Homeಕರೋನಾ ತಲ್ಲಣಸೋಮವಾರದಿಂದ ಕರ್ನಾಟಕದಲ್ಲಿ ಅನ್ ಲಾಕ್-2.0 ಜಾರಿಗೆ

ಸೋಮವಾರದಿಂದ ಕರ್ನಾಟಕದಲ್ಲಿ ಅನ್ ಲಾಕ್-2.0 ಜಾರಿಗೆ

- Advertisement -
- Advertisement -

ದೇಶದಾದ್ಯಂತ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದ್ದಂತೆ ದೇಶದ ಹಲವು ರಾಜ್ಯಗಳು ಕೊರೊನಾ ಕಾರಣಕ್ಕೆ ಹೇರಲ್ಪಟ್ಟಿದ್ದ ಲಾಕ್‌ಡೌನ್‌ ಅನ್ನು ಹಂತ ಹಂತವಾಗಿ ತೆರವುಗೊಳಿಸುತ್ತಿವೆ. ಅದರಂತೆ ರಾಜ್ಯದಲ್ಲೂ ಮೊದಲ ಹಂತದ ಅನ್‌ಲಾಕ್‌ ಪ್ರಕ್ರಿಯೆ ಕಳೆದ ವಾರವೆ ಪ್ರಾರಂಭವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಲಾಕ್​ಡೌನ್​ ಸಡಿಲಗೊಳಿಸಲಾಗಿದೆ. ಈಗ ಎರಡನೇ ಹಂತದ ಅನ್​ಲಾಕ್​ ಮಾಡಲು ಸರ್ಕಾರ ಮುಂದಾಗಿದೆ.

ಜೂನ್​ 21 ರಿಂದ ಅನ್​ಲಾಕ್​ 2.0 ಜಾರಿಯಾಗಲಿದ್ದು, ಕೆಲವು ಕ್ಷೇತ್ರಗಳಿಗೆ ವಿನಾಯಿತಿ ಸಿಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2 ನೇ ಹಂತದ ಲಾಕ್​ಡೌನ್​ ಸಡಿಲಿಕೆಯಲ್ಲಿ ಯಾವುದಕ್ಕೆಲ್ಲಾ ಅನುಮತಿ ಇರುತ್ತದೆ ಮತ್ತು ಯಾವುದಕ್ಕೆಲ್ಲಾ ನಿರ್ಬಂಧ ಎಂಬುದನ್ನು ಇನ್ನಷ್ಟೆ ತಿಳಿಯಬೇಕಿದೆ. ಸೋಮವಾರದಿಂದ ಅನ್‌ಲಾಕ್ 2.O ಜಾರಿ ಹಿನ್ನಲೆ, ಅಂದಿನಿಂದ ಕರ್ನಾಟಕ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಸ್​ ಮತ್ತು ಮೆಟ್ರೋ ಸಂಚಾರದ ಬಗ್ಗೆ ಇಂದಿನ ಸಿಎಂ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಜೂನ್‌ 21 ರಿಂದ ಅನ್​ಲಾಕ್​​‌ 2.O ಜಾರಿಯಾದರೆ ಬಿಎಂಟಿಸಿ, ಕೆಎಸ್ಆರ್ಟಿಸಿ, ಮೆಟ್ರೋ ಓಡಾಟವಿರುತ್ತದೆ ಎನ್ನಲಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 1500-2000 ಬಸ್​ಗಳು ಓಡಾಟ ನಡೆಸಲಿವೆ. ಕೊರೋನಾ ಭೀತಿಯಿಂದಾಗಿ ಬಿಎಂಟಿಸಿ ಎಸಿ ವೋಲ್ವೋ ಬಸ್ಸುಗಳ ಸಂಚಾರ ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ: 7 ವರ್ಷಗಳ ದುರಾಡಳಿತ, ಏಳಬೇಕೀಗ ಭಾರತ: ಡಾ. ಎಚ್ ವಿ ವಾಸು

ಬಸ್ಸುಗಳಲ್ಲಿ 50% ದಷ್ಟು ಪ್ರಯಾಣಿಕರಿಗೆ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎನ್ನಾಗಿದೆ. ಬಸ್ಸುಗಳಲ್ಲಿ ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಕುಳಿತು ಪ್ರಯಾಣಿಸಲು ಅವಕಾಶ ಇರಲಿದ್ದು, ನಿಂತುಕೊಂಡು ಪ್ರಯಾಣಿಸೋದಕ್ಕೆ ಅವಕಾಶ ಇಲ್ಲ. ಬಸ್​​ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಬ್ದಾರಿ ಪೊಲೀಸ್​ ಇಲಾಖೆ ಮತ್ತು ಬಿಎಂಟಿಸಿ ಅಧಿಕಾರಿಗಳಿಗೆ ನೀಡಲಾಗಿದೆ.

ಇದರ ಜೊತೆಗೆ ಜೂನ್‌ 21ರಿಂದ ಕೆಎಸ್​ಆರ್​ಟಿಸಿ ಬಸ್​​ಗಳನ್ನು ರಸ್ತೆಗಿಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಯದಲ್ಲಿ ಒಟ್ಟು 8 ಸಾವಿರ ಕೆಎಸ್​ಆರ್​ಟಿಸಿ ಬಸ್ಸುಗಳಿದ್ದು, ಅದ್ರಲ್ಲಿ 2500 ರಿಂದ 3000 ಸಾವಿರ ಬಸ್ಸುಗಳನ್ನು ಮಾತ್ರ ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದೆ ಎಂದು ವರದಿಯಾಗಿದೆ.

ಅತೀ ಹೆಚ್ಚು ಸೋಂಕು ಇರುವ ಜಿಲ್ಲೆಗಳಿಗೆ ಕೆಎಸ್ಆರ್​​ಟಿಸಿ ಬಸ್ ಓಡಾಟ ಇರುವುದಿಲ್ಲ. ಸದ್ಯ ಹೊರ ರಾಜ್ಯಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಮಾಡುವ ಸಾಧ್ಯತೆ ಕಡಿಮೆ ಇದೆ. ಎಸಿ, ಸ್ಲೀಪರ್ ಬಸ್ಸುಗಳನ್ನು ರಸ್ತೆಗಿಳಿಸದಿರಲು ತೀರ್ಮಾನ ಮಾಡಲಾಗಿದೆ. ಕೆಎಸ್ ಆರ್ ಟಿಸಿ ಬಸ್​ಗಳಲ್ಲಿಯೂ ಬಿಎಂಟಿಸಿಯಂತೆ 50% ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ‘ಎಲ್‌ಕೆಜಿ ಮಗು’ ಎಂದು ಅಪಹಾಸ್ಯ ಮಾಡಿದ್ದಕ್ಕೆ ದೇಶದ ಕಿರಿಯ ಮೇಯರ್‌‌ ಆರ್ಯ ರಾಜೇಂದ್ರನ್ ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2025ಕ್ಕೆ ಬಿಜೆಪಿ ಸಂಪೂರ್ಣ ಮೀಸಲಾತಿಯನ್ನು ರದ್ದುಗೊಳಿಸಲಿದೆ: ರೇವಂತ್ ರೆಡ್ಡಿ

0
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮೀಸಲಾತಿಯನ್ನು ರದ್ದುಗೊಳಿಸುವ ಉದ್ದೇಶದಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನದ ವಿರುದ್ಧ ಸಮರ ಸಾರಿವೆ ಎಂದು ಆರೋಪಿಸಿರುವ ತೆಲಂಗಾಣದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಮೀಸಲಾತಿ ರದ್ದುಗೊಳಿಸುವ...