ಮಹಾರಾಷ್ಟ್ರ ಚುನಾವಣೆಯಲ್ಲಿ ಪಾಲ್ಘರ್ ಜಿಲ್ಲೆಯ ದಹಾನು (ಪರಿಶಿಷ್ಟ ಪಂಗಡ ಮೀಸಲು) ವಿಧಾನಸಭಾ ಕ್ಷೇತ್ರವನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಭ್ಯರ್ಥಿ ವಿನೋದ್ ನಿಕೋಲ್ 5,133 ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ಬಿಜೆಪಿಯ ವಿನೋದ್ ಸುರೇಶ್ ಮೇಧಾ ಅವರನ್ನು 5,133 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ವಿಶೇಷವಾಗಿ ಸಿಪಿಐ(ಎಂ) ಈ ಕ್ಷೇತ್ರವನ್ನು 1978 ರಿಂದ 10 ನೇ ಬಾರಿಗೆ ಈ ಕ್ಷೇತ್ರವನ್ನು ಗೆದ್ದಿದೆ.
2009 ರಲ್ಲಿ ದಹಾನು (ST) ಕ್ಷೇತ್ರವನ್ನು ಪುನರ್‌ರಚಿಸಲಾಗಿದ್ದು, ಅದಕ್ಕೂ ಮೊದಲು ಕ್ಷೇತ್ರವನ್ನು ಜವಾಹರ್ (ST) ಎಂದು ಕರೆಯಲಾಗುತ್ತಿತ್ತು. ಮಹಾಯುತಿ ಅಲೆಯ ನಡುವೆಯೂ ದಹನು ಕ್ಷೇತ್ರವನ್ನು ಎಲ್ಲಾ ಅಡೆತಡೆಗಳನ್ನು ಮೀರಿ ಸಿಪಿಐ(ಎಂ) ಗೆದ್ದಿರುವುದು ಗಮನಾರ್ಹ ಸಾಧನೆಯಾಗಿದೆ ಎಂದು ಸಿಪಿಐ(ಎಂ) ನಾಯಕ ಅಶೋಕ್ ಧಾವಳೆ ಹೇಳಿದ್ದಾರೆ. ಮಹಾರಾಷ್ಟ್ರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಶ್ರೇಯವು ದಹಾನು ಮತ್ತು ತಲಾಸರಿ ತಹಸಿಲ್‌ಗಳ ಜನರು ಮತ್ತು ವಿವಿಧ ಎಡಪಂಥೀಯ ಸಂಘಟನೆಗಳ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ಅವರು ಹೇಳಿದ್ದಾರೆ. ಸಿಪಿಐ(ಎಂ) ವಿರೋಧ ಪಕ್ಷವಾದ ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಮತ್ತು ಶಿವಸೇನೆ (ಯುಬಿಟಿ)ಯ ಮಹಾ ವಿಕಾಸ್ ಅಘಾಡಿಯ ಭಾಗವಾಗಿ ಸ್ಪರ್ಧಿಸಿತ್ತು. ಮಹರಾಷ್ಟ್ರದಲ್ಲಿ ಸಿಪಿಐ(ಎಂ) ತಾನು ಸ್ಪರ್ಧಿಸಿದ್ದ ಒಟ್ಟು ಮೂರು ಕ್ಷೇತ್ರಗಳಲ್ಲಿ 1 ಕ್ಷೇತ್ರವನ್ನು ಗೆಲ್ಲಲು ಯಶಸ್ವಿಯಾಗಿದೆ.
ಶನಿವಾರ ನಡೆದ ಮಹಾರಾಷ್ಟ್ರ ಚುನಾವಣೆಯ ಎಣಿಕೆಯಲ್ಲಿ ರಾಜ್ಯದ ಒಟ್ಟು 288 ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ 235 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಅದರಲ್ಲಿ ಬಿಜೆಪಿ 133 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದು, ಶಿಂಧೆ ನೇತೃತ್ವದ ಶಿವಸೇನೆ 57 ಕ್ಷೇತ್ರಗಳಲ್ಲಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 41 ಕ್ಷೇತ್ರಗಳಲ್ಲಿ ಗೆದ್ದಿದೆ. ಉಳಿದಂತೆ ಮೈತ್ರಿಯ ಭಾಗವಾಗಿದ್ದ ಜೆಎಸ್‌ಎಸ್ 2 ಕ್ಷೇತ್ರಗಳಲ್ಲಿ ಹಾಗೂ ಆರ್ವೈಎಸ್‌ಪಿ ಮತ್ತು ಆರ್‌ಎಸ್‌ವಿಎ ತಲಾ ಒಂದೊಂದು ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
ವಿಪಕ್ಷಗಳ ಮಹಾ ವಿಕಾಸ್ ಅಘಾಡಿಗೆ ಚುನಾವಣಾ ಫಲಿತಾಂಶವೂ ಭಾರಿ ಅಘಾತ ನೀಡಿದೆ. ಮೈತ್ರಿಯು ಒಟ್ಟು 49 ಕ್ಷೇತ್ರಗಳನ್ನಷ್ಟೆ ಗೆಲ್ಲಲು ಸಫಲವಾಗಿದೆ. ಅದರಲ್ಲಿ ಮೈತ್ರಿಯ ಭಾಗವಾಗಿದ್ದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 20 ಕ್ಷೇತ್ರಗಳನ್ನು ಗೆದ್ದಿದ್ದು, ಕಾಂಗ್ರೆಸ್ 15 ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ 10 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಉಳಿದಂತೆ ಮೈತ್ರಿಯ ಸಣ್ಣ ಪಕ್ಷಗಳಾದ ಎಸ್‌ಪಿ 2 ಕ್ಷೇತ್ರಗಳನ್ನು ಗೆದ್ದರೆ, ಸಿಪಿಐ(ಎಂ) ಮತ್ತು ಪಿಡಬ್ಲ್ಯೂಪಿಐ ತಲಾ ಒಂದೊಂದು ಕ್ಷೇತ್ರಗಳನ್ನು ಗೆದ್ದುಕೊಂಡಿದೆ.
ಉಳಿದಂತೆ ISLAM, AIMIM, RSPS ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ ಒಂದೊಂದು ಕ್ಷೇತ್ರಗಳನ್ನು ಗೆದ್ದುಕೊಂಡಿದ್ದಾರೆ.
ಇದನ್ನೂ ಓದಿ: ದೇವೇಂದ್ರ ಫಡ್ನವಿಸ್-ಏಕನಾಥ್ ಶಿಂಧೆ ನಡುವೆ ಪೈಪೋಟಿ; ‘ಮಹಾಯುತಿ’ಯಲ್ಲಿ ಮುಖ್ಯಮಂತ್ರಿ ಹುದ್ದೆ ಯಾರಿಗೆ?
ದೇವೇಂದ್ರ ಫಡ್ನವಿಸ್-ಏಕನಾಥ್ ಶಿಂಧೆ ನಡುವೆ ಪೈಪೋಟಿ; ‘ಮಹಾಯುತಿ’ಯಲ್ಲಿ ಮುಖ್ಯಮಂತ್ರಿ ಹುದ್ದೆ ಯಾರಿಗೆ?


