ವಿದ್ಯಾರ್ಥಿಗಳು, ಆಡಳಿತ ಮಂಡಳಿ ಅನುಮತಿಯೊಂದಿಗೆ ಕ್ಯಾಂಪಸ್‌ನಲ್ಲಿ ಶುಕ್ರವಾರದ ಪ್ರಾರ್ಥನೆ ಮಾಡಿದ್ದಾರೆ ಎಂದು ತಿಳಿದ ನಂತರ ಅವರಿಗೆ ಕಿರುಕುಳ ನೀಡಿರುವ ಬಲಪಂಥೀಯ ಕಾರ್ಯಕರ್ತರ ಗುಂಪು, ಮುಸ್ಲಿಂ ವಿದ್ಯಾರ್ಥಿಗಳ ಗುಂಪನ್ನು ಕ್ಷಮೆಯಾಚಿಸಲು ಹಾಗೂ ಛತ್ರಪತಿ ಶಿವಾಜಿ ಭಾವಚಿತ್ರದ ಪಾದಗಳನ್ನು ಮುಟ್ಟುವಂತೆ ಒತ್ತಾಯಿಸಿದ್ದಾರೆ.
ವಿವಾದಿತ ವೀಡಿಯೊ ವೈರಲ್ ಆದ ಬಳಿಕ, ಕಾಲೇಜಿನಲ್ಲಿ ಬಹುಧರ್ಮೀಯ ನಿಯೋಗದ ರಚನೆಗೆ ಕಾರಣವಾಯಿತು. ಯಾವುದೇ ತರಗತಿಗೆ ಅಡ್ಡಿಪಡಿಸದೆ ಪ್ರಾರ್ಥನೆ ಸಲ್ಲಿಸಿದರೂ ವಿದ್ಯಾರ್ಥಿಗಳು ಮಾನಸಿಕವಾಗಿ ತೊಂದರೆಗೊಳಗಾಗಿದ್ದರಿಂದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಥಾಣೆಯ ಕಲ್ಯಾಣ್ ಪೂರ್ವದ ಐಡಿಯಲ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ನವೆಂಬರ್ 21 ರಂದು ಘಟನೆ ನಡೆದಿದೆ. ವಿದ್ಯಾರ್ಥಿಗಳ ಪ್ರಾರ್ಥನೆಗಾಗಿ ಖಾಲಿ ತರಗತಿಯನ್ನು ಬಳಸಲು ಅನುಮತಿಸಲಾಗಿತ್ತು. ಆದರೆ, ಸಹ ವಿದ್ಯಾರ್ಥಿಯೊಬ್ಬರು ಪ್ರಾರ್ಥನೆ ಮಾಡುವುದನ್ನು ರೆಕಾರ್ಡ್ ಮಾಡಿ, ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ್ದಾನೆ. ಇದರಿಂದಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳ ಕಾರ್ಯಕರ್ತರು ಕ್ಯಾಂಪಸ್‌ಗೆ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಒತ್ತಾಯಿಸಿದ್ದಾರೆ. ಶೈಕ್ಷಣಿಕ ಚಟುವಟಿಕೆಯ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ಸಹ ವಿವಾದ ಸೃಷ್ಟಿಸಿದ್ದಾರೆ ಎಂದು ‘ಮಕ್ತೂಬ್ ಮೀಡಿಯಾ’ ವರದಿ ಮಾಡಿದೆ.
ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಈ ಘಟನೆಯಿಂದಾಗಿ, ಸಾಮಾಜಿಕ ಕಾರ್ಯಕರ್ತ ದುರ್ಗೇಶ್ ಗಾಯಕ್ವಾಡ್, ಸಮೀರ್ ಖುರೇಷಿ, ಮೊಯಿನ್ ಡಾನ್, ಸಾಲಿಮ್ ಶೇಖ್, ಆನಂದ್ ಕುಮಾರ್, ಅಶ್ಫಾಕ್ ಶೇಖ್, ಜಮೀರ್ ಖಾನ್, ಅಲ್ತಮಾಶ್ ಕಾರ್ಟೆ ಮತ್ತು ಶೆಹಜಾದ್ ಸಾಗರ್ ಅವರು ನವೆಂಬರ್ 27 ರಂದು ಕಾಲೇಜು ಆಡಳಿತಾಧಿಕಾರಿಗಳನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ವಿದ್ಯಾರ್ಥಿಗಳನ್ನು ಬೆದರಿಸಿದವರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ಸಲ್ಲಿಸಲು, ವೀಡಿಯೊ ರೆಕಾರ್ಡಿಂಗ್ ಮತ್ತು ಪ್ರಸಾರಕ್ಕೆ ಕಾರಣವಾದ ವಿದ್ಯಾರ್ಥಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಒತ್ತಾಯಿಸಿ, ಬಾಧಿತ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮತ್ತು ಎಲ್ಲಾ ಧರ್ಮದ ವಿದ್ಯಾರ್ಥಿಗಳು ಭಯವಿಲ್ಲದೆ ಧಾರ್ಮಿಕ ಆಚರಣೆಗೆ ಸ್ಥಳ ನಿಗದಿಪಡಿಸುವಂತೆ ಒತ್ತಾಯಿಸುವ ಮೂಲಕ ಗುಂಪು ಮನವಿ ಪತ್ರ ಸಲ್ಲಿಸಿತು.
ಸಂತ್ರಸ್ತ ವಿದ್ಯಾರ್ಥಿಗಳಿಗೆ ಮಾತನಾಡಲು ಇಷ್ಟವಿಲ್ಲದ ಕಾರಣ, ಭಾವನಾತ್ಮಕವಾಗಿ ತೊಂದರೆಗೀಡಾದ ಕಾರಣ ಅವರನ್ನು ಭೇಟಿ ಮಾಡುವಲ್ಲಿ ತೊಂದರೆಯಾಗಿದೆ ಎಂದು ನಿಯೋಗ ಹೇಳಿಕೊಂಡಿದೆ. ಆದರೆ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾದ ಸಾಲಿಮ್ ಶೇಖ್, ಈ ಘರ್ಷಣೆಯನ್ನು ನಾಗರಿಕರ ಧಾರ್ಮಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿ ಎಂದು ಬಣ್ಣಿಸಿದರು. ಭದ್ರತೆಯನ್ನು ಬಲಪಡಿಸುವ ಜೊತೆಗೆ ಮುಂದೆ ಈ ರೀತಿಯ ಘಟನೆಗಳನ್ನು ತಡೆಯಲು ಕ್ರಮ ತಗೆದುಕೊಳ್ಳಬೇಕು ಎಂದು ಕಾಲೇಜು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದರು.
ಕಾಲೇಜು ಅಧಿಕಾರಿಗಳು ಭದ್ರತೆಯಲ್ಲಿನ ಲೋಪಗಳನ್ನು ಒಪ್ಪಿಕೊಂಡರು. ಹೆಚ್ಚಿದ ಗಸ್ತು, ಸಿಸಿಟಿವಿ ಪರೀಕ್ಷೆ ಮತ್ತು ಸಾಮರಸ್ಯ ವರ್ಧನೆಯ ಪ್ರಯತ್ನಗಳ ಮೂಲಕ ಸುಧಾರಣೆಗಳನ್ನು ಭರವಸೆ ನೀಡಿದರು. ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ನೀಡಲು ಸಹ ಬದ್ಧರಾಗಿದ್ದೇವೆ. ಆದರೆ ಪೊಲೀಸ್ ದೂರು ದಾಖಲಿಸುವ ಬಗ್ಗೆ ಕಾನೂನು ಸಮಾಲೋಚನೆಗಳು ನಡೆಯುತ್ತಿವೆ ಎಂದು ದೃಢಪಡಿಸಿದರು.


