ಸಂಸತ್ ಭವನದ ಬಿಗಿ ಭದ್ರತೆಯನ್ನು ದಾಟಿ ಲೋಕಸಭೆ ಪ್ರವೇಶಿಸಿದ್ದ ಮೈಸೂರು ನಿವಾಸಿ ಮನೋರಂಜನ್. ಡಿ ಸೇರಿದಂತೆ ಆತನ ಸಹಚರರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರವೇಶ ಪಾಸ್ ನೀಡಿದ್ದರು. ಇದೇ ವಿಚಾರವಾಗಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಕರ್ನಾಟಕ ಕಾಂಗ್ರೆಸ್, ‘ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ’ ಎಂದು ಪ್ರಶ್ನಿಸಿದೆ.
ಘಟನೆ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ‘ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ. ಪ್ರತಾಪ್ ಸಿಂಹ ಅವರಿಗೂ ದಾಳಿಕೋರರಿಗೂ ಇರುವ ನಿಗೂಢ ಸಂಬಂಧದ ಬಗ್ಗೆ ತನಿಖೆ ಮಾಡದಿರುವುದೇಕೆ? ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ’ ಎಂದು ಕೇಳಿದೆ.
ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ.@mepratap ಅವರಿಗೂ ದಾಳಿಕೋರರಿಗೂ ಇರುವ ನಿಗೂಢ ಸಂಬಂಧದ ಬಗ್ಗೆ ತನಿಖೆ ಮಾಡದಿರುವುದೇಕೆ?
ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ?…— Karnataka Congress (@INCKarnataka) December 15, 2023
‘ದಾಳಿಕೋರರ ಮೇಲೆ ಯುಎಪಿಎಯಂತಹ ಗಂಭೀರ ಪ್ರಕಾರಣ ದಾಖಲಿಸಲಾಗಿದೆ, ಅಪರಾಧಕ್ಕೆ ಸಹಕಾರ ನೀಡಿದವರನ್ನೂ ತನಿಖೆಗೆ ಒಳಪಡಿಸುವುದು ಸಹಜ ಕಾನೂನು ಪ್ರಕ್ರಿಯೆ. ಇಂತಹ ಸಹಜ ಕಾನೂನು ಪ್ರಕ್ರಿಯೆಯನ್ನೂ ಮಾಡದೆ ಪ್ರತಾಪ್ ಸಿಂಹರವರ ರಕ್ಷಣೆಗೆ ನಿಂತಿರುವುದೇಕೆ? ಕೇವಲ ಭದ್ರತಾ ಲೋಪ ಎನ್ನುವುದನ್ನು ಬಿಂಬಿಸಿ ಕೈ ತೊಳೆದುಕೊಳ್ಳಲು ಹೊರಟಿರುವುದೇಕೆ ಕೇಂದ್ರ ಸರ್ಕಾರ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ವಿವರಣೆ ಕೊಟ್ಟ ಪ್ರತಾಪ್ ಸಿಂಹ:
ಘಟನೆ ನಡೆದು ಮೂರು ದಿನವಾಗಿದ್ದು, ಈವರೆಗೆ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿಲ್ಲ. ಆದರೆ, ಘಟನೆ ನಡೆದ ದಿನವೇ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ವರದಿ ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ‘ಆರೋಪಿಗಳ ಪೈಕಿ ಒಬ್ಬನಾದ ಮನೋರಂಜನ್ ಎಂಬಾತನ ತಂದೆ ಮೈಸೂರಿನ ನಿವಾಸಿಯಾಗಿದ್ದಾರೆ. ಆತ ಸಂಸತ್ ಕಟ್ಟಡಕ್ಕೆ ಭೇಟಿ ನೀಡಲು ಪಾಸ್ ನೀಡಲು ಅನುಮತಿ ಕೋರಿದ್ದ’ ಎಂದು ಪ್ರತಾಪ್ ಸಿಂಹ ಸ್ಪೀಕರ್ಗೆ ಹೇಳಿದ್ದಾರೆನ್ನಲಾಗಿದೆ.
ಇದನ್ನೂ ಓದಿ; ಜೀವನ ಕೊನೆಗೊಳಿಸಲು ಅನುಮತಿ ನೀಡಿ; ಲೈಂಗಿಕ ಕಿರುಕುಳದಿಂದ ನೊಂದು ಸಿಜೆಐಗೆ ಪತ್ರ ಬರೆದ ನ್ಯಾಯಾಧೀಶೆ!


