Homeಮುಖಪುಟಹಸಿವಿನ ಅಲೆಯಬ್ಬರಕ್ಕೆ ಪರಿಹಾರ ಹುಡುಕುತ್ತಾ : ಲಾಕ್‌ಡೌನ್‌ ಸ್ವಯಂಸೇವಕರೊಬ್ಬರ ಅನುಭವ ಬರಹ

ಹಸಿವಿನ ಅಲೆಯಬ್ಬರಕ್ಕೆ ಪರಿಹಾರ ಹುಡುಕುತ್ತಾ : ಲಾಕ್‌ಡೌನ್‌ ಸ್ವಯಂಸೇವಕರೊಬ್ಬರ ಅನುಭವ ಬರಹ

ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ದುಡ್ಡು ಮತ್ತು ಆಹಾರ ಇವರೆಡನ್ನೂ ವೈರುಧ್ಯಗಳೆಂದು ನೋಡಬಾರದು. ಇಂತಹ ಸಮಯದಲ್ಲಿ ಉಚ್ಚ ನ್ಯಾಯಾಲಯವು ಸಂಕಷ್ಟಕ್ಕೆ ಈಡಾದವರಿಗೆ ಹೇಗೆ ಸಹಾಯ ಮಾಡಬೇಕೆನ್ನುವುದನ್ನು ನೋಡಬೇಕೆ ಹೊರತು ಕಡೆಗಣಿಸಬಾರದು.

- Advertisement -
- Advertisement -

ಒಂದು ವರ್ಷದ ಮಗು ಇದೆ, ಮಗುವಿಗೆ ಹಾಲು ಕೊಳ್ಳಲೂ ಹಣವಿಲ್ಲ’. ಇದನ್ನು ಹೇಳಿದ್ದು ತಮಿಳುನಾಡಿನ ತಿರುಪುರಿನಲ್ಲಿ ದಿನಗೂಲಿ ಕೆಲಸ ಮಾಡುವ ಕೃಷ್ಣ. ಝಾರ್ಖಂಡದಿಂದ ಕೆಲಸ ಅರಸುತ್ತ ಬಂದ ಕೃಷ್ಣನಿಗೆ ಲಾಕ್‍ಡೌನ್ ಆದಾಗಿನಿಂದ ಯಾವುದೇ ಕೂಲಿ ದುಡ್ಡು ಸಿಕ್ಕಿಲ್ಲ. ಬಿಹಾರದಿಂದ ಬಂದ ಪಂಪಿ ಕುಮಾರಿ ಮತ್ತು ಆಕೆಯ ಗಂಡ ಇಬ್ಬರೂ ಹರಿಯಾಣದ ಗುರುಗ್ರಾಮದಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಗಂಡ ಕಟ್ಟಡ ಕಾರ್ಮಿಕನಾಗಿ ದುಡಿದರೆ, ಈಕೆ ಒಂದು ಮೆಡಿಕಲ್ ಸರಬರಾಜು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಗೆ ಲಿವರ್ ಸಮಸ್ಯೆಯಾಗಿ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಹಾಗೂ ಗಂಡನಿಗೆ ಲಾಕ್‍ಡೌನ್ ಆದಾಗಿನಿಂದ ದಿನಗೂಲಿ ಸಿಗುತ್ತಿಲ್ಲ. ಲಾಕ್‍ಡೌನ್ ಮುಗಿಯುವವರೆಗೆ ಅವರ ಬಳಿ ಇರುವುದು ಕೇವಲ ಇನ್ನೂರು ರೂಪಾಯಿ; ಪಂಪಿ ಕುಮಾರಿಯ ಚಿಕಿತ್ಸೆಗಾಗಿ ಈಗಾಗಲೇ 10,000 ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಸುರೇಶ್ ಯಾದವ ಕೂಡ ಝಾರ್ಖಂಡನವ, ಒರಿಸ್ಸಾದ ಸುಂದರಗಢದಲ್ಲಿ ವಾಹನ ಚಾಲಕನ ಕೆಲಸ ಮಾಡುತ್ತಿದ್ದ ಸುರೇಶ ಈಗ ಕೆಲಸವಿಲ್ಲದೇ ಅಲ್ಲಿಯೇ ಸಿಕ್ಕಿಕೊಂಡಿದ್ದಾರೆ. ಮಾರ್ಚ್ 24ರಿಂದ ಆತನ ವಾಹನ ಮನೆ ಬಿಟ್ಟು ಹೊರಗೆ ಹೋಗಿಲ್ಲ ಹಾಗೂ ಈಗ ಅವನ ಬಳಿ ಇರುವುದು ಕೇವಲ 50 ರೂಪಾಯಿ. ಅಡುಗೆ ಮಾಡಲು ಅವನ ಬಳಿ ಯಾವುದೇ ಸರಂಜಾಮುಗಳಿಲ್ಲ ಹಾಗೂ ಊಟ ವಿತರಿಸುವ ಕೇಂದ್ರಗಳಿಗೆ ಹೋಗಲು ದಾರಿಗಳೂ ಇಲ್ಲ.

ಇವುಗಳು ನನಗೆ ಟಾಲ್ಸ್ಟಾಯ್‍ನ ಕಾದಂಬರಿ ಅನ್ನಾ ಕರೆನಿನಾದ ಮೊದಲ ಸಾಲುಗಳು ನೆನಪಿಸುತ್ತಿವೆ; ‘ಎಲ್ಲಾ ಸುಖಿ ಕುಟುಂಬಗಳು ಒಂದೇ ತೆರ, ಆದರೆ ದುಃಖಿ ಕುಟುಂಬಗಳ ಸಂಕಷ್ಟಗಳು ಕುಟುಂಬದಿಂದ ಕುಟುಂಬಕ್ಕೆ ವಿಭಿನ್ನವಾಗಿರುತ್ತವೆ’.

ಲಾಕ್‍ಡೌನ್ ಮತ್ತು ಅದರ ವಿಸ್ತರಣೆಯ ವಿರುದ್ಧದ ಅಸಮಾಧಾನ ಮತ್ತು ಪ್ರತಿರೋಧದ ದೃಶ್ಯಗಳು ಇತ್ತೀಚಿಗೆ ಮುಂಬಯಿ ಮತ್ತು ಸೂರತ್‍ನಲ್ಲಿ ಕಂಡುಬಂದವು. ಸಾವಿರಾರು ಜನರು ಬೀದಿಗಿಳಿದಿದ್ದರು. ಅವರ ಬೇಡಿಕೆ ಅತ್ಯಂತ ಸರಳವಾಗಿತ್ತು; ಈ ಕಠಿಣ ಲಾಕ್‍ಡೌನ್‍ನಿಂದ ಆದ ಹಾಗೂ ನಿರಂತರವಾಗಿ ಆಗುತ್ತಿರುವ ಆಘಾತ ತಪ್ಪಿಸಿಕೊಳ್ಳುವುದು ಹಾಗೂ ಮನೆಗೆ ಹೋಗಬೇಕೆನ್ನುವುದು; ಅಂದರೆ, ಮನುಷ್ಯನ ಮೂಲಭೂತ ಅವಶ್ಯಕತೆಗಳು.

ಲಾಕ್‍ಡೌನ್ ಆದಾಗಿನಿಂದ ವಾಲಂಟಿಯರ್‌ಗಳ ಗುಂಪೊಂದು (SWAN- Stranded Workers Action Network) ದೇಶಾದ್ಯಂತ ಇರುವ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ಸಂಕಷ್ಟದಲ್ಲಿರುವ ಕಾರ್ಮಿಕರ ಕರೆಗಳನ್ನು ಸ್ವೀಕರಿಸಿ, ಮೂಲ ಅವಶ್ಯಕತೆಗಳ ಪೂರೈಕೆಗೆ ಹಣವನ್ನು ಟ್ರಾನ್ಸ್‍ಫರ್ ಮಾಡಲಾಗುತ್ತಿದೆ ಹಾಗೂ ಸ್ಥಳೀಯ ಸಂಘಸಂಸ್ಥೆಗಳು ಮತ್ತು ಆಡಳಿತಕ್ಕೆ ಸಂಪರ್ಕಿಸಲು ಸಹಾಯ ಮಾಡುತ್ತಿದೆ. ಮಾರ್ಚ್ 27ರಿಂದ ಎಪ್ರಿಲ್ 13ರ ತನಕ ಸುಮಾರು 10,000 ಕಾರ್ಮಿಕರಿಗೆ ಸಹಾಯ ಮಾಡಲಾಗಿದೆ. ಅದರ ವಿವರವಾದ ವರದಿಯನ್ನು ಕಳುಹಿಸಿಕೊಡಬಲ್ಲೆವು. ಈ ವರದಿ ಒಂದು ಅಧ್ಯಯನವಾಗಿರದೇ, ಸ್ವಾನ್ ಎಂಬ ಈ ವೇದಿಕೆ ಮಾಡಿದ ಸಹಾಯ ಕಾರ್ಯದ ಪರಿಣಾಮವಾಗಿದೆ. ಪರಿಹಾರ ಕಾರ್ಯ ನಡೆಯುತ್ತಲೇ ಇದೆ.

ಈ ವರದಿಯು ಕಲೆಹಾಕಿರುವ ದತ್ತಾಂಶಗಳನ್ನು ನೋಡಿದರೆ – ಸ್ವಾನ್ ಇನ್ನೂ ವಿಕಾಸಗೊಳ್ಳುತ್ತಿರುವ ಕಾರಣದಿಂದ ವರದಿಗಳ ಸ್ವರೂಪ ಒಂದೇ ತೆರನಾಗಿ ಇಲ್ಲದಿದ್ದರೂ – ಅತ್ಯಂತ ಮನಕಲುಕುವ ಚಿತ್ರಣವನ್ನು ತೆರೆದಿಡುತ್ತದೆ. ಸುಮಾರು 49% ಜನರ (2707 ಕಾರ್ಮಿಕರನ್ನು ಸಂಪರ್ಕಿಸಲಾದ ಬಳಿಕ ಬಂದ ಅಂಕಿಅಂಶ) ಬಳಿ ಕೇವಲ ಒಂದು ದಿವಸಕ್ಕಾಗಿ ಆಗುವಷ್ಟು ಆಹಾರ ಧಾನ್ಯಗಳಿದ್ದವು. 96% (9302 ಕಾರ್ಮಿಕರಲ್ಲಿ) ಜನರಿಗೆ ಸರಕಾರದಿಂದ ಆಹಾರಧಾನ್ಯಗಳು ತಲುಪಿರಲಿಲ್ಲ ಹಾಗೂ 70% (2293ರಲ್ಲಿ) ಜನರು ಯಾವುದೇ ರೀತಿಯ ತಯಾರಿಸಿದ ಆಹಾರ ಪಡೆದಿಲ್ಲ. ಹಾಗೂ 44% ಕರೆಗಳು ಊಟ ಇಲ್ಲದಕ್ಕೆ ಹಾಗೂ ಹಣ ಇಲ್ಲದ್ದಕ್ಕೆ ಬಂದ ತುರ್ತು ಕರೆಗಳಾಗಿದ್ದವು. ಹಸಿವಿನ ವೇಗವು ಪರಿಹಾರದ ವೇಗಕ್ಕಿಂತ ಹೆಚ್ಚಿರುವುದು ಅತ್ಯಂತ ದುರದೃಷ್ಟಕರವಾಗಿದೆ. ಲಾಕ್‍ಡೌನ್‍ನ ಮೂರನೆಯ ವಾರದಲ್ಲಿ ತಮ್ಮ ಬಳಿ ಕೇವಲ ಒಂದು ದಿವಸಕ್ಕಾಗುವಷ್ಟು ಆಹಾರಧಾನ್ಯಗಳಿವೆ ಎಂದು ಹೇಳಿದವರ ಸಂಖ್ಯೆ ಶೇಕಡ 36ರಿಂದ 49ಕ್ಕೆ ಏರಿಕೆ ಕಂಡಿತು. ಹಾಗೂ ಸರಕಾರದಿಂದ ಆಹಾರಧಾನ್ಯಗಳನ್ನು ಪಡೆದವರ ಸಂಖ್ಯೆ 1%ದಿಂದ 4%ರಷ್ಟು ಮಾತ್ರ ಹೆಚ್ಚಳ ಕಂಡಿದೆ.

ರಾಜ್ಯ ಸರಕಾರಗಳ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಕೇಂದ್ರವು ತೆಗೆದುಕೊಂಡ ಲಾಕ್‍ಡೌನ್‍ನ ಏಕಪಕ್ಷೀಯ ನಿರ್ಧಾರವು ಅಧಿಕಾರವರ್ಗಕ್ಕೆ ಮತ್ತು ವಲಸೆ ಕಾರ್ಮಿಕರಿಗೆ ಶಾಕ್ ನೀಡಿದಂತಾಗಿದೆ.

ರಾಜ್ಯ ಸರಕಾರಗಳ ಆಡಳಿತದ ಪ್ರತಿಕ್ರಿಯೆಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಭಿನ್ನವಾಗಿವೆ. ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿರಾಜ್‍ನ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಆಹಾರಧಾನ್ಯಗಳ ತುರ್ತುಕರೆಗಳಿಗೆ ಮಾನವೀಯತೆಯಿಂದ ಮತ್ತು ತುರ್ತಾಗಿ ಸ್ಪಂದಿಸಿದ್ದಾರೆ. (ಕರ್ನಾಟಕದಲ್ಲಿ 33% ಕಾರ್ಮಿಕರ ಬಳಿ ಕೇವಲ ಒಂದು ದಿವಸಕ್ಕಾಗುವಷ್ಟು ಆಹಾರಧಾನ್ಯಗಳಿದ್ದವು.) ಆದರೆ, ಇತರ ರಾಜ್ಯಗಳ ಅಧಿಕಾರಸ್ಥರ ಪ್ರತಿಕ್ರಿಯೆಗಳು ಅಷ್ಟು ಸರಿಯಾಗಿದ್ದಿಲ್ಲ. ವಿಶೇಷವಾಗಿ ಮಹಾರಾಷ್ಟ್ರದ ಪ್ರತಿಕ್ರಿಯೆಯು ಕೆಟ್ಟದಾಗಿತ್ತು ಎನ್ನಬಹುದು. ಎಪ್ರಿಲ್ 20ರ ತನಕ, ಮಹಾರಾಷ್ಟ್ರದಿಂದ ನಮಗೆ ಕರೆ ಮಾಡಿದ 1366 ಕಾರ್ಮಿಕರಲ್ಲಿ 73% ಕ್ಕೂ ಹೆಚ್ಚು ಜನರ ಬಳಿ ಒಂದು ದಿನಕ್ಕೆ ಸಾಕಾಗುವಷ್ಟೂ ಆಹಾರಧಾನ್ಯವಿರಲಿಲ್ಲ.

ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಈಡಾದವರ ವಲಸೆಯನ್ನು ತಡೆಗಟ್ಟಲು ಗೃಹ ಸಚಿವಾಲಯವು ಮಾರ್ಚ್ 29ರಂದು ಒಂದು ಆದೇಶ ಹೊರಡಿಸಿತು. ಅದರಲ್ಲಿ ಕಾರ್ಮಿಕರಿಗೆ ಅವರ ಮಾಲೀಕರು ಸಂಪೂರ್ಣ ವೇತನವನ್ನು ನೀಡಬೇಕೆಂದು ಹಾಗೂ ಸಿಲುಕಿಕೊಂಡಿರುವ ಕಾರ್ಮಿಕರಿಂದ ಮನೆಯ ಮಾಲೀಕರು ಬಾಡಿಗೆ ಪಡೆಯಬಾರದು ಎಂದು ಹೇಳಲಾಗಿತ್ತು. ಆದರೆ, 90% (4503 ಜನರಲ್ಲಿ) ಕಾರ್ಮಿಕರು ಲಾಕ್‍ಡೌನ್ ಸಮಯದಲ್ಲಿ ತಮಗೆ ಯಾವುದೇ ವೇತನ ನೀಡಲಾಗಿಲ್ಲ ಎಂದು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ (2005), ಅಂತರರಾಜ್ಯ ವಲಸೆ ಕಾರ್ಮಿಕರ ಕಾಯಿದೆ (1979) ಹಾಗೂ ಬೀದಿ ವ್ಯಾಪಾರಿಗಳ ಕಾಯಿದೆ (2014) ಈ ಕಾಯಿದೆಗಳ ಅನುಗುಣವಾಗಿ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ದಾಖಲೆ ಇಡುವುದು ಕಾನೂನಿನ ಪ್ರಕಾರ ಕಡ್ಡಾಯ. ಅದರೊಂದಿಗೆ, ಕಾರ್ಮಿಕರಿಗೆ ಸಂಪೂರ್ಣ ಮತ್ತು ಸಮಯಬದ್ಧವಾಗಿ ವೇತನ, ಸ್ಥಳಾಂತರ ಭತ್ಯೆ ಹಾಗೂ ಮನೆಗೆ ಪ್ರಯಾಣ ಮಾಡಲು ಇರುವ ಭತ್ಯೆಯನ್ನು ನೀಡುವುದನ್ನು ಕಡ್ಡಾಯಗೊಳಿಸುವ ಇತರ ಕಾಯಿದೆಗಳೂ ಇವೆ. ಹರ್ಷ್‍ಮಂದರ್ ಮತ್ತು ಅಂಜಲಿ ಭಾರದ್ವಾಜ್ ಅವರ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ‘ಅವರಿಗೆ ಊಟ ನೀಡುತ್ತಿದ್ದರೆ, ಆಹಾರಕ್ಕಾಗಿ ಹಣವನ್ನೇಕೆ ನೀಡಬೇಕು?’ ಎಂದು ಹೇಳಿದ್ದರು. ಆದರೆ, ನಾವು ಮಾತನಾಡಿದ ಸುಮಾರು 200 ಕಾರ್ಮಿಕರಲ್ಲಿ 78%ಕ್ಕೂ ಹೆಚ್ಚು ಜನರ ಬಳಿ ಮುನ್ನೂರು ರೂಪಾಯಿಗಳಿಗಿಂತ ಕಡಿಮೆ ಹಣ ಇದೆ ಎಂದು ಹೇಳಿದ್ದಾರೆ. ಈ ಬಾಕಿ ಉಳಿದಿರುವ 300 ರೂಪಾಯಿಯಲ್ಲಿ ಅವರು ಸಾಬೂನು, ಎಣ್ಣೆ, ನೀರು, ತರಕಾರಿ, ಔಷಧಿ ಇತ್ಯಾದಿ ಕೊಳ್ಳಬೇಕು ಹಾಗೂ ತಮ್ಮ ಫೋನ್ ರಿಚಾರ್ಜ್ ಮಾಡಬೇಕು, ಮನೆ ಬಾಡಿಗೆ ಕಟ್ಟಬೇಕು ಹಾಗೂ ಮನೆಗೆ ಹಿಂತಿರುಗಬೇಕಿದೆ. ಅದಲ್ಲದೇ, 4503 ಕಾರ್ಮಿಕರಲ್ಲಿ 90% ಜನರಿಗೆ ಲಾಕ್‍ಡೌನ್‍ನಲ್ಲಿ ಯಾವುದೇ ವೇತನವನ್ನು ಪಡೆದಿಲ್ಲ. ಸುಮಾರು 10,000 ಕಾರ್ಮಿಕರ ಮಾರ್ಮಿಕ ಹೇಳಿಕೆಗಳ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಾಧೀಶರ ಪ್ರತಿಕ್ರಿಯೆಯು ಈ ಮಾನವೀಯ ಬಿಕ್ಕಟ್ಟಿನ ಹಾಗೂ ಹಣದ ಅಗತ್ಯಗಳನ್ನು ಕಡೆಗಣಿಸುತ್ತದೆ. ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರಿಗೆ ದುಡ್ಡು ಮತ್ತು ಆಹಾರ ಇವರೆಡನ್ನೂ ವೈರುಧ್ಯಗಳೆಂದು ನೋಡಬಾರದು. ಇಂತಹ ಸಮಯದಲ್ಲಿ ಉಚ್ಚ ನ್ಯಾಯಾಲಯವು ಸಂಕಷ್ಟಕ್ಕೆ ಈಡಾದವರಿಗೆ ಹೇಗೆ ಸಹಾಯ ಮಾಡಬೇಕೆನ್ನುವುದನ್ನು, ಪರಿಹಾರ ನೋಡಬೇಕೆ ಹೊರತು ಕಡೆಗಣಿಸಬಾರದು.

635 ಶೈಕ್ಷಣಿಕ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ತುರ್ತು ಪರಿಹಾರ ಕ್ರಮಗಳ ಸೂಚಿಯೊಂದಿಗೆ ಕೇಂದ್ರ ಸರಕಾರಕ್ಕೆ ಮಾರ್ಚ್ 24ರಂದು ಮನವಿ ಮಾಡಿಕೊಂಡಿದ್ದರು. ಅದರಲ್ಲಿ ಒಂದು ಕ್ರಮ, ತಳಮಟ್ಟದಲ್ಲಿರುವ 80% ಕುಟುಂಬಗಳಿಗೆ ಕನಿಷ್ಠ ಎರಡು ತಿಂಗಳ ಮಟ್ಟಿಗೆ ಪ್ರತಿ ತಿಂಗಳು ತಲಾ 7,000 ರೂಪಾಯಿಗಳ ತುರ್ತು ಧನ ಪರಿಹಾರವನ್ನು ನೀಡಬೇಕು ಎಂಬುದು. ಇಂತಹ ಪರಿಹಾರ ಕ್ರಮದ ಅಗತ್ಯ ಇದೆ ಎಂಬುದನ್ನು ಸರಕಾರದ್ದೇ ಅಂಕಿ ಅಂಶಗಳೇ ಧೃಢಪಡಿಸುತ್ತವೆ.

ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ(PLFS) ಪ್ರಕಾರ, ಸುಮಾರು 82% ಕುಟುಂಬಗಳ ಒಟ್ಟು ಆದಾಯ 18,000 ರೂಪಾಯಿಗಳಿಗಿಂದ ಕಡಿಮೆ; ಅಂದರೆ 7ನೇ ವೇತನ ಆಯೋಗ ನಿರ್ಧರಿಸಿದ ಕನಿಷ್ಠ ಬದುಕಿಗೆ ಅಗತ್ಯವಿರುವ ಆದಾಯಕ್ಕಿಂತ ಕಡಿಮೆ. ಹಾಗೂ 69% ಕುಟುಂಬಗಳು ದಿನಕ್ಕೆ (ಸರಾಸರಿ) 400 ರೂಪಾಯಿಗಿಂತ ಕಡಿಮೆ ಆದಾಯವನ್ನು ಹೊಂದಿದ್ದಾರೆ. ಲಾಕ್‍ಡೌನ್ ಆದಾಗಿನಿಂದ ಮೇಲಿನ ಮನವಿಯಲ್ಲಿಯ ಪರಿಹಾರ ಕ್ರಮಗಳೂ ಸಾಲುವುದಿಲ್ಲ ಅನಿಸುತ್ತದೆ. ಬೆಂಗಳೂರಿನಲ್ಲಿರುವ ಝಾರ್ಖಂಡಿನ ವಲಸೆ ಕಾರ್ಮಿಕ ನಮಮ್ನ್ನು ಸಂಪರ್ಕಿಸಿದಾಗ ಹೇಳಿದ್ದು; ತನ್ನ ಹೆಂಡತಿ ತನ್ನ ಹಸುಗೂಸಿಗೆ ಹಾಲುಣಿಸಲೂ ಆಗುತ್ತಿಲ್ಲ. ಏಕೆಂದರೆ ಕಳೆದ ಎರಡು ದಿನಗಳಿಂದ ಆಕೆ ಏನನ್ನೂ ತಿಂದಿರಲಿಲ್ಲ!

ಈ ಲೇಖನದಲ್ಲಿ ಅವರ ಗೌಪ್ಯತೆಯನ್ನು ಕಾಪಾಡಲು ಕಾರ್ಮಿಕರ ಹೆಸರುಗಳನ್ನು ಹೆಸರುಗಳನ್ನು ಬದಲಿಸಬೇಕೆ ಎಂದು ನಾವು ಚರ್ಚಿಸಿದೆವು. ಆದರೆ ಹಾಗೆ ಮಾಡಲಿಲ್ಲ. ಮೊದಲೇ ಸಮಾಜದಲ್ಲಿ ಯಾರ ಕಣ್ಣಿಗೂ ಕಾಣದಂತೆ ಇರುವ ಈ ಅನಾಮಧೇಯ ವ್ಯಕ್ತಿಗಳನ್ನು ಇನ್ನೂ ಎಷ್ಟಂತೆ ಅನಾಮಧೇಯವಾಗಿಸುವುದು? ಈ ವಿನಾಶದ ವ್ಯಾಪ್ತಿಯನ್ನು ಸರಿಪಡಿಸಲು ಇನ್ನೂ ಸಮಯವಿದೆ, ಈ ಸಂದರ್ಭವನ್ನು ನಾವು ಒಂದು ಕಲ್ಯಾಣ ರಾಜ್ಯವಾಗಿ ಮರು ಚಿಂತನೆ ಮಾಡಲು ಬಳಸಿಕೊಳ್ಳಬಹುದು ಹಾಗೂ ಎಲ್ಲರಿಗೂ ಘನತೆಯ ಮತ್ತು ಸುರಕ್ಷತೆಯ ಜೀವನವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಮುಂದುವರೆಯಬಹುದು.

ಒಂದು ತುರ್ತು ಕ್ರಮವಾಗಿ, ಈಗಾಗಲೆ ಎಫ್‍ಸಿಐ ಗೋದಾಮುಗಳಲ್ಲಿ 7 ಕೋಟಿ 80 ಲಕ್ಷ ಟನ್ನುಗಳಷ್ಟು ಆಹಾರಧಾನ್ಯಗಳು ಇರುವುದರಿಂದ, ನಾವು ಉಚಿತ ಸಾರ್ವತ್ರಿಕ ಉಚಿತ ರೇಷನ್, ಆಹಾರ ವಿತರಿಸುವ ಕೇಂದ್ರಗಳನ್ನು ಹೆಚ್ಚಿಸುವುದು ಹಾಗೂ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಕುಟುಂಬಗಳಿಗೆ ಕನಿಷ್ಠ ತಿಂಗಳಿಗೆ 7,000 ರೂಪಾಯಿಗಳನ್ನು ನೀಡಬೇಕೆಂದು ಆಗ್ರಹಿಸುತ್ತೇವೆ. ಮಹಿಳೆಯರಿಗೆ, ಅದರಲ್ಲೂ ಗರ್ಭಿಣಿಯರಿಗೆ ಪೌಷ್ಟಿಕಾಂಶಗಳ ನೀಡಬೇಕು ಹಾಗೂ ರೇಷನ್‍ನೊಂದಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಮಹಿಳೆಯರಿಗೆ ನೀಡಬೇಕು. ಈ ಕ್ರಮಗಳನ್ನು ಕೈಗೊಳ್ಳದಿದ್ದರೆ, ನಾವು ಹಸಿವು, ಅಪೌಷ್ಟಿಕತೆ, ಅಪರಾಧ ಮತ್ತು ಸಾವುಗಳ ಹಿಂದೆಂದೂ ಕಾಣ ಬಹುಆಯಾಮದ ಬಿಕ್ಕಟ್ಟನ್ನು ಕಾಣಲಿದ್ದೇವೆ.

(ಲಾಕ್‍ಡೌನ್‍ನಲ್ಲಿ ಸಿಲುಕಿಕೊಂಡವರ ನೆರವಿಗೆ ಧಾವಿಸಿದ 70ಕ್ಕೂ ಹೆಚ್ಚು ವಾಲಂಟಿಯರ್‌ಗಳಲ್ಲಿ ರಾಜೇಂದ್ರನ್ ಸಹಾ ಒಬ್ಬರು. ಅವರುಗಳೇ ಸೇರಿ ಮಾಡಿಕೊಂಡ ಗುಂಪು ಸ್ವ್ಯಾನ್. ಆ ಕೆಲಸದ ಭಾಗವಾಗಿ ತಯಾರಿಸಿದ ಈ ವರದಿಯು ಇನ್ನೊಂದು ರೂಪದಲ್ಲಿ ಬೇರೆಡೆಯೂ ಪ್ರಕಟವಾಗಿದೆ. ರಾಜೇಂದ್ರನ್ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.)


ಇದನ್ನೂ ಓದಿ: ಪ್ರಪಂಚವನ್ನೇ ಕಟ್ಟಿದ ಮೂಲನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ವಿಶಮ ಪರಿಸ್ಥಿತಿಯಲ್ಲಿ ಬಡವರ ಕಷ್ಟಕ್ಕೆ ನೆರವಾಗಬೇಕಿರುವುದು, ಸರ್ಕಾರಗಳ ಮೊದಲ ಕರ್ತವ್ಯ ಆಗಬೇಕು.

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...