Homeರಂಜನೆಕ್ರೀಡೆವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ: ಕೊಹ್ಲಿ ಪರ ನಿಂತ ರಾಹುಲ್ ಗಾಂಧಿ

ವಿರಾಟ್ ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ: ಕೊಹ್ಲಿ ಪರ ನಿಂತ ರಾಹುಲ್ ಗಾಂಧಿ

ಈ ಸಂಬಂಧ ದೆಹಲಿ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ

- Advertisement -
- Advertisement -

ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಸೋಲು ಕಂಡಿದ್ದಕ್ಕೆ ಆಟಗಾರ ಮೊಹಮ್ಮದ್ ಶಮಿಯನ್ನು ಹಲವರು ಬೆಟ್ಟು ಮಾಡಿ ವಾಗ್ದಾಳಿ ನಡೆಸಿದ್ದರು. ಸಹ ಆಟಗಾರನ ಬೆಂಬಲಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಿಂತಿದ್ದರು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.

ಬಳಿಕ ವಿರಾಟ್ ಕೊಹ್ಲಿ ವಿರುದ್ಧ ನಿಂದನಾತ್ಮಕವಾಗಿ ಮಾತನಾಡಿದ್ದ ಹಲವರು, ಕೊಹ್ಲಿಯ ಒಂಬತ್ತು ತಿಂಗಳ ಮಗಳ ಮೇಲೆ ಅತ್ಯಾಚಾರ ನಡೆಸುವ ಬೆದರಿಕೆ ಒಡ್ಡಿದರು. ಘಟನೆ ಸಂಬಂಧ ದೆಹಲಿಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಜೊತೆಗೆ ದೆಹಲಿ ಪೊಲೀಸರಿಗೆ ನೋಟಿಸ್ ಕಳುಹಿಸಿದ್ದು, ಕೊಹ್ಲಿ ಮಗಳ ವಿರುದ್ಧ ಭಯಾನಕ ಬೆದರಿಕೆ ಕುರಿತು ಕೈಗೊಂಡ ತನಿಖೆ, ಆರೋಪಿಯನ್ನು ಬಂಧಿಸಲು ದೆಹಲಿ ಪೊಲೀಸರು ತೆಗೆದುಕೊಂಡ ಕ್ರಮಗಳ ಬಗ್ಗೆ ನವೆಂಬರ್ 8ರೊಳಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಘಟನೆ ಕುರಿತು ವಿಷಾಧ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರಾಟ್ ಕೊಹ್ಲಿಗೆ ಬೆಂಬಲ ನೀಡಿದ್ದಾರೆ.

“ಪ್ರಿಯ ವಿರಾಟ್, ಈ ಜನರು ದ್ವೇಷದಿಂದ ತುಂಬಿದ್ದಾರೆ ಏಕೆಂದರೆ ಯಾರೂ ಅವರಿಗೆ ಪ್ರೀತಿಯನ್ನು ನೀಡುವುದಿಲ್ಲ. ಅವರನ್ನು ಕ್ಷಮಿಸಿ. ತಂಡವನ್ನು ರಕ್ಷಿಸಿ” ಎಂದು ರಾಹುಲ್ ಗಾಂಧಿ ಮಂಗಳವಾರ ಸಂಜೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೂ ಅವಕಾಶವಿದೆ: ಹೇಗೆ?

ಇನ್ನು ಈ ಅತ್ಯಾಚಾರದ ಬೆದರಿಕೆಯನ್ನು ಪಾಕಿಸ್ತಾನದ ವ್ಯಕ್ತಿ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಹಲವು ಮಂದಿ ಈ ಸುಳ್ಳು ಸುದ್ದಿಯನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್‌ ಮಾಡುತ್ತಿದ್ದಾರೆ.

ಆಲ್ಟ್ ನ್ಯೂಸ್ ವೆಬ್‌ಸೈಟ್ ಈ ಬಗ್ಗೆ ಫ್ಯಾಕ್ಟ್‌ಚೆಕ್ ನಡೆಸಿದ್ದು, ಬೆದರಿಕೆ ಹಾಕಿರುವ ವ್ಯಕ್ತಿ ಪಾಕಿಸ್ತಾನದವರಲ್ಲ, ಭಾರತದವರು ಎಂದು ಕಂಡು ಹಿಡಿದಿದೆ.

ದುಷ್ಕರ್ಮಿಗಳಿಂದ ನಿಂದನೆಗೆ ಒಳಗಾಗಿದ್ದ ಖ್ಯಾತ ವೇಗದ ಬೌಲರ್ ಮೊಹಮ್ಮದ್ ಶಮಿ ಪರವಾಗಿ ವಿರಾಟ್ ಕೊಹ್ಲಿ ದನಿಯೆತ್ತಿದ್ದರು. “ಧರ್ಮದ ಆಧಾರದಲ್ಲಿ ಯಾರ ಮೇಲಾದರೂ ದಾಳಿ ಮಾಡಿದರೆ ಮನುಷ್ಯನಾಗಿ ಮಾಡಬಹುದಾದ ಅತ್ಯಂತ ಕರುಣಾಜನಕ ವಿಷಯ. ನಾವು ಒಳ್ಳೆಯ ಉದ್ದೇಶಕ್ಕಾಗಿ ಮೈದಾನದಲ್ಲಿ ಆಡುತ್ತಿದ್ದೇವೆಯೇ ಹೊರತು ಸಾಮಾಜಿಕ ಮಾಧ್ಯಮಗಳಲ್ಲಿನ ಬೆನ್ನುಮೂಳೆಯಿಲ್ಲದ ಜನರ ಗುಂಪಿನಂತಲ್ಲ. ಅವರಿಗೆ ಕೇವಲ ಒಬ್ಬ ವ್ಯಕ್ತಿಯನ್ನು ಸಹ ನೇರವಾಗಿ ಎದುರಿಸಲು ಸಾಧ್ಯವಿಲ್ಲ. ಅವರು ತಮ್ಮ ಗುರುತನ್ನು ಮರೆಮಾಚಿ ಸಾಮಾಜಿಕ ಮಾಧ್ಯಮಗಳಲ್ಲಿ ಗೇಲಿ ಮಾಡುತ್ತಾರೆ. ಇದು ಕೆಲವರಿಗೆ ಮನರಂಜನೆಯ ಮೂಲವಾಗಿರುವುದು ದುರದೃಷ್ಟಕರ ಮತ್ತು ದುಃಖದ ವಿಷಯವಾಗಿದೆ. ಇದು ಅಕ್ಷರಶಃ ಒಬ್ಬ ಮನುಷ್ಯ ಅತಿ ಕೆಳಮಟ್ಟದ ಕೃತ್ಯವಾಗಿದೆ” ಎಂದು ವಿರಾಟ್ ಕೊಹ್ಲಿ ಕಿಡಿಕಾರಿದ್ದರು.


ಇದನ್ನೂ ಓದಿ: ಮೊಹಮ್ಮದ್ ಶಮಿ ಬೆನ್ನಿಗೆ ನಿಂತ ವಿರಾಟ್ ಕೊಹ್ಲಿ: ಕೋಮುವಾದಿ ದಾಳಿಗೆ ತೀವ್ರ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...