Homeಕರ್ನಾಟಕಪಠ್ಯಪುಸ್ತಕ ಹಗರಣ - ‘ಬರಗೂರು ಸಮಿತಿ ಹಿಂದೆ ತುಕ್ಡೆ ಗ್ಯಾಂಗ್‌’: ಸಚಿವ ಬಿಸಿ ನಾಗೇಶ್‌ ವಿವಾದಾತ್ಮಕ...

ಪಠ್ಯಪುಸ್ತಕ ಹಗರಣ – ‘ಬರಗೂರು ಸಮಿತಿ ಹಿಂದೆ ತುಕ್ಡೆ ಗ್ಯಾಂಗ್‌’: ಸಚಿವ ಬಿಸಿ ನಾಗೇಶ್‌ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಹಿಂದೆ ಜೆಎನ್‌ಯು ತುಕ್ಡೆ ಗ್ಯಾಂಗ್‌ ಇದ್ದು, ಕರ್ನಾಟಕ ಪಠ್ಯ ಪುಸ್ತಕದ ವಿಚಾರಕ್ಕೆ ಜೆಎನ್‌ಯು ಪ್ರೊಫೆಸರ್‌ ಪತ್ರ ಬರೆದಿರುವುದೇ ಇದಕ್ಕೆ ಸಾಕ್ಷಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಮಂಗಳವಾರದಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತವನ್ನು ಒಡೆಯಲು ತುಕ್ಡೆ ಗ್ಯಾಂಗ್‌ ಯತ್ನಿಸಿತು. ಆದರೆ, ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಧ್ವಜ ಹಾರಿಸುವ ಒಂದಷ್ಟು ಜನರು ಈ ತಂಡದಲ್ಲಿದ್ದಾರೆ. ಆದ್ದರಿಂದಲೇ, ಜೆಎನ್‌ಯು ಪ್ರೊಫೆಸರ್ ಪತ್ರ ಬರೆದಿದ್ದಾರೆ. ಕರ್ನಾಟಕದ ಪಠ್ಯಪುಸ್ತಕದ ವಿಚಾರಕ್ಕೆ ಅವರೇಕೆ ಪತ್ರ ಬರೆಯುತ್ತಾರೆ” ಎಂದು ಸಚಿವ ನಾಗೇಶ್‌ ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಬಸವಣ್ಣನವರ ಬಗ್ಗೆ ಏನು ಅವಹೇಳನವಾಗಿದೆ ಎಂದು ಹೇಳುತ್ತಿದ್ದಾರೆ. ಬರಗೂರು ಸಮಿತಿಯಿದ್ದಾಗ ಬಸವಣ್ಣ ಅವರ ಕುರಿತು ಇದ್ದ ವಿಷಯವೇ ಈಗಲೂ ಇದೆ. ಒಂದೇ ಒಂದು ವಾಕ್ಯ ಬದಲಾಯಿಸಿಲ್ಲ. ಪಠ್ಯದಲ್ಲಿ ಉಪನಯನದ ಬಗ್ಗೆ ಉಲ್ಲೇಖಿಸಲಾಗಿದೆ. ಬಸವಣ್ಣ ಜನಿವಾರ ಕಿತ್ತಾಕಿ ಹೋದರು ಎಂದಿದೆ. ಇದರಲ್ಲಿ ಅವಮಾನ ಆಗುವಂತದ್ದು ಏನಿದೆ?” ಎಂದು ಸಚಿವರು ಕೇಳಿದ್ದಾರೆ.

ಇದನ್ನೂ ಓದಿ: ಪಠ್ಯಪುಸ್ತಕ ಹಗರಣ ವಿರೋಧಿಸಿ ಜೂನ್‌‌ 18ರ ಶನಿವಾರ ನಡೆಯುವ ಬೃಹತ್‌ ರ್‍ಯಾಲಿಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಭಾಗಿ

“ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕಪೋಲಕಲ್ಪಿತ ಆರೋಪಗಳನ್ನು ಬರಗೂರು ರಾಮಚಂದ್ರಪ್ಪ ಮಾಡಿದ್ದಾರೆ. ಬರಗೂರು ಮತ್ತು ಇತರರು ಆರೋಪ ಮಾಡಿರುವಂತೆ ಯಾವುದೇ ಪಠ್ಯವನ್ನು ಪುಸ್ತಕದಿಂದ ತೆಗೆದಿಲ್ಲ. ನಾರಾಯಣ ಗುರು, ಟಿಪ್ಪು, ಭಗತ್ ಸಿಂಗ್ ಸೇರಿದಂತೆ ಎಲ್ಲರ ಪಾಠಗಳು ಪುಸ್ತಕದಲ್ಲಿವೆ. ಕೆಲವು ತಪ್ಪುಗಳನ್ನಷ್ಟೇ ಪರಿಷ್ಕರಣೆ ಮಾಡಲಾಗಿದೆ” ಎಂದು ಬಿ.ಸಿ ನಾಗೇಶ್‌ ಪ್ರತಿಪಾದಿಸಿದ್ದಾರೆ.

ಸುಳ್ಳು ಹೇಳಿದ ಸಚಿವ ಬಿಸಿ ನಾಗೇಶ್‌!

ಆದರೆ ಸಚಿವ ನಾಗೇಶ್‌ ಹೇಳಿರುವುದಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದೆ. ರೋಹಿತ್‌ ಚಕ್ರತೀರ್ಥ ನೇತೃತ್ವದ ಮರು ಪರಿಷ್ಕರಣಾ ಸಮಿತಿಯು ಪಠ್ಯಪುಸ್ತಕದಲ್ಲಿ ಸಾಕಷ್ಟು ತಿದ್ದುಪಡಿಗಳನ್ನು ಮಾಡಿದೆ. ಮರು ಪರಿಷ್ಕೃತ ಪಠ್ಯ ಪುಸ್ತಕದ ‘ಪಿಡಿಎಫ್‌’ ಪ್ರತಿಗಳು ಲಭ್ಯವಾಗಿದ್ದು, ಅದರಲ್ಲಿ, ಭಗತ್‌ಸಿಂಗ್, ನಾರಾಯಣಗುರು ವಿಷಯಗಳನ್ನು ಕೈಬಿಡಲಾಗಿದೆ.

ಬಸವಣ್ಣನವರನ್ನು ಹಿಂದು ಪ್ರತಿಪಾದಕನೆಂಬಂತೆ ತಿರುಚಿ ಬರೆಯಲಾಗಿದೆ. ಅಂಬೇಡ್ಕರ್‌ರ ಪಾಠದಲ್ಲಿ ‘ಸಂವಿಧಾನ ಶಿಲ್ಪಿ’ ಎಂಬ ಪದವನ್ನು ತೆಗೆಯಲಾಗಿದೆ. ಅಲ್ಲಮ ಪ್ರಭು, ಸಾವಿತ್ರಿ ಬಾ ಪುಲೆ ಅವರ ಕುರಿತು ಏಕವಚನದಲ್ಲಿ ‘ಅವನು-ಅವಳು’ ಎಂದು ಬರೆಯಲಾಗಿದೆ. ಹಿಂದುತ್ವವಾದಿ, ಕೋಮು ದ್ವೇಷವುಳ್ಳ ಹೆಡ್ಗೆವಾರ್‌ ಅವರ ಭಾಷಣವನ್ನು ಸೇರಿಸಲಾಗಿದೆ. ಹಿಂದುಯೇತರ ದೇವರನ್ನು ‘ಗಾಡ್‌ನು’ ಎಂದು ಉಲ್ಲೇಖಿಸಲಾಗಿದೆ. ಹಿಂದುಯೇತರ ಧರ್ಮಗಳ ಬಗ್ಗೆ ಬರೆಯುವಾಗ ಕನ್ನಡದಲ್ಲಿ ‘ಧರ್ಮ’ ಎಂದು ಉಲ್ಲೇಖಿಸದೇ ‘ರಿಲಿಜಿಯನ್’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಪಠ್ಯಪುಸ್ತಕ ಹಗರಣ: ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರೂ ಟಾರ್ಗೆಟ್‌?

ಈ ಎಲ್ಲ ಕಾರಣಗಳಿಂದಾಗಿ ಮರು ಪರಿಷ್ಕೃತ ಪಠ್ಯಗಳು ಮಕ್ಕಳಲ್ಲಿ ದ್ವೇಷವನ್ನು ಬಿತ್ತಲಿದ್ದು, ತಿರುಚಿದ ಇತಿಹಾಸವನ್ನು ಬೋಧಿಸುತ್ತದೆ ಎಂದು ರಾಜ್ಯದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಚಕ್ರತೀರ್ಥ ಸಮಿತಿ ಸಿದ್ದಪಡಿಸಿದ ಪಠ್ಯಕ್ರಮಗಳನ್ನು ಕೈಬಿಡಬೇಕು ಎಂದು ಜೂನ್ 18ರ ಶನಿವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯೂ ಆಯೋಜಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...