ಮಣಿಪುರದ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ ಸಂಪೂರ್ಣ ಅಥವಾ ಭಾಗಶಃ ಸುಟ್ಟು ಭಸ್ಮವಾಗಿರುವ ವಸತಿಗಳು ಮತ್ತು ಆಸ್ತಿಗಳ ವಿವರಗಳನ್ನು ಮುಚ್ಚಿದ ಕವರ್‌ನಲ್ಲಿ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಮಣಿಪುರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮಣಿಪುರ ಹಿಂಸಾಚಾರ
ಅಪರಾಧಿಗಳು ಮತ್ತು ಅತಿಕ್ರಮಣದಾರರ ವಿರುದ್ಧ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಹೇಳುವಂತೆ ಕೂಡಾ ರಾಜ್ಯ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕೇಳಿದೆ. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಜನವರಿ 20 ನಂತರದ ಅರ್ಜಿಯ ವಿಚಾರಣೆಗೆ ನಿಗದಿಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕಳೆದ ವರ್ಷ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್, ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಮತ್ತು ಅವರಿಗೆ ಪರಿಹಾರವನ್ನು ಮೇಲ್ವಿಚಾರಣೆ ಮಾಡಲು ಮೂವರು ಮಾಜಿ ಮಹಿಳಾ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯನ್ನು ಸ್ಥಾಪಿಸಲು ಆದೇಶಿಸಿತ್ತು. ಜೊತೆಗೆ ಅಪರಾಧ ಪ್ರಕರಣಗಳ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಮಹಾರಾಷ್ಟ್ರದ ಮಾಜಿ ಪೊಲೀಸ್ ಮುಖ್ಯಸ್ಥ ದತ್ತಾತ್ರೇ ಪಡಸಾಲ್ಗಿಕರ್ ಅವರನ್ನು ಕೇಳಿತ್ತು. ಮಣಿಪುರ ಹಿಂಸಾಚಾರ
2023ರ ಮೇ 3ರಂದು ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಜನಾಂದ ನಡುವೆ ಜನಾಂಗೀಯ ಹಿಂಸಾಚಾರಗಳು ಭುಗಿಲೆದ್ದಿತ್ತು. ನವೆಂಬರ್ 2024 ರ ಅಂತ್ಯದ ವೇಳೆಗೆ ಹಿಂಸಾಚಾರದಲ್ಲಿ 258 ಜನರು ಮೃತಪಟ್ಟಿದ್ದಾರೆ. ಹಿಂಸಾಚಾರದಿಂದ 9,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸುಮಾರು 60,000 ಜನರು ನಿರಾಶ್ರಿತರಾಗಿದ್ದಾರೆ. ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸುವುದರೊಂದಿಗೆ ಪರಿಸ್ಥಿತಿಯು ಉಲ್ಬಣಗೊಳ್ಳುತ್ತಲೆ ಇದೆ.
ಈ ನಡುವೆ, ಮಣಿಪುರದ ವಿವಿಧ ಕಾಲೇಜುಗಳ ಕನಿಷ್ಠ 200 ಬುಡಕಟ್ಟು ವಿದ್ಯಾರ್ಥಿಗಳು ರಾಜಧಾನಿ ಇಂಫಾಲ್‌ನ ರಾಜಭವನದ ಬಳಿ 2023-24ರ ಪರಿಶಿಷ್ಟ ಪಂಗಡದ ವಿದ್ಯಾರ್ಥಿವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಎಲ್ಲಾ ಕಾಲೇಜು ಬುಡಕಟ್ಟು ವಿದ್ಯಾರ್ಥಿ ಒಕ್ಕೂಟದ (ಎಸಿಟಿಎಸ್‌ಯು) ನೇತೃತ್ವದಲ್ಲಿ ರಾಜಭವನದ ಬಳಿಯ ಜಿಪಿ ಮಹಿಳಾ ಕಾಲೇಜು ಎದುರು ಜಮಾಯಿಸಿದ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ.
ಸ್ಥಳದಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಪಡೆಗಳು ಅವರನ್ನು ರ್ಯಾಲಿ ನಡೆಸದಂತೆ ತಡೆದರು. ಇದು ಸ್ವಲ್ಪ ಸಮಯದ ಘರ್ಷಣೆಗೆ ಕಾರಣವಾಯಿತು. ಧರಣಿ ನಿರತ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಕೆಲವು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿ ಪ್ರತಿನಿಧಿ ಜಿ ಪನ್ಮೆ, ”2023-24ರ ನಮ್ಮ ಎಸ್‌ಟಿ ವಿದ್ಯಾರ್ಥಿವೇತನ ಇನ್ನೂ ಬಿಡುಗಡೆಯಾಗಿಲ್ಲ. ನಂತರ ಬುಡಕಟ್ಟು ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡನ್ನು ಮಣಿಪುರಕ್ಕೆ ಹೋಲಿಸಿದ ನಟ ವಿಜಯ್; ವಿರೋಧ ವ್ಯಕ್ತಪಡಿಸಿದ ಡಿಎಂಕೆ
ತಮಿಳುನಾಡನ್ನು ಮಣಿಪುರಕ್ಕೆ ಹೋಲಿಸಿದ ನಟ ವಿಜಯ್; ವಿರೋಧ ವ್ಯಕ್ತಪಡಿಸಿದ ಡಿಎಂಕೆ


