ಸಂಪರ್ಕದ ಮೂಲಕ ಕೊರೊನಾ : ಭಾರತದಲ್ಲೇ ಅತಿ ಹೆಚ್ಚು | Naanu gauri
PC: PTI

ದೇಶದಲ್ಲಿ ಕೊರೊನಾ ಎರಡನೆ ಅಲೆಯ ಪ್ರಭಾವ ಕಡಿಮೆಯಾಗುತ್ತಿದೆ. ಸೋಂಕು ಕಾರಣಕ್ಕೆ ಹೇರಲ್ಪಟ್ಟಿದ್ದ ಲಾಕ್‌ಡೌನ್‌‌ ತೆರವುಗೊಳಿಸುವ ಪ್ರಕ್ರಿಯೆಯೂ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೆ ಪ್ರಾರಂಭವಾತ್ತಿವೆ. ಲಾಕ್‌ಡೌನ್‌‌‌ ನಿರ್ಬಂಧಗಳು ತೆರವುಗೊಳಿಸುತ್ತಿದ್ದಂತೆ ಮಾರುಕಟ್ಟೆ ಮತ್ತು ಇತರ ಪ್ರದೇಶಗಳಲ್ಲಿ ಜನಸಂದಣಿ ಹೆಚ್ಚುತ್ತಿದೆ. ಇದಕ್ಕಾಗಿ ಸೋಂಕು ಹರಡದಂತೆ ತಡೆಯಲು ರಾಜ್ಯಗಳು ಐದು ಪ್ರಮುಖ ಕಾರ್ಯತಂತ್ರಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒಕ್ಕೂಟ ಸರ್ಕಾರವು ಶನಿವಾರ ಹೇಳಿದೆ.

‘ಸೂಕ್ತ ವರ್ತನೆ, ಪರೀಕ್ಷೆ ಮಾಡುವುದು, ಪತ್ತೆ ಹಚ್ಚುವುದು, ಚಿಕಿತ್ಸೆ ನೀಡುವುದು ಮತ್ತು ಲಸಿಕೆ ನೀಡುವುದು’ ಈ ಐದು ಪ್ರಮುಖ ಕಾರ್ಯತಂತ್ರಗಳನ್ನು ರೋಗ ಹರಡುವ ಸ್ಥಳಗಳಲ್ಲಿ ಖಚಿತಪಡಿಸಬೇಕು ಎಂದು ಒಕ್ಕೂಟ ಸರ್ಕಾರ ರಾಜ್ಯಗಳಿಗೆ ಹೇಳಿದೆ.

ಇದನ್ನೂ ಓದಿ: ಕೊರೊನಾ: ವಯಸ್ಕರಿಗೆ ಬಳಸುವ ಔಷಧ ಮಕ್ಕಳಿಗೆ ಬಳಸುವಂತಿಲ್ಲ- ಒಕ್ಕೂಟ ಸರ್ಕಾರ

ಎಲ್ಲಾ ರಾಜ್ಯಗಳು ಮತ್ತು ಒಕ್ಕೂಟಾಡಳಿತ ಪ್ರದೇಶ (Union Territories) ಗಳಿಗೆ ಬರೆದಿರುವ ಪತ್ರದಲ್ಲಿ, ಒಕ್ಕೂಟ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, “ಪ್ರಸ್ತುತ ಸನ್ನಿವೇಶದಲ್ಲಿ ಕೊರೊನಾ ವಿರುದ್ಧ ನೀಡುವ ಲಸಿಕೆಯೆ ಸೋಂಕು ಹರಡವುದುದನ್ನು ತಡೆಯುವಲ್ಲಿ ನಿರ್ಣಾಯಕವಾದ ಪಾತ್ರ ವಹಿಸುತ್ತದೆ” ಎಂದು ಹೇಳಿದ್ದಾರೆ.

ಆದ್ದರಿಂದ, ಎಲ್ಲಾ ರಾಜ್ಯಗಳು ಮತ್ತು ಒಕ್ಕೂಟಾಡಳಿತ ಪ್ರದೇಶದ ಸರ್ಕಾರಗಳು ಲಸಿಕೆ ನೀಡುವ ವೇಗವನ್ನು ಹೆಚ್ಚಿಸಿ ಗರಿಷ್ಠ ಸಂಖ್ಯೆಯ ಜನರನ್ನು ಶೀಘ್ರವಾಗಿ ಒಳಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ದೆಹಲಿ ಮಾರುಕಟ್ಟೆಗಳಲ್ಲಿ ಕೊರೊನಾ ಮಾರ್ಗಸೂಚಿಗಳ ಉಲ್ಲಂಘನೆಯಾಗುತ್ತಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದ ಒಂದು ದಿನದ ನಂತರ ಒಕ್ಕೂಟ ಸರ್ಕಾರ ಈ ಪತ್ರವನ್ನು ಬರೆಯುತ್ತಿದೆ. ಮಾರ್ಗಸೂಚಿಯ ಉಲ್ಲಂಘನೆಯು ಮೂರನೇ ಅಲೆಯ ಸೋಂಕನ್ನು ತ್ವರಿತಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ನಿರ್ವಹಣೆ ಲೋಪ ಮುಚ್ಚಿಕೊಳ್ಳಲು ಜಾಹೀರಾತುಗಳಿಗೆ ಹಣ ಸುರಿಯುತ್ತಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶ

ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಅಂಗಡಿಯವರನ್ನು ಈ ನಿಟ್ಟಿನಲ್ಲಿ ಸಂವೇದನಾಶೀಲಗೊಳಿಸಬೇಕು. ಇದಕ್ಕಾಗಿ ಮಾರುಕಟ್ಟೆಗಳು ಮತ್ತು ಮಾರಾಟಗಾರರ ಸಂಘಗಳೊಂದಿಗೆ ಸಭೆ ನಡೆಸಬೇಕು ಎಂದು ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿತ್ತು.

ತಮಿಳುನಾಡು, ದೆಹಲಿ, ಕಾರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಾಕ್‌ಡೌನಿನ ನಿರ್ಬಂಧಗಳು ಹಂತಹಂತವಾಗಿ ತೆರವುಗೊಳ್ಳುತ್ತಿದೆ.

ತೆಲಂಗಾಣವು ರಾಜ್ಯದಲ್ಲಿ ಹೇರಲ್ಪಟ್ಟ ಲಾಕ್‌ಡೌನ್‌‌ನ ಎಲ್ಲಾ ನಿರ್ಬಂಧಗಳನ್ನು ಇಂದಿನಿಂದ ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ. ರಾಜ್ಯದಲ್ಲಿ ಗಣನೀಯವಾಗಿ ಸೋಂಕಿನ ಪ್ರಮಾಣ ಕಡಿಮೆಯಾಗಿರುವುದರಿಂದ ರಾಜ್ಯದ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿದೆ.

ಭಾರತದಲ್ಲಿ ಕಳೆದ ಒಂದು ದಿನ 60,753 ಕೊರೊನಾ ಪ್ರಕರಣಗಳು ದಾಖಲಾಗಿದೆ. ಹಾಗೆಯೆ ಸೋಂಕಿನಿಂದಾಗಿ ಕಳೆದ ಒಂದು ದಿನದಲ್ಲಿ 1,647 ಸಾವುಗಳಾಗಿವೆ.

ಇದನ್ನೂ ಓದಿ: ಕೊರೊನಾ ನಿಯಮಗಳ ಉಲ್ಲಂಘನೆ, 3ನೇ ಅಲೆಗೆ ಕಾರಣವಾಗಬಹುದು: ದೆಹಲಿ ಹೈಕೋರ್ಟ್

LEAVE A REPLY

Please enter your comment!
Please enter your name here