ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಪೂಜಾ ಸ್ಥಳಗಳನ್ನು ಪುನಃ ತೆರೆಯುವ ಕುರಿತು ಮಹಾರಾಷ್ಟ್ರ ಗವರ್ನರ್ ಭಗತ್ ಸಿಂಗ್ ಕೊಶ್ಯರಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರವನ್ನು ಅಮಿತ್ ಶಾ ಉಲ್ಲೇಖೀಸಿ, “ನಿಮ್ಮ ಮಾತುಗಳ ಮೇಲೆ ನಿಯಂತ್ರಣ ಇರಬೇಕಿತ್ತು” ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲರು ಸೋಮವಾರ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ, ರಾಜ್ಯದ ಧಾರ್ಮಿಕ ಸ್ಥಳಗಳನ್ನು ಮುಚ್ಚುವ ನಿರ್ಧಾರವನ್ನು ಪ್ರಶ್ನಿಸಿದ್ದು, “ನಮ್ಮ ದೇವರುಗಳು ಮತ್ತು ದೇವತೆಗಳನ್ನು ಲಾಕ್‌ಡೌನ್‌ನಲ್ಲಿಡುವ ನಿರ್ಧಾರಕ್ಕೆ ನನ್ನ ಖಂಡನೆಯಿದೆ. ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡಿರುವುದು ವಿಪರ್ಯಾಸ. ಪೂಜಾ ಸ್ಥಳಗಳನ್ನು ಪುನಃ ತೆರೆಯುವುದನ್ನು ಮುಂದೂಡಲು ನೀವು ಯಾವುದಾದರೂ ದೈವಿಕ ಮುನ್ಸೂಚನೆಯನ್ನು ಸ್ವೀಕರಿಸಿದ್ದೀರಾ ಅಥವಾ ನೀವು ದ್ವೇಷಿಸುತ್ತಿದ್ದ ಪದವಾದ “ಜಾತ್ಯತೀತ”ವಾಗಿಯೇ ಪರಿವರ್ತನೆಗೊಂಡಿದ್ದೀರಾ ಎಂದು ನನಗೆ ಆಶ್ಚರ್ಯವಾಗುತ್ತಿದೆ” ಎಂದು ಹೇಳಿದ್ದರು.
ಇದನ್ನೂ ಓದಿ: ’ನೀವು ಜಾತ್ಯಾತೀತರಾದಿರಾ?’; ಮಹಾ ಮುಖ್ಯಮಂತ್ರಿಗೆ ರಾಜ್ಯಪಾಲರ ಪ್ರಶ್ನೆ- ಶರದ್ ಪವಾರ್ ಆಕ್ರೋಶ
ಇದರ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಅವರಿಗೆ ಆ ನಿರ್ಧಿಷ್ಟ ಪದಗಳ ಮೇಲೆ ನಿಯಂತ್ರಣ ಇರಬೇಕಿತ್ತು” ಎಂದು ಹೇಳಿದ್ದಾರೆ.
ರಾಜ್ಯಪಾಲರ ಈ ಹೇಳಿಕೆಗೆ ಪ್ರತಿಯಾಗಿ ಉದ್ಧವ್ ಠಾಕ್ರೆ, “ಹಿಂದುತ್ವದ ಪ್ರಮಾಣಪತ್ರವನ್ನು ನಾವು ಯಾರಿಂದಲೂ ಪಡೆದುಕೊಳ್ಳಬೆಕಾಗಿಲ್ಲ” ಎಂದು ಖಾರವಾಗಿ ಹೇಳಿದ್ದರು.
ಅಕ್ಟೋಬರ್ 5 ರಿಂದ ರಾಜ್ಯದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗಳು 50% ಗ್ರಾಹಕರಿಗೆ ಮಾತ್ರ ಅವಕಾಶ ನೀಡಿ ಕಾರ್ಯನಿರ್ವಹಿಸಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ಗಟ್ಟಿಯಾಗಿದೆ : ಸುಳ್ಳು ಹರಡುತ್ತಿರುವವರಿಗೆ ಹೊಟ್ಟೆ ನೋವು- ಶಿವಸೇನೆ
ಈ ಹಿಂದೆ ಹೊರಾಂಗಣ ಕ್ರೀಡಾ ಚಟುವಟಿಕೆಗಳು, ಎಲ್ಲಾ ಅನಿವಾರ್ಯವಲ್ಲದ ಅಂಗಡಿಗಳು ಮತ್ತು ಅಂತರ ಜಿಲ್ಲೆಗಳ ಪ್ರಯಾಣವನ್ನು ನಿರ್ಬಂಧಗಳಿಲ್ಲದೆ ಪುನಃ ಪ್ರಾರಂಭಿಸಲು ಅನುಮತಿ ನೀಡಿತ್ತು. ಆದಾಗ್ಯೂ, ಪೂಜಾ ಸ್ಥಳಗಳನ್ನು ಮತ್ತೆ ತೆರೆಯಲು ಅನುಮತಿಸದಿರಲು ಜನದಟ್ಟಣೆ ಕಾರಣ ಎಂದು ಸರ್ಕಾರ ಉಲ್ಲೇಖಿಸಿದೆ.
ಭಾರತದ ಎಲ್ಲ ರಾಜ್ಯಗಳಲ್ಲಿ ಪೈಕಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಮಹಾರಾಷ್ಟ್ರದಲ್ಲಿವೆ.
ಇಂದು 10,259 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ, 15,86,321 ಆಗಿದೆ. 1,58,750 ಸಕ್ರಿಯ ಪ್ರಕರಣಗಳಿದ್ದು, 13,58,606 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದುವರೆಗೂ 41,965 ಜನ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಸಮಾನಾಂತರ ಆಡಳಿತ ಅನಗತ್ಯ: ಮಹಾರಾಷ್ಟ್ರ ರಾಜ್ಯಪಾಲರನ್ನು ತರಾಟೆ ತೆಗೆದುಕೊಂಡ ಶಿವಸೇನೆ



ಸಾಂಕ್ರಾಮಿಕ (ಸಂಸ್ಕ್ರುತ)>ಸೋಂಕು (ಕನ್ನಡ)
ಪುನಃ(ಸಂಸ್ಕ್ರುತ)_ಮರು
ನಿಯಂತ್ರಣ… ಕಡಿವಾಣ,ಅಂಕೆ
ಸ್ಥಳ…ನೆಲೆ
ದ್ವೇಷ.. ಹಗೆತನ
ಕ್ರೀಡೆ…ಆಟ
ಕ್ರೀಡಾ…ಆಟೋಟ