Homeದಿಟನಾಗರಫ್ಯಾಕ್ಟ್‌ಚೆಕ್‌: ಶ್ರೀರಂಗಪಟ್ಟಣದ ಸೇತುವೆಯ ಬಳಿ ಮತ್ಸ್ಯಕನ್ಯೆ ಬಂದಿದ್ದು ನಿಜವೇ?

ಫ್ಯಾಕ್ಟ್‌ಚೆಕ್‌: ಶ್ರೀರಂಗಪಟ್ಟಣದ ಸೇತುವೆಯ ಬಳಿ ಮತ್ಸ್ಯಕನ್ಯೆ ಬಂದಿದ್ದು ನಿಜವೇ?

- Advertisement -
- Advertisement -

ಇತಿಹಾಸ ಪ್ರಸಿದ್ದ ಶ್ರೀರಂಗಪಟ್ಟಣದ ಹಳೇ ಸೇತುವೆಯ ಬಳಿ ಮತ್ಸ್ಯಕನ್ಯೆಯರು ಕಂಡು ಬಂದಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ಸೇತುವೆಯೊಂದರ ಕೆಳಗೆ ಕಲ್ಲುಗಳ ಮೇಲೆ ಕುಳಿತಿರುವ ಮನುಷ್ಯನ ಶರೀರವಿರುವವ ಮೀನಿನ ಬಾಲದಂತಿರುವ ಜೀವಿಯೊಂದು ಕಲ್ಲುಗಳ ಮೇಲೆ ನೆಗೆಯುತ್ತಾ ಮರೆಯಾಗುವ ದೃಶ್ಯವು ವೈರಲ್ ವಿಡಿಯೊದಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನಿಜವಾಗಿಯೂ ಈ ದೃಶ್ಯಗಳು ಐತಿಹಾಸಿಕ ನಗರಿ ಶ್ರೀರಂಗಪಟ್ಟಣದ ಸೇತುವೆಯ ಬಳಿ ಸೆರೆಯಾಗಿವೆಯೆ? ಈ ರೀತಿಯ ಮತ್ಸ್ಯಕನ್ಯೆ ಇರುವುದು ನಿಜವೇ ಎಂಬುವುದನ್ನು ಫ್ಯಾಕ್ಟ್‌ಚೆಕ್ ಮಾಡೋಣ.

ಮತ್ಸ್ಯಕನ್ಯೆಯರ ವಿಡಿಯೊ ಎಂದು ಪ್ರತಿಪಾದಿಸಿ ವೈರಲ್ ಆಗಿರುವ ಈ ವಿಡಿಯೊ ಕುರಿತ ವಾಸ್ತವ ಏನೆಂದು ತಿಳಿಸುವಂತೆ ನಾನುಗೌರಿ.ಕಾಂ ವಾಟ್ಸಾಪ್‌‌ಗೆ ಹಲವಾರು ಮನವಿಗಳು ಬಂದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಫ್ಯಾಕ್ಟ್‌ಚೆಕ್

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನು ‘ಜೆಜೆಪಿಡಿ ಪ್ರೊಡಕ್ಷನ್ಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ.

ವೀಡಿಯೊ ವಿವರಣೆಯಲ್ಲಿ, “ಇವು ಮನರಂಜನೆಗಾಗಿ ನಾವು ರಚಿಸಿದ ಸಾಮಾನ್ಯ ವೀಡಿಯೊಗಳಾಗಿವೆ. ಇಲ್ಲಿನ ಎಲ್ಲಾ ಚಿತ್ರಗಳು ಕಾಲ್ಪನಿಕವಾಗಿವೆ. CGI ವಿಡಿಯೋ (ಕಂಪ್ಯೂಟರ್ ರಚಿತ ಚಿತ್ರ) 3D ನಲ್ಲಿ ಮತ್ಸ್ಯಕನ್ಯೆಯ ವಿನ್ಯಾಸ ಮತ್ತು ರಚನೆ: ಜೋಕ್ವಿನ್ ಪೆರೆಜ್ 3D ಅನಿಮೇಷನ್ ಮತ್ತು VFX ಆವೃತ್ತಿ” ಎಂದು ಹೇಳಿದೆ.

ಆದ್ದರಿಂದ, ಶ್ರೀರಂಗಪಟ್ಟಣದಲ್ಲಿ ಮತ್ಸ್ಯಕನ್ಯೆ ಎಂಬ ವೈರಲ್ ವಿಡಿಯೊ ನಿಜವಲ್ಲ. ಇದು 3D ಡಿಜಿಟಲ್‌ನಿಂದ ರಚಿಸಲಾದ ವಿಡಿಯೊ ಎಂಬುವುದು ಖಚಿತವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೊ ದೃಶ್ಯಗಳು 3D ಡಿಜಿಟಲ್ ಮೂಲಕ ರಚಿಸಲ್ಪಟ್ಟ ಕಾಲ್ಪನಿಕ ದೃಶ್ಯಗಳಾಗಿವೆ. ಹಾಗಾಗಿ ಶ್ರೀರಂಗಪಟ್ಟಣದಲ್ಲಿ ಜೀವಂತ ಮತ್ಸ್ಯಕನ್ಯೆಯರ ವಿಡಿಯೋ ದೃಶ್ಯಗಳು ಎಂದು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತದೆ. ಈ ಹಿಂದೆಯೂ ಇದೇ ರೀತಿಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ಅಂಬೇಡ್ಕರ್‌‌ ಸ್ವಾಮಿಜಿಯ ಆಶಿರ್ವಾದ ಪಡೆದಿಲ್ಲ; ಚಿತ್ರದಲ್ಲಿ ಇರುವುದು ಬಾಬಾ ಸಾಹೇಬ್ ಅಲ್ಲ

ಮತ್ತೊಂದು ವಿಡಿಯೊ ಕೂಡಾ ಮತ್ಸ್ಯಕನ್ಯೆ ಎಂದು ವೈರಲ್!

ಮೇಲಿನ ವಿಡಿಯೊ ಮಾತ್ರವಲ್ಲದೆ ಮತ್ತೊಂದು ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿದೆ. ಈ ವಿಡಿಯೊದಲ್ಲಿ ವಿಚಿತ್ರ ಪ್ರಾಣಿಯ ದೃಶ್ಯವೊಂದು ಕಂಡುಬರುತ್ತದೆ. ಈ ವಿಡಿಯೊವನ್ನು ಕೂಡಾ ಪರಿಶೀಲಿಸಿದಾಗ ಇದು 3D ದೃಶ್ಯಗಳ ಮೂಲಕ ರಚಿತವಾದ ವಿಡಿಯೊ ಎಂದು ತಿಳಿದು ಬಂದಿದೆ.

ಫ್ಯಾಕ್ಟ್‌ಚೆಕ್

ಈ ವೀಡಿಯೊ ಮೂರು ವಿಭಿನ್ನ ಕ್ಲಿಪ್‌ಗಳನ್ನು ಹೊಂದಿದೆ. ಎಲ್ಲಾ ಮೂರು ಕ್ಲಿಪ್‌ಗಳನ್ನು ‘ಜೆಜೆಪಿಡಿ ಪ್ರೊಡಕ್ಷನ್ಸ್’ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ನೋಡಬಹುದು. ವೀಡಿಯೊ ವಿವರಣೆಯಲ್ಲಿ, “ಇವು ಮನರಂಜನೆಗಾಗಿ ರಚಿಸಿದ ಸಾಮಾನ್ಯ ವೀಡಿಯೊಗಳಾಗಿವೆ. ತೋರಿಸಿರುವ ಎಲ್ಲಾ ಚಿತ್ರಗಳು ಕಾಲ್ಪನಿಕವಾಗಿವೆ” ಎಂದು ಹೇಳಿದೆ.

ಇದೇ ಚಾನೆಲ್‌ನಲ್ಲಿನ ಮತ್ತೊಂದು ವೀಡಿಯೊ ಈ ವಿಡಿಯೊಗಳ ಮೇಕಿಂಗ್ ಪ್ರಕ್ರಿಯೆಯನ್ನು ತೋರಿಸುತ್ತದೆ.

ಪೋಸ್ಟ್ ಮಾಡಿದ ವೀಡಿಯೊದಲ್ಲಿರುವ ಜೀವಿ ನಿಜವಾದದ್ದಲ್ಲ. ‘ಜೆಜೆಪಿಡಿ ಪ್ರೊಡಕ್ಷನ್ಸ್’ನ ಯೂಟ್ಯೂಬ್ ಚಾನೆಲ್‌ನಲ್ಲಿ, ವೀಡಿಯೊವನ್ನು ಕಂಪ್ಯೂಟರ್-ರಚಿತ (ಸಿಜಿಐ) ವೀಡಿಯೊ ಎಂಬ ವಿವರಣೆಯೊಂದಿಗೆ ನೋಡಬಹುದು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೇಂದ್ರ ಶಿಕ್ಷಣ ಸಚಿವಾಲಯ 5 ಲಕ್ಷ ಉಚಿತ ಲ್ಯಾಪ್‌ಟಾಪ್ ಹಂಚುತ್ತಿದೆ ಎಂಬ ವಾಟ್ಸಪ್‌ ಸಂದೇಶ ನಿಜವೇ?

ಒಟ್ಟಾರೆಯಾಗಿ ಹೇಳುವುದಾದರೆ 3D ತಂತ್ರಜ್ಞಾನದಿಂದ ರಚಿಸಿದ ವಿಡಿಯೊವನ್ನು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ಸ್ಯಕನ್ಯೆಯರ ನೈಜ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ. ಅಲ್ಲದೆ ವಾಸ್ತವವಾಗಿ ಮತ್ಸ್ಯಕನ್ಯೆ ಎಂಬುವುದು ಕಾಲ್ಪನಿಕ ಜೀವಿಯಾಗಿದ್ದು, ಅಂತಹ ಒಂದು ಜೀವಿ ಇದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ.

ಹಾಗಾಗಿ ಮನರಂಜನೆಗಾಗಿ ಮಾಡಲಾದ ವಿಡಿಯೊವನ್ನು ಕೆಲವರು ನಿಜವೆಂದು ನಂಬಿ ವಿಡಿಯೊ ವೈರಲ್ ಮಡಿದ್ದಾರೆ. ಆದರೆ ಇದು ಯಾವುದೂ ನಿಜವಾದ ದೃಶ್ಯಗಳಲ್ಲ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...