Homeದಿಟನಾಗರಫ್ಯಾಕ್ಟ್‌ಚೆಕ್: ಕೇಂದ್ರ ಶಿಕ್ಷಣ ಸಚಿವಾಲಯ 5 ಲಕ್ಷ ಉಚಿತ ಲ್ಯಾಪ್‌ಟಾಪ್ ಹಂಚುತ್ತಿದೆ ಎಂಬ ವಾಟ್ಸಪ್‌ ಸಂದೇಶ...

ಫ್ಯಾಕ್ಟ್‌ಚೆಕ್: ಕೇಂದ್ರ ಶಿಕ್ಷಣ ಸಚಿವಾಲಯ 5 ಲಕ್ಷ ಉಚಿತ ಲ್ಯಾಪ್‌ಟಾಪ್ ಹಂಚುತ್ತಿದೆ ಎಂಬ ವಾಟ್ಸಪ್‌ ಸಂದೇಶ ನಿಜವೇ?

- Advertisement -
- Advertisement -

“ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ಉಚಿತ ಲ್ಯಾಪ್‌ಟಾಪ್‌ಗಳನ್ನು (Free Laptop) ವಿತರಿಸುತ್ತಿದ್ದು, ಅದಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ” ಎಂದು ವಾಟ್ಸಾಪ್‌ನಲ್ಲಿ ಸಂದೇಶವೊಂದು ವೈರಲ್ ಆಗುತ್ತಿದೆ. ಈ ಸಂದೇಶದ ಜೊತೆಗೆ ಲಿಂಕ್‌ ಕೂಡಾ ಇದ್ದು, ಲಿಂಕ್‌ನಲ್ಲಿ, “ಭಾರತ ಸರ್ಕಾರ | ಶಿಕ್ಷಣ ಸಚಿವಾಲಯ” ಎಂಬ ಬರಹದೊಂದಿಗೆ ಲಾಷ್ಟ್ರ ಲಾಂಛನವಾದ ಅಶೋಕ ಸ್ತಂಭದ ಸಿಂಹಗಳ ಚಿತ್ರವು ಕಾಣುತ್ತದೆ.

ಮತ್ತೊಂದು ಸಂದೇಶದಲ್ಲಿ ಕೊರೊನಾ ಕಾರಣಕ್ಕೆ ಆನ್‌ಲೈನ್ ತರಗತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ರೂಪಿಸಿದ್ದು ದೇಶಾದ್ಯಂತ ಎಲ್ಲಾ ಜನರಿಗೆ 5 ಲಕ್ಷ ಉಚಿತ ಲ್ಯಾಪ್‌ಟಾಪ್‌ಗಳನ್ನು ಒದಗಿಸಲು ಮುಂದಾಗಿದೆ ಎಂಬ ಶೀರ್ಷಿಕೆಯೊಂದಿಗೆ ವಾಟ್ಸಾಪ್‌ ಮತ್ತು  ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಆದರೆ, ಕೇಂದ್ರ ಸರ್ಕಾರ ನಿಜವಾಗಿಯೂ ಅಂತಹ ಯೋಜನೆಯನ್ನು ಘೋಷಿಸಿದೆಯೇ? ವೈರಲ್‌ ಸಂದೇಶದ ಸತ್ಯಾಸತ್ಯತೆ ಏನು ಎಂಬುವುದನ್ನು ಪರಿಶೀಲಿಸೋಣ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ವೆಬ್‌ಸೈಟ್‌ ಅನ್ನು ಸರ್ಚ್‌ ಮಾಡಿ ವೈರಲ್ ಪೋಸ್ಟ್‌ನಲ್ಲಿ ಇರುವ ಯೋಜನೆಯನ್ನು ಕುರಿತು ಪರಿಶೀಲಿಸಿದಾಗ ಕೆಂದ್ರ ಸರ್ಕಾರ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಜಾರಿ ಮಾಡಿದೆ ಎನ್ನುವ ಬಗ್ಗೆ ಯಾವ ಸುಳಿವು ಲಭ್ಯವಾಗಿಲ್ಲ.

ವಾಟ್ಸಾಪ್ ಸಂದೇಶದಲ್ಲಿ ಲಭ್ಯವಾಗಿರುವ ಲಿಂಕ್‌ಅನ್ನು ಪರಿಶೀಲಿಸಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿದಾಗ ಒಂದು ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ನಿಮ್ಮ ಹೆಸರನ್ನು ದಾಖಲಿಸುವಂತೆ ಕೇಳುತ್ತದೆ. ಅದನ್ನು ದಾಖಲಿಸಿ ಮುಂದುವರೆದರೆ, “ಪರಿಶೀಲನೆಯ ನಂತರ, ಉಚಿತ ಲ್ಯಾಪ್‌ಟಾಪ್ ಪಡೆಯಲು ನೀವು ಅರ್ಹತೆ ಪಡೆದಿದ್ದೀರಿ” ಎಂದು ಹೇಳಿ ಕೆಳಗಿನ ಮೂರು ಷರತ್ತನ್ನು ಇಟ್ಟು, ಅದನ್ನು ಪೂರೈಸುವಂತೆ ಕೇಳತ್ತದೆ.

  1. WhatsApp ನಲ್ಲಿ 5 ಗುಂಪುಗಳು ಅಥವಾ 15 ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಿ (ಕೆಳಗಿನ “SHARE” ಐಕಾನ್ ಮೇಲೆ ಕ್ಲಿಕ್ ಮಾಡಿ).
  2. ಶೇರ್‌ ಮಾಡಿದಾಗ ಹಸಿರು ಬಾಕ್ಸ್‌ ಭರ್ತಿಯಾಗಿ ಶಿಕ್ಷಣ ಇಲಾಖೆ ಪುಟ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ.
  3. ಇದರ ದೃಢೀಕರಣವನ್ನು ನೀವು 15 ನಿಮಿಷಗಳಲ್ಲಿ SMS ಮೂಲಕ ಪಡೆಯುತ್ತೀರಿ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ಚಂದ್ರು ಹತ್ಯೆ ಕುರಿತು ಸುಳ್ಳು ಹೇಳಿದ ಗೃಹ ಸಚಿವ; ಪ್ರಚಾರ ಮಾಡಿದ ಬಲಪಂಥೀಯ ಟ್ರೋಲ್ ಪೇಜ್

ಈ ಹಂತಗಳು ಮುಗಿದ ನಂತರ, ಅರ್ಜಿದಾರರ ವೈಯುಕ್ತಿಕ ವಿವರಗಳ್ನು ಕೇಳಲು ಪ್ರಾರಂಭಿಸುತ್ತದೆ.

ವಾಸ್ತವವಾಗಿ ಯಾವುದೇ ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ವಿವರವನ್ನು ಕೇಳಲಾಗುತ್ತದೆ. ಆದರೆ ಯೋಜನೆ ಬಗ್ಗೆ ಇತರೆ 5 ವಾಟ್ಸಾಪ್ ಗುಂಪುಗಳಿಗೆ ಹಂಚಿಕೆ ಮಾಡಿ ಎಂದು ಕೇಳುವುದಿಲ್ಲ. ಹಸಿರು ಬಾಕ್ಸ್‌ ಭರ್ತಿ ಆದ ನಂತರ ಶಿಕ್ಷಣ ಇಲಾಖೆ ಪುಟ ಸ್ವಯಂ ಚಾಲಿತವಾಗಿ ತೆರೆದುಕೊಳ್ಳುತ್ತದೆ ಎಂಬ ನಿಯಮ ಇರುವುದಿಲ್ಲ.

ಈ ಎಲ್ಲಾ ವಿಚಾರಗಳನ್ನು ಗಮನಿಸಿದಾಗಲೇ ಇದು ಕೇಂದ್ರ ಸರ್ಕಾರದ ಯೋಜನೆ ಅಲ್ಲ ಎಂದು ಖಚಿತವಾಗುತ್ತದೆ.

ಅಷ್ಟೆ ಅಲ್ಲದೆ, ವೈರಲ್ ಸಂದೇಶದ ಬಗ್ಗೆ ತನಿಖೆ ನಡೆಸಿದ ಪಿಐಬಿ ಫ್ಯಾಕ್ಟ್ ಚೆಕ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದು, ಪ್ರಧಾನಿ ಉಚಿತ ಲ್ಯಾಪ್‌ಟಾಪ್  ವಿತರಣಾ ಯೋಜನೆಯಡಿ ಎಲ್ಲರಿಗೂ ಉಚಿತ ಲ್ಯಾಪ್‌ಟಾಪ್ ನೀಡಲಾಗುತ್ತಿದೆ ಎಂದು ಸಂದೇಶದಲ್ಲಿ ಹೇಳಲಾಗುತ್ತಿದೆ. ಆದರೆ ಇದು ನಕಲಿ ಎಂದು ಪಿಐಬಿ ಹೇಳಿದೆ.

ಇಷ್ಟೆ ಅಲ್ಲದೆ,️ ಇಂತಹ ನಕಲಿ ಸಂದೇಶಗಳ ಬಗ್ಗೆ ಎಚ್ಚರದಿಂದಿರಿ ಎಂದು ಪಿಐಬಿ ಹೇಳಿದ್ದು, “ಇವುಗಳನ್ನು ಫಾರ್ವರ್ಡ್ ಮಾಡಬೇಡಿ/ಶೇರ್ ಮಾಡಬೇಡಿ ಹಾಗೂ️ ಅಂತಹ ಲಿಂಕ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ” ಎಂದು ಹೇಳಿದೆ.

ಕೇಂದ್ರ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್ ಫೋನ್ ನೀಡುತ್ತಿದೆ ಎಂದು ಈ ಹಿಂದೆಯೂ ಇಂತಹದೇ ಪೋಸ್ಟ್‌  ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದು ನಕಲಿ ಎಂದು ಏನ್‌ ಸುದ್ದಿ.ಕಾಂ ಫ್ಯಾಕ್ಟ್‌ಚೆಕ್ ಮಾಡಿ ಅದನ್ನು ನಕಲಿ ಎಂದು ನಿರೂಪಿಸಿತ್ತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಹಲಾಲ್‌‌ ಮಾಂಸ ವಿಷಕಾರಿಯೆ? ಬಜರಂಗದಳದ ಈ ಪೋಸ್ಟರ್‌‌‌ನಲ್ಲಿರುವ ಸುಳ್ಳುಗಳೇನು?

ಅದನ್ನು ಓದುಗರು ಇಲ್ಲಿ ನೋಡಬಹುದು. ಈ ಜಾಹೀರಾತನ್ನು ನೀವು ಎಲ್ಲಾದರೂ ನೋಡಿದ್ದರೆ ಅಥವಾ ವಾಟ್ಸಾಪ್‌ನಲ್ಲಿ ನಿಮಗೆ ಬಂದಿದ್ದರೆ, ಅದನ್ನು ನಂಬಬೇಡಿ ಎಂದು ಪಿಐಬಿ ಎಚ್ಚರಿಸಿದೆ. ಅದರಲ್ಲಿ ನೀಡಿರುವ ಸಂಖ್ಯೆಗೆ ಯಾವುದೇ SMS ಕಳುಹಿಸಬೇಡಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ನೀವು ವಂಚನೆಗೆ ಬಲಿಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಈ ವಂಚನೆಯ ಬಗ್ಗೆ ಇತರರಿಗೂ ಅರಿವು ಮೂಡಿಸಿ. ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂದು ಹೇಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು ನಮ್ಮ ವಾಟ್ಸಪ್‌ ನಂಬರ್‌‌ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...