Homeಕರೋನಾ ತಲ್ಲಣಪ್ರಧಾನಿ ‘ಕೊರೊನಾ ವಾರಿಯರ್‌’ ಇದ್ದಂತೆ, ಸೋಂಕಿನ ವಿರುದ್ದ ಹೋರಾಡಲು 24x7 ಸಭೆ ನಡೆಸುತ್ತಾರೆ: ಕೇಂದ್ರ ಆರೋಗ್ಯ...

ಪ್ರಧಾನಿ ‘ಕೊರೊನಾ ವಾರಿಯರ್‌’ ಇದ್ದಂತೆ, ಸೋಂಕಿನ ವಿರುದ್ದ ಹೋರಾಡಲು 24×7 ಸಭೆ ನಡೆಸುತ್ತಾರೆ: ಕೇಂದ್ರ ಆರೋಗ್ಯ ಸಚಿವ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು “ಕೊರೊನಾ ವಾರಿಯರ್”‌ ಇದ್ದಂತೆ, ಅವರು 24×7 ಗಂಟೆಯು ಕೊರೊನಾ ವಿರುದ್ದ ಹೋರಾಟ ಮಾಡಲು ಸಭೆ ನಡೆಸುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಅವರು ಮಂಗಳವಾರ ಹೇಳಿದ್ದಾರೆ.

ಭಾರತದ ಎಲ್ಲಾ ಏಮ್ಸ್ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, “ನಾವು ಕಳೆದ ನಾಲ್ಕೈದು ದಿನಗಳಿಂದ ಹಲವಾರು ಆರೋಗ್ಯ ಸೌಲಭ್ಯ ಸಿಗುವಂತೆ ಮಾಡಿದ್ದೇವೆ. ಇದು ಸದ್ಯದ ಪರಿಸ್ಥಿತಿಗೆ ಬೇಕಾಗುಷ್ಟಿದೆ ಆದರೆ ಇದು ಸಾಕಾಗುವುದಿಲ್ಲ, ನಾವು ಇನ್ನೂ ವೇಗವಾಗಿ ಸಾಗಬೇಕಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಘ ಪರಿವಾರ ಬೆಂಬಲಿಗ ಪತ್ರಿಕೆ ‘ಹೊಸದಿಗಂತ’ದ ಸಂಪಾದಕ ಮತ್ತು ಪ್ರಕಾಶಕರಿಗೆ ಏಳು ತಿಂಗಳ ಜೈಲು

“ಪ್ರಧಾನಿ ಮೋದಿಯವರು ‘ಕೊರೊನಾ ವಾರಿಯರ್‌’ ಇದ್ದಂತೆ. ಅವರು ಕೊರೊನಾ ವಿರುದ್ದ ಹೋರಾಡಲು 24×7 ಗಂಟೆಯು ಸಭೆ ನಡೆಸುತ್ತಿದ್ದಾರೆ. ನಿನ್ನೆ ಕೂಡಾ ಅವರು ವೈದ್ಯಕೀಯ ವೃತ್ತಿಪರರೊಂದಿಗೆ ಸಭೆ ನಡೆಸಿದ್ದಾರೆ” ಎಂದು ಹೇಳಿದ್ದಾರೆ.

ಆದರೆ ಪ್ರಧಾನಿ ಮೋದಿಯು ದೇಶದಲ್ಲಿ ಕೊರೊನಾ ಉಲ್ಬಣದ ನಡುವೆಯು, ಪಶ್ಚಿಮ ಬಂಗಾಳದ ವಿಧಾನಸಭೆಯ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಬೃಹತ್‌ ಸಭೆಗಳಲ್ಲಿ ಮಾತನಾಡಿದ್ದರು.

ಕಳೆದ ಶನಿವಾರದಂದು ಬಂಗಾಳದ ಅಸನ್ಸೋಲ್‌ನ ರ‍್ಯಾಲಿಯಲ್ಲಿ ನೆರೆದ ಭಾರಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ್ದ ಮೋದಿ, “ಲೋಕಸಭಾ ಚುನಾವಣೆಯ ಸಮಯದಲ್ಲಿ ನಾನು ಎರಡು ಬಾರಿ ಇಲ್ಲಿಗೆ ಬಂದಿದ್ದೇನೆ. ಆದರೆ ಮೊದಲ ಬಾರಿಗೆ ಇಂತಹ ರ‍್ಯಾಲಿಗೆ ಸಾಕ್ಷಿಯಾಗಿದ್ದೇನೆ. ಇಂದು, ನೀವು ನಿಮ್ಮ ಶಕ್ತಿಯನ್ನು ತೋರಿಸಿದ್ದೀರಿ” ಎಂದು ಉದ್ಘರಿಸಿದ್ದರು.

ಕಾಂಗ್ರೆಸ್ ಸೇರಿದಂತೆ ಹಲವರು ಇದನ್ನು ವ್ಯಾಪಕವಾಗಿ ಟೀಕಿಸಿದ್ದರು. ಕಾಂಗ್ರೆಸ್ ಪಕ್ಷವು ಪ್ರಧಾನಿಯವರನ್ನು ರೋಮ್ ದೊರೆ ನೀರೊಗೆ ಹೋಲಿಕೆ ಮಾಡಿತ್ತು.

ಇದನ್ನೂ ಓದಿ: ಯುಪಿ ಮುಖ್ಯಮಂತ್ರಿಯನ್ನು ‘ತಗಡು ಯೋಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...