ದಸರಾ ರ್‍ಯಾಲಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ವೇಷಭೂಷಣ ಧರಿಸಿರುವ ವ್ಯಕ್ತಿಯ ಜೊತೆಗೆ ಬುಲ್ಡೋಝರ್ ಅನ್ನು ಪ್ರದರ್ಶಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯಲ್ಲಿ ನಡೆದಿದೆ. ಅಸಾಂಪ್ರದಾಯಿಕ ಮತ್ತು ಪ್ರಜಾಸತ್ತಾತ್ಮಕ ತತ್ವಕ್ಕೆ ವಿರುದ್ಧವಾದ ಆಡಳಿತಕ್ಕೆ ಹೆಸರುವಾಸಿಯಾಗಿರುವ ಆದಿತ್ಯನಾಥ್ ಅವರು ಬಲಪಂಥೀಯರ ನೆಚ್ಚಿನ ನಾಯಕರಾಗಿದ್ದಾರೆ.
ಮಂಗಳವಾರ ಸಂಜೆ ನಡೆದ ದಸರಾ ರ್‍ಯಾಲಿಯ ಭಾಗವಾಗಿ ಬುಲ್ಡೋಜರ್ ಜೊತೆಗೆ ಆದಿತ್ಯನಾಥ್ ಅವರ ವೇಷಭೂಷಣ ಧರಿಸಿರುವ ವ್ಯಕ್ತಿಯ ಜೊತೆಗೆ ಬುಲ್ಡೋಝರ್ ಅನ್ನು ರ್‍ಯಾಲಿಯಲ್ಲಿ ಪ್ರದರ್ಶಿಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವೀಡಿಯೋದಲ್ಲಿ, ಸಿಎಂ ಆದಿತ್ಯನಾಥ್‌ರಂತೆ ವೇಷ ಧರಿಸಿದ ವ್ಯಕ್ತಿ ಕಾಣಿಸಿಕೊಂಡಿದ್ದಾರೆ. ಅವರ ಸುತ್ತ ಅಂಗರಕ್ಷಕರ ವೇಶ ಧರಿಸಿರುವವರು ಕೂಡಾ ವಿಡಿಯೊದಲ್ಲಿ ದಾಖಲಾಗಿದೆ. ಅಷ್ಟೆ ಅಲ್ಲದೆ ಬುಲ್ಡೋಜರ್ ಅನ್ನು ಕೂಡಾ ಅದರಲ್ಲಿ ನಿಲ್ಲಿಸಲಾಗಿದೆ.
ಈ ಟ್ಯಾಬ್ಲೋವನ್ನು ಬಿಜೆಪಿ ಬೆಂಬಲಿತ ಸಂಘಟನೆಗಳಾದ ವಿಎಚ್‌ಪಿ ಮತ್ತು ಬಜರಂಗದಳದ ನೇತೃತ್ವದಲ್ಲಿ ಮಾಡಲಾಗಿದೆ ಎಂಬುವುದು ಟ್ಯಾಬ್ಲೊ ಸುತ್ತ ಹಾಕಿರುವ ಬ್ಯಾನರ್‌ಗಳ ಮೂಲಕ ತಿಳಿದು ಬಂದಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಬಾಲಕನನ್ನು ಹೊಡೆದು ಕೊಂದ ಸವರ್ಣೀಯ ಶಿಕ್ಷಕ
ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಜನರು ಇದನ್ನು ಖಂಡಿಸಿದ್ದು, ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಬೆಂಬಲಿತ ಬಲಪಂಥೀಯ ಗುಂಪುಗಳು ಇತ್ತೀಚಿಗೆ ರಾಜ್ಯದಲ್ಲಿ ‘ಆದಿತ್ಯನಾಥ್ ಮಾದರಿ’ ಆಡಳಿತವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.


