Homeರಂಜನೆಕ್ರೀಡೆಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೂ ಅವಕಾಶವಿದೆ: ಹೇಗೆ?

ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೂ ಅವಕಾಶವಿದೆ: ಹೇಗೆ?

ಇದೆಲ್ಲವೂ ಘಟಿಸಲು ಭಾರತ ತಂಡವು ತನ್ನ ಉಳಿದ ಮೂರು ಪಂದ್ಯಗಳನ್ನು ಸಾಕಷ್ಟು ಭಾರೀ ಅಂತರದಲ್ಲಿ ಗೆಲ್ಲುವುದು ಪೂರ್ವ ಷರತ್ತಾಗಿದೆ.

- Advertisement -
- Advertisement -

ಐಸಿಸಿ ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದ ಭಾರತ ತಂಡವು ಸತತ ಎರಡು ಹೀನಾಯ ಸೋಲುಗಳಿಂದ ಕಂಗೆಟ್ಟಿದೆ. ಪಾಕ್ ವಿರುದ್ಧ 10 ವಿಕೆಟ್‌ಗಳ ಸೋಲುಂಡಿದ್ದ ಭಾರತ, ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‌ಗಳಿಂದ ಪರಾಭವಗೊಂಡಿತು. ಅಲ್ಲಿಗೆ ಸೆಮಿಫೈನಲ್ ಅವಕಾಶ ದೂರವಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. ಆದರೆ ಟಿ20 ವಿಶ್ವಕಪ್ ಸೆಮಿಫೈನಲ್ ತಲುಪಲು ಭಾರತಕ್ಕೆ ಇನ್ನೂ ಅವಕಾಶವಿದೆ. ಹೇಗೆ ಎಂದು ನೋಡೋಣ.

ಸದ್ಯದ ಪಾಯಿಂಟ್ಸ್ ಪಟ್ಟಿ

ಈಗ ಗ್ರೂಪ್ 2 ರ ಪಾಯಿಂಟ್ ಪಟ್ಟಿಯಲ್ಲಿ ಸತತ ಮೂರು ಗೆಲವುಗಳೊಂದಿಗೆ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ. ಅದು ತನ್ನ ಉಳಿದ ಎರಡು ಪಂದ್ಯಗಳಲ್ಲಿ ನಮೀಬಿಯ ಮತ್ತು ಸ್ಕಾಟ್ಲ್ಯಾಂಡ್ ವಿರುದ್ದ ಸೆಣಸಲಿದೆ. ಒಂದು ಗೆಲುವು ಪಡೆದರೂ ಅದರ ಸೆಮಿಫೈನಲ್ ಸ್ಥಾನ ಭದ್ರವಾಗಲಿದೆ. ಗ್ರೂಪ್ 2 ರಲ್ಲಿ ಸೆಮಿಫೈನಲ್ ತಲುಪಲು ಇನ್ನೊಂದು ತಂಡಕ್ಕೆ ಮಾತ್ರ ಅವಕಾಶವಿದ್ದು ಆಫ್ಘಾನಿಸ್ತಾನ, ನ್ಯೂಜಿಲೆಂಡ್, ನಮೀಬಿಯಾ, ಭಾರತ ಮತ್ತು ಸ್ಕಾಟ್ಲ್ಯಾಂಡ್ ತಂಡಗಳು ಆ ಸ್ಥಾನದ ಮೇಲೆ ಕಣ್ಣಿಟ್ಟಿವೆ. ಇವುಗಳಲ್ಲಿ ಆಫ್ಘಾನಿಸ್ತಾನ, ನ್ಯೂಜಿಲೆಂಡ್ ಮತ್ತು ಭಾರತ ತಂಡಕ್ಕೆ ಹೆಚ್ಚಿನ ಸಾಧ್ಯತೆಗಳಿವೆ.

ಭಾರತ ಹೇಗೆ ಸೆಮಿಫೈನಲ್ ತಲುಪಬಹುದು?

ಭಾರತದ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 3: ಆಫ್ಘಾನಿಸ್ತಾನ ಎದುರು ಅಬುದಾಬಿಯಲ್ಲಿ
ನವೆಂಬರ್ 5: ಸ್ಕಾಟ್ಲ್ಯಾಂಡ್ ಎದುರು ದುಬೈನಲ್ಲಿ
ನವೆಂಬ್ 8: ನಮೀಬಿಯಾ ಎದುರು ದುಬೈನಲ್ಲಿ

ನ್ಯೂಜಿಲೆಂಡ್‌ನ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 3: ಸ್ಕಾಟ್ಲ್ಯಾಂಡ್ ಎದುರು ದುಬೈನಲ್ಲಿ
ನವೆಂಬರ್ 5: ನಮೀಬಿಯಾ ಎದುರು ಶಾರ್ಜಾದಲ್ಲಿ
ನವೆಂಬರ್ 7: ಆಫ್ಘಾನಿಸ್ತಾನ ಎದುರು ಅಬುದಾಬಿಯಲ್ಲಿ

ಆಫ್ಘಾನಿಸ್ತಾನದ ಮುಂದಿನ ಪಂದ್ಯಗಳು ಈ ರೀತಿ ಇವೆ.

ನವೆಂಬರ್ 3: ಭಾರತದ ಎದುರು ಅಬುದಾಬಿಯಲ್ಲಿ
ನವೆಂಬರ್ 7: ನ್ಯೂಜಿಲೆಂಡ್‌ ಎದುರು ಅಬುದಾಬಿಯಲ್ಲಿ

ಭಾರತವು ತನ್ನ ಮುಂದಿನ ಮೂರು ಪಂದ್ಯಗಳನ್ನು ಭಾರೀ ಅಂತರದಿಂದ ಗೆದ್ದಲ್ಲಿ 6 ಪಾಯಿಂಟ್‌ಗಳ ಜೊತೆಗೆ ಉತ್ತಮ ನೆಟ್ ರನ್ ರೇಟ್ ಆಧಾರದಲ್ಲಿ ಸೆಮಿಫೈನಲ್ ತಲುಪಬಹುದು. ಸದ್ಯಕ್ಕೆ -1.609 ರ ಕಡಿಮೆ ರನ್‌ರೇಟ್ ಭಾರತಕ್ಕಿದೆ. ಆದರೆ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಉಳಿದ ತಂಡಗಳ ಎದುರು ಸೋಲುವುದು ಕೂಡ ಭಾರತಕ್ಕೆ ಅತೀ ಅಗತ್ಯವಾಗಿದೆ.

ಭಾರತ 8 ಪಾಯಿಂಟ್‌ಗಳನ್ನು ಗಳಿಸುವುದು ಸಾಧ್ಯವಿಲ್ಲ. ಆದರೆ ಆ ಸಾಧ್ಯತೆ ಆಫ್ಘಾನಿಸ್ತಾನ ತಂಡಕ್ಕಿದೆ. ಏಕೆಂದರೆ ಅದು ಈಗಾಗಲೇ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದು 4 ಪಾಯಿಂಟ್ ಗಳಿಸಿಕೊಂಡಿದೆ. ಉಳಿದ ಎರಡು ಪಂದ್ಯಗಳನ್ನು ಗೆದ್ದರೆ ಅದು 8 ಪಾಯಿಂಟ್ ಪಡೆದು ಸೆಮಿಫೈನಲ್ ತಲುಪಬಹುದು. ಅಥವಾ ಒಂದನ್ನು ಭಾರೀ ಅಂತರದಿಂದ ಗೆದ್ದು ಹೆಚ್ಚು ರನ್ ರೇಟ್ ಇದ್ದಲ್ಲಿ ಅದರ ಹಾದಿ ಸುಗಮ.

ನ್ಯೂಜಿಲೆಂಡ್‌ ತಂಡಕ್ಕೂ ಸಹ ಆ ಅವಕಾಶವಿದೆ. ಅದು ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು 2 ಪಾಯಿಂಟ್ ಗಳಿಸಿದೆ. ಉಳಿದ ಮೂರು ಪಂದ್ಯಗಳಲ್ಲಿ ಮೂರನ್ನು ಗೆದ್ದು 8 ಪಾಯಿಂಟ್ ಪಡೆದು ಸೆಮಿಫೈನಲ್ ತಲುಪಬಹುದು. ಅಥವಾ ಎರಡನ್ನು ಭಾರೀ ಅಂತರದಿಂದ ಗೆದ್ದು ಹೆಚ್ಚು ರನ್ ರೇಟ್ ಇದ್ದಲ್ಲಿ ಅದರ ಹಾದಿ ಸುಗಮ.

ಈ ಹಿನ್ನೆಲೆಯಲ್ಲಿ ನವೆಂಬರ್ 7ರಂದು ಅಬುದಾಬಿಯಲ್ಲಿ ನಡೆಯಲಿದರು ಆಫ್ಘಾನಿಸ್ತಾನ ಎದುರಿನ ನ್ಯೂಜಿಲೆಂಡ್ ಪಂದ್ಯಕ್ಕೆ ಭಾರೀ ಮಹತ್ವ ಬಂದಿದೆ.

ಸನ್ನಿವೇಶ 1

ಭಾರತವು ಭಾರೀ ಅಂತರದಿಂದ ಆಫ್ಘಾನಿಸ್ತಾನದ ಎದುರು ಗೆಲ್ಲುತ್ತದೆ. ಅದೇ ರೀತಿ ಆಫ್ಘಾನಿಸ್ತಾನವು ನ್ಯೂಜಿಲೆಂಡ್ ಎದರು ಭಾರೀ ಅಂತರದಿಂದ ಗೆದ್ದಲ್ಲಿ ಎರಡೂ ತಂಡಗಳು 6 ಪಾಯಿಂಟ್‌ಗೆ ಬಂದು ನಿಂತರೆ ನೆಟ್ ರನ್ ರೇಟ್ ಆಧಾರ ಮುಖ್ಯವಾಗುತ್ತದೆ.

ಸನ್ನಿವೇಶ 2

ಭಾರತವು ಭಾರೀ ಅಂತರದಿಂದ ಆಫ್ಘಾನಿಸ್ತಾನದ ಎದುರು ಗೆಲ್ಲುತ್ತದೆ. ನ್ಯೂಜಿಲೆಂಡ್ ಸಹ ಆಫ್ಘಾನಿಸ್ತಾನ ಎದುರು ಗೆದ್ದಲ್ಲಿ ಆಫ್ಘಾನಿಸ್ತಾನ ಕೇವಲ 04 ಪಾಯಿಂಟ್‌ಗಳಿಗೆ ಸೀಮಿತವಾಗುತ್ತದೆ. ಅದರ ಸೆಮಿಫೈನಲ್ ಹಾದಿ ಮುಚ್ಚಿಹೋಗುತ್ತದೆ. ಎರಡೂ ತಂಡಗಳು 6 ಪಾಯಿಂಟ್‌ಗೆ ಬಂದು ನಿಂತರೆ ನೆಟ್ ರನ್ ರೇಟ್ ಆಧಾರ ಮುಖ್ಯವಾಗುತ್ತದೆ. ಒಂದು ವೇಳೆ ನ್ಯೂಜಿಲೆಂಡ್ ತಂಡವು ನಮೀಬಿಯಾ ಅಥವಾ ಸ್ಕಾಟ್ಲ್ಯಾಂಡ್ ಎದುರಿನ ಒಂದು ಪಂದ್ಯ ಸೋತರೂ ಭಾರತದ ನೆಟ್‌ ರನ್ ರೇಟ್ ಉತ್ತಮವಾಗಿದ್ದಲ್ಲಿ ಭಾರತಕ್ಕೆ ಅವಕಾಶ ತೆರೆದುಕೊಳ್ಳುತ್ತದೆ.

ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ಭಾರತಕ್ಕೆ ಸಹಾಯ ಮಾಡಬಲ್ಲವೇ?

ಭಾರತಕ್ಕೆ ಸೆಮಿಫೈನಲ್ ತಲುಪಲು ಬೇರೆ ದಾರಿಗಳು ಸಹ ಇವೆ. ಭಾರತವು ಆಫ್ಘಾನಿಸ್ತಾನ, ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ಎದುರು ಗೆಲ್ಲಲೇಬೇಕು. ನಂತರ ಈ ಎರಡು ತಂಡಗಳು ಪಾಕಿಸ್ತಾನದ ಎದುರು ಸೆಣೆಸುತ್ತಿವೆ. ಅಲ್ಲಿ ಅವರೆಡೂ ಭಾರೀ ಅಂತರದಿಂದ ಗೆದ್ದಲ್ಲಿ ಪಾಕಿಸ್ತಾನವೇ ಹೊರಹೋಗುವ ಸಾಧ್ಯತೆ ಸಹ ಇದೆ. ಆದರೆ ಭಾರೀ ಅಂತರದಿಂದ ಗೆಲ್ಲಬೇಕು ಮತ್ತು ಭಾರತ ಪಾಕಿಸ್ತಾನಕ್ಕಿಂತ ಉತ್ತಮ ನೆಟ್‌ ರನ್ ರೇಟ್ ಹೊಂದಿರಬೇಕಾಗುತ್ತದೆ.

ಇನ್ನೊಂದು ರೀತಿಯಲ್ಲಿ ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ತಂಡಗಳು ನ್ಯೂಜಿಲೆಂಡ್ ವಿರುದ್ಧವೂ ದೊಡ್ಡ ಜಯ ಪಡೆದರೆ ಅದು ಭಾರತಕ್ಕೆ ವರದಾನವಾಗುತ್ತದೆ. ಆಗ ನ್ಯೂಜಿಲೆಂಡ್ ಆಫ್ಘಾನಿಸ್ತಾನದ ಎದುರು ಗೆದ್ದಿರಬೇಕು ಮತ್ತು ಭಾರತ ನಮೀಬಿಯಾಗಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರಬೇಕಾಗುತ್ತದೆ.. ಭಾರತದ ಪಾಲಿಗೆ ಅತಿ ದೊಡ್ಡ ಸವಾಲು ಇದಾಗಿದೆ. ಅದು ಪುಟಿದೆದ್ದು ಆಡಬೇಕಿದೆ ಮತ್ತು ಭಾರೀ ಅಂತರ ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ. ಆಗಷ್ಟೇ ಉಳಿದ ಸನ್ನಿವೇಶಗಳಿಗೆ ಜೀವ ಬರುತ್ತದೆ. ಏನಾಗುತ್ತದೆ ಕಾದು ನೋಡೋಣ..


ಇದನ್ನೂ ಓದಿ: ಮೊಹಮ್ಮದ್ ಶಮಿ ಬೆನ್ನಿಗೆ ನಿಂತ ವಿರಾಟ್ ಕೊಹ್ಲಿ: ಕೋಮುವಾದಿ ದಾಳಿಗೆ ತೀವ್ರ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...