ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು, ಯಾವ ಸರಕಾರಕ್ಕೂ ಸಹ್ಯವಾಗುವುದಿಲ್ಲ. ಕ್ರಮೇಣ ಅಂತಹವರನ್ನ ಅಧೈರ್ಯಗೊಳಿಸಿ ಮೆತ್ತಗಾಗಿಸುತ್ತವೆ. ಈಗ ತೀರಿಕೊಂಡ ಮಧುಕರ ಶೆಟ್ಟಿಯವರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದಲೇ ಹೆಸರು ಮಾಡಿದವರು. ಇಂತಹ ಅಧಿಕಾರಿ ನಮ್ಮ ಚಿಕ್ಕಮಗಳೂರಿಗೆ ಎಸ್ಪಿಯಾಗಿ ಬಂದಾಗ ಸಾರ್ವಜನಿಕರಿಗೆ ಸಂಭ್ರಮವಾದರೆ, ಜನಪೀಡಕ ರಾಜಕಾರಣಿಗಳಿಗೆ ತೊಳ್ಳೆ ನಡುಕವುಂಟಾಯ್ತು. ಈ ಪೈಕಿ ಇಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯ ಬಲಗೈಯಂತಿರುವ ಭೋಜೇಗೌಡ ಮತ್ತು ಸಿ.ಟಿ ರವಿ ಎಂಬ ಜಿಲ್ಲೆಯ ಸಮಸ್ಯೆಗಳು ಮಧುಕರ ಶೆಟ್ಟಿಯವರನ್ನ ಎದುರುಗೊಳ್ಳಲು ಹಿಂಜರಿಯತೊಡಗಿದವು. ಆದರೂ ಅವರನ್ನ ಎತ್ತಂಗಡಿ ಮಾಡಿಸಲು ಜೊತೆಯಾಗಿಯೇ ಶ್ರಮಿಸುತ್ತಿದ್ದವು. ಭೋಜೇಗೌಡ ಆಗಾಗ್ಗೆ ಕುಮಾರಸ್ವಾಮಿಗೆ ಎಸ್ಪಿ ವಿರುದ್ಧ ದೂರು ಹೇಳುವುದನ್ನೇ ಕಾಯಕ ಮಾಡಿಕೊಂಡರೆ ಸಿ.ಟಿ.ರವಿ ಎಸ್ಪಿಗೆ ಕೆಟ್ಟ ಹೆಸರು ತರಲು ಹವಣಿಸುತ್ತಿದ್ದರು. ಈ ಸವiಯದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಕಠಾರಿಯ ಧಕ್ಷ ಅಧಿಕಾರಿಯಾದ್ದರಿಂದ ರಾಜಕಾರಣಿಗಳ ಪುಂಗಿ ಬಂದಾಗಿತ್ತು. ಇಂತಹ ಉಸಿರುಗಟ್ಟುವ ಸನ್ನಿವೇಶದಲ್ಲಿ ಭೋಜೇಗೌಡ ಕುಮಾರಣ್ಣನ ಮೇಲೆ ವಿಪರೀತ ಒತ್ತಡ ತಂದಿದ್ದರಿಂದ ಮಧುಕರ ಶೆಟ್ಟರು ರಾಜ್ಯಪಾಲರ ಸೆಕ್ಯೂರಿಟಿ ಮುಖ್ಯಸ್ಥರಾಗಿ ವರ್ಗಾವಣೆಗೊಂಡರು! ಇದು ಒಬ್ಬ ದಕ್ಷ ಅಧಿಕಾರೊಗೆ ಸರಕಾರ ಮಾಡಿದ ತೀವ್ರ ತರದ ಅವಮಾನ. ಏಕೆಂದರೆ ಚಿಕ್ಕಮಗಳೂರ ಬಡವರು ಕೂಲಿ ಕಾರ್ಮಿಕರು ಮತ್ತು ಹಿಂದುಳಿದ ಜಾತಿಗಳು ನಮಗೆ ಯಾರಿಲ್ಲದಿದ್ದರೂ ಜಿಲ್ಲಾ ರಕ್ಷಣಾಧಿಕಾರಿಗಳಿಂದ ಪೂರ್ಣ ರಕ್ಷಣೆಯಿದೆ ಎಂದು ಭಾವಿಸಿದ್ದರು. ಕಾಡಲ್ಲಿನ ನಕ್ಷಲರೂ ಕೂಡ ಮಧುಕರ ಶೆಟ್ಟರು ಎಸ್ಪಿಯಾಗಿರುವುದರಿಂದ ನಮಗಾವ ತೊಂದರೆಯಿಲ್ಲವೆಂದು ಭಾವಿಸಿದ್ದರು. ಎಸ್ಪಿ ಕೂಡ ಆ ನಕ್ಸಲರನ್ನ ಅಕ್ಕ-ಪಕ್ಕದ ಜಿಲ್ಲೆಗೆ ಓಡಿಸಿ ಎಂದು ಹೇಳಿದ್ದರು. ತಮ್ಮ ಇರುವಿಕೆಯ ಕಾರಣಕ್ಕೆ ಹಲವು ಸಮಸ್ಯೆಗಳು ಕರಗಿ ಹೋಗುವಂತೆ ನೋಡಿಕೊಂಡಿದ್ದ ಮಧುಕರ ಶೆಟ್ಟರಿಂದ ರಾಜಕಾರಣಿಗಳು ನಿರುದ್ಯೋಗಿಗಳಂತಾಗಿದ್ದರು. ಇಂತಿರುವಾಗ ನಮಗೆ ಬೇಕೇ ಇಲ್ಲದ ರಾಜ್ಯಪಾಲರೆಂಬ ಮುದಿಯಾನೆಯ ರಕ್ಷಣೆಗೆ ಹೋಗಿ ಅದರ ಹಿಂದೆ ನಿಂತಾಗ ಜಿಲ್ಲೆಯ ಕಿಡಿಗೇಡಿ ರಾಜಕಾರಣಿಗಳು ಕುಹಕವಾಗಿ ನಕ್ಕು ಸಂತೋಷ ವ್ಯಕ್ತಪಡಿಸಿದ್ದರು.
ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಅವಮಾನವಾಗುತ್ತಿರುವುದು ಈ ಜಿಲ್ಲೆಯಲ್ಲಿ ಇದೇ ಮೊದಲಲ್ಲ. ಹೆಚ್.ಎಲ್.ನಾಗೇಗೌಡರು ಡಿ.ಸಿ.ಯಾಗಿದ್ದ ಕಾಲದಿಂದಲೂ ನಡೆದು ಬಂದಿದೆ. ಅದರಲ್ಲೂ ಬಿರೂರು ಶಾಸಕರಾಗಿದ್ದ ಲಕ್ಷ್ಮಯ್ಯ ಪಿಳ್ಳೆನಳ್ಳಿ ಊರ ಮುಂದೆ ನಿಂತು ಪ್ಯಾಂಟ್‍ಜಿಪ್ ತೆಗೆದು ತನ್ನ ವೈರಿಗಳ ಹೆಂಗಸರನ್ನು ಕರೆದು ತನ್ನ ತಾಕತ್ತು ತೋರುತ್ತೇನೆ ಎಂದಿದ್ದರು. ಇದನ್ನು ಕಂಡ ಬಿಪಿನ್ ಗೋಪಾಲಕೃಷ್ಣ ಎಂಬ ಎಸ್ಪಿ ಕೂಡಲೆ ಕ್ರಮ ಜರುಗಿಸಿದ್ದರಿಂದ ಅವರನ್ನು 24 ಗಂಟೆಯಲ್ಲಿ ವರ್ಗ ಮಾಡಿಸಿದ್ದರು. ಅದೇ ¯ಕ್ಷ್ಮಯ್ಯನವರ ಮಗ ಭೋಜೇಗೌಡ ಮಧುಕರ ಶೆಟ್ಟರನ್ನ ವರ್ಗ ಮಾಡಿಸಿದ್ದರು. ಕೆಟ್ಟ ಸರಕಾರಗಳು ಬಂದಾಗ ಒಳ್ಳೆ ಅಧಿಕಾರಿಗಳು ತೊಂದರೆ ಅವಮಾನಕ್ಕೊಳಗಾಗುವುದು ಸಾಮಾನ್ಯ. ಆದ್ದರಿಂದ ಮಧುಕರಶೆಟ್ಟರು ತಮ್ಮ ಸೇವಾವಧಿಯಲ್ಲಿ ನೋವನ್ನ ಅನುಭವಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ದಲಿತ ಜನಾಂಗದಿಂದ ಬಂದ ಬಿ.ಬಿ ನಿಂಗಯ್ಯ, ಮೋಟಮ್ಮ ಇಂತವರೆಲ್ಲಾ ಮಂತ್ರಿಗಳಾಗಿ ಮೆರೆದರು. ಆದರೂ ಭೂಮಾಲೀಕರ ನಿರಂತರ ಶೋಷಣೆಗೆ ತುತ್ತಾದ ದಲಿತರಿಗೆ ಹರ್ಷಗುಪ್ತ ಮತ್ತು ಮಧುಕರ ಶೆಟ್ಟರು ವಸತಿ ನಿರ್ಮಿಸಿಕೊಟ್ಟು ನಿರ್ಗತಿಕರ ಬಾಳಿಗೆ ಬೆಳಕಾದದ್ದು ವಿಶೇಷ ಇದರಿಂದ ಅರ್ಥವಾಗುವುದೇನೆಂದರೆ, ಈ ಪಂಚರಂಗಿ ರಾಜಕಾರಣಿಗಳಿಂದ ಏನೂ ಆಗುವುದಿಲ್ಲ. ಜನಪರ ಕಾಳಜಿಯ ಅಧಿಕಾರಿಗಳಿಂದ ಮಾತ್ರ ಜನ ನೆಮ್ಮದಿ ಕಾಣಬಲ್ಲರು ಎಂಬುದು ಸಾಬೀತಾಗಿದೆ. ಚಿಕ್ಕಮಗಳೂರಲ್ಲಿ ಎಷ್ಟೆಲ್ಲಾ ರಾಜಕಾರಣಿಗಳು ಆಗಿಹೋದರೂ ಜನಮಾನಸಲ್ಲುಳಿದವರು ದಕ್ಷ ಪ್ರಾಮಾಣಿಕ ಅಧಿಕಾರಿಗಳು ಮಾತ್ರ ಎಂಬುದು ವಿಶೇಷ!
– ವರದಿಗಾರ


