Homeಮುಖಪುಟಲೀ ಪೆಟ್ರೋಲ್ ದರ ರೂ. 06!, ರಾಮದೇವ್ ಯೋಗ ಭಂಗಿಯಲ್ಲಿ ನೋಡಿದರೆ: ತರೂರ್ ವ್ಯಂಗ್ಯ

ಲೀ ಪೆಟ್ರೋಲ್ ದರ ರೂ. 06!, ರಾಮದೇವ್ ಯೋಗ ಭಂಗಿಯಲ್ಲಿ ನೋಡಿದರೆ: ತರೂರ್ ವ್ಯಂಗ್ಯ

- Advertisement -
- Advertisement -

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮಂಗಳವಾರ ಸಂಜೆ ಯೋಗ ಗುರು ಬಾಬಾ ರಾಮದೇವ್ ಅವರ ಕಾರ್ಟೂನ್ ಅನ್ನು ಟ್ವೀಟ್ ಮಾಡುವ ಮೂಲಕ ಪೆಟ್ರೋಲ್ ದರ ಏರಿಕೆಯನ್ನು ಟೀಕಿಸಿದ್ದಾರೆ.

ಕಾರ್ಟೂನ್‌ನಲ್ಲಿ ಬಾಬಾ ರಾಮ್‌ದೇವ್ ಅವರನ್ನು ಪೆಟ್ರೋಲ್ ಬಂಕ್‌ವೊಂದರಲ್ಲಿ ತಲೆಕೆಳಗೆ ಮಾಡಿ-ಕಾಲು ಮೇಲೆ ಮಾಡಿದ ಭಂಗಿಯಲ್ಲಿ ತೋರಿಸಲಾಗಿದೆ. ಮೇಲ್ಗಡೆ “ಲೀಟರ್ ರೂ. 90” ಪಠ್ಯವನ್ನು ಹೊಂದಿರುವ ಬೋರ್ಡ್ ಇದೆ. ಚಿತ್ರವು ಮಲಯಾಳಂನಲ್ಲಿ ಶೀರ್ಷಿಕೆಯನ್ನು ಸಹ ಹೊಂದಿದೆ, ಇದನ್ನು ತರೂರ್ ತಮ್ಮ ಟ್ವೀಟ್‌ನೊಂದಿಗೆ ಅನುವಾದಿಸಿ ಪೋಸ್ಟ್ ಮಾಡಿದ್ದಾರೆ.

“ನೀವು ಬಾಬಾ ರಾಮ್‌ದೇವ್ ಅವರಿಂದ ಯೋಗ ಪಾಠಗಳನ್ನು ತೆಗೆದುಕೊಂಡರೆ, ನೀವೂ ಸಹ ಪೆಟ್ರೋಲ್ ದರವನ್ನು ಲೀಟರ್‌ಗೆ 06 ರೂಪಾಯಿಗೆ ನೋಡಬಹುದು!” ಎಂದು ವ್ಯಂಗ್ಯ ಮಾಡಲಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು ಸತತ ಎಂಟನೇ ದಿನಕ್ಕೆ ದರಗಳನ್ನು ಹೆಚ್ಚಿಸಿದ ನಂತರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮಂಗಳವಾರ ನಾಲ್ಕು ಮಹಾನಗರಗಳಲ್ಲಿ ಸಾರ್ವಕಾಲಿಕ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದವು. ತೈಲದರ ಎಂಟನೆ ಸಲ ಸುಮಾರು 30 ಪೈಸೆ ಏರಿಕೆಯಾಗಿದೆ.

ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಈಗ ರೂ. 89.29 (ದೆಹಲಿ) ಮತ್ತು ರೂ. 95.75 (ಮುಂಬೈ) ನಡುವೆ ಮಾರಲ್ಪಡುತ್ತಿದೆ.

ಡೀಸೆಲ್ ಬೆಲೆ ರೂ. 79.70 (ದೆಹಲಿ) ಮತ್ತು ರೂ. 86.72 (ಮುಂಬೈ) ನಡುವೆ ಇದೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಫೆಬ್ರವರಿ 14 ರಂದು ಪ್ರೀಮಿಯಂ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 100 ತಲುಪಿದೆ.

ಜನವರಿ 6 ರಿಂದ ಇಂಧನ ಬೆಲೆಗಳು ಭಾರತದಾದ್ಯಂತ ಏರಿಕೆಯಾಗುತ್ತಿದ್ದು, ಅದಕ್ಕೂ ಮೊದಲು ಸುಮಾರು ಒಂದು ತಿಂಗಳವರೆಗೆ ಬದಲಾಗದೆ ಉಳಿದಿದ್ದವು.. ದೇಶಗಳು ಲಸಿಕಾ ಅಭಿಯಾನ ನಡೆಸುತ್ತಿರುವ ಈ ಸಂದರ್ಭದಲ್ಲಿ ಜಾಗತಿಕ ಕಚ್ಚಾ ತೈಲ ಬೆಲೆಗಳ ದರ ಕಡಿಮೆ ಇದ್ದರೂ ಈ ಹೆಚ್ಚಳವಾಗಿದೆ. ಮಾರುಕಟ್ಟೆಗಳು ಮತ್ತು ವ್ಯವಹಾರಗಳು ಕೋವಿಡ್ ಪೂರ್ವದ ಸಾಮಾನ್ಯ ಪ್ರಮಾಣದ ದರವನ್ನು ನಿರೀಕ್ಷಿಸುತ್ತಿವೆ.

ಕಳೆದ ವಾರ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಅಂತರರಾಷ್ಟ್ರೀಯ ‘ಬೆಲೆ ಯಾಂತ್ರಿಕ ವ್ಯವಸ್ಥೆ’ಯಿಂದ ನಿಯಂತ್ರಿಸುತ್ತಾರೆ ಮತ್ತು “ಸುಮಾರು 250 ದಿನ (ಕಳೆದ 300 ದಿನಗಳಲ್ಲಿ) ಕೇಂದ್ರವು ಬೆಲೆಗಳನ್ನು ಹೆಚ್ಚಿಸಿಲ್ಲ ಅಥವಾ ಕಡಿಮೆ ಮಾಡಿಲ್ಲ” ಎಂದು ಸೂಚಿಸಿದ್ದರು.

ಸೋಮವಾರ ಒರಿಸ್ಸಾದ ಕಾಂಗ್ರೆಸ್ ಮುಖಂಡರೊಬ್ಬರು, ಪ್ರಧಾನಿ ನರೇಂದ್ರ ಮೋದಿಯವರಂತೆ ಉಡುಗೆ ತೊಟ್ಟು, ಎತ್ತಿನ ಬಂಡಿಯಲ್ಲಿ ಭುವನೇಶ್ವರ ಸುತ್ತ ಸಂಚರಿಸುತ್ತ, ಪೆಟ್ರೋಲ್ ಬೆಲೆ ಕಡಿಮೆಯಾಗಿದೆಯೇ ಎಂದು ಜನರನ್ನು ಕೇಳಿದ್ದರು.

ಕಳೆದ ವಾರ ಸಮಾಜವಾದಿ ಪಕ್ಷದ ಸಂಸದ ವಿಶಾಂಬರ ಪ್ರಸಾದ್ ನಿಷಾದ್ ಅವರು ರಾಜ್ಯಸಭೆಯಲ್ಲಿ ಹೀಗೆ ವ್ಯಂಗ್ಯ ಮಾಡಿದ್ದರು: “ಮಾತೆ ಸೀತಾ ಅವರ ನೇಪಾಳ ಮತ್ತು ರಾವಣನ ಭೂಮಿ ಲಂಕಾದಲ್ಲಿ ಪೆಟ್ರೋಲ್ ಅಗ್ಗವಾಗಿದೆ. ಆದರೆ ಇಲ್ಲಿ ರಾಮನ ಭೂಮಿಯಲ್ಲಿ ಮಾತ್ರ ಇಲ್ಲ…..”

ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ಎದುರಿಸುತ್ತಿರುವ ಅಸ್ಸಾಂ ಮತ್ತು ಮೇಘಾಲಯ ಬೆಲೆಗಳನ್ನು ಕಡಿತಗೊಳಿಸಿವೆ. ಕೆಲವು ವಾರಗಳಲ್ಲಿ ಬಿಜೆಪಿ ಮರುಚುನಾವಣೆಗೆ ಹೋಗುತ್ತಿರುವ ಅಸ್ಸಾಂ, ಕಳೆದ ವಾರ ಪ್ರತಿ ಲೀಟರ್‌ಗೆ ರೂ. 5 ದರವನ್ನು ಕಡಿತಗೊಳಿಸಿತು. ಈ ಹಿಂದೆ ಪ್ರತಿ ಲೀಟರ್‌ಗೆ ರೂ. 2 ರಷ್ಟು ಬೆಲೆ ಕಡಿತಗೊಳಿಸಿದ ಮೇಘಾಲಯ ಮಂಗಳವಾರ ರಾತ್ರಿ ಪ್ರತಿ ಲೀಟರ್‌ಗೆ ರೂ 5.40 ಕಡಿತಗೊಳಿಸುವುದಾಗಿ ಘೋಷಿಸಿತು.

ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಅವಲಂಬಿಸಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

ಪೆಟ್ರೋಲ್ ಮತ್ತು ಡೀಸೆಲ್ ಹೆಚ್ಚಳವು ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ಹೆಚ್ಚಳಕ್ಕೆ ಕಾರಣವಾಗಿದೆ, ಇದಕ್ಕಾಗಿ ಕಾಂಗ್ರೆಸ್ ಸೋಮವಾರ “ನರೇಂದ್ರ ಮೋದಿಯವರ ನಿರ್ದಯ ಮತ್ತು ಅನೈತಿಕ ಸರ್ಕಾರ” ದ ವಿರುದ್ಧ ವಾಗ್ದಾಳಿ ನಡೆಸಿದೆ. ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕೇಂದ್ರವು ಹೆಚ್ಚಿಸಿದ ನಂತರ ಇದು ಸಬ್ಸಿಡಿ ರಹಿತ ಸಿಲಿಂಡರ್‌ಗೆ ಈಗ ರೂ. 769ಕ್ಕೆ ಏರಿದೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈ ಹೆಚ್ಚಳವನ್ನು ಟೀಕಿಸಿದ್ದರು, ಮೋದಿ ಸರ್ಕಾರವು ಸಾರ್ವಜನಿಕರಿಂದ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದರು.


ಇದನ್ನೂ ಓದಿ; ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಏರಿಕೆ: ಕತ್ತೆ, ಕುದುರೆ ಮೊರೆ ಹೋದ ಜನತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...