Homeಕರ್ನಾಟಕಪಠ್ಯಪುಸ್ತಕ ಹಗರಣ ವಿರೋಧಿಸಿ ಜೂನ್‌‌ 18ರ ಶನಿವಾರ ನಡೆಯುವ ಬೃಹತ್‌ ರ್‍ಯಾಲಿಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ....

ಪಠ್ಯಪುಸ್ತಕ ಹಗರಣ ವಿರೋಧಿಸಿ ಜೂನ್‌‌ 18ರ ಶನಿವಾರ ನಡೆಯುವ ಬೃಹತ್‌ ರ್‍ಯಾಲಿಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಭಾಗಿ

- Advertisement -
- Advertisement -

ರಾಜ್ಯ ಸರ್ಕಾರ ನಡೆಸಿರುವ ‘ಪಠ್ಯಪುಸ್ತಕ ಹಗರಣ’ವನ್ನು ವಿರೋಧಿಸಿ ಜೂನ್‌ 18ರ ಶನಿವಾರದಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್‌ ಪ್ರತಿಭಟನಾ ರ್‍ಯಾಲಿಯಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ ಅವರು ಭಾಗವಹಿಸುವುದಾಗಿ ಮಂಗಳವಾರ ಹೇಳಿದ್ದಾರೆ.

ನಾಡಿನ ಮಹನಿಯರಿಗೆ ಅವಮಾನ ಮಾಡಿ ರಾಜ್ಯದ ಜನತೆಯ ಭಾವನೆಗೆ ಧಕ್ಕೆ ತಂದು ಸಮಾಜದಲ್ಲಿ ಶಾಂತಿಭಂಗಪಡಿಸಲು ಯತ್ನಿಸಿರುವ ಚಕ್ರತೀರ್ಥನನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅವರ ಬೆನ್ನಿಗೆ ನಿಂತ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ‘ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ – ಕರ್ನಾಟಕ’ದ ವತಿಯಿಂದ ಜೂನ್ 18ರ ಶನಿವಾರದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪ್ರತಿಭಟನಾ ಮೆರವಣಿಗೆ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕೇಂದ್ರ ರೈಲ್ವೇ ನಿಲ್ದಾಣದಿಂದ ಪ್ರಾರಂಭವಾಗಲಿದ್ದು ಫ್ರೀಡಂ ಪಾರ್ಕ್‌‌ನಲ್ಲಿ ಸಮಾವೇಶಗೊಳ್ಳಲಿದೆ. ಬೃಹತ್‌ ಹೋರಾಟಕ್ಕೆ ರಾಜ್ಯದ ಎಲ್ಲಾ ಸಮುದಾಯದ ಮಠಗಳ ಸ್ವಾಮೀಜಿಗಳು, ಹಿಂದುಳಿದ ವರ್ಗಗಳ‌ ಸಂಘ ಸಂಸ್ಥೆಗಳು, ದಲಿತ ಸಮುದಾಯದ ಸಂಘಟನೆಗಳು, ಅಲ್ಪಸಂಖ್ಯಾತ ಸಮುದಾಯ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ವಕೀಲರ ಒಕ್ಕೂಟಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಹೋರಾಟ ಸಮಿತಿಯ ಸಂಚಾಲಕರು ಹೇಳಿದ್ದಾರೆ.

ಇದನ್ನೂ ಓದಿ: ಪಠ್ಯಪುಸ್ತಕ ಹರಗರಣ: ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರೂ ಟಾರ್ಗೆಟ್‌?

ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರೂಪಿಸಲಾಗಿದ್ದ 6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಪಠ್ಯಪುಸ್ತಕದಲ್ಲಿ ‘ನಮ್ಮ ಕರ್ನಾಟಕ’ ಪಾಠವನ್ನು ಸೇರಿಸಲಾಗಿತ್ತು. ರಾಜ್ಯದ ಜಿಲ್ಲೆಗಳ ಪರಿಚಯದ ಜೊತೆಗೆ, ಕರ್ನಾಟಕದ ಅಸ್ಮಿತೆಗಳನ್ನು ಪುಟ್ಟ ಮಕ್ಕಳಿಗೆ ಪರಿಚಯಿಸುವ ಪ್ರಯತ್ನ ಮಾಡಲಾಗಿತ್ತು. ಅದರಲ್ಲಿ ನೀಡಲಾಗಿದ್ದ ದೇವೇಗೌಡ ಅವರ ಬಗ್ಗೆ ಇದ್ದ ಮಾಹಿತಿಯನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಯು ತೆಗೆದುಹಾಕಿದೆ.

ಹಾಸನ ಜಿಲ್ಲೆಯ ಪರಿಚಯ ಪಠ್ಯದಲ್ಲಿದ್ದ ದೇವೇಗೌಡ ಅವರ ಫೋಟೋಗೆ ಖೋಖ್‌

ಹಾಸನ ಜಿಲ್ಲೆಯ ಪರಿಚಯ ಹೀಗೆ ಆರಂಭವಾಗುತ್ತದೆ: “ಹಾಸನಾಂಬ ದೇವಾಲಯದಿಂದ ಇದಕ್ಕೆ ಹಾಸನ ಎಂಬ ಹೆಸರು ಬಂದಿದೆ. ಈ ದೇವಾಲಯದ ಗರ್ಭಗುಡಿ ಬಾಗಿಲನ್ನು ವರ್ಷದಲ್ಲಿ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ದೇವಾಲಯಗಳು ಹೊಯ್ಸಳ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿವೆ. ಗೊರುರು, ಮೊಸಳೆ, ಮುಂತಾದವು ಪ್ರಸಿದ್ಧ ಗ್ರಾಮಗಳು…”

ಕೊನೆಯಲ್ಲಿ, “ಕರ್ನಾಟದಿಂದ ಪ್ರಧಾನಿಯಾಗಿದ್ದ ಶ್ರೀ ಎಚ್.ಡಿ.ದೇವೇಗೌಡರು ಈ ಜಿಲ್ಲೆಯವರು” ಎಂದು ಮಕ್ಕಳಿಗೆ ಪರಿಚಯ ಮಾಡಿಕೊಡಲಾಗಿದೆ. ಜೊತೆಗೆ ದೇವೇಗೌಡರ ಭಾವಚಿತ್ರವನ್ನು ನೀಡಲಾಗಿತ್ತು. ಆದರೆ ರೋಹಿತ್ ಚಕ್ರತೀರ್ಥ ಸಮಿತಿಯು ಈ ಭಾಗವನ್ನು ಕಿತ್ತು ಹಾಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....