Homeಮುಖಪುಟಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

ಐದು ಶತಮಾನಗಳಲ್ಲೇ ಅತ್ಯಂತ ದೀರ್ಘವಾದ ಭಾಗಶಃ ಚಂದ್ರ ಗ್ರಹಣ

- Advertisement -
- Advertisement -

ಆಗಸದ ಅಲೆಮಾರಿಗಳ ನೆರಳು ಬೆಳಕಿನಾಟವೇ ಗ್ರಹಣ. ಗ್ರಹಣದ ಸಮಯದಲ್ಲಿ ತಾರ್ಕಿಕ ನಿಲುವುಗಳಿಲ್ಲದ, ಅಸಂಬದ್ಧವಾದ ಮೂಡ ನಂಬಿಕೆಗಳನ್ನು ಮೂಟೆಗಟ್ಟಲೆ ಜನರ ಮನಸ್ಸಿನಲ್ಲಿ ತುರುಕುವ ಕೆಲಸವನ್ನು ಇಂದಿಗೂ ಹಲವು ಮಾಧ್ಯಮಗಳೂ ಮತ್ತು ಕೆಲವು ಸಂಸ್ಥೆಗಳು ನಡೆಸುತ್ತಲೇ ಬಂದಿದ್ದಾರೆ. ಜನಗಳು ಭಯಭೀತರಾಗಿ ಕುರುಡು ಭಕ್ತಿಯಿಂದ ತಮ್ಮ ಹತ್ತಿರ ಬಂದು ಒಂದಷ್ಟು ದುಡ್ಡು ಚೆಲ್ಲಬೇಕೆಂಬ ಬಯಕೆ ಅವರದ್ದು ಎಂಬುದು ಎಷ್ಟೋ ಜನರ ತಿಳಿವಳಿಕೆಯ ಭಾಗವಾಗದಿರುವುದು ದುಃಖದ ಸಂಗತಿಯಾಗಿದೆ. ಈ ತಿಂಗಳ ಭಾಗಶಃ ಚಂದ್ರಗ್ರಹಣ, ಮುಂದಿನ ಐದು ಶತಮಾನಗಳಲ್ಲಿಯೇ ದೀರ್ಘವಾದ ಚಂದ್ರ ಗ್ರಹಣ ಎಂಬ ಲೆಕ್ಕಚಾರವನ್ನು ಖಗೋಳ ವಿಜ್ಞಾನದಿಂದ ತಿಳಿಯಲಾಗಿದೆ. ಶತಮಾನಗಳಷ್ಟು ಭಯಪಡಿಸುವ ಮೂಢನಂಬಿಕೆಗಳನ್ನು ಇದರ ಸುತ್ತ ಈಗ ಹುಟ್ಟು ಹಾಕುತ್ತಾರೋ ಏನೋ?

ಭೂಮಿ ಸೂರ್ಯನ ಸುತ್ತ, ಚಂದ್ರ ಭೂಮಿಯ ಸುತ್ತ ಸುತ್ತುತ್ತಿರಬೇಕಾದರೆ, ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಹಾದುಹೋಗುವಾಗ, ಈ ಮೂರೂ ಆಕಾಶಕಾಯಗಳು ಒಂದೇ ಸರಳ ರೇಖೆಯಲ್ಲಿ ಬರುತ್ತವೆ. ಇಂತಹ ಸಂದರ್ಭದಲ್ಲಿ ಚಂದ್ರ ಸೂರ್ಯನನ್ನು ಮರೆಮಾಚುತ್ತದೆ, ಆಗ ಸೂರ್ಯನ ಬೆಳಕು ಭೂಮಿಯ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಬೀಳುವುದಿಲ್ಲ. ಇದು ಸೂರ್ಯ ಗ್ರಹಣ. ಸೂರ್ಯ ಗ್ರಹಣ ಅಮಾವಾಸ್ಯೆಯ ದಿನದಂದೇ ನಡೆಯುತ್ತದೆ. ಆದರೆ, ಇದೇ ರೀತಿ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಹಾದುಹೋಗುವಾಗ, ಆ ಸಮಯದಲ್ಲೂ ಮೂರು ಆಕಾಶಕಾಯಗಳು ಸರಳ ರೇಖೆಯಲ್ಲಿ ಬರುತ್ತವೆ. ಆದರೆ ಇಲ್ಲಿ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಹುಣ್ಣಿಮೆಯ ಚಂದ್ರನನ್ನು ಭೂಮಿಯ ನೆರಳು ಆವರಿಸುತ್ತಾ ಹೋಗುತ್ತದೆ. ಇದು ಚಂದ್ರ ಗ್ರಹಣ. ಚಂದ್ರ ಗ್ರಹಣ ಹುಣ್ಣಿಮೆಯಂದೇ ನಡೆಯುತ್ತದೆ.

ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ (ಸರಳ ರೇಖೆಯಲ್ಲಿ), ಸೂರ್ಯಗ್ರಹಣ ಮತ್ತು ಅಮಾವಾಸ್ಯೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ (ಸರಳ ರೇಖೆಯಲ್ಲಿ), ಚಂದ್ರಗ್ರಹಣ ಮತ್ತು ಹುಣ್ಣಿಮೆ. ಹಾಗಾದರೆ, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಗ್ರಹಣಗಳು ನಡೆಯುತ್ತವೆಯಾ? ಇಲ್ಲಾ, ಇದಕ್ಕೆ ಕಾರಣ ಚಂದ್ರ ಭೂಮಿಯ ಸುತ್ತ ಸುತ್ತುತ್ತಿರುವ ಕಕ್ಷೆ (Orbit).

ಭೂಮಿ ಸೂರ್ಯನ ಸುತ್ತು ಸುತ್ತುತ್ತಿರುವ ಕಕ್ಷೆಯು ಮತ್ತು ಚಂದ್ರ ಭೂಮಿಯ ಸುತ್ತು ಸುತ್ತುತ್ತಿರುವ ಕಕ್ಷೆಯು ಒಂದೆ ಸಮತಲದಲ್ಲಿ ಇಲ್ಲ. ಈ ಎರಡೂ ಕಕ್ಷೆಗಳು ಸುಮಾರು ಐದು ಡಿಗ್ರಿಯಷ್ಟು ಓರೆಯಾಗಿದ್ದು, ಎರಡು ಬಿಂದುಗಳಲ್ಲಿ ಮಾತ್ರ ಸಂಧಿಸುತ್ತವೆ (Intercepts). ಗ್ರಹಣಗಳು ನಡೆಯಬೇಕಾದರೆ ಅದಕ್ಕಿರುವ ಮೂಲ ನಿಯಮ: ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಇರುವ ಸಂದರ್ಭ ಬರಬೇಕಿರುವುದು. ಇಂತಹ ಸಂದರ್ಭ ಉಂಟಾಗಬೇಕೆಂದರೆ, ಚಂದ್ರನು ತನ್ನ ಕಕ್ಷೆಯಲ್ಲಿ ಸುತ್ತುವಾಗ, ಭೂಮಿಯ ಕಕ್ಷೆಯ ಸಮತಲದಲ್ಲಿ (Ecliptic Plane) ಸಂಧಿಸುವ ಬಿಂದುಗಳಲ್ಲಿ ಅದು ಬಂದಾಗ ಹಾಗೂ ಆಗ ಅಮಾವಾಸ್ಯೆ ಅಥವಾ ಹುಣ್ಣಿಮೆ ಇದ್ದರೆ ಮಾತ್ರ ಗ್ರಹಣಗಳು ನಡೆಯಲು ಸಾಧ್ಯ. ಈ ಕಾರಣದಿಂದ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಗ್ರಹಣಗಳು ನಡೆಯುವುದಿಲ್ಲ ಹಾಗೂ ಗ್ರಹಣಗಳು ವಿರಳವಾಗಿರುವುದು. ಆದರೆ, ಭೂಮಿ ಮತ್ತು ಚಂದ್ರನ ಚಲನೆಗಳನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ಗ್ರಹಿಸಲು ಸಾಧ್ಯವಾಗಿರುವುದರಿಂದ ನಿಖರವಾಗಿ ಯಾವಾಗ ಗ್ರಹಣಗಳು ನಡೆಯುತ್ತವೆ ಎಂಬುದನ್ನು ಲೆಕ್ಕ ಹಾಕಬಹುದಾಗಿದೆ.

ಸೂರ್ಯ ಗ್ರಹಣವನ್ನು ವೀಕ್ಷಿಸುವಾಗ ಕೆಲವು ಸುರಕ್ಷತಾ ಮೆನ್ನೆಚ್ಚರಿಕೆಯನ್ನು ವಹಿಸಲೇಬೇಕಾಗಿರುತ್ತದೆ. ಸಾಮಾನ್ಯವಾಗಿ ಸೂರ್ಯನನ್ನು ಎಂದೂ ಬರಿಗಣ್ಣಿನಲ್ಲಿ ನೋಡುವುದು ತಪ್ಪು. ಮನುಷ್ಯನ ಅಂಗಗಳಲ್ಲಿ ಕಣ್ಣು ಅತೀ ಸೂಕ್ಷ್ಮವಾದದ್ದು. ಸೂರ್ಯನ ತೀಕ್ಷ್ಣವಾದ ಕಿರಣಗಳು ಕಣ್ಣಿನ ರೆಟಿನಾವನ್ನು ಹಾಳು ಮಾಡುವ ಸಂಭವವಿರುತ್ತದೆ. ಯಾವುದೇ ಸಮಯದಲ್ಲೂ ಕೂಡ ಸೂರ್ಯನನ್ನು ಬರಿಗಣ್ಣಿನಿಂದ ನೋಡಬಾರದು. ಗ್ರಹಣದ ಸಮಯದಲ್ಲೂ ಕೂಡು ಭೂಮಿಯ ಜೀವರಾಶಿಗೆ ತೊಂದರೆ ಮಾಡವ ಯಾವ ಹಾನಿಕಾರಕ
ಕಿರಣಗಳೂ ಸುರ್ಯನಿಂದ ಬರುವುದಿಲ್ಲ. ಇವೆಲ್ಲವೂ ಕೇವಲ ಕಪೋಲಕಲ್ಪಿತವಾದವು. ಗ್ರಹಣಗಳು ಕೇವಲ ಸಾಪೇಕ್ಷವಾದ (relative) ಘಟನೆಗಳು. ಗ್ರಹಣದ ಸಮಯದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರನಲ್ಲಿ ಯಾವುದೇ ಭೌತಿಕವಾದ ಬದಲಾವಣೆಗಳೂ ನಡೆಯುವುದಿಲ್ಲ. ಇದು ಕೇವಲ ನೆರಳು ಬೆಳಕಿನ ಆಟ. ಸೂರ್ಯನನ್ನು ನಾವು ಎಂದಿಗೂ ನೇರ ಕಣ್ಣುಗಳಿಂದ ನೋಡಬಾರದು, ಅದು ಗ್ರಹಣದ ಸಮಯಕ್ಕೂ ಅನ್ವಯವಾಗುತ್ತದೆ. ಸೂರ್ಯನನ್ನು ನೋಡಬೇಕಾದರೆ, ಪ್ರಮಾಣೀಕರಿಸಲಾದ ಸೌರ ಕನ್ನಡಕವನ್ನು ಬಳಸಿ ನೋಡುವುದು ಸುರಕ್ಷಿತ. ಗ್ರಹಣದ ಸಮಯದಲ್ಲೂ ಕೂಡ ಸೌರ ಕನ್ನಡಕದ ಮೂಲಕವೇ ಸೂರ್ಯ ಗ್ರಹಣವನ್ನು ನೋಡಬೇಕು. ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಬಳಸಿದರೆ, ಅವುಗಳಿಗೂ ಸೂಕ್ತವಾದ ಸೌರ ಶೋಧಕ (Sun Filters) ಅಳವಡಿಸಿಯೇ ನೋಡಬೇಕು. ಆದರೆ, ಚಂದ್ರಗ್ರಹಣ ಇದಕ್ಕೆ ವ್ಯತಿರಿಕ್ತವಾದದ್ದು. ಎಲ್ಲಾ ವಿಧದ ಚಂದ್ರ ಗ್ರಹಣಗಳನ್ನು ಬರಿಗಣ್ಣಿನಿಂದಲೇ ನೋಡಬಹುದು. ಕೆಲವು ಸಮಯಗಳಲ್ಲಿ ಹುಣ್ಣಿಮೆಯ ಚಂದ್ರ ಪ್ರಕಾಶಮಾನವಾಗಿ ಇರುವುದರಿಂದ ಬೈನಾಕ್ಯುಲರ್ ಮತ್ತು ಟೆಲಿಸ್ಕೋಪ್‌ಗಳಲ್ಲಿ ನೋಡಬೇಕಾದರೆ ಚಂದ್ರ ಶೋಧಕಗಳನ್ನು (Moon Filters) ಬಳಸುತ್ತಾರೆ.

ಈ ತಿಂಗಳ ನವೆಂಬರ್ 19ರಂದು ಹುಣ್ಣಿಮೆ. ಅಂದು ಆಗಸದಲ್ಲಿ ಭಾಗಶಃ ಚಂದ್ರ ಗ್ರಹಣ (Partial Lunar Eclipse) ಗೋಚರಿಸಲಿದೆ. ಈ ಗ್ರಹಣವನ್ನು ಅಮೆರಿಕಾ, ಯುರೋಪ್, ಪೂರ್ವ ಎಷ್ಯಾ ಹಾಗೂ ಆಸ್ಟ್ರೇಲಿಯಾ ಖಂಡಗಳಲ್ಲಿ ನೋಡಬಹುದಾಗಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಚಂದ್ರ ಹುಟ್ಟುವಾಗ ಈ ಗ್ರಹಣವನ್ನು ನೋಡಬಹುದಾಗಿರುತ್ತದೆ. ದಕ್ಷಿಣ ಭಾರತದಿಂದ ಈ ಗ್ರಹಣ ಗೋಚರಿಸುವುದಿಲ್ಲ. ಈ ಗ್ರಹಣದ ವಿಶೇಷ ಎಂದರೆ ಇದು ಮುಂದಿನ ಸುಮಾರು ಐದು ಶತಮಾನಗಳಲ್ಲಿ ನಡೆಯಬಹುದಾದ ಭಾಗಶಃ ಚಂದ್ರಗ್ರಹಣಗಳಲ್ಲಿಯೇ ಅತ್ಯಂತ ದೀರ್ಘವಾದದ್ದು. ಈ ಕಾರಣದಿಂದು ಈ ಭಾಗಶಃ ಚಂದ್ರ ಗ್ರಹಣ ಹೆಚ್ಚು ಸುದ್ದಿಯಲ್ಲಿದೆ. ಭಾಗಶಃ ಏಕೆಂದರೆ, ಚಂದ್ರ ಗ್ರಹಣದ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಶೇ.97 ಭಾಗದಲ್ಲಿ ಬೀಳುತ್ತಿರುತ್ತದೆ. ಶೇ. 100 ಭಾಗದಲ್ಲಿ ಬಿದ್ದಿದ್ದರೆ ಅದು ಪೂರ್ಣಚಂದ್ರ ಗ್ರಹಣವಾಗುತ್ತಿತ್ತು.

1451ರಿಂದ 2650ರವರೆಗೆ ಗೋಚರಿಸಿರುವ/ಗೋಚರಿಸಲಿರುವ ದೀರ್ಘವಾದ ಭಾಗಶಃ ಚಂದ್ರ ಗ್ರಹಣಗಳನ್ನು, ಅವುಗಳ ಅವಧಿಗೆ ಅನುಸಾರವಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ.

1. 19.11.2021- 6 ಗಂಟೆ 2 ನಿಮಿಷ
2. 30.11.2039- 6 ಗಂಟೆ 0 ನಿಮಿಷ
3. 11.12.2057- 5 ಗಂಟೆ 59 ನಿಮಿಷ
4. 22.12.2075- 5 ಗಂಟೆ 58 ನಿಮಿಷ
5. 9.10.2489- 6 ಗಂಟೆ 0 ನಿಮಿಷ

ಮೇಲಿನ ಪಟ್ಟಿಗಳಲ್ಲಿ ನವೆಂಬರ್ 2021ರ ಭಾಗಶಃ ಚಂದ್ರ ಗ್ರಹಣ ಐದು ಶತಮಾನಗಳಲ್ಲಿಯೇ ದೀರ್ಘವಾದದ್ದು ಎಂಬುವುದು ತಿಳಿಯುತ್ತದೆ. ಈ ಹಿಂದೆ ಅಂದರೆ 2003ರ ನವೆಂಬರ್ ೯ರಂದು ನಡೆದ ಚಂದ್ರ ಗ್ರಹಣದ ಅವಧಿ 6 ಗಂಟೆ 3 ನಿಮಿಷಗಳಷ್ಟಿತ್ತು. ಆದರೆ, ಅದು ಭಾಗಶಃ ಚಂದ್ರ ಗ್ರಹಣವಾಗಿರದೆ, ಪೂರ್ಣ ಚಂದ್ರ ಗ್ರಹಣವಾಗಿತ್ತು.
ಈ ಕಾರಣಗಳಿಂದ ನವೆಂಬರ್ 19, 2021ರ ಭಾಗಶಃ ಚಂದ್ರ ಗ್ರಹಣ 15ನೇ ಶತಮಾನದಿಂದಲೂ ನಡೆದಿರುವ ಬಾಗಶಃ ಚಂದ್ರ ಗ್ರಹಣದಲ್ಲಿಯೇ ಅತ್ಯಂತ ದೀರ್ಘವಾದದ್ದು. ಇಂತಹದೇ ದೀರ್ಘವಾದ ಭಾಗಶಃ ಚಂದ್ರ ಗ್ರಹಣ ಮತ್ತೊಮ್ಮೆ ನಡೆಯವುದು ಫೆಬ್ರವರಿ 8, 2669ರಲ್ಲಿ!


ಇದನ್ನೂ ಓದಿ: ಬೆಳ್ಳಿಚುಕ್ಕಿ; ವಿಶ್ವದ ಪ್ರಥಮ ಬೆಳಕು – CMBR

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...