ಮಹಾತ್ಮ ಗಾಂಧಿಯವರ ಜೀವನ ಮತ್ತು ಪಾಠವನ್ನು ನೆನಪಿಸುವ ಮೊದಲ ಅಧಿಕೃತ ಯುಕೆ ನಾಣ್ಯವನ್ನು ಯುಕೆ ಚಾನ್ಸೆಲರ್ ರಿಷಿ ಸುನಕ್ ಅವರು ಗುರುವಾರ ದೀಪಾವಳಿಯ ಸಂದರ್ಭದಲ್ಲಿ ಅನಾವರಣಗೊಳಿಸಿದ್ದಾರೆ. ಹೊಸ 5 ಪೌಂಡ್ ಸ್ಮರಣಾರ್ಥ ಗಾಂಧಿ ನಾಣ್ಯವು ಯುಕೆ ಮತ್ತು ಭಾರತದ ನಡುವಿನ ನಿರಂತರ ಸಂಬಂಧ ಮತ್ತು ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಮೇಲೆ ರಚಿಸಲಾಗಿದೆ.
5 ಪೌಂಡ್ ಗಾಂಧಿ ನಾಣ್ಯವು ಚಲಾವಣೆಯಲ್ಲಿಲ್ಲದ ಸ್ಮರಣಾರ್ಥ ವಸ್ತುವಾಗಿದ್ದು, ರಾಯಲ್ ಮಿಂಟ್‌ನಿಂದ ಆನ್‌ಲೈನ್‌ನಲ್ಲಿ ಖರೀದಿಸಲು ಲಭ್ಯವಿದೆ. ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವಾರು ಮಾದರಿಗಳಲ್ಲಿ ಲಭ್ಯವಿದೆ. ಈ ಹೊಸ ಗಾಂಧಿ ನಾಣ್ಯವನ್ನು ಹೀನಾ ಗ್ಲೋವರ್ ಎಂಬವರು ವಿನ್ಯಾಸಗೊಳಿಸಿದ್ದು, ಗಾಂಧಿಯ ಅತ್ಯಂತ ಪ್ರಸಿದ್ಧ ಉಲ್ಲೇಖಗಳಲ್ಲಿ ಒಂದಾದ ‘ಮೈ ಲೈಫ್ ಈಸ್ ಮೈ ಮೆಸೇಜ್'(ನನ್ನ ಜೀವನವೇ ನನ್ನ ಸಂದೇಶ) ಜೊತೆಗೆ ಭಾರತದ ರಾಷ್ಟ್ರೀಯ ಹೂವು ಕಮಲದ ಚಿತ್ರವನ್ನು ಒಳಗೊಂಡಿದೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಮಹಾತ್ಮಾ ಗಾಂಧಿ ಮೊಮ್ಮಗಳ ಬೆಂಬಲ: ಅವರು ಹೇಳಿದ್ದೇನು?
“ವಿಶ್ವದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಮಹಾತ್ಮ ಗಾಂಧಿ ಅವರನ್ನು ಸ್ಮರಿಸುವ ಈ ಸುಂದರವಾದ ನಾಣ್ಯವನ್ನು ಹೊರಡಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ” ಎಂದು ರಾಯಲ್ ಮಿಂಟ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಗುರುವಾರ ಟ್ವೀಟ್ ಮಾಡಿದೆ.
We are proud to have struck this beautiful coin celebrating one of the world’s most pioneering and influential leaders, Mahatma Gandhi. Chancellor @RishiSunak revealed the design by Heena Glover, who recently told us what inspired her: https://t.co/AIz6cQuY0p #Diwali pic.twitter.com/x8wQ2Mi24F
— The Royal Mint (@RoyalMintUK) November 4, 2021
ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿರುವ ಪ್ರಭಾವಿ ನಾಯಕನಿಗೆ ಈ ನಾಣ್ಯವು ಸೂಕ್ತವಾದ ಗೌರವವಾಗಿದೆ ಎಂದು ಯುಕೆಯ ಭಾರತೀಯ ಮೂಲದ ಹಣಕಾಸು ಮಂತ್ರಿ, ಯುಕೆಯಲ್ಲಿನ ಮಾಸ್ಟರ್ ಆಫ್ ದಿ ಮಿಂಟ್ ರಿಷಿ ಸುನಕ್ ಹೇಳಿದ್ದಾರೆ.
ಇದನ್ನೂ ಓದಿ: ಗಾಂಧಿಯನ್ನು ಕೊಂದ ಮತಾಂಧತೆಯಿಂದ ಗಳಿಸಿದ್ದಾದರೂ ಏನು?


