’ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝೂನ್ಸಿ’ ಚಿತ್ರದ ನಿರ್ದೇಶನದ ಬಗ್ಗೆ ನಟಿ ಕಂಗನಾ ರಣಾವತ್ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ನಿರ್ದೇಶಕ ಕ್ರಿಶ್ ಜಗಾರ್ಲಮುಡಿ, ವಿವಾದದ ಬಗ್ಗೆ ಮಾತನಾಡಿದ ಕ್ರಿಶ್, ಕಂಗನಾರಿಂದ ತಾನು ಜಗತ್ತಿಗೆ ಅಪರಿಚಿತನಾಗಿರಬಹುದೆಂಬ ಭಯವಿದೆ ಎಂದು ಹೇಳಿದ್ದಾರೆ.
ನಟಿ ಸಮಂತಾ ಅವರ ಟಾಕ್ ಶೋ ಸ್ಯಾಮ್ ಜಾಮ್‌ನಲ್ಲಿ ಕೊನೆಯ ಬಾರಿಗೆ ವಿವಾದದ ಬಗ್ಗೆ ಮಾತನಾಡುತ್ತೇನೆ ಎಂದು ಹೇಳುತ್ತಾ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ನಟಿ ರಾಕುಲ್ ಪ್ರೀತ್ ಸಿಂಗ್ ಜೊತೆಗೆ ಟಾಕ್ ಶೋ ಸ್ಯಾಮ್ ಜಾಮ್‌ನಲ್ಲಿ ಕಾಣಿಸಿಕೊಂಡರು.
ಡಿಸೆಂಬರ್ 18 ರಂದು ಒಟಿಟಿ ಪ್ಲಾಟ್‌ಫಾರ್ಮ್ ಆಹಾ ನಲ್ಲಿ ಪ್ರಸಾರವಾಗಲಿರುವ, ನಟಿ ಸಮಂತಾ ಅವರ ಟಾಕ್ ಶೋ ಸ್ಯಾಮ್ ಜಾಮ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್ ಮತ್ತು ಕ್ರಿಶ್ ಜಗಾರ್ಲಮುಡಿ ಅವರು ಅತಿಥಿಗಳಾಗಿದ್ದಾರೆ. ಇತ್ತೀಚೆಗೆ, ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಇಬ್ಬರು ಕಲಾವಿದರು ತಮ್ಮ ಸುತ್ತಲು ಹರಡಿದ್ದ, ಕಾಡಿದ ವಿವಾದಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ನಟಿ ಕಂಗನಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್
ಮಣಿಕರ್ಣಿಕಾ ಮತ್ತು ಕಂಗನಾ ರಣಾವತ್ ಅವರೊಂದಿಗೆ ಏನಾಯಿತು ಎಂದು ನಟಿ ಸಮಂತಾ ಕೇಳಿದಾಗ, “ನಾನು ಕೊನೆಯ ಬಾರಿಗೆ ಮಾತನಾಡಲು ಬಯಸುತ್ತೇನೆ. ಕಂಗನಾ ಮತ್ತು ಅವಳ ತಂಡವು ಚಿತ್ರವನ್ನು ವೀಕ್ಷಿಸಿತ್ತು. ಆದಾಗಿ ಎರಡು ದಿನಗಳ ನಂತರ ನನಗೆ ಕರೆ ಬಂತು ಎಂದಿದ್ದಾರೆ. ನನ್ನ ಏಕೈಕ ಭಯವೆಂದರೆ ಕಂಗನಾ ಕಾರಣಕ್ಕೆ ನಾನು ಜಗತ್ತಿಗೆ ಅಪರಿಚಿತನಾಗಿರಬಹುದು. ಕಲಾವಿದರಾದ ನಾವು ಉತ್ತಮ ಅವಕಾಶಗಳನ್ನು ಪಡೆದಾಗ ಮಾತ್ರ ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಬಹುದು” ಎಂದು ಕ್ರಿಶ್ ಹೇಳಿದ್ದಾರೆ.
. @Rakulpreet and @DirKrish open up about life, career, controversies and more on #SamJam.
Episode 5 Premieres December 18, Checkout the promo.#SamJAmOnAHA @SamanthaPrabhu2 @theSamJamShow pic.twitter.com/7LHMTV5ffc
— ahavideoIN (@ahavideoIN) December 14, 2020
ಮಣಿಕರ್ಣಿಕಾ ಚಿತ್ರ ವಿವಾದವೇನು…?
2019 ರಲ್ಲಿ ನಟಿ ಕಂಗನಾ ರಣಾವತ್ ಮಣಿಕರ್ಣಿಕಾ: ರಾಣಿ ಆಫ್ ಝಾನ್ಸಿ ಚಿತ್ರವನ್ನು ವಹಿಸಿಕೊಂಡು, ಚಿತ್ರದ ಬಹಳಷ್ಟು ಭಾಗಗಳನ್ನು ಮತ್ತೆ ಚಿತ್ರೀಕರಿಸಿದರು. ನಿರ್ದೇಶಕ ಕ್ರಿಶ್ ಜಗಾರ್ಲಮುಡಿ ಅವರೊಂದಿಗೆ ಸಹ-ನಿರ್ದೇಶಕರ ಕ್ರೆಡಿಟ್ ಕೂಡ ಹಂಚಿಕೊಂಡಿದ್ದರು. ನಂತರ ಚಿತ್ರದ 70 ಪ್ರತಿಶತವನ್ನು ತಾವೇ ನಿರ್ದೇಶಿಸಿದೆ ಎಂದು ಕಂಗನಾ ಹೇಳಿಕೊಂಡಿದ್ದರು. ಇದಕ್ಕೆ ಆಕೆಯ ಸಹೋದರಿ ರಂಗೋಲಿ ಬೆಂಬಲವಾಗಿ ನಿಂತಿದ್ದರು.
ಇದನ್ನೂ ಓದಿ: ’ಶಾಹೀನ್ ಬಾಗ್ ದಾದಿ’ಯ ಕುರಿತು ಆಕ್ಷೇಪಾರ್ಹ ಹೇಳಿಕೆ- ನಟಿ ಕಂಗನಾಗೆ ಕಾನೂನು ನೋಟಿಸ್
ಈ ಬಗ್ಗೆ ನಿರ್ದೇಶಕ ಕ್ರಿಶ್ ಜಗಾರ್ಲಮುಡಿ ಹಲವಾರು ಸಂದರ್ಶನಗಳಲ್ಲಿ, ಕಂಗನಾ ಅವರಿಂದ ಚಿತ್ರವನ್ನು ಸ್ವಾಧೀನಪಡಿಸಿಕೊಂಡ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಜೊತೆಗೆ ಚಿತ್ರದಲ್ಲಿ ಹಲವರ ಪಾತ್ರಗಳನ್ನು ಕಡಿತಗೊಳಿಸಿ, ಸಣ್ಣ ಪುಟ್ಟ ಬದಲಾವಣೆ ಮಾಡಬೇಕು ಎಂದು ಏನೇನೋ ಬದಲಾವಣೆ ಮಾಡಿದರು’ ಎಂದು ಆರೋಪಿಸಿದ್ದರು.
ವಿವಾದದಿಂದ ಬೇಸತ್ತ ಕ್ರಿಶ್, “ಕಂಗನಾ ಮತ್ತು ನಾನು ಇಬ್ಬರೂ ಈ ಉದ್ಯಮದಿಂದ ಬೇಗ ದೂರ ಸರಿಯುವುದಿಲ್ಲ. ಭವಿಷ್ಯದಲ್ಲಿ ನಾನು ಇನ್ನೂ ಅನೇಕ ಚಿತ್ರಗಳನ್ನು ನಿರ್ದೇಶಿಸುತ್ತೇನೆ ಮತ್ತು ಅವರು ಕೂಡ ಚಿತ್ರರಂಗದಲ್ಲಿರುತ್ತಾರೆ. ಯಾರು ಎಲ್ಲಿ ನಿಲ್ಲುತ್ತಾರೆ ಎಂದು ಜನರಿಗೆ ತಿಳಿಯುತ್ತದೆ. ನಾನು ಕಂಗನಾ ಮತ್ತು ಇಡೀ ವಿವಾದದಿಂದ ದಣಿದಿದ್ದೇನೆ” ಎಂದು ಹೇಳಿದ್ದರು.
ಈಗ ಈ ಟಾಕ್ ಶೋನಿಂದ ಮತ್ತೊಮ್ಮೆ ಮಣಿಕರ್ಣಿಕಾ ಚಿತ್ರ ವಿವಾದ ಜನರ ನೆನಪಿಗೆ ಬಂದಿದೆ. ಬರೀ ಪ್ರೋಮೋ ಇಷ್ಟೊಂದು ವೈರಲ್ ಆಗಿದೆ. ಡಿಸೆಂಬರ್ 18 ರಂದು ಪೂರ್ತಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ಕ್ರಿಶ್ ವಿವಾದದ ಬಗ್ಗೆ ಏನೇನು ಹೇಳಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಹೊರಬರಲಿದೆ.
ನಟಿ ಕಂಗನಾ ರಣಾವತ್ ಇತ್ತಿಚೆಗೆ ಹೆಚ್ಚು ಹೆಚ್ಚು ಟ್ರೋಲ್ ಮತ್ತು ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲೇ ಮತ್ತೆ ಮಣಿಕರ್ಣಿಕಾ ವಿವಾದ ಹೊರ ಬಿದ್ದಿದೆ.


