ಮಧ್ಯಪ್ರದೇಶದ ದೇವಾಸ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ಸಾವಿಗೀಡಾದ ದಲಿತ ಯುವಕನ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಸರ್ಕಾರದ ಬೆಂಬಲವಿಲ್ಲದೆ ಇದು ಸಾಧ್ಯವಿಲ್ಲ ಎಂದು ಹೇಳಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, “ಇದು ನಾಚಿಕೆಗೇಡಿನ ಮತ್ತು ಅತ್ಯಂತ ಖಂಡನೀಯವಾಗಿದ್ದು ಇಂತಹ ಘಟನೆಗಳನ್ನು ಕಾಂಗ್ರೆಸ್ ಸಹಿಸುವುದಿಲ್ಲ” ಎಂದು ಹೇಳಿದ್ದಾರೆ. ಮಧ್ಯಪ್ರದೇಶ ಪೊಲೀಸ್
ಕಾಂಗ್ರೆಸ್ ಪಕ್ಷವು “ಬಹುಜನರ” ಹಕ್ಕುಗಳಿಗಾಗಿ ಅವರು ನ್ಯಾಯ ಪಡೆಯುವವರೆಗೆ ಹೋರಾಟವನ್ನು ಮುಂದುವರೆಸಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ಒಂದೆಡೆ, ಮಧ್ಯಪ್ರದೇಶದ ದೇವಾಸ್‌ನಲ್ಲಿ ದಲಿತ ಯುವಕನನ್ನು ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲಲಾಯಿತು. ಮತ್ತೊಂದೆಡೆ, ಒಡಿಶಾದ ಬಾಲಸೋರ್‌ನಲ್ಲಿ ಬುಡಕಟ್ಟು ಮಹಿಳೆಯರನ್ನು ಮರಗಳಿಗೆ ಕಟ್ಟಿ ಥಳಿಸಲಾಗಿದೆ. ಈ ಎರಡೂ ಘಟನೆಗಳು ದುಃಖಕರ, ನಾಚಿಕೆಗೇಡಿನ ಮತ್ತು ಅತ್ಯಂತ ಖಂಡನೀಯ,” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಬಿಜೆಪಿಯ ಮನುವಾದಿ ಚಿಂತನೆಯಿಂದಾಗಿ, ಅವರ ಆಡಳಿತದ ರಾಜ್ಯಗಳಲ್ಲಿ ಇಂತಹ ಘಟನೆಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಿವೆ. ಇವೆಲ್ಲಾ ಸರ್ಕಾರದ ಬೆಂಬಲವಿಲ್ಲದೆ ಇದು ಸಾಧ್ಯವಿಲ್ಲ. ದೇಶದ ಬಹುಜನರ ವಿರುದ್ಧದ ಇಂತಹ ಅನಾಗರಿಕತೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ. ಮಧ್ಯಪ್ರದೇಶ ಪೊಲೀಸ್
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಘಟನೆಯನ್ನು ಖಂಡಿಸಿದ್ದು, “ಬಾಬಾಸಾಹೇಬ್ ಅಂಬೇಡ್ಕರ್ ಅವರ ಅವಮಾನ ಮತ್ತು ದುರ್ಬಲ ವರ್ಗಗಳ ಮೇಲಿನ ದಬ್ಬಾಳಿಕೆಯು ಬಿಜೆಪಿಯ ಆಡಳಿತದ ಮೂಲ ಮಂತ್ರ” ಎಂದು ಆರೋಪಿಸಿದ್ದಾರೆ. ದೇವಾಸ್‌ನಲ್ಲಿ ಪೊಲೀಸ್ ಕಸ್ಟಡಿ ವೇಳೆ ದಲಿತ ಯುವಕನ ಸಾವು ಅತ್ಯಂತ ಗಂಭೀರವಾಗಿದೆ ಎಂದು ಅವರು ಹೇಳಿದರು.
ಪೊಲೀಸರ ದೌರ್ಜನ್ಯದಿಂದ ಯುವಕ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಹಿಂದೆ, ಪರ್ಭಾನಿ (ಮಹಾರಾಷ್ಟ್ರ)ಯ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಎಸಗಿ ಪೊಲೀಸ್ ಕಸ್ಟಡಿಯಲ್ಲಿ ದಲಿತ ಯುವಕನ ಸಾವಿಗೀಡಾಗಿದ್ದರು. ಬಿಜೆಪಿ ಆಡಳಿತದಲ್ಲಿ ದಲಿತರು, ಆದಿವಾಸಿಗಳು ಮತ್ತು ಶೋಷಿತರಂತಹ ದುರ್ಬಲ ವರ್ಗಗಳನ್ನು ದಮನ ಮಾಡಲು ಪೊಲೀಸರಿಗೆ ಮುಕ್ತ ಹಸ್ತ ದೊರೆತಂತಿದೆ ಎಂದು ಪ್ರಿಯಾಂಕ ಹೇಳಿದ್ದಾರೆ.
ದೇವಾಸ್ ಘಟನೆಯ ಕೆಲವೇ ಗಂಟೆಗಳ ನಂತರ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಿತು ಪಟ್ವಾರಿ ಮತ್ತು ಮಾಜಿ ಸಚಿವ ಸಜ್ಜನ್ ಸಿಂಗ್ ವರ್ಮಾ ನೇತೃತ್ವದಲ್ಲಿ ಪಕ್ಷದ ನಾಯಕರು ಘಟನೆಯ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಎಎಪಿಯಿಂದ ಅರ್ಚಕರಿಗೆ ಭತ್ಯೆ ಏರಿಕೆ ಭರವಸೆ; 17 ತಿಂಗಳ ವೇತನ ಬಿಡುಗಡೆಗೆ ಇಮಾಮ್‌ಗಳ ಒತ್ತಾಯ


