Homeಮುಖಪುಟಮನುಜಮತ ಸಿನೆಮಾ ಹಬ್ಬ : ಹೊಸ ಕಾಲದ ಸಮುದಾಯ ಕಟ್ಟುವ ನಡೆ

ಮನುಜಮತ ಸಿನೆಮಾ ಹಬ್ಬ : ಹೊಸ ಕಾಲದ ಸಮುದಾಯ ಕಟ್ಟುವ ನಡೆ

- Advertisement -
- Advertisement -

| ಕೆ.ಫಣಿರಾಜ್ |

ಈ ಮನುಜಮತ ಸಿನೆಮಾ ಹಬ್ಬದ ಶುರುವಾಗಿದ್ದು, ನಡೆದುಕೊಂಡು ಬರುತ್ತಿರುವ ರೀತಿಯೇ ಸ್ವಾರಸ್ಯಕರವಾದ ಮತ್ತು ಖುಷಿ ಕೊಡುವಂಥದ್ದಾಗಿದೆ. ಮುಂದಿನ ಸಿನೆಮಾ ಹಬ್ಬ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದು ಅದಕ್ಕೆ ಪೂರ್ವಭಾವಿಯಾಗಿ ನಾನುಗೌರಿ.ಕಾಂ ಓದುಗರಿಗಾಗಿ ಈ ಲೇಖನ. ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಮತ್ತು ಕನ್ನಡದ ಪ್ರಮುಖ ಚಿಂತಕರು ಹಾಗೂ ಈ ಬಳಗದ ಯುವ ಸದಸ್ಯರಾದ ಫಣಿರಾಜ್ ಅವರು ನಾನುಗೌರಿ.ಕಾಂ ಗಾಗಿಯೇ ಬರೆದ ಲೇಖನವಿದು.

 ವ್ಯಾಟ್ಸಪ್ ಎಂಬ ಆಧುನಿಕ ಸಂತೆಕಟ್ಟೆ: ಆಧುನಿಕ ಸಾಮಾಜಿಕ ಜಾಲತಾಣಗಳ ಪ್ರಭಾವ-ಪರಿಣಾಮಗಳ ಬಗ್ಗೆ ಒಳಿತು-ಕೆಡಕುಗಳ ಅತಿಯಲ್ಲಿ ನಿಂತು ಎಷ್ಟೂ ಚರ್ಚಿಸಬಹುದು. ದ್ವೇಷ ಹರಡುವುದಕ್ಕೆ, ಹಿಂಸೆ ಪ್ರಚೋದಿಸುವುದಕ್ಕೆ ಬಳಕೆಯಾದಷ್ಟೇ, ಮುಖಹೀನವಾದ ಸಂವಾದ ಸಖ್ಯಕ್ಕೂ ಸಾಮಾಜಿಕ ಜಾಲತಾಣಗಳು ಒದಗಿ ಬರುತ್ತಿವೆ. ತಕ್ಷಣದ ಭಾವಕ್ಕೆ ಕಾವು ಹೊತ್ತಿಸಿ ಟಪ್ಪನೇ ಕಾಮೆಂಟು ಒತ್ತುವುದಕ್ಕೆ ಪ್ರಚೋಧನೆ ನೀಡುವ ವ್ಯಾಟ್ಸಪ್, ನಿರಾಕಾರಿ ಇ-ಲೋಕದ ಸಂತೆಕಟ್ಟೆಯೇ ಸರಿ: ಹಲವು ಬಗೆಯ ಜನರ ಹಾಸ್ಯ-ಹರಟೆ-ವಾಗ್ವಾದ-ಜಿಜ್ಞಾಸೆಗಳಿಗೆ ಸುಮ್ಮನ್ನೇ ಕಿವಿಗೊಡುತ್ತ ಕೂತರೂ, ಒಂದು ಲೋಕಾನುಭವದ ಗಾಳಿ ನಮ್ಮ ಬುದ್ಧಿಭಾವಗಳನ್ನು ಹಾಯ್ದು ಹೋಗುತ್ತದೆ.

‘ಸಮನ್ವಯ-ಮನುಜಮತ’ ಎನ್ನುವ ಕನ್ನಡದ ವ್ಯಾಟ್ಸಪ್‌ ಬಳಗವನ್ನು ಹರ್ಷಕುಮಾರ್ ಕುಗ್ವೆ, ಪ್ರಶಾಂತ್ ಹುಲಕೋಡು ಹಾಗು ಕಿರಣ್‌ ಮಾರಶೆಟ್ಟಿಹಳ್ಳಿಎಂಬ ಶಿಮೊಗ್ಗಿ ಕಡೆ ಯುವಕರು ಜೂನ್ 2015ರಲ್ಲಿ ಕಟ್ಟಿದರು. ಕರ್ನಾಟಕದ ಬರಹಗಾರರು, ಕಲಾವಿದರು, ಪತ್ರಕರ್ತರು, ಚಳುವಳಿಗಾರರನ್ನು ಒಂದು ವೇದಿಕೆಯಲ್ಲಿ ಒಗ್ಗೂಡಿಸಿ ಸಮಕಾಲೀನ ಸಮಾಜದ ಬಗ್ಗೆ ಗಂಭೀರವಾದ ಚರ್ಚೆಗಳನ್ನು ನಡೆಸುವುದು ಈ ಯುವಕರ ಉದ್ದೇಶವಾಗಿತ್ತು. ಹಾಸ್ಯ-ಹರಟೆಯ ಜೊತೆಗೆ ತೀವ್ರ ಭಿನ್ನಮತಗಳ ಕಾವಿನ ಪ್ರಸ್ತುತ ವಿದ್ಯಮಾನಗಳ ಚರ್ಚೆಗೆ ಈ ಗುಂಪು ಖ್ಯಾತಿಪಡೆಯಿತು. ಹೀಗೆ ವಿಶಿಷ್ಠವಾಗಿದ್ದ ಈ ಗುಂಪು 2016ರಲ್ಲಿ ಒಂದು ಹೊಸ ಕ್ರಿಯಾಶೀಲ ತಿರುವನ್ನು ಕಂಡುಕೊಂಡಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ,ಕಾಡು ಒತ್ತುವರಿ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದ ಅಧಿಕಾರಸ್ಥನೊಬ್ಬ ಸುಂದರ ಮಲೆಕುಡಿಯ ಎಂಬ ಆದಿವಾಸಿಯ ಕೈ ಕತ್ತರಿಸಿದ ಘಟನೆ ನಡೆಯಿತು; ಸಹಜವಾಗೇ ಈ ವಿದ್ಯಮಾನದ ಬಗ್ಗೆ ಸಮನ್ವಯ ಗುಂಪಿನಲ್ಲಿ ಕಾಳಜಿಯುತ ಚರ್ಚೆ ಶುರುವಾಗಿ, ನಮ್ಮ ಕಾಳಜಿಯು ಬರೀ ಮುಖಹೀನ ಚರ್ಚೆಯನ್ನು ಮೀರಿ ಸಕ್ರಿಯ ಸಾಮಾಜಿಕ ಕಾರ್ಯಾಚರಣೆಯಾಗಿ ವಿಸ್ತರಿಸಬೇಕು ಎನ್ನುವ ಅಭಿಪ್ರಾಯಗಳು ಬರತೊಡಗಿದವು. ಘಟನೆ ನಡೆದ ಎರಡೇ ದಿನಗಳಲ್ಲಿ ಗುಂಪಿನ ಸದಸ್ಯರು, ಸುಂದರ ಮಲೆಕುಡಿಯ ಅವರ ಬೆಂಬಲಾರ್ಥ ಹಣ ಒಗ್ಗೂಡಿಸಿ ಅವರ ಆಸ್ಪತ್ರೆ ಖರ್ಚಿಗೆ ನೆರವಾಗತೊಡಗಿದರು; ಬೆಂಗಳೂರು ಸೇರಿದಂತೆ, ಸದಸ್ಯರು ಸಂಘಟನಾತ್ಮಕ ಬಲ ಹೊಂದಿದ ಕಡೆಯಲ್ಲೆಲ್ಲಾ, ಸಾರ್ವಜನಿಕ ಪ್ರತಿಭಟನೆ ನಡೆಸಿ, ಘಟನೆಯನ್ನು ಸಾರ್ವಜನಿಕ ಪ್ರಜ್ಞೆಗೆ ತರುವಲ್ಲಿ ಯಶಸ್ವಿಯಾದರು. ಇಂತು, ಲೋಕಾಭಿರಾಮದ ವೇದಿಕೆಯಾಗಿದ್ದ ಪುಟ್ಟ ಸಾಮಾಜಿಕ ಜಾಲತಾಣ ವಲಯವು, ವಾಸ್ತವಿಕ ಲೋಕಕ್ಕೆ ಉತ್ತರದಾಯಿಯಾಗುವ ಖದರನ್ನು ಗಳಿಸಿತು.

ಸಿನೆಮ ಹಬ್ಬ ಪ್ರಯೋಗ: 2016ರ ಅಗಸ್ಟ್ ತಿಂಗಳ ಮಧ್ಯದ ಒಂದು ದಿನ ಸಂಜೆ 4 ಗಂಟೆಗೆ, ಸಮನ್ವಯ ಗುಂಪಿನಲ್ಲಿ ಸದಸ್ಯರೊಬ್ಬರು ತಾವು ಮೆಚ್ಚಿದ ಸಿನೆಮಾವೊಂದರ ಕುರಿತು ವಿಚಾರ ಹಂಚಿಕೊಂಡರು; ಆ ಸಿನೆಮಾ ಸುತ್ತ ಶುರುವಾದ ಮಾತುಕತೆಯ ಹುಮ್ಮಸ್ಸಿನಲ್ಲಿ ಸದಸ್ಯರು ತಮ್ಮ ಇಷ್ಟದ ಸಿನೆಮಾಗಳ ಬಗ್ಗೆ ಮಾತಾಡತೊಡಗಿದರು; ಒಂದು ನಿಮಿಷವೂ ಬಿಡುವಿಲ್ಲದಂತೆ ಸಿನೆಮಾ ಸರಪಳಿಯು ಮರುದಿನ ಸಂಜೆ 5 ಗಂಟೆಯವರೆಗೆ ಮುಂದುವರೆಯಿತು! ಗುಂಪಿನಲ್ಲಿ, ಜಗತ್ತಿನ ಅತ್ತ್ಯುತ್ತಮ ಸಿನೆಮಾಗಳನ್ನು ನೋಡಿ ಚರ್ಚಿಸಬಲ್ಲ ಇಷ್ಟು ಜನ ಇರುವಾಗ, ಈ ಅನುಭವ ಹಾಗು ಉತ್ಸಾಹವವನ್ನು ಯಾಕೆ ಗುಂಪಿನಾಚೆಗೂ ವಿಸ್ತರಿಸಬಾರದು ಎಂಬ ಚರ್ಚೆ ಶುರುವಾಯಿತು; ಆ ಚರ್ಚೆಯ ಫಲವಾಗಿ, ಗುಂಪಿನ ವತಿಯಿಂದ ‘ಸಮನ್ವಯ-ಮನುಜಮತ ಸಿನೆಮಾ ಹಬ್ಬ’ ಒಂದನ್ನು ನಡೆಸಲು ನಿರ್ಧರಿಸಲಾಯಿತು. ಆ ಹೊತ್ತಿಗೆ ಅದು ಗುಂಪಿನ ಸದಸ್ಯರು ಮುಖತಃ ಒಟ್ಟು ಸೇರಿ, ಗುಂಪಾಗಿ ಸಿನೆಮಾ ನೋಡಿ, ಅನುಭವ ಹಂಚಿಕೊಳ್ಳುವ ಮೂಲಕ ವಾಸ್ತವಿಕ ಲೋಕದಸಮುದಾಯವಾಗಿ ಹರಳುಗಟ್ಟಬೇಕು ಎಂಬ ಸೀಮಿತ ಉದ್ದೇಶವನ್ನು ಮಾತ್ರ ಇಟ್ಟುಕೊಳ್ಳಲಾಗಿತ್ತು.

ಹಬ್ಬದ ಪ್ರಸ್ತಾಪಕ್ಕೆ ಉತ್ಸಾಹದ ಸಹಮತ ದೊರತದ್ದೇ, ಗುಂಪಿನಲ್ಲಿದ್ದ ಶಿವಮೊಗ್ಗ ಗೆಳೆಯರು ಸಿನೆಮಾ ಹಬ್ಬ ಆಯೋಜನೆಯ ಜವಾಬ್ದಾರಿ ವಹಿಸಿಕೊಂಡು ಬಿಟ್ಟರು. 2016ರ ಅಕ್ಟೋಬರ್ ತಿಂಗಳ ಎರಡನೇ ಶನಿವಾರ-ಭಾನುವಾರ ಕುಪ್ಪ್ಳಿಯಲ್ಲಿ ನಡೆದ ಮೊದಲ ಹಬ್ಬದಲ್ಲಿ ಸಮನ್ವಯ ಗುಂಪಿನ 30 ಸದಸ್ಯರೂ, 35 ಜನ ಗುಂಪಿನಾಚೆಗಿನ ಶಿವಮೊಗ್ಗ ಜಿಲ್ಲೆಯ ನಾಗರಿಕರು (ಪ್ರದರ್ಶನ ಸಭಾಂಗಣದ ಗರಿಷ್ಠ ಮಿತಿ 60 ಆಗಿದ್ದರೂ) ನೋಂದಾಯಿಸಿಕೊಂಡರು. ಎರಡು ದಿನ ಆರು ಆಯ್ದ ಸಿನೆಮಾಗಳ ಪ್ರದರ್ಶನ ಹಾಗು ಚರ್ಚೆಯ ಜೊತೆ, ಕುಪ್ಪ್ಳಿಯ ಪ್ರಕೃತಿ ತಾಣಗಳ ಚಾರಣದ ಹಿಗ್ಗೂ ಹೆಣೆದುಕೊಂಡು ಬಿಟ್ಟಿತು. ಬೇರೆ ಬೇರೆ ಬದುಕಿನ ಹಿನ್ನೆಲೆ, ವಿಚಾರ, ವಯೋಮಾನಗಳ ಜನ ಒಟ್ಟಿಗೆಸಿನೆಮಾ ನೋಡಿ, ಪ್ರತಿ ಸಿನೆಮಾದ ನಂತರ ಮುಕ್ಕಾಲು ಗಂಟೆಯಷ್ಟು ಕಾಲ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಂತೆ ಏರ್ಪಾಡಾಗಿದ್ದ ಕಾರ್ಯಕ್ರಮ ಯೋಜನೆ, ಭಾಗವಹಿಸಿದವರಿಗೆ ಎಷ್ಟು ಮೆಚ್ಚಿಗೆಯಾಯ್ತು ಎಂದರೆ, ಮತ್ತೊಂದು ಹಬ್ಬ ಏರ್ಪಡಿಸಿ ಎಂಬ ಸಹೃದಯ ಒತ್ತಾಯವ್ಯಕ್ತವಾಯಿತು.

ಇದಕ್ಕೆ ಸ್ಪಂದಿಸಿದ ಹಾಸನದ ಗೆಳೆಯರು ಎರಡನೇ ಹಬ್ಬವನ್ನು 2017ರ ಫೆಬ್ರವರಿಯಲ್ಲಿ ಹಾಸನದಲ್ಲಿ ಆಯೋಜಿಸಿದರು; ಕರ್ನಾಟಕದ ವಿವಿಧ ಪ್ರದೇಶದಿಂದ ಬಂದವರು ಹಾಗು ಸ್ಥಳೀಯವಾಗಿ ಭಾಗವಹಿಸಿದವರ ಒಟ್ಟು ಸಂಖ್ಯೆ ನೂರು ಮೀರದಿದ್ದರೂ, ಈ ಬಗೆಯ ಸ್ಥಳೀಯ ಸಿನೆಮಾ ಹಬ್ಬದ ಅನುಭವವು ಭಾಗವಹಿಸಿದವರಿಗೆ ತುಂಬಾ ಹಿಡಿಸಿಬಿಟ್ಟಿತು; ಸ್ಪೂರ್ತಿ ಇಮ್ಮಡಿಯಾಯಿತು; 2017ರ ಕೊನೆಯಹೊತ್ತಿಗೆ ಉಡುಪಿ ಹಾಗು ಮಂಗಳೂರಿನಲ್ಲಿ ಮತ್ತೆರಡು ’ಮನುಜಮತ ಸಿನೆಮ ಹಬ್ಬ’ಗಳು ಯಶಸ್ವಿಯಾಗಿ ನಡೆದವು. ’ಸಮನ್ವಯಮನುಜಮತ’ ಗುಂಪಿನ ಸದಸ್ಯರಾಚೆಗಿನ ನಾಗರಿಕರ ಸಖ್ಯ ಹಾಗು ಒಲವನ್ನು ಸಿನೆಮಾ ಹಬ್ಬವು ದಕ್ಕಿಸಿಕೊಂಡು, ಇನ್ನೂರು-ಇನ್ನೂರೈವತ್ತು ಜನರ ಪುಟ್ಟ ಸಮುದಾಯ ಕಟ್ಟಿಕೊಂಡು ಬಿಟ್ಟಿತು.

ಸಿನೆಮಾ ವೀಕ್ಷಣೆಯ ಒಲವಿನ ಕಾರಣವಾಗಿ, ವಾಸ್ತವಿಕ ಸನ್ನಿವೇಶದಲ್ಲಿ ಒಟ್ಟಾಗಿ ಭಾಗವಹಿಸಿ, ಜಾತಿ-ಮತ-ಲಿಂಗಗಳಾಚೆ, ಸಮಾಜದ ಒಳಿತಿನ ಪರ ಕಾಳಜಿಯುಳ್ಳ ನಾಗರಿಕರು ಒಂದು ಸಮುದಾಯವಾಗಿ ಹರಳಿಗಟ್ಟಿಕೊಳ್ಳುತ್ತಿರುವ ಬಗೆಯನ್ನು ಕಂಡಾಗ, ಸಿನೆಮಾ ಹಬ್ಬದ ಸರಣಿಯನ್ನು ಮುಂದುವರೆಸುವುದೆಂದು ನಿರ್ಧರಿಸಲಾಯಿತು. ಅಂತೆಯೇ, ಕುಪ್ಪ್ಳಿಯಲ್ಲಿ-3, ಮಂಗಳೂರಲ್ಲಿ-3, ಹಾಸನದಲ್ಲಿ-3 ಹಾಗು ಉಡುಪಿ, ಶಿವಮೊಗ್ಗ ಮತ್ತು ಮೂಡಿಗೆರೆಯಲ್ಲಿ ತಲಾ ಒಂದು- ಹೀಗೆ 12 ಸಿನೆಮಾ ಹಬ್ಬಗಳು ಆಯೋಜನೆಯಾಗಿವೆ. ಪ್ರತಿ ಹಬ್ಬದೊಂದಿಗೆ,ಬಳಗವು ವಿಸ್ತರಿಸುತ್ತಿದ್ದು, ವಿಸ್ತರಿತ ಬಳಗವನ್ನು ಒಳಗೊಂಡ, ಸಿನೆಮಾಗಳ ಬಗ್ಗೆ ಮಾತ್ರವೇ ಮಾತಾಡಿಕೊಳ್ಳಲು ಅವಕಾಶವಿರುವ ‘ಮನುಜಮತ ಸಿನಿಯಾನ’ ಎಂಬ ಸ್ವತಂತ್ರ ಗ್ರೂಪನ್ನು ಕಟ್ಟಲಾಗಿದೆ.

ಹೊಸಕಾಲದಲ್ಲಿ ಹೊಸ ಸಮುದಾಯ: ನಮ್ಮ ನಾಡಿನಲ್ಲಿ ಜಾತಿ,ಮತ, ಅಧಿಕಾರ ಬಲದಲ್ಲಿ ಸಂಖ್ಯಾ ಶಕ್ತಿ ಪ್ರದರ್ಶನದಲ್ಲಿ ವಿಕಾರ ಸಾಮಾಜಿಕ ಸಮುದಾಯಗಳನ್ನು ಕಟ್ಟಲು ಸಾಧ್ಯ; ಇಂತಹ ವಿಕಾರಗಳ ಎದಿರು ಸರ್ವರ ಒಳಿತು ಬಯಸುವ ಬದ್ಧ ವಿಚಾರಧಾರೆಯ ಚಳುವಳಿಗಾರರೂ ಅಗತ್ಯ; ಇವೆರಡರ ನಡುವೆ ವಿಶಾಲವಾಗಿರುವ ಬದುಕಿನಲ್ಲಿ, ಅಧಿಕಾರಸ್ತರ ಹಂಗು ತೊರೆಯಲಾಗದೆ, ಬದುಕು ಬಾಯಿಕಟ್ಟಿಸಿರುವ- ಆದರೆ ಅಧಿಕಾರ ವಿಕಾರಗಳನ್ನು ಸಹಿಸಿಕೊಳ್ಳದೆ ಒದ್ದಾಡುವ ಜನರೂ ಅನೇಕರಿದ್ದಾರೆ. ಅಂತಹ ಜನರ ಸಂಖ್ಯಾವಾರು ಲೆಕ್ಕಾಚಾರ ಕಷ್ಟ; ಅವರನ್ನು ಒಟ್ಟಿಗೆ ತಂದು ಸಹೃದಯಿ ಸಮುದಾಯ ನಿರ್ಮಾಣಕ್ಕೆ ನೂರಾರು ಮಾರ್ಗಗಳ ಹುಡುಕಾಟ ಅಗತ್ಯ. ಅಂತಹುಗಳಲ್ಲಿ,  ’ಮನುಜ ಮತ ಸಿನೆಮ ಹಬ್ಬ’ದ ಪ್ರಯೋಗವೂ ಒಂದಾಗಿದೆ. ಸಿನೆಮಾ ನಮ್ಮ ಸಮಾಜದಲ್ಲಿ ಮೂಡಿಸಿರುವ ಪ್ರಭಾವ ಮತ್ತು ಅದರಿಂದ ಹುಟ್ಟುವ ಬಗೆಬಗೆಯ ಭಾವಗಳ ಸುತ್ತ, 18ರಿಂದ 60 ದಾಟಿದ ಕರ್ನಾಟಕದ ಗಂಡು-ಹೆಣ್ಣೆಂಬ ಭೇದವಿಲ್ಲದೆ ನಾಗರಿಕರು ಒಟ್ಟಾಗುತ್ತಾರೆ; ಸಿನೆಮಾ ಕಲೆಯ ಮೂಲಕ ಸಾಮಾಜಿಕ ಒಳಿತು ಕೆಡುಕುಗಳ ಕುರಿತು ಚರ್ಚಿಸುತ್ತಾರೆ; ಕೊಂಚ ಕೊಂಚವೇ ಒಬ್ಬರನ್ನೊಬ್ಬರು ಅರಿಯುವ-ಸಮುದಾಯವಾಗಿ ಬೆರೆಯುವ ಅರಿವಿನ ಪುಟ್ಟ ಪಾಠಗಳನ್ನು ಸಾಧ್ಯವೆಂದು ಸಿನೆಮಾ ಹಬ್ಬ ಪ್ರಯೋಗ ಸಾಬೀತುಮಾಡುತ್ತಿದೆ.

ಇಂತಾಗಿ ’ಮನುಜಮತ ಸಿನೆಮಾ ಹಬ್ಬ’ವು ಸಾಮಾಜಿಕವಾಗಿ ಪ್ರಸ್ತುತವಾಗಿರುವ ಒಂದು ವಸ್ತುವಿನ ಸುತ್ತ ಸೃಜಿಸಿರುವ ಜಗತ್ತಿನ ಉತ್ತಮ ಸಿನೆಮಾಗಳನ್ನು ಆಯ್ದು, ಎರಡು ದಿನಗಳ ಹಬ್ಬದ ರೂಪದಲ್ಲಿಪ್ರದರ್ಶಿಸುತ್ತಿದೆ. ಅಂತಹ ಸಿನೆಮಾಗಳ ಬಗ್ಗೆ ಪ್ರದರ್ಶನದ ನಂತರ ನಡೆಯುವ ಚರ್ಚೆಯು ಒಂದು ಹಂತದಲ್ಲಿ ಸಿನೆಮಾ ಕಲೆಯ ಸೂಕ್ಷ್ಮ ಸಂವೇದನೆಗಳನ್ನೂ, ಮತ್ತೊಂದು ಹಂತದಲ್ಲಿ ಭಾಗವಹಿಸುವವರಸಾಮಾಜಿಕ ಸಂವೇದನೆಗಳನ್ನೂ ಮುಕ್ತವಾಗಿ ಸಂಕರಿಸುವ ಅವಕಾಶ ಮಾಡಿಕೊಡುತ್ತಿದೆ. ಈ ಮಾರ್ಗದಲ್ಲಿ, ಆಧುನಿಕ ಸಾಮಾಜಿಕ ಜಾಲತಾಣಗಳಲ್ಲಿ ಅರ್ಧ ಬದುಕು ಕಳೆಯುವ ನಾಗರಿಕರನ್ನು ಸಿನೆಮಾ ಕಲೆಹಾಗು ವಾಸ್ತವಿಕ ಬದುಕಿನ ಕಠಿಣ ಸವಾಲುಗಳಿಗೆ ಲಂಗರು ಹಾಕುವ ಒಂದು ಪುಟ್ಟ ಪ್ರಯೋಗವಾಗಿದೆ. ಈ ಕಾಲು ದಾರಿಯಲ್ಲಿ ನಡಿಗೆಯಲ್ಲಿ ಒಗ್ಗೂಡಲು ಬಯಸುವ ಎಲ್ಲಾ ಸಹೃದಯಿ ನಾಗರಿಕರನ್ನು’ಮನುಜಮತ ಸಿನಿಮಾ ಹಬ್ಬ’ವು ಒಳಗೊಳ್ಳಲು ಉತ್ಸುಕವಾಗಿದೆ. ಕಲೆಯ ಅರಿವು ಹಾಗು ಸಾಮಾಜಿಕ ಉತ್ತರದಾಯಿತ್ವಗಳ ಮೂಲಕ ಜಾತಿ-ಮತ-ಲಿಂಗ ಸಮಾನತೆಯನ್ನು ಗೌರವಿಸುವ ಹೊಸ ನಾಗರಿಕಸಮುದಾಯ ಹರಳುಗಟ್ಟಲಿ ಎನ್ನುವುದು ಸಿನೆಮಾ ಹಬ್ಬದ ಆಶಯ.

(ಸಿನಿಯಾನದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು 9448554534ನ್ನು ಸಂಪರ್ಕಿಸಬಹುದು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...