ಇಬ್ಬರು ಸೇನಾ ಅಧಿಕಾರಿಗಳು ಮತ್ತು ಅವರ ಇಬ್ಬರು ಸ್ನೇಹಿತೆಯರ ಮೇಲೆ ಹಲ್ಲೆ ನಡೆಸಿದ ಸುಮಾರು ಆರು ಮಂದಿಯ ಗುಂಪು, ಒಬ್ಬರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬುಧವಾರ ಮುಂಜಾನೆ ಮಧ್ಯ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಇಂದೋರ್ ನಗರದಿಂದ 50 ಕಿಲೋಮೀಟರ್ ದೂರದಲ್ಲಿರುವ ಮೋವ್-ಮಂಡ್ಲೇಶ್ವರ ರಸ್ತೆಯ ಪ್ರವಾಸಿ ತಾಣವಾದ ಜಾಮ್ ಗೇಟ್ ಬಳಿ ಈ ಘಟನೆ ನಡೆದಿದೆ.
ಸೇನಾ ಅಧಿಕಾರಿಗಳು ಇಂದೋರ್ ಜಿಲ್ಲೆಯ ಮೊವ್‌ನಲ್ಲಿರುವ ಇನ್‌ಫೆಂಟ್ರಿ ಸ್ಕೂಲ್‌ನಲ್ಲಿ ಯಂಗ್ ಆಫೀಸರ್ಸ್ ಕೋರ್ಸ್‌ನಲ್ಲಿ ಭಾಗವಹಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಹಿತಿಕಾ ವಾಸಲ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಂಗಳವಾರ ರಾತ್ರಿ, ಸೇನಾ ಸಿಬ್ಬಂದಿ ಮತ್ತು ಅವರ ಸ್ನೇಹಿತರು ಜಾಮ್ ಗೇಟ್ ಬಳಿಯ ಅಹಲ್ಯಾ ಗೇಟ್‌ಗೆ ತೆರಳಿದ್ದರು. ಮುಂಜಾನೆ 2.30 ರ ಸುಮಾರಿಗೆ ಒಬ್ಬರು ಅಧಿಕಾರಿ ಮತ್ತು ಅವರ ಸ್ನೇಹಿತೆ ಕಾರಿನಲ್ಲಿದ್ದಾಗ ಆರು ಜನ ಪುರುಷರ ಗುಂಪು ದಾಳಿ ನಡೆಸಿದೆ. ಈ ವೇಳೆ ಗದ್ದಲ ಕೇಳಿ ಪಕ್ಕದ ಗುಡ್ಡ ಹತ್ತಿದ್ದ ಇನ್ನೊಬ್ಬರು ಅಧಿಕಾರಿ ಮತ್ತು ಅವರ ಸ್ನೇಹಿತೆ ಧಾವಿಸಿ ಬಂಧಿದ್ದಾರೆ.
ಈ ವೇಳೆ ಕಾರಿನಲ್ಲಿದ್ದ ಇಬ್ಬರನ್ನು ಬಂದೂಕು ತೋರಿಸಿ ಬಂಧಿಸಿಟ್ಟಿದ್ದ ದುಷ್ಕರ್ಮಿಗಳು, ಇನ್ನಿಬ್ಬರಿಗೆ 10 ಲಕ್ಷ ರೂಪಾಯಿ ತರುವಂತೆ ಸೂಚಿಸಿದ್ದಾರೆ. ಹಣ ತರಲು ಕರೆ ಮಾಡುತ್ತೇನೆ ಹೇಳುತ್ತೇನೆ ಎಂದ ಅಧಿಕಾರಿ, ತನ್ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಮೊವ್‌ನಿಂದ ತಂಡ ಕಳಿಸಿದ್ದಾರೆ.
ಪೊಲೀಸರು ಬಂದು ಸ್ಥಳಕ್ಕೆ ತಲುಪುವಷ್ಟರಲ್ಲಿ ದುಷ್ಕರ್ಮಿಗಳು ಒಬ್ಬರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿಲಾಗಿದೆ. ಪೊಲೀಸ್ ವಾಹನವನ್ನು ನೋಡಿದ ದುಷ್ಕರ್ಮಿಗಳು ಓಡಿ ಹೋಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ : ವೀಡಿಯೊ | ಉತ್ತರ ಪ್ರದೇಶದ ಹೆದ್ದಾರಿಯಲ್ಲಿ ಮಹಿಳೆಯ ಶಿರಚ್ಛೇದಿತ ಬೆತ್ತಲೆ ಶವ!


