ಡೊಮಿನೋಸ್ ಪಿಜ್ಜಾ ಡೆಲಿವರಿ ಯುವತಿಯೊಬ್ಬರ ಮೇಲೆ ನಾಲ್ವರು ಯುವತಿಯರು ಕ್ಷುಲ್ಲಕ ಕಾರಣಕ್ಕೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪಿಜ್ಜಾ ಡೆಲಿವರಿ ಉದ್ಯೋಗಿ ನಂದಿನಿ ಎಂಬುವವರ ಮೇಲೆ ನಾಲ್ವರು ಯುವತಿಯರ ತಂಡ ಅಮಾನುಷವಾಗಿ ಹಲ್ಲೆ ನಡೆಸಿದೆ. ಅಳುತ್ತಾ, ಕೈ ಮುಗಿದು ಬೇಡಿಕೊಂಡರು ಬಿಡದೆ ಕೋಲಿನಿಂದ ಹೊಡೆಯುತ್ತಿರುವುದು, ಯಾರು ಆಕೆಗೆ ಸಹಾಯಕ್ಕೆ ಬರದಿರುವುದನ್ನು ಕಾಣಬಹುದು. ಕೊನೆಗೆ ಸಮೀಪದ ನಿವಾಸದಲ್ಲಿ ಬಚ್ಚಿಟ್ಟುಕೊಂಡು ಯುವತಿ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100₹200₹500₹1000Others
ಉದ್ಯೋಗಿ ನಂದಿನಿ ನಂತರ ದೂರು ನೀಡಿದ್ದು, ಥಳಿಸುತ್ತಿದ್ದ ನಾಲ್ವರು ಯುವತಿಯರ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಮರ್ಯಾದೆಗೇಡು ಹತ್ಯೆ: ತಂಗಿ-ಬಾವನನ್ನು ಊಟಕ್ಕೆ ಕರೆದು ಕೊಲೆ ಮಾಡಿದ ಅಣ್ಣ
A young woman was mercilessly thrashed, grabbed by the hair in full public view by a group of women in Indore. The video of the incident shows four women beating up the victim, a pizza chain employee, using sticks and fists, for allegedly staring at them @ndtv @ndtvindia pic.twitter.com/R6l2epYLpJ
— Anurag Dwary (@Anurag_Dwary) June 13, 2022
ಆರೋಪಿ ಯುವತಿಯರು ಸ್ಥಳೀಯ ಗ್ಯಾಂಗ್‌ನ ಭಾಗವಾಗಿದ್ದಾರೆ ಎನ್ನಲಾಗಿದ್ದು, ಹಲ್ಲೆಯ ವಿಡಿಯೋವನ್ನು ಈ ಯುವತಿಯರ ಗ್ಯಾಂಗ್ ಸ್ವತಃ ವೈರಲ್ ಮಾಡಿದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ವಿಡಿಯೋವನ್ನು ಹಲವು ಮಂದಿ ತಮ್ಮ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಪತ್ರಕರ್ತೆ ದೀಪಿಕಾ ನಾರಾಯಣ್ ಭಾರದ್ವಾಜ್ ಹಂಚಿಕೊಂಡಿದ್ದು ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
Came across this @dominos @dominos_india
I hope you're providing legal assistance to this girl who's been assaulted on duty. Hope you help her in filing an assault case against these hooligans.
Take action @MPPoliceOnline pic.twitter.com/kVE9O7Sce3
— Deepika Narayan Bhardwaj (@DeepikaBhardwaj) June 13, 2022
ಟ್ವಿಟರ್‌ನಲ್ಲಿ ಡೊಮಿನೋಸ್ ಇಂಡಿಯಾವನ್ನು ಟ್ಯಾಗ್ ಮಾಡಿರುವ ಅವರು, “ಕರ್ತವ್ಯದ ಮೇಲೆ ಹಲ್ಲೆಗೊಳಗಾದ ಈ ಯುವತಿಗೆ ನೀವು ಕಾನೂನು ನೆರವು ನೀಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಈ ಗೂಂಡಾಗಳ ವಿರುದ್ಧ ಹಲ್ಲೆ ಪ್ರಕರಣವನ್ನು ದಾಖಲಿಸಲು ನೀವು ಆಕೆಗೆ ಸಹಾಯ ಮಾಡುತ್ತೀರಿ ಎಂದು ಭಾವಿಸುತ್ತೇವೆ” ಎಂದಿದ್ದಾರೆ. ಜೊತೆಗೆ ಮಧ್ಯಪ್ರದೇಶ ಪೊಲೀಸರಿಗೂ ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಒಕ್ಕೂಟ ಸರ್ಕಾರದ ಯೋಜನೆ: ‘ಹಿಂದಿ’ ಮಾತನಾಡುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಭಾಗ್ಯ!



ಈ ಕ್ರೌರ್ಯ ಕಂಡನಾರ್ಹ. ಅಮಾನುಶವಾಗಿ ಹಲ್ಲೆ ಮಾಡುತ್ತಿರುವ ಈ ನಾಲ್ವರು ಯುವತಿಯರಿಗೆ ಶಿಕ್ಷೆ ಆಗಬೇಕು.