Homeರಂಜನೆಕ್ರೀಡೆವಿರಾಟ್‌ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆಯೊಡ್ಡಿದ್ದ ಹೈದರಾಬಾದ್‌ ವ್ಯಕ್ತಿಯ ಬಂಧನ

ವಿರಾಟ್‌ ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆಯೊಡ್ಡಿದ್ದ ಹೈದರಾಬಾದ್‌ ವ್ಯಕ್ತಿಯ ಬಂಧನ

- Advertisement -
- Advertisement -

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಸತತವಾಗಿ ಸೋತಿದ್ದಕ್ಕೆ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರ ಒಂಬತ್ತು ತಿಂಗಳ ಮಗಳಿಗೆ ಅತ್ಯಾಚಾರ ಬೆದರಿಕೆ ಒಡ್ಡಿದ ಹೈದರಾಬಾದ್‌ನ ಇಂಜಿನಿಯರ್‌ ಅನ್ನು ಬುಧವಾರ ಬಂಧಿಸಲಾಗಿದೆ.

ಆರೋಪಿಯನ್ನು 23 ವರ್ಷದ ರಾಮನಾಗೇಶ್ ಶ್ರೀನಿವಾಸ್ ಅಕುಬತಿನಿ ಎಂದು ಗುರುತಿಸಲಾಗಿದ್ದು, ಮುಂಬೈ ಪೊಲೀಸರ ವಿಶೇಷ ತಂಡ ಇಂದು ಮಧ್ಯಾಹ್ನ ಬಂಧಿಸಿದೆ. ಅತ್ಯಾಚಾರ ಬೆದರಿಕೆಯ ಟ್ವೀಟ್‌‌ ಅನ್ನು ಪೊಲೀಸರು ತನಿಖೆ ಮಾಡಲು ಪ್ರಾರಂಭಿಸಿದ ನಂತರ ಆರೋಪಿ ತನ್ನ ಟ್ವಿಟರ್ ಹ್ಯಾಂಡಲ್ ಅನ್ನು ಬದಲಾಯಿಸಿ, ತಾನು ಪಾಕಿಸ್ತಾನಿ ಟ್ವಿಟರ್‌ ಬಳಕೆದಾರರಂತೆ ನಟಿಸಿದ್ದನು ಎಂದು ಆರೋಪಿಸಲಾಗಿದೆ. ಬಂಧಿತನನ್ನು ಮುಂಬೈಗೆ ಕರೆದೊಯ್ಯಲಾಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ: ಕೊಹ್ಲಿ ಪರ ನಿಂತ ರಾಹುಲ್ ಗಾಂಧಿ

ಆರೋಪಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಸದ್ಯ ನಿರುದ್ಯೋಗಿಯಾಗಿದ್ದನು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಈ ಹಿಂದೆ ಆತ ಆಹಾರ ವಿತರಣಾ ಆಪ್‌ಗಾಗಿ ಕೆಲಸ ಮಾಡಿದ್ದನು ಎಂದು ವರದಿಯಾಗಿದೆ.

ಕಳೆದ ವಾರ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರ ಒಂಬತ್ತು ತಿಂಗಳ ಮಗಳನ್ನು ಗುರಿಯಾಗಿಟ್ಟುಕೊಂಡು ಅತ್ಯಾಚಾರ ಬೆದರಿಕೆ ಒಡ್ಡಲಾಗಿತ್ತು. ಇದರ ವಿರುದ್ದ ರಾಷ್ಟ್ರ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮುಂಬೈ ನಿವಾಸಿಗಳಾಗಿರುವುದರಿಂದ ಮುಂಬೈ ಪೊಲೀಸರು ಹಲವಾರು ಹ್ಯಾಂಡಲ್‌ಗಳನ್ನು ತನಿಖೆ ನಡೆಸುತ್ತಿದ್ದರು. ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಕೂಡ ತನಿಖೆಗೆ ಕರೆ ನೀಡಿತ್ತು. ಈ ಸಂಬಂಧ ಆಯೋಗವು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತ್ತು.

ಇದನ್ನೂ ಓದಿ: ಮೊಹಮ್ಮದ್ ಶಮಿ ಪರ ನಿಂತ ರಾಹುಲ್ ಗಾಂಧಿ, ಸಚಿನ್ ತೆಂಡೂಲ್ಕರ್

ಅಕ್ಟೋಬರ್ 24 ರಂದು ದುಬೈನಲ್ಲಿ ನಡೆದ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ನಂತರ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಾಮೆಂಟ್‌ಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಸೋಲಿನ ನಂತರ ತನ್ನ ಸಹ ಆಟಗಾರ ಮೊಹಮ್ಮದ್ ಶಮಿಯನ್ನು ಅವರ ಧರ್ಮದ ಕಾರಣಕ್ಕೆ ಟ್ರೋಲ್ ಮಾಡುತ್ತಿರುವುದನ್ನು ವಿರೋಧಿಸಿ ವಿರಾಟ್ ಕೊಹ್ಲಿ ಮಾತನಾಡಿದ್ದರು. ಇದಕ್ಕೆ ಕೂಡಾ ಅವರ ಮೇಲೆ ದಾಳಿ ಮಾಡಲಾಗಿತ್ತು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಬಗ್ಗೆ ವಿರಾಟ್‌ ಕೊಹ್ಲಿ ಅವರ ಬೆಂಬಲಕ್ಕೆ ನಿಂತಿದ್ದರು. ಅವರು ತನ್ನ ಟ್ವೀಟ್‌ನಲ್ಲಿ, “ಪ್ರಿಯ ವಿರಾಟ್, ಈ ಜನರು ದ್ವೇಷದಿಂದ ತುಂಬಿದ್ದಾರೆ. ಯಾಕೆಂದರೆ ಅವರಿಗೆ ಯಾರೂ ಪ್ರೀತಿಯನ್ನು ನೀಡುವುದಿಲ್ಲ. ಅವರನ್ನು ಕ್ಷಮಿಸಿ, ತಂಡವನ್ನು ರಕ್ಷಿಸಿ” ಎಂದು ಹೇಳಿದ್ದರು.

ಇದನ್ನೂ ಓದಿ: ಮೊಹಮ್ಮದ್ ಶಮಿ ಬೆನ್ನಿಗೆ ನಿಂತ ವಿರಾಟ್ ಕೊಹ್ಲಿ: ಕೋಮುವಾದಿ ದಾಳಿಗೆ ತೀವ್ರ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Please see this matter write something about this
    It is appears to be most important it is circulating in whatsappgroups. Bit is as follows.
    * ತೆರಿಗೆದಾರರ ಅಖಿಲ ಭಾರತ ಸಂಘಟನೆಯನ್ನು ಸ್ಥಾಪಿಸುವ ಸಮಯ ಬಂದಿದೆ. *

    ವಿಶ್ವದ ಅತಿ ದೊಡ್ಡ ಕಂಪನಿ ಯಾವುದು?

    ಈಗ ದೇಶದಲ್ಲಿ ತೆರಿಗೆದಾರರ ಸಂಘವನ್ನು ರಚಿಸಬೇಕು. ಈ ತೆರಿಗೆದಾರರ ಸಂಘದ ಅನುಮೋದನೆಯಿಲ್ಲದೆ ಯಾವುದೇ ಸರ್ಕಾರ, ಯಾವುದೇ ಸರ್ಕಾರ, ಉಚಿತ ವಿದ್ಯುತ್, ಉಚಿತ ನೀರು, ಉಚಿತ ವಿತರಣೆ ಅಥವಾ ಸಾಲ ಮನ್ನಾ ಘೋಷಿಸಲು ಸಾಧ್ಯವಿಲ್ಲ. ಈ ರೀತಿಯ ಯಾವುದನ್ನಾದರೂ ರನ್ ಮಾಡಿ.
    ನಮ್ಮ ತೆರಿಗೆ ಪಾವತಿಯಿಂದ ಹಣ ಬರುತ್ತದೆ, ಹಾಗಾಗಿ ಅದನ್ನು ಹೇಗೆ ಬಳಸಬೇಕು ಎಂದು ಹೇಳುವ ಹಕ್ಕು ನಮಗೂ ಇರಬೇಕು.

    * ಸಾಮಾನ್ಯ ಜನರು ಅಂತಹ ರಾಜಕೀಯ ಪಕ್ಷಗಳತ್ತ ಆಕರ್ಷಿತರಾಗುತ್ತಾರೆ ಮತ್ತು ಮತಗಳಿಗಾಗಿ ಉಚಿತಗಳನ್ನು ಘೋಷಿಸುತ್ತಾರೆ ಮತ್ತು ವಿತರಿಸುತ್ತಾರೆ, ಏಕೆಂದರೆ ಅದು ಅವರಿಗೆ ಪ್ರಯೋಜನವನ್ನು ನೀಡುತ್ತದೆ. ಜನರು ತಾವು ಗಳಿಸಿದ ಹಣದಿಂದ ಸೋಮಾರಿಗಳನ್ನು ಮಾಡುವುದರಿಂದ ದೇಶವು ಹದಗೆಡುತ್ತಿದೆ *
    ಸರ್ಕಾರಗಳು ಶಿಕ್ಷಣ ಮತ್ತು ಔಷಧವನ್ನು ಮಾತ್ರ ಉಚಿತವಾಗಿ ನೀಡಬೇಕು.

    * ನಾವು ದೇಶದ ಅಭಿವೃದ್ಧಿಗೆ ತೆರಿಗೆ ಪಾವತಿಸುತ್ತೇವೆ ಆದರೆ ದೇಶವನ್ನು ನಾಶ ಮಾಡಲು ಅಲ್ಲ. *

    ಯಾವುದೇ ಯೋಜನೆಯನ್ನು ಘೋಷಿಸಿದರೂ, ಅದರ ನೀಲನಕ್ಷೆಯನ್ನು ಮುಂಚಿತವಾಗಿ ನೀಡಿ, ಒಕ್ಕೂಟದಿಂದ ಒಪ್ಪಿಗೆ ಪಡೆಯಿರಿ ಮತ್ತು ಅದು ಸಂಸದರು ಮತ್ತು ಶಾಸಕರ ಸಂಬಳ ಮತ್ತು ಅವರು ಪಡೆಯುವ ಇತರ ಪ್ರಯೋಜನಗಳಿಗೆ ಅನ್ವಯಿಸಬೇಕು.

    * ಪ್ರಜಾಪ್ರಭುತ್ವ ಕೇವಲ ಮತದಾನಕ್ಕೆ ಸೀಮಿತವೇ? *
    ಅದರ ನಂತರ ನಮಗೆ ಯಾವ ಹಕ್ಕುಗಳಿವೆ?

    ಅಂತಹ ಯಾವುದೇ “ಉಚಿತ” ಗಳನ್ನು ಮರುಪಡೆಯುವ ಹಕ್ಕನ್ನು ಕೂಡ ಶೀಘ್ರದಲ್ಲಿ ಜಾರಿಗೊಳಿಸಬೇಕು.

    ನೀವು ಒಪ್ಪಿದರೆ, ದಯವಿಟ್ಟು ಸಾಧ್ಯವಾದಷ್ಟು ಜನರನ್ನು ಸಂಪರ್ಕಿಸಿ. ಇದನ್ನು ಮಾಡಲು, ಪೋಸ್ಟ್ ಅನ್ನು ಹಂಚಿಕೊಳ್ಳಿ. .
    ನಿಮ್ಮ ಕನಿಷ್ಠ 10 ಸ್ನೇಹಿತರಿಗೆ ಕಳುಹಿಸಿ.

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...