Homeಅಂಕಣಗಳುಕುಮಾರಣ್ಣ ಮಾಡಿದ್ದು ಅವುನಿಗೇ ಅಟಗಾಯಿಸಿಗತ್ತು?

ಕುಮಾರಣ್ಣ ಮಾಡಿದ್ದು ಅವುನಿಗೇ ಅಟಗಾಯಿಸಿಗತ್ತು?

- Advertisement -
- Advertisement -

ಕರ್ನಾಟಕದಲ್ಲಿ ಈಗ ಆಗಿಹೋದ ಮತದಾನದ ವೈಖರಿ ಗಮನಿಸಿದರೆ, ಮೈತ್ರಿಗಳ ಮುಸುಡಿಗೆ ಸರಿಯಾದ ಹೊಡೆತ ಬೀಳುವಂತೆ ಕಾಣುತ್ತಿದೆಯಲ್ಲಾ. ಯಾಕೆಂದರೆ, ಈ ಮೈತ್ರಿ ಸರಕಾರದ ಮುಖ್ಯಮಂತ್ರಿ ನಾನು ಪರಿಸ್ಥಿತಿಯ ಕೂಸು ಎಂದಿತು. ಆದರೆ ಆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತು ಹೋಗಿದೆ. ಬಿಜೆಪಿಯನ್ನು ಟೀಕಿಸುವುದರ ಜೊತೆಗೆ ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್ಸನ್ನೂ ಟೀಕಿಸಿದೆ. ಇದರಿಂದ ಸಿಟ್ಟಾದ ಕಾಂಗೈಗಳು, ಕೂಸಿನ ಎಳಸು ಮಾತನ್ನು ಗಂಭೀರವಾಗಿಯೇ ಪರಿಗಣಿಸಿ, ಇಂತಹ ಎಳಸಿನ ಮುಖಂಡತ್ವದಲ್ಲಿ ನಾವು ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಎಂದು ಒಂದು ರಾಜಕೀಯ ಕ್ಷೋಭೆಯನ್ನು ಉಂಟುಮಾಡಿದರಲ್ಲಾ. ಈ ಕ್ಷೋಭೆ ಸತತವಾಗಿ ಒಂದು ವರ್ಷ ನಡೆದುದರ ಫಲವಾಗಿ ಸರಕಾರ ದಿಕ್ಕು ದೆಸೆಯಿಲ್ಲದೆ ನಡೆಯುತ್ತಿರುವಾಗಲೇ, ಅತ್ತ ದೇವೇಗೌಡರ ಕುಟುಂಬದ ಅಧಿಕಾರ ದಾಹದ ಫಲವಾಗಿ ಒಕ್ಕಲಿಗರಲ್ಲೇ ಅಸಮಾಧಾನ ಭುಗಿಲೆದ್ದು, ಅದು ಇಡೀ ಕರ್ನಾಟಕಕ್ಕೇ ಹಬ್ಬಿದಾಗ, ಚುನಾವಣೆ ಎದುರಾಗಿ, ಜನಸಮೂಹ “ಬನ್ನಿ ನಿಮ್ಮ ಬುರುಡೆಗೆ ಬಿಸಿನೀರು ಕಾಯಿಸಲು ಇದು ಸರಿಯಾದ ಸಮಯ” ಎಂದು ಕಾಯುತ್ತಿರುವಾಗ, ಮೈತ್ರಿಗಳು ಅದ್ಯಾವ ಬಾಯಿಂದ ನಾವು ಇಪ್ಪತ್ತೆರಡು ಬಾರಿಸುತ್ತೇವೆ ಎಂದು ಹೇಳುತ್ತಿರುವುದೇ ಹಾಸ್ಯಾಸ್ಪದವಾಗಿದೆಯಲ್ಲಾ, ಥೂತ್ತೇರಿ.

ಮೂರು ದಶಕದ ಹಿಂದೆ ಇದೇ ಕಾಂಗೈಗಳು ತಮ್ಮ ಹೆಸರಿಗೆ ಬದಲಾಗಿ, ಇಂದಿರಾಗಾಂಧಿಗೆ ಓಟು ಕೇಳುತ್ತಿದ್ದವು. ದೇವಸ್ಥಾನಕ್ಕೆ ನಿಧಿ ಎತ್ತುವವರು ತಮ್ಮ ಹೆಸರೇಳದೆ ದೇವಿ ಹೆಸರು ಹೇಳಿ ವಂತಿಕೆ ವಸೂಲು ಮಾಡುತ್ತವಲ್ಲ. ಹಾಗೆ ಅಂತದೇ ಒಂದು ಸ್ಥಿತಿಗೆ ಈ ಬಿಜೆಪಿಗಳು ಬಂದು ಕೂತಿವೆಯಲ್ಲಾ. ಇಂದಿರಾಗಾಂಧಿ ಹೆಸರೇ ಬಡಬಗ್ಗರು, ದುರ್ಬಲರು, ಅಲ್ಪಸಂಖ್ಯಾತರಿಗೆ ರೋಮಾಂಚನವುಂಟು ಮಾಡುತ್ತಿತ್ತು. ಆದರೆ ಈ ಮೋದಿ ಹೆಸರು ಚೆಡ್ಡಿಗಳಿಗೆ ಮತ್ತವರ ಮನೆಹಾಳ ಪರಿವಾರಕ್ಕೆ ಮಾತ್ರ ಕೋಸಂಬರಿ ತಿಂದು ಪಾನಕ ಕುಡಿದಷ್ಟು ಆಪ್ಯಾಯಮಾನವಾಗಿದೆಯಲ್ಲಾ. ಮೋದಿ ಮಹಾತ್ಮ ಕಡಿದು ಕಟ್ಟೆಹಾಕಿದ ಯಾವ ಕೆಲಸವೂ ಇಲ್ಲದ ಕಾರಣ ಬಾಯಿಗೆ ಬಂದ ಸುಳ್ಳನ್ನೇ ಒದರುತ್ತಿದ್ದಾನೆ. ಸುಳ್ಳಿಗಿರುವ ಶಕ್ತಿಯನ್ನು ಸರಿಯಾಗಿಯೇ ಗುರುತಿಸಿರುವ ಬಿಜೆಪಿಗಳು ಅದನ್ನೇ ಬೊಗಳುತ್ತಿರುವಾಗ ಅವುಗಳ ಸುಳ್ಳಿಗೆ ಬದಲು ಸತ್ಯ ಸಂಗತಿಯನ್ನು ಸಾರಲು ಈ ಕಾಂಗೈಗಳಿಗೆ ಏನಾಗಿದೆ ಎಂದು ಜನರು ಕೇಳುತ್ತಿರುವಾಗಲೆ, ಸಿದ್ದರಾಮಯ್ಯ ತನ್ನ ಐದು ವರ್ಷದ ಸಾಧನೆಯನ್ನ ಹೇಳುತ್ತಾ ಇಂತಹ ಸಾಧನೆ ಮೋದಿಯಿಂದ ಆಗಿದೆಯೇ ನೀವೇ ಹೇಳಿ ಎಂದಾಗ, ಸಿದ್ದರಾಮಯ್ಯ ಕೊಟ್ಟ ಅಕ್ಕಿ ತಿಂದ ಜನ ಅದನ್ನ ಮರೆತು ಏನೂ ಮಾಡದ ಮೋದಿ ಪರವಾಗಿಲ್ಲ ಎನ್ನುತ್ತಿವೆಯಲ್ಲಾ, ಥೂತ್ತೇರಿ.

ಮಂಡ್ಯ ಚುನಾವಣೆ ಇನ್ನೊಂದು ಚಾಮುಂಡೇಶ್ವರಿ ಚುನಾವಣೆಯಂತಾಗಿ ಅಂತ್ಯಗೊಂಡಿರುವಾಗ, ಆ ಬಗ್ಗೆ ವಾಟಿಸ್ಸೆ ಕೇಳಬೇಕೆನಿಸಿತಲ್ಲಾ. ಕೂಡಲೇ ಫೋನ್ ಮಾಡಲಾಗಿ ರಿಂಗಾಯ್ತು, ರಿಂಗ್ ಠೋನ್ `ಟರ್ರ್ ಟರ್ರ್’ “ಹಲೋ ಹೇಳಿ ಸಾ”.

“ವಾಟಿಸ್ಸೆ ಚುನಾವಣೆ ಯಂಗಾಯ್ತು.”

“ಡಲ್ಲಾಗಿತ್ತು ಸಾ.”

“ಯಾಕೆ?”

“ಯಾಕಂದ್ರೆ ನನ್ನ ಕಣ್ಣೆದುರಿಗೆ ಡ್ರಿಂಕ್ ಅಂಗಡಿಗೆ ಬಾಗಲಾಕಿಸಿಬುಟ್ರು ಸಾ. ಮೊದ್ಲೆ ಗೊತ್ತಿದ್ರೆ ಯಲಕ್ಷನ್ ಮುಗಿಯುವರಿಗೂ ಮೇಂಟೇನಾಗೋವಷ್ಟು ಡ್ರಿಂಕ್ಸ್ ತಗಂಡು ಸ್ಟಾಕ್ ಮಡಿಕಬವುದಿತ್ತು.”

“ಅಂಗಡಿ ಬಾಗಲಾಕಿ ಸೀಲಾಕಿದ್ರು. ಹಿಂದಲ ಬಾಗಲಲ್ಲಿ ಸಿಗತದೆ.”

“ಈ ಸತಿ ಬಾಳ ಸ್ಟಿಕ್ಟು ಸಾರ್, ಆದ್ರು ಓಟು ಮಾಡೋ ಹಿಂದಿನ ದಿನ ನಿಖಿಲ್ ಕಡೆಯೋರಿಂದ ಒಂದೇ ಒಂದು ರಾಜಾ ವಿಸ್ಕಿ ಪ್ಯಾಕೆಟ್ ಸಿಕ್ತು ಸಾ.”

“ಅವುರತ್ರಲೂ ಈಸಗಂಡ್ಯಾ.”

“ಒಂದು ಷರತ್ತ ಮ್ಯಾಲೆ ಕೊಟ್ರು ಸಾರ್.”

“ಏನು ಷರತ್ತು.”

“ನಿಖಿಲ್ ಕುಮಾರ್‌ಸ್ವಾಮಿಗೇ ಓಟಾಕ್ತಿನಿ ಅಂತ ಹೇಳಿದ ಮ್ಯಾಲೆ ಕೊಟ್ರು ಸಾ.”

“ಅಂಗರೆ ನಿನ್ನೋಟು ನಿಖಿಲ್‌ಗೋಯ್ತು.”

“ಏಲ್ಯಾರವುಂಟೆ ಸಾರ್, ಐನೂರ‍್ರುಪಾಯಿ ಈಸಿಗಂಡೋರೆ ಕೈ ಕೊಟ್ರು, ಇನ್ನ ನನ್ನಂಥೋರು ಹಾಕಕ್ಕಾದತೆ.”

“ಐನೂರು ಕೊಟ್ಟೋರು ಧರ್ಮಸ್ಥಳದ ಆಣೆ ಮಾಡಿಸಿದರಂತೆ.”

“ಅದೂ ನ್ಯಡಿತು, ಕ್ಯಾರ್‌ಪೇಟೆ ಪಾಂಡುಪುರ ಇಲ್ಯಲ್ಲ ನ್ಯಡೀತು. ಅದ್ಕೆ ಅಲ್ಲಿ ಸಲುಪ ಸುಮಲತನಿಗೆ ಹಿನ್ನೆಡೆ.”

“ಮದ್ದೂರು ಮಳವಳ್ಳಿ ಯಂಗೆ.”

“ಅಲ್ಲಿ ತಮ್ಮಣ್ಣ ಭಾರಿ ದುಡ್ಡು ಬಡದ ಸಾ. ಆ ನನಮಗನಿಗೆ ಎಲ್ಲಿ ಕುಮಾರಣ್ಣ ಎಗರೋಗಿ ಮಂತ್ರಿಗಿರಿ ಹೋಯ್ತದೋ ಅಂತ ಹೆದ್ರಿಕಂಡು ದುಡ್ಡ ಸುರುದುಬುಟ್ಟ.”

“ಪ್ರಾಪರ್ ಮಂಡ್ಯ ಯಂಗೆ.”

“ಅದ್ಯಂಗೊ ಗೊತ್ತಿಲ್ಲ. ನಮ್ಮ ನಾಗಮಂಗಲದ ಬಗ್ಗೆ ಯಲ್ಲ ಡವುಟು ಮಾಡತಿದ್ರು. ಆದ್ರು ನಾವು ನಂಬಿಕಸ್ಥರು ಅಂತ ತೋರಿದೊ ಸಾ.”

“ಇದು ನಿನ್ನಭಿಪ್ರಾಯನ.”

“ನಾನು, ಜನಗಳ ಜೊತೆ ಇದ್ದಿನಿ ಸಾ.”

“ಕುಡುಕರ ಜೊತೇಲೆ?”

“ನನ್ನಂಥ ಕುಡುಕ್ರು ಕುಡುಕರ ಕೂಡೆ ಇರದಿಲ್ಲ ಸಾರ್, ಅವುರಿಗೆ ಮಾತ ಕೇಳೋ ಜನಗಳು ಬೇಕು, ಅದ್ಕೆ ನಾನು ಜನಗಳ ಜೊತೆ ಇರತಿನಿ, ಈ ಕುಮಾರಸ್ವಾಮಿ ಮಾಡಿದ ಕ್ಯಲಸ ಅವುನಿಗೇ ಅಟಗಾಯಿಸಿಗತ್ತಾ ಅದೆ ಸಾ.”

“ಯಂಗೇ?”

“ಅವುನು ಅವುಳ್ಯಾರೊ ಡಿ.ಸಿ ಹಿಡಕಂಡು ತನ್ನ ಮಗನೆಸರು ಮದಲೇಟಿಗೆ ಪಸ್ಟ್ಬರಂಗೆ ಮಾಡಿದ, ಇದರಿಂದ ಸುಮಲತ 20ನೇ ಕ್ಯಾಂಡೇಟಾದ್ರು. ಜೊತೆಗೆ ಮೇಲೆ ಕ್ಯೆಳಗೆ ಯರಡು ಮೂರು ಸುಮಲತ ಬಿದ್ರು.”

“ನಾನು ನೋಡಿದೆ ಅದ.”

“ಇಪ್ಪತ್ಯೆರುಡು ಜನ ಕ್ಯಾಂಡೇಟಾದ್ರಿಂದ ಯರಡು ಲೈನಾಯ್ತು ಸಾ. ಸುಮಲತ ಲೈನಲ್ಲಿ ಮೊದಲಿದ್ದೋನಿಗೆ ಅದ್ಯಂತದೋ ಸಿತಾರ್ ವಾದ್ಯ ಕೊಟ್ಟಿದ್ರು. ಅದು ಒಂಥರ ಜ್ವಾಳದ ಕಡ್ಡಿವರೆ ಮಡಗಿದಂಗಿತ್ತು. ಅಷ್ಟೇ ಸಾಕು ಈ ಯಬ್ಬೆಟ್ಟಿನವ್ಯಲ್ಲ ಆ ಸಿತಾರ್‌ನ ಹುಲ್ಲೊರೆ ಅಂತ ತಿಳಕಂಡು ಒತ್ತಿ ಮಡಿಗ್ಯವೆ.”

“ಅರರೆ, ಅದ್ಯಂಗೆ.”

“ಸುಮಲತನ ಲೈನಲ್ಲಿ ಮೊದಲನೆಯವನು ಅವುನೆ ಅಲ್ಲವ ಸಾ. ಅದು ಯಬ್ಬೆಟ್ಟಿಗಳಿಗ್ಯಂಗೆ ಗೊತ್ತಾಗಬೇಕು. ಅಂತೂ ನಿಖಿಲ್‌ನ ಕಡೆ ಐವತ್ತೋಟು ದಿಕ್ಕು ತಪ್ಯವೆ, ನಮ್ಮದೊಂದು ಬೂತಲ್ಲೇ ಅಂಗಾದ್ರೆ ಉಳಿದ ಕಡೆ.”

“ಅಂಗರೆ ಸಿತಾರಿನೋನು ತಗದ ಅನ್ನು.”

“ಕುಮಾರಣ್ಣ ಮಾಡಿದ್ದು ಅವನೇ ಅನುಭವುಸಂಗಾಯ್ತು ಸಾ.”

“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...