ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತಮಿಳುನಾಡಿನ ಮದುರೈಯಲ್ಲಿ ನಿರ್ಮಿಸಲಾಗುತ್ತಿರುವ ಏಮ್ಸ್ (AIIMS) ಯೋಜನೆ ಕಾಮಗಾರಿಯ ಬಗ್ಗೆ ಇತ್ತೀಚೆಗೆ ಮಾಹಿತಿ ಹಂಚಿಕೊಂಡು, ಏಮ್ಸ್‌ನ 95% ಕಾಮಗಾರಿಗಳು ಪೂರ್ಣಗೊಂಡಿದೆ ಎಂದು ಹೇಳಿಕೆ ನೀಡಿದ್ದರು.
ಅವರು ಸೆಪ್ಟೆಂಬರ್ 22ರ ಗುರುವಾರದಂದು ಮದುರೈ ಮತ್ತು ಶಿವಗಂಗಾಗೆ ಎರಡು ದಿನಗಳ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಧುರೈನಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ, “ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ 95% ರಷ್ಟು ಕೆಲಸ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಇದನ್ನು ಪ್ರಧಾನಿಯವರು ಜನರಿಗೆ ಅರ್ಪಿಸಲಿದ್ದಾರೆ” ಎಂದು ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜೆ.ಪಿ ನಡ್ಡ ಅವರು ಹೇಳಿಕೆಯನ್ನು ಬಿಜೆಪಿ ನಾಯಕರು ಹಾಗೆಯೆ ವೈರಲ್ ಕೂಡಾ ಮಾಡಿದ್ದರು. AIIMS ನ ಈ ಕಾಮಗಾರಿಯು ಮದುರೈ ಬಳಿಯ ತೋಪ್ಪೂರ್‌ನಲ್ಲಿ ನಡೆಯಬೇಕಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿಯು ವೈರಲ್ ಆಗುತ್ತಿದ್ದಂತೆ ವಿರೋಧ ಪಕ್ಷಗಳು ಜೆಪಿ ನಡ್ಡಾ ಅವರು ಹೇಳಿರುವ ಪ್ರದೇಶಕ್ಕೆ ತೆರಳಿ ನಿಜಾಂಶವೇನು ಎಂಬುವುದನ್ನು ಹೊರಗೆಡವಿದ್ದಾರೆ.
For the establishment of AIIMS in Madurai, Rs 1,264 crore has been allotted.
95% of the construction is complete, and it will soon be dedicated to the nation.
– Shri @JPNadda Ji pic.twitter.com/mkj94T3gZr
— Sunil Deodhar (@Sunil_Deodhar) September 22, 2022
ಇದನ್ನೂಓದಿ: ಫ್ಯಾಕ್ಟ್‌ಚೆಕ್: ಶ್ರೀರಂಗಪಟ್ಟಣದ ಸೇತುವೆಯ ಬಳಿ ಮತ್ಸ್ಯಕನ್ಯೆ ಬಂದಿದ್ದು ನಿಜವೇ?
ಜೆ.ಪಿ.ನಡ್ಡಾ ಹೇಳಿಕೆ ಎಷ್ಟು ಸತ್ಯ, ಎಷ್ಟು ಸುಳ್ಳು ಎಂದು ವಾಸ್ತವವನ್ನು ಪರಿಶೀಲಿಸೋಣ
ಫ್ಯಾಕ್ಟ್‌ಚೆಕ್ :
ಮದುರೈನ ಏಮ್ಸ್‌ನ 95% ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿಕೆ ಬೆನ್ನಲ್ಲೆ ಕಾಂಗ್ರೆಸ್ ಸಂಸದ ಮಣಿಕ್ಕಂ ಠಾಗೋರ್ ಕಾಮಗಾರಿ ಸ್ಥಳಕ್ಕೆ ತೆರಳಿ ವಿವರಗಳನ್ನು ಸಂಗ್ರಹಿಸಿ, ವಿಡಿಯೋ ಚಿತ್ರಗಳನ್ನೂ ಟ್ವೀಟ್ ಮಾಡಿದ್ದಾರೆ. ಆದರೆ ಅಲ್ಲಿ ಆಸ್ಪತ್ರೆ ಕಟ್ಟಡ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ-ಎಂ ಮತ್ತು ಕಾಂಗ್ರೆಸ್‌ನ ನಾಯಕರು ಜೆಪಿ ನಡ್ಡಾ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮದುರೈ ಕ್ಷೇತ್ರದ ಸಂಸದ ಸು ವೆಂಕಟೇಶನ್ ಮತ್ತು ವಿರುದುನಗರ ಸಂಸದ, ಕಾಂಗ್ರೆಸ್ ನಾಯಕ ಬಿ. ಮಾಣಿಕಂ ಟ್ಯಾಗೋರ್ ಅವರು ಏಮ್ಸ್ ನಿರ್ಮಾಣವಾಗಬೇಕಿರುವ ಜಾಗದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
பாஜக ஆட்சி
புல்புல் பறவைகள் மூலம் 95 சதவிகித வேலையை கட்டி முடித்த மதுரை எய்ம்ஸ் கட்டிதத்தை தேடி நானும் @manickamtagore போனோம்.கீழ்வானம் வரை மதுரை கிழவி வெற்றிபோட்டு துப்பிய எச்சிலால் சிவந்து கிடந்தது நிலம். pic.twitter.com/dB8GeMWrzf
— Su Venkatesan MP (@SuVe4Madurai) September 23, 2022
ತಮಿಳುನಾಡಿಗೆ ಭೇಟಿ ನೀಡಿದ್ದ ನಡ್ಡಾ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸುತ್ತಾ,“ಏಮ್ಸ್ ಯೋಜನೆಗೆ 1,264 ಕೋಟಿ ರೂ.ಗಳು ಮಂಜೂರಾಗಿದೆ ಎಂದು ಹೇಳಲು ಹರ್ಷಪಡುತ್ತೇನೆ. ಇಂದು 95%ದಷ್ಟು ಕಾಮಗಾರಿ ಪೂರ್ಣಗೊಂಡಿದೆ. ಶೀಘ್ರವೇ ಪ್ರಧಾನಿ ಅದನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ”
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೇಂದ್ರ ಶಿಕ್ಷಣ ಸಚಿವಾಲಯ 5 ಲಕ್ಷ ಉಚಿತ ಲ್ಯಾಪ್‌ಟಾಪ್ ಹಂಚುತ್ತಿದೆ ಎಂಬ ವಾಟ್ಸಪ್ ಸಂದೇಶ ನಿಜವೇ?
“ಸಾಂಕ್ರಾಮಿಕ ರೋಗಗಳ ವಿಭಾಗಕ್ಕೆ ಹೆಚ್ಚುವರಿ 164 ಕೋಟಿ ರೂ.ಗಳನ್ನು ಮಂಜೂರುಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ 750 ಹಾಸಿಗೆಗಳು ಹಾಗೂ ಇವುಗಳ ಪೈಕಿ 250 ಐಸಿಯು ಬೆಡ್‍ಗಳು ಇರುತ್ತವೆ” ಎಂದೂ ನಡ್ಡಾ ಹೇಳಿದ್ದರು. ಆದರೆ ನಡ್ಡಾ ಮಾತುಗಳನ್ನು ಒಪ್ಪದ ಕಾಂಗ್ರೆಸ್ ಸಂಸದ ಠಾಗೋರ್ ಶುಕ್ರವಾರ ಸರಣಿ ಟ್ವೀಟ್ ಮಾಡಿದ್ದಾರೆ.
We went to the Thoppur AIIMS Madurai site … we found nothing . #MaduraiAIIMS pic.twitter.com/9CBxHEs6Mt
— Manickam Tagore .B🇮🇳✋மாணிக்கம் தாகூர்.ப (@manickamtagore) September 23, 2022
‘‘ನಡ್ಡಾ, ಅವರು ‘ತಮಿಳುನಾಡಿನ ಮದುರೆಯ AIIMS ನ ಕೆಲಸ 95% ಮುಗಿದಿದೆ, ಸದ್ಯವೇ ಪ್ರಧಾನಿಯವರು ಅದನ್ನು ಉದ್ಘಾಟಿಸಲಿದ್ದಾರೆ’ ಎಂದು ಘೋಷಿಸಿದರು. ಹೊಸ ಏಮ್ಸ್ ನೋಡಲು ಜನ ಓಡಿದರು. ನೋಡುವುದೇನು 2019 ರಲ್ಲಿ ಮೋದಿ ಸಾಹೇಬರು ಹಾಕಿದ ಅಡಿಗಲ್ಲು ಚಿಗುರಿ ಹೆಮ್ಮರವಾಗಿಯೇ ಇಲ್ಲ. ಅಲ್ಲಿರುವುದು ಅಡಿಗಲ್ಲು ಮಾತ್ರ” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.
“ಪ್ರೀತಿಯ ನಡ್ಡಾಜೀ, ಮದುರೈ ಏಮ್ಸ್ 95% ಕಾಮಗಾರಿ ಪೂರ್ಣಗೊಂಡಿದ್ದಕ್ಕಾಗಿ ಧನ್ಯವಾದಗಳು. ನಾನು ತೊಪ್ಪೂರು ಸೈಟ್‍ನಲ್ಲಿ ಒಂದು ಗಂಟೆ ಹುಡುಕಿದೆ, ಆದರೆ ಏನೂ ದೊರೆಯಲಿಲ್ಲ, ಯಾರೋ ಕಟ್ಟಡವನ್ನು ಕದ್ದಿರಬೇಕು” ಎಂದು ಮಾಣಿಕಂ ಟ್ಯಾಗೋರ್ ವ್ಯಂಗ್ಯವಾಡಿದ್ದಾರೆ.
Dear @JPNadda ji,
Thank you for the 95% Completed #MaduraiAIIMS
I and Madurai MP @SuVe4Madurai searched for one hour in the Thoppur Site and found nothing.
Someone had stolen the building…
Regards pic.twitter.com/aIOacIkpXc— Manickam Tagore .B🇮🇳✋மாணிக்கம் தாகூர்.ப (@manickamtagore) September 23, 2022
ಇದನ್ನೂ ಓದಿ: ಫ್ಯಾಕ್ಟ್‌ಚೆಕ್-ಇದು ತಮಿಳುನಾಡೂ ಅಲ್ಲ, ಧ್ವಜ ಬಿಜೆಪಿಯದ್ದೂ ಅಲ್ಲ; ಎಡಿಟ್ ಚಿತ್ರ ಹಂಚಿದ ಸಿಟಿ ರವಿ
“ನಡ್ಡಾ ಅವರು ಮಧುರೈನಲ್ಲಿ ಮಾತನಾಡಿದ್ದಾರೆ ಹಾಗೂ 95% ದಷ್ಟು ಕಾಮಗಾರಿ ಮುಗಿದಿದೆ ಎಂದಿದ್ದಾರೆ. ಈ ರೀತಿ ಕಾಮಗಾರಿ ಪೂರ್ಣದ ಬಗ್ಗೆ ಸುಳ್ಳು ಹೇಳಿರುವುದು ಅಚ್ಚರಿ ಮೂಡಿಸಿದೆ. ಇದು ಅವರು ತಮಿಳುನಾಡಿನ ಜನರಿಗೆ ವಂಚಿಸುವ ವಿಧಾನವಾಗಿದೆ” ಎಂದು ವೀಡಿಯೋವೊಂದರಲ್ಲಿ ಠಾಗೋರ್ ಹೇಳಿದ್ದಾರೆ.

ಗೂಗಲ್ ಸಹಾಯದಿಂದ ಗೂಗಲ್ ಮ್ಯಾಪ್ ಮೂಲಕ ಸ್ಥಳ ಪರಿಶೀಲನೆಯನ್ನು ಮಾಡಿದಾಗ, ನಡ್ಡಾ ಪ್ರಸ್ತಾಪಿಸಿದ ನಿವೇಶನದಲ್ಲಿ ಯಾವುದೇ ಕಟ್ಟಡ ಕಾಮಗಾರಿಗಳು ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ತಮಿಳುನಾಡಿಗೆ ಭೇಟಿ ನೀಡಿದ್ದ ವೇಳೆ ನಡ್ಡಾ ಮದುರೈಯಲ್ಲಿ ನಿರ್ಮಿಸಲಾಗುತ್ತಿರುವ ಏಮ್ಸ್ (AIIMS) ಯೋಜನೆ ಕಾಮಗಾರಿ 95% ಪೂರ್ಣಗೊಂಡಿದೆ ಎಂದು ಸುಳ್ಳು ಹೇಳಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


