಮ್ಮೆಗೆ ಬ್ರಾಹ್ಮಣ್ಯದಲ್ಲಿ ಯಾವುದೇ ಸ್ಥಾನಮಾನ ಇಲ್ಲ. ಆರ್ಥಿಕ ಸಮೀಕ್ಷೆಯೊಂದನ್ನು ನಡೆಸಿದ್ದೇ ಆದರೆ ಭಾರತದಲ್ಲಿ ಕೋಟ್ಯಂತರ ಜನರ ಜೀವನೋಪಾಯ ಮೂಲವಾಗಿ ಹೊಮ್ಮುವುದು ಎಮ್ಮೆಯೇ ವಿನಾ ಆಕಳು ಅಲ್ಲ. ಒಂದೇ ಹುಲ್ಲನ್ನು ತಿನ್ನುವ ಎರಡು ಪ್ರಾಣಿಗಳಲ್ಲಿ ಒಂದು ಆಧ್ಯಾತ್ಮಿಕವಾಗಿ ಮತ್ತು ರಾಜಕೀಯವಾಗಿ ಅಸ್ಪೃಶ್ಯ ಎನಿಸಿಕೊಳ್ಳುವುದು ಯಾಕಾಗಿ ಎಂದು ಅವರು ಕೇಳುತ್ತಾರೆ. ಎರಡರ ಪೈಕಿ ಯಾವುದು ಶ್ರೇಷ್ಠ ಮತ್ತು ಯಾವುದು ಕನಿಷ್ಠ ಎಂದು ತೀರ್ಮಾನ ಮಾಡಲೇಬೇಕಿದ್ದಲ್ಲಿ, ಅಂತಹ ಹಕ್ಕು- ಅಧಿಕಾರ ಇರಬೇಕಾದದ್ದು ಈ ಎರಡೂ ಪ್ರಾಣಿಗಳನ್ನು ತಲೆತಲಾಂತರಗಳಿಂದ ಸಾಕಿ ಸಲಹುತ್ತ ಬಂದಿರುವ ದಲಿತರು- ಬಹುಜನರಿಗೆ.

ಕಪ್ಪು ಮೈ ಬಣ್ಣದ ಜನ ಸಮುದಾಯಗಳನ್ನು ವಿಕಾರವಾಗಿ ಚಿತ್ರಿಸಿ, ರಾಕ್ಷಸರೆಂದು ಕರೆದ ಬಿಳಿ ಮೈ ಬಣ್ಣದವರ ವರ್ಣಭೇದ ನೀತಿ ಜನಜನಿತ. ಇದೇ ನೀತಿ ಪ್ರಾಣಿ ಪ್ರಪಂಚಕ್ಕೂ ವಿಸ್ತರಿಸಿತು. ಈ ಅಹಮಿಕೆಗೆ ತಿರಸ್ಕಾರಕ್ಕೆ ತುತ್ತಾದ ಜಾನುವಾರು ಎಮ್ಮೆ. ಬೆಳ್ಳಗಿದ್ದುದು ಸುಂದರವಷ್ಟೇ ಅಲ್ಲ ಗೌರವಾನ್ವಿತ ಕೂಡ ಎನಿಸಿಕೊಂಡಿತು ಎನ್ನುತ್ತಾರೆ ಐಲಯ್ಯ.

ಆದರೂ ಮಹಿಷ ಪರಂಪರೆ ನಮ್ಮ ಅನೇಕ ಗಿರಿಜನರ ಆಚರಣೆಗಳಲ್ಲಿ ಇನ್ನೂ ಜೀವಂತವಿದೆ. ಮಧ್ಯಭಾರತದ ಗೊಂಡರು ಮತ್ತು ಮರಿಯಾ ಗೊಂಡರು, ಪಶ್ಚಿಮ ಭಾರತದ ಕಾಟಕಾರಿಗಳು ಹಾಗೂ ದಕ್ಷಿಣ ಭಾರತದ ತೋಡರು ಈ ಮಾತಿಗೆ ಉದಾಹರಣೆಯಾಗುತ್ತಾರೆ.

ನೀಲಗಿರಿಯ ಗಿರಿಜನರಾದ ತೋಡರ ಪಾಲಿಗೆ ಎಮ್ಮೆಗಳು ಪವಿತ್ರ ಪ್ರಾಣಿಗಳಾಗಿದ್ದವೇ ವಿನಾ ಆಕಳುಗಳಲ್ಲ. ಪವಿತ್ರ ಎಮ್ಮೆಯನ್ನು ಕಟ್ಟುತ್ತಿದ್ದ ಸ್ಥಳಗಳು ಅವರ ಪಾಲಿಗೆ ಆರಾಧಿಸುವ ಗುಡಿಗಳು. ಹೈನು ಮಂದಿರಗಳೆಂದೇ ಅವುಗಳನ್ನು ಕರೆಯಲಾಗುತ್ತಿತ್ತು.

ಸತ್ತ ತೋಡನ ಅಂತ್ಯಸಂಸ್ಕಾರದಲ್ಲಿ ಎಮ್ಮೆಯನ್ನು ಬಲಿ ಕೊಡುತ್ತಿದ್ದರು ತೋಡರು. ಈ ಎಮ್ಮೆ ಪರಲೋಕ ಸೇರಿದ ಮೃತನನ್ನು ಸೇರಿಕೊಳ್ಳಬೇಕು ಎಂಬುದು ಈ ಬಲಿಯ ಉದ್ದೇಶವಾಗಿತ್ತೇ ವಿನಾ ಅದನ್ನು ತಿನ್ನುವುದಲ್ಲ.
ಛತ್ತೀಸಗಢದ ಬಸ್ತರ್ ಜಿಲ್ಲೆಯ ಇಂದ್ರಾವತೀ ನದೀ ದಂಡೆಗುಂಟ ವಾಸಿಸುತ್ತಿದ್ದ ಮರಿಯಾ ಮತ್ತು ಮರಿಯಾ ಗೊಂಡ ಆದಿವಾಸಿಗಳು ತಮಗೆ ಮಹಿಷದೊಂದಿಗೆ ಆಧ್ಯಾತ್ಮಿಕ ಸಂಬಂಧವಿದೆ ಎಂದು ನಂಬಿದ್ದವರು. ಹೀಗಾಗಿ ಅವರ ಪಾಲಿನ ಆಧ್ಯಾತ್ಮಿಕ ಸಂಬಂಧದ ಚಿಹ್ನೆ ಮಹಿಷ. ಹಬ್ಬಗಳಲ್ಲಿ ಮಹಿಷದ ಕೊಂಬುಗಳನ್ನು ತಲೆಯ ಮೇಲೆ ಧರಿಸಿ, ಡೋಲಿನ ತಾಳಕ್ಕೆ ಹೆಜ್ಜೆ ಹಾಕಿ ಹುಸಿ ಕಾಳಗವನ್ನು ನಟಿಸುತ್ತಾರೆ. ತಮ್ಮ ಪ್ರಾಚೀನ ಮಹಿಷ ದೈವವನ್ನು ದಾಂತೇಶ್ವರಿ ಎಂದೇ ಪೂಜಿಸುತ್ತಾರೆ. ಮಹಿಷನನ್ನು ಮಹಸೋಬಾ (ಮಹಿಷಬಾಬಾ ಇಲ್ಲವೇ ತಂದೆ) ಎಂದು ಮಧ್ಯ ಭಾರತ ಮತ್ತು ಪಶ್ಚಿಮ ಭಾರತದ ಗಿರಿಜನರು ಪೂಜಿಸುತ್ತಿದ್ದರು. ಮಹಾರಾಷ್ಟ್ರದ ಕಾಟ್ಕರೀ ಗಿರಿಜನರು ಮತ್ತು ಶಿವಾಜಿಯ ವಂಶಜರೆನ್ನಲಾಗುವ ಭೋಸ್ಲೆಗಳು ಮಹಸೊಬನನ್ನು ಪೂಜಿಸುತ್ತಾರೆ. ನಂದಿತಾ ಕೃಷ್ಣ ಅವರ ಭಾರತದ ಪವಿತ್ರ ಪ್ರಾಣಿಗಳು ಎಂಬ ಕೃತಿಯಲ್ಲಿ ಈ ವಿವರಗಳು ಓದಲು ಸಿಗುತ್ತವೆ.

ದುರ್ಗೆಯ ಕೈಯಲ್ಲಿ ಅಸುರ ಮಹಿಷ ಹತನಾಗುವ ಕತೆಯಲ್ಲಿ ಯಾವ ನೈತಿಕ ಅಂಶವೂ ಇಲ್ಲ. ಭೂಮಿಯ ಫಲವತ್ತತೆಯ ಆವರ್ತ ಆಯಾ ಸುಗ್ಗಿಯೊಂದಿಗೆ ಕೊನೆಯಾಗುತ್ತದೆ. ಭೂಮಿ ಸಸ್ಯಶ್ಯಾಮಲೆಯಾಗಿ ಮತ್ತೆ ಮೈ ತುಂಬಿಕೊಂಡರೆ ಮತ್ತೊಂದು ಸುಗ್ಗಿ. ಮತ್ತೆ ದುರ್ಗೆಯ ಕೈಯಲ್ಲಿ ಹತನಾಗಲು ಅಸುರ ಪುನಃ ಸಿದ್ಧನಾಗುತ್ತಾನೆ. ಮಾನವನ ಅನ್ನದ ತಟ್ಟೆ ಹೀಗೆ ಬರಿದಾಗದೆ ಮತ್ತೆ ಮತ್ತೆ ತುಂಬುತ್ತ ಹೋಗುವುದೇ ಈ ಕತೆಯ ಆಶಯ ಎಂದು ವ್ಯಾಖ್ಯಾನಿಸುತ್ತಾರೆ ಪಟ್ನಾಯಕ್.

ರೂಪಕ ಇಲ್ಲವೇ ಪ್ರತಿಮೆಯ ಮಾತಿನಲ್ಲಿ ಭೂಮಿಯನ್ನು ಆಕಳು ಎಂದಿದ್ದಾರೆ ಪುರಾಣಶಾಸ್ತ್ರಜ್ಞ ದೇವದತ್ ಪಟ್ನಾಯಕ್. ಭೂಮಿಯೇ ದನಿಯೆತ್ತಿ ಪ್ರತಿಭಟಿಸುವ ಮಟ್ಟಿಗೆ ಭೂಮಿಯನ್ನು ಕೊಳ್ಳೆ ಹೊಡೆವ ದುಷ್ಟಶಕ್ತಿಗಳನ್ನು ನಿವಾರಿಸಲಾಗುತ್ತದೆ. ಭೂಮಿಯೆಂಬ ಆಕಳ ಕಣ್ಣೀರನ್ನು ಒರೆಸುವ ವಿಷ್ಣು, ಭೂದಾಹಿ ರಾಜ ಮಹಾರಾಜರ ಒಜ್ಜೆಯನ್ನು ಇಳಿಸುವ ವಚನ ನೀಡುತ್ತಾನೆಂದು ಪುರಾಣಗಳು ಹೇಳುತ್ತವೆ. ಆದರೆ ಇಂದು ಧನದಾಹೀ ಉದ್ಯಮಗಳು ಭೂಮಿಯ ಕೊಳ್ಳೆ ಹೊಡೆಯತೊಡಗಿವೆ. ಸರಕಾರಗಳು ಈ ಸಮತೋಲನವನ್ನು ನಿರ್ಲಕ್ಷಿಸಿವೆ. ಕೊಳ್ಳೆಯ ಕೈಗಳಿಗೆ ಹತಾರುಗಳನ್ನು ಇಡತೊಡಗಿವೆ. ಭೂಮಿಯೆಂಬ ಆಕಳಿನ ರಕ್ಷಣೆಗೆ ಮುಂದಾಗುವ ಸ್ವಯಂಸೇವಾ ಸಂಸ್ಥೆಗಳನ್ನು ಶಿಕ್ಷಿಸತೊಡಗಿವೆ.

ಹೀಗಾಗಿ ಸೊಂಟ ಕಟ್ಟುವುದೇ ಆದರೆ ಅದು ಭೂಮಿಯೆಂಬ ಆಕಳಿನ ರಕ್ಷಣೆಗೆ ಕಟ್ಟಬೇಕು. ಭೂಮಿಯೇ ಇಲ್ಲದೆ ಆಕಳು ಹೇಗೆ ಉಳಿದೀತು?


ಇದನ್ನೂ ಓದಿ: ಮಹಿಷಾಸುರ ಯಾರು? ಕೋಣನ ಬಲಿಯ ಮೇಲೆ ಮಹಿಷ ಮರ್ಧನ ಪುರಾಣದ ಹೇರಿಕೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...