ಮಧ್ಯಪ್ರದೇಶದ ಖಜುರಾಹೊ ಪಟ್ಟಣದಲ್ಲಿ ತಮ್ಮ ಅಧಿಕೃತ ವಾಹನಗಳನ್ನು ಹಿಂದಿಕ್ಕಿದ್ದಕ್ಕಾಗಿ ದಲಿತ ಪೌರ ಕಾರ್ಮಿಕರೊಬ್ಬರನ್ನು ಪೊಲೀಸ್ ಸಿಬ್ಬಂದಿ ಥಳಿಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ದೂರುದಾರರಾದ ರೋಹಿತ್ ವಾಲ್ಮೀಕಿ ಅವರು ಜುಲೈ 18 ರಂದು ಮೋಟಾರ್ ಸೈಕಲ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಪೊಲೀಸ್ ಮತ್ತು ವಿದ್ಯುತ್ ಇಲಾಖೆಗೆ ಸೇರಿದ ಸಿಬ್ಬಂದಿಯ ವಾಹನಗಳನ್ನು ಹಿಂದಿಕ್ಕಿದ್ದರು.
“ಕೆಲವು ಪೊಲೀಸರು ತನ್ನನ್ನು ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇನೆ ಎಂದು ಆರೋಪಿಸಿ ನಿಂದಿಸಿದ್ದಾರೆ” ರೋಹಿತ್ ಜುಲೈ 20 ರಂದು ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾರೆ. “ನನ್ನ ಸಹೋದರನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಥಳಿಸಿದ್ದಾರೆ” ಎಂದು ರೋಹಿತ್ ಸಹೋದರ ಆರೋಪಿಸಿದ್ದಾರೆ.
ಪೊಲೀಸ್ ಉಪವಿಭಾಗಾಧಿಕಾರಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ಹೇಳಿದ್ದಾರೆ. ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆಯ ನಂತರ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ; ಬಿಜೆಪಿಯೇತರ ಆಡಳಿತದ ರಾಜ್ಯಗಳಿಗೆ ಬಜೆಟ್‌ನಲ್ಲಿ ತಾರತಮ್ಯ ಆರೋಪ; ಇಂಡಿಯಾ ಬಣದಿಂದ ಪ್ರತಿಭಟನೆ


