Homeಕರೋನಾ ತಲ್ಲಣಲಾಕ್‌ಡೌನ್‌ ಸಂಕಷ್ಟ - ಮಗನ ಚಿಕಿತ್ಸೆಗಾಗಿ ಪ್ರತಿ ತಿಂಗಳು 400 ಕಿ.ಮಿ. ಸೈಕಲ್‌ ಪ್ರಯಾಣ

ಲಾಕ್‌ಡೌನ್‌ ಸಂಕಷ್ಟ – ಮಗನ ಚಿಕಿತ್ಸೆಗಾಗಿ ಪ್ರತಿ ತಿಂಗಳು 400 ಕಿ.ಮಿ. ಸೈಕಲ್‌ ಪ್ರಯಾಣ

- Advertisement -
- Advertisement -

ಕೊರೊನಾ ಹೆಸರಲ್ಲಿ ಸರ್ಕಾರಗಳು ಹೇರಿರುವ ಲಾಕ್‌ಡೌನ್‌‌‌‌ ಪ್ರತಿಯೊಬ್ಬರನ್ನು ವಿಭಿನ್ನ ತೊಂದರೆಗಳಿಗೆ ಸಿಲುಕಿಸಿದೆ. ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ಕೂಲಿ ಕೆಲಸಗಾರನಾದ 40 ವರ್ಷದ ದಿಲೀಪ್ ಯಾದವ್‌ ಅವರು ತನ್ನ ಮಗನ ಚಿಕಿತ್ಸೆಗಾಗಿ ಪ್ರತಿ ತಿಂಗಳು 400 ಕಿ.ಮೀ ಸೈಕಲ್‌ ಪ್ರಯಾಣಿಸುವ ಸಂಕಷ್ಟಕ್ಕೆ ಲಾಕ್‌ಡೌನ್‌ ಅವರನ್ನು ದೂಡಿದೆ.

ದಿಲೀಪ್ ಅವರ ಐದು ವರ್ಷದ ಮಗ ವಿವೇಕ್‌ಗೆ ಥಲಸ್ಸೆಮಿಯಾ ಎಂಬ ಕಾಯಿಲೆ ಇದ್ದು, ಅದರ ಚಿಕಿತ್ಸೆಗಾಗಿ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ.

ದಿಲೀಪ್ ಪ್ರತಾಪುರ ಗ್ರಾಮದ ನಿವಾಸಿಯಾಗಿದ್ದು, ಅವರ ಮಗನ ರಕ್ತದ ಗುಂಪು A- ಆಗಿದೆ. ಇದು ಅಪರೂಪದ ರಕ್ತದ ಗುಂಪಾಗಿದ್ದು, ಅವರ ಜಿಲ್ಲೆಯಾದ ಗೊಡ್ಡಾದಲ್ಲಿ ಸಾರ್ವಕಾಲಿಕವಾಗಿ ಲಭ್ಯವಾಗುತ್ತಿಲ್ಲ. ಆದ್ದರಿಂದ, ಅವರು ತಮ್ಮ ಮಗನ ರಕ್ತದ ವರ್ಗಾವಣೆಗೆ ಇತರ ಜಿಲ್ಲೆಗಳಿಗೆ ಪ್ರಯಾಣಿಸಬೇಕಾಗುತ್ತದೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಮಾನವರ ಮೃತದೇಹಗಳನ್ನು ಕಿತ್ತು ತಿನ್ನುತ್ತಿರುವ ಬೀದಿ ನಾಯಿಗಳು

ಕಳೆದ ತಿಂಗಳು ಮೇ 25 ರಂದು ದಿಲೀಪ್‌ ಅವರು ತನ್ನ ಮಗನೊಂದಿಗೆ ಜಮ್ತರಾಕ್ಕೆ ಪ್ರಯಾಣ ಬೆಳೆಸಿ ಎರಡು ಯೂನಿಟ್‌ ರಕ್ತವನ್ನು ಪಡೆದು ಮೇ 31 ರಂದು ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ. ಏಪ್ರಿಲ್‌ನಲ್ಲಿಯೂ ಅವರು ಜಮ್ತರಾಕ್ಕೆ ಪ್ರಯಾಣ ಬೆಳೆಸಿದ್ದರು. ಅವರ ಬೈಸಿಕಲ್‌ನಲ್ಲಿ 200 ಕಿ.ಮೀ ದೂರವನ್ನು ಕ್ರಮಿಸಲು ಅವರಿಗೆ ಎರಡು ದಿನಗಳು ಬೇಕಾಗುತ್ತದೆ. ಲಾಕ್‌ಡೌನ್‌ ಕಾರಣಕ್ಕೆ ಸಾರ್ವಜನಿಕ ಸಾರಿಗೆಯನ್ನು ನಿರ್ಬಂಧಿಸಲಾಗಿದ್ದು, ಖಾಸಗಿ ಕ್ಯಾಬ್‌ ಅನ್ನು ಬಾಡಿಗೆಗೆ ಪಡೆಯಲು ಅವರು ಆರ್ಥಿಕವಾಗಿ ಶಕ್ತರಾಗಿಲ್ಲದ ಕಾರಣ ಸೈಕಲ್‌ನಲ್ಲೇ ಪ್ರಯಾಣಿಸಬೇಕಾಗುತ್ತದೆ.

“ಇಲ್ಲಿಯವರೆಗೆ, ನಾನು ನನ್ನ ಬೈಸಿಕಲ್‌ನಲ್ಲಿ ನಾಲ್ಕು ಟ್ರಿಪ್‌ಗಳನ್ನು ಮಾಡಿದ್ದೇನೆ. ಕಳೆದ ವರ್ಷ ದುಮ್ಕಾ ಮತ್ತು ದಿಯೋಘರ್‌‌ಗೆ ಪ್ರಯಾಣಿಸಿದ್ದೆ. ಈ ವರ್ಷ ಎರಡು ಬಾರಿ ಜಮ್ತಾರಾಗೆ ಪ್ರಯಾಣಿಸಿದ್ದೇನೆ” ಎಂದು ದಿಲೀಪ್‌‌ ಹೇಳುತ್ತಾರೆ.

ಕೊರೊನಾಕ್ಕೂ ಮೊದಲು, ಬಾಲಕ ವಿವೇಕ್‌ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿ ಅವರಿಗೆ ಉಚಿತ ರಕ್ತವನ್ನು ನೀಡಲಾಗಿತ್ತು. ಆದರೆ ಲಾಕ್ಡೌನ್ ಕಾರಣ ನಾವು ಕಳೆದ ವರ್ಷ ಅಲ್ಲಿಂದ ಮರಳಬೇಕಾಯಿತು ಎಂದು ದಿಲೀಪ್‌ ಹೇಳುತ್ತಾರೆ.

ಇದನ್ನೂ ಓದಿ: ಮಮತಾ v/s BJP – ಮಾಜಿ ಮುಖ್ಯಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿದ ಕೇಂದ್ರ!

ಜಾರ್ಖಂಡ್‌ನ ಕೆಲವು ರಕ್ತದಾನ ಗುಂಪುಗಳ ಸಹಾಯದಿಂದ ಅವರು ತನ್ನ ಮಗನಿಗೆ ರಕ್ತವನ್ನು ವ್ಯವಸ್ಥೆ ಮಾಡುತ್ತಾರೆ. ಅಲ್ಲಿ A- ಗುಂಪಿನ ರಕ್ತ ಲಭ್ಯವಿದೆ ಎಂದು ತಿಳಿದ ನಂತರ, ಫೋನ್‌ನಲ್ಲಿ ಎಲ್ಲಾ ವ್ಯವಸ್ಥೆಯಾದ ನಂತರ ಅಲ್ಲಿಗೆ ಅವರು ಅಲ್ಲಿಗೆ ತೆರಳುತ್ತಾರೆ.

ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರ ಪ್ರಕಾರ, ಬಾಲಕ ವಿವೇಕ್‌ನ ಶಾಶ್ವತ ಚಿಕಿತ್ಸೆಗಾಗಿ ಆಪರೇಷನ್ ಮಾಡಬೇಕಾಗಿದ್ದು, ಇದು ಸುಮಾರು 10 ಲಕ್ಷ ರೂ. ವೆಚ್ಚವಾಗಲಿದೆ ಎಂದು ಹೇಳಿದ್ದಾರೆ. ಆದರೆ ಕೂಲಿ ಕೆಲಸಗಾರರಾದ ದಿಲೀಪ್‌‌ ಈ ವೆಚ್ಚವನ್ನು ಭರಿಸಲು ಸಾಧ್ಯವಾಗಿಲ್ಲ.

ಇದಕ್ಕೂ ಮೊದಲು ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಅವರ ಉಪಕ್ರಮದಲ್ಲಿ ವಿವೇಕ್ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು 3 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿತ್ತು. ಆದರೆ ದಿಲೀಪ್‌ ಅವರಿಗೆ ಉಳಿದ ಹಣವನ್ನು ವ್ಯವಸ್ಥೆ ಮಾಡಲು ಸಾಧ್ಯವಾಗದ ಕಾರಣ ಮೊತ್ತವು ಸಿಗದಂತಾಗಿದೆ.

ಗೊಡ್ಡಾ ಸಿವಿಲ್ ಸರ್ಜನ್ ಎಸ್ಪಿ ಮಿಶ್ರಾ ಅವರನ್ನು TNIE ಪತ್ರಿಕೆಯು ಸಂಪರ್ಕಿಸಿದಾಗ, ದಿಲೀಪ್‌ ಅವರ ಸಂಕಟದ ಬಗ್ಗೆ ತಿಳಿದಿಲ್ಲ, ಅಗತ್ಯವಿದ್ದಾಗ ವಿವೇಕ್‌ಗೆ A- ರಕ್ತವನ್ನು ವ್ಯವಸ್ಥೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಅಲಪಾನ್‌ ಬಂದೋಪಾದ್ಯಾಯ್‌ರವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಕೇಂದ್ರಕ್ಕಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...