Homeರಾಜಕೀಯಸತ್ತಮೇಲೂ ಬಿಡದೆ ಕಾಡುವ ಜಾತಿಕ್ರೌರ್ಯ: ಮನುಸಂಗಡ ಚಿತ್ರ ತೆರೆದಿಡುವ ಸತ್ಯ

ಸತ್ತಮೇಲೂ ಬಿಡದೆ ಕಾಡುವ ಜಾತಿಕ್ರೌರ್ಯ: ಮನುಸಂಗಡ ಚಿತ್ರ ತೆರೆದಿಡುವ ಸತ್ಯ

- Advertisement -
- Advertisement -

ಜಾತಿಗೊಂದು, ಧರ್ಮಕ್ಕೊಂದು ಸ್ಮಶಾನ ಇಲ್ಲಿವೆ. ಸತ್ತಮೇಲೆಯೂ ಸಾಮಾಜಿಕ ಅಂತರಗಳನ್ನು ಕಾಪಾಡಲಾಗುತ್ತದೆ. ಇವೆಲ್ಲದರ ನಡುವೆ ದಲಿತ (ಎಲ್ಲ ಕೆಳಜಾತಿಗಳು ಸೇರಿ) ಸಮುದಾಯದ ವ್ಯಕ್ತಿಗಳು ಸತ್ತಾಗ ಅವರ ಅಂತ್ಯಕ್ರಿಯೆ ನೆರವೇರಿಸಲು ಹಲವೆಡೆ ಅವರಿಗೆ ಸ್ಮಶಾನಗಳಿಲ್ಲ. ಅವರ ಸಮುದಾಯದವರೇ ಯಾರಾದರೂ ದೊಡ್ಡಮನಸು ಮಾಡಿ ತಮ್ಮ ಜಮೀನುಗಳಲ್ಲಿ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡಬೇಕು. ಇದು ಹೇಗೋ ದೊರಕುತ್ತದೆ ಎಂದುಕೊಂಡರೂ ಊರೊಟ್ಟಿನ ಮಂದಿ ಬಳಸುವ ಸಾಮಾನ್ಯ ರಸ್ತೆಯಲ್ಲಿ ಅಂತ್ಯಕ್ರಿಯೆ ಯಾತ್ರೆಗೆ ಅವಕಾಶ ನಿರಾಕರಿಸುವ ರೂಢಿ ಹಲವೆಡೆ ಇಂದಿಗೂ ಇದೆ.

ತಮಿಳು ಚಲನಚಿತ್ರ “ಮನುಸಂಗಡ” ಇದೇ ವಿಷಯವನ್ನು ನಮ್ಮ ಮುಂದೆ ಇಡುತ್ತದೆ. ಇದು ಕಾಲ್ಪನಿಕ ಚಿತ್ರಕಥೆಯಲ್ಲ. ನಡೆದ, ನಡೆಯುತ್ತಿರುವ ಘಟನಾವಳಿಗಳನ್ನು ಆಧರಿಸಿದ್ದು. ಆದ್ದರಿಂದಲೇ ಇದು ಸಂಪೂರ್ಣವಾಗಿ ಸಿನೆಮ್ಯಾಟಿಕ್ ಭಾಷೆಯಲ್ಲಿ ಇಲ್ಲ. ಇದನ್ನು ಡಾಕ್ಯುಮೆಂಟರಿ ಮಾದರಿಯಲ್ಲಿಯೂ ಹೇಳಲಾಗಿದೆ. ಆದ್ದರಿಂದಲೇ ಇದರ ಕ್ಯಾಮೆರಾ ಭಾಷೆಯೂ ವಿಭಿನ್ನವಾಗಿದೆ ಮತ್ತು ಅಷ್ಟೇ ಸಶಕ್ತವಾಗಿದೆ. ದಲಿತರ ನೋವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

ಈ ಕಥನ ತಮಿಳುನಾಡಿನ ಹಳ್ಳಿಯೊಂದರಲ್ಲಿ ನಡೆಯುತ್ತದೆ. ಇದು ಇತರ ಯಾವುದೇ ರಾಜ್ಯದಲ್ಲಿಯೂ ನಡೆಯಬಹುದು. ಸ್ಥಳ ಇಲ್ಲಿ ನೆಪ ಅಷ್ಟೆ. ಚೆನ್ನೈ ಮಹಾನಗರದ ಕಾರ್ಖಾನೆಯೊಂದರಲ್ಲಿ ದುಡಿಯುವ ಯುವಕ ಕೊಲ್ಲಪ್ಪನ್. ಈತನ ತಂದೆ ಮರಣ ಹೊಂದಿದ ಸುದ್ದಿ ಬರುತ್ತದೆ. ಈತ ಗ್ರಾಮಕ್ಕೆ ಬರುತ್ತಾನೆ. ತಾಯಿಯ, ಸಂಬಂಧಿಕರ ದುಃಖ ಕಟ್ಟೆಯೊಡೆದಿರುತ್ತದೆ. ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುವಾಗಲೇ ಊರೊಟ್ಟಿನ ರಸ್ತೆ (ಸಾಮಾನ್ಯ ರಸ್ತೆ)ಯಲ್ಲಿ ಶವ ತೆಗೆದುಕೊಂಡು ಹೋಗಲು ಮೇಲ್ಜಾತಿಯವರು ಬಿಡುವುದಿಲ್ಲ ಎಂಬ ವಿಷಯ ಚರ್ಚೆಯಾಗುತ್ತದೆ.

ಪೊಲೀಸ್ ಸ್ಟೇಷನ್, ಕಂದಾಯಾಧಿಕಾರಿ ಕಚೇರಿಗಳಿಗೆ ಅಲೆದರೂ ರಕ್ಷಣೆ ಭರವಸೆ ದೊರೆಯುವುದಿಲ್ಲ. ಹೈಕೋರ್ಟಿನಲ್ಲಿ ರಿಟ್ ಪಿಟಿಷನ್ ಹಾಕಲಾಗುತ್ತದೆ. ಆಗ ಸರ್ಕಾರಿ ವಕೀಲರು ಹೇಳುವುದು “ಗ್ರಾಮದ ಸಾಮಾನ್ಯ ರಸ್ತೆಯಲ್ಲಿ ದಲಿತ ಸಮುದಾಯದ ವ್ಯಕ್ತಿಯ ಶವ ತೆಗೆದುಕೊಂಡು ಹೋದರೆ ಕಾನೂನು ಸುವ್ಯವಸ್ಥೆ ಕೈಮೀರಿ ಹೋಗಬಹುದು” ಇದು ನ್ಯಾಯಾಧೀಶರಿಗೆ ಅಚ್ಚರಿ ಉಂಟು ಮಾಡುತ್ತದೆ. ಅರ್ಜಿದಾರ ಕೊಲ್ಲಪ್ಪನ್ ತಂದೆಯ ಅಂತ್ಯಕ್ರಿಯೆ ಯಾತ್ರೆಯನ್ನು ಸಾಮಾನ್ಯ ರಸ್ತೆಯಲ್ಲಿ ತೆಗೆದುಕೊಂಡು ಹೋಗಲು, ಅಂತ್ಯಕ್ರಿಯೆ ಯಾವುದೇ ಸಮಸ್ಯೆಗಳಿಲ್ಲದಂತೆ ನಡೆಯಲು ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಡಳಿತ, ಪೊಲೀಸರಿಗೆ ಸೂಚಿಸುತ್ತದೆ.

ಪ್ರಾಯೋಗಿಕವಾಗಿ ಹೈಕೋರ್ಟ್ ಆದೇಶ ಪ್ರಹಶನದಂತೆ ಆಗಿಬಿಡುತ್ತದೆ. ಕಂದಾಯಾಧಿಕಾರಿ, ಪೊಲೀಸ್ ಉನ್ನತಾಧಿಕಾರಿಗಳು ಮೇಲ್ಜಾತಿಯ ವಕ್ತಾರರಾಗುತ್ತಾರೆ. “ಸಾಮಾನ್ಯ ರಸ್ತೆಯಲ್ಲಿ ಶವ ತೆಗೆದುಕೊಂಡು ಹೋಗುವುದು ಬೇಡ. ಪರ್ಯಾಯ ಮಾರ್ಗದಲ್ಲಿ ತೆಗದುಕೊಂಡು ಹೋಗಿ” ಎನ್ನುತ್ತಾರೆ. ಪರ್ಯಾಯ ಮಾರ್ಗವೇ ಇಲ್ಲ. ಕಲ್ಲು-ಮುಳ್ಳು-ಪೊದೆಗಳ ಹಾದಿ ಅದು. ಒಂದುವೇಳೆ ಪರ್ಯಾಯ ಹಾದಿಯಿದ್ದರೂ ಅದನ್ನು ಬಳಸುವ ಅನಿವಾರ್ಯತೆ ಏಕೆ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಪೊಲೀಸರೇ ಬಲವಂತವಾಗಿ ಅಂತ್ಯಕ್ರಿಯೆ ನಡೆಸಲು ಮುಂದಾಗುತ್ತಾರೆ.

ಈ ಸಂದರ್ಭದಲ್ಲಿ ಕೊಲ್ಲಪ್ಪನ್ ಸಾಮಾನ್ಯ ಹಾದಿ ಶುರುವಾಗುವಲ್ಲಿ ಒಬ್ಬಂಟಿಯಾಗಿ ಬಂದು ನಿಂತು “ನಿಮ್ಮ ಮನೆಗಳ ಸತ್ತ ನಾಯಿ, ದನ ಸಾಮಾನ್ಯ ರಸ್ತೆಯಲ್ಲಿ ಹೋಗಬಹುದು, ನಮಗ್ಯಾಕೆ ಅವಕಾಶ ನಿರಾಕರಿಸುತ್ತೀರಿ. ನಿಮ್ಮಲ್ಲಿ ಸಾವು ಉಂಟಾದಾಗ ಹೂಳಲು, ಸುಡಲು ನಮ್ಮ ನೆರವು ಬೇಕು. ಆದರೆ ನಮ್ಮ ಶವವನ್ನು ಕೊಂಡೊಯ್ಯಲು ಏಕೆ ನಿರಾಕರಿಸುತ್ತೀರಿ ಎಂದು ಕೇಳುವುದು ಪರಿಣಾಮಕಾರಿ. ಮೇಲ್ಜಾತಿಗಳ ಸಮುದಾಯದಲ್ಲಿ ಸಾವು ಉಂಟಾದಾಗ ಈ ಸುದ್ದಿ ಸಾರಲು ದಲಿತರು ಬೇಕು; ಶವದ ಮೆರವಣಿಗೆಯಲ್ಲಿ ಮುಂದೆ ಸಾಗುತ್ತಾ ತಮಟೆ ಬಡಿಯಲು ಬೇಕು. ಆದರೆ ಈ ಸಮುದಾಯದಲ್ಲಿ ಸಾವು ಉಂಟಾದಾಗ ಅದೇರಸ್ತೆಯಲ್ಲಿ ಸಾಗಲು ಬಿಡುವುದಿಲ್ಲ. ಇದೊಂದು ಕ್ರೂರ ವಿಪರ್ಯಾಸ.

ಕೊಲ್ಲಪ್ಪನ್ ಗೆಳತಿ ಮಹಾನಗರದ ನಿವಾಸಿ. ಈಕೆಗೆ ಹಳ್ಳಿಯ ಬಗ್ಗೆ ರೋಮ್ಯಾಂಟಿಕ್ ಕಲ್ಪನೆಗಳಿವೆ. “ಇಲ್ಲಿ ಇಂಥ ಸಾಮಾಜಿಕ ವಾತಾವರಣ ಇರಬಹುದೆಂದು ನನಗೆ ಗೊತ್ತಿರಲಿಲ್ಲ” ಎನ್ನುತ್ತಾಳೆ. ಅದಕ್ಕೆ ಕೊಲ್ಲಪ್ಪನ್ ಕೊಡುವ ಉತ್ತರ “ಇಲ್ಲಿ ಎಲ್ಲ ಜಾತಿ-ಸಮುದಾಯಗಳವರು ಸಾಮರಸ್ಯದಿಂದ ಜೀವನ ನಡೆಸುತ್ತಾರೆ ಎಂದು ಭಾವಿಸಿದ್ದೆಯಾ” ಬಹುತೇಕ ಗ್ರಾಮಗಳಲ್ಲಿ ಎಲ್ಲ ಜಾತಿಗಳ ಸಾಮರಸ್ಯದ ಬದುಕು ಎಂಬುದೊಂದು ಇನ್ನೂ ರಮ್ಯ ಕಲ್ಪನೆ. ಸಾಮರಸ್ಯವೆಂದರೆ ಇಲ್ಲಿ ಮೇಲ್ಜಾತಿಗಳು ನಡೆಸಿಕೊಂಡು ಬಂದಂಥ ಆಚರಣೆಗಳನ್ನು ಪ್ರಶ್ನೆ ಮಾಡದಿರುವುದು, ತುಳಿಯುತ್ತಲೇ ಇರುವುದನ್ನು ಸಹಿಸಿಕೊಳ್ಳುವುದು.

ಆಸ್ಮೃಶ್ಯತೆ ಎನ್ನುವುದು ಹೇಗೆಲ್ಲ ಆಚರಣೆಯಲ್ಲಿದೆ ಎಂಬುದನ್ನು ನೇರವಾಗಿಯೇ ಹೇಳುವ “ಮನುಸಂಗಡ” ಒಂದು ಡಾಕ್ಯುಮೆಂಟರಿ ಹಂತದಲ್ಲಿಯೇ ನಿಂತು ಬಿಡಬಹುದಾಗಿತ್ತು. ಆದರೆ ನಿರ್ದೇಶಕ ಅಂಶನ್ ಕುಮಾರ್ ಪರಿಶ್ರಮ(ಚಿತ್ರಕಥೆಯೂ ಇವರದೇ) ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸಿನೆಮ್ಯಾಟಿಕ್ ಪರಿಭಾಷೆಗಳನ್ನೂ ಸಮರ್ಥವಾಗಿ ಬಳಸಿ ಕಥೆ ಹೇಳಲಾಗಿದೆ.

ಪಿ.ಎಸ್ ದರನ್ ಮಾಡಿರುವ ಸಿನೆಮಾಟೋಗ್ರಫಿ ವಿಭಿನ್ನವಾಗಿದೆ. ಈ ಥರದ ಕ್ಯಾಮೆರಾ ಪರಿಭಾಷೆ, ಭಾರತೀಯ ಸಿನೆಮಾಗಳ ಸಂದರ್ಭದಲ್ಲಿ ಬಹಳ ಅಪರೂಪ. ಸಾಕಷ್ಟು ಸನ್ನಿವೇಶಗಳಲ್ಲಿ ಹ್ಯಾಂಡಿ ಕ್ಯಾಮೆರಾ ಬಳಸಲಾಗಿದೆ. ಆದರೆ ಎಲ್ಲಿಯೂ ಕಥೆಯ ನಿರೂಪಣೆಗೆ ಕ್ಯಾಮೆರಾ ತೊಡಕಾಗದೇ ಮತ್ತಷ್ಟು ಪರಿಣಾಮಕಾರಿಯಾಗಿ ಹೇಳುವಲ್ಲಿ ಸಹಕಾರಿಯಾಗಿದೆ. ಸಿನೆಮಾಕ್ಕೆ ನೀಡಿರುವ ಹಿನ್ನೆಲೆ ಸಂಗೀತ ಕಥೆಯ ಸನ್ನಿವೇಶ, ಬೆಳವಣಿಗೆಯಲ್ಲಿ ಮಿಳಿತವಾಗಿದೆ. ಧನಶೇಖರ್ ನಿರ್ವಹಿಸಿರುವ ಸಂಕಲನ ಕಾರ್ಯ ಅತ್ಯುತ್ತಮ.

ಚಿತ್ರದಲ್ಲಿ ಇರುವ ಕಲಾವಿದರಾದ ರಾಜೀವ್ ಆನಂದ್, ಶೀಲಾ ರಾಜಕುಮಾರ್, ಮಣಿಮೇಘಲೈ, ವಿದುರ್ ರಾಜರಾಜನ್, ಆನಂದ್ ಸಂಪತ್, ಸೇತು ದರ್ವೀನ್, ಎ.ಎಸ್. ಶಶಿಕುಮಾರ್ ಅಭಿನಯ ಮನಮುಟ್ಟುತ್ತದೆ. ಗ್ರಾಮ ನಿವಾಸಿಗಳನ್ನು ಪಾತ್ರಧಾರಿಗಳಾಗಿರುವಂತೆ ಸಿನಿಮಾ ಸಂಯೋಜಿಸಿರುವುದು ವಿಶೇಷ.

ತಮಿಳುನಾಡಿನಲ್ಲಿ 2018ರ ಅಕ್ಟೋಬರ್ ನಲ್ಲಿ “ಮನುಸಂಗಡ” ತೆರೆಕಂಡಿದೆ. ಸಾಕಷ್ಟು ಅಂತರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರದರ್ಶಿತಗೊಂಡು ಪ್ರಶಸ್ತಿಗಳನ್ನೂ ಗಳಿಸಿದೆ. ಭಾರತೀಯ ಸಾಮಾಜಿಕ ಕಥನವನ್ನು ಬಹು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿರುವ ಈ ಸಿನೆಮಾ “ನೆಟ್ ಫ್ಲಿಕ್ಸ್” ನಲ್ಲಿಯೂ ಲಭ್ಯವಿದೆ.

ಪೊಲೀಸರು ಕೊಲ್ಲಪ್ಪನ್ ಮತ್ತವರ ಕುಟುಂಬದವರು, ಸಂಬಂಧಿಕರನ್ನು ಬಂಧಿಸಿ ಕರೆದೊಯ್ಯುತ್ತಾರೆ. ಇವರೆಲ್ಲ ಪೊಲೀಸ್ ವ್ಯಾನಿನಲ್ಲಿದ್ದೂ ಸಾಕಷ್ಟು ಪೊಲೀಸ್ ಸಿಬ್ಬಂದಿ ಇದ್ದರೂ ಹಳ್ಳಿಯ ಮೇಲ್ಞಾತಿಯವರು ದಾಳಿ ಮಾಡುತ್ತಾರೆ. ಕಲ್ಲುಗಳೂ ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ವ್ಯಾನಿನತ್ತ ತೂರುತ್ತಾರೆ, ನಿಂದಿಸುತ್ತಾರೆ. ಇವೆಲ್ಲವೂ ಇಲ್ಲಿ ಹಲವೊಮ್ಮೆ ಕಾನೂನು ಸುವ್ಯವಸ್ಥೆ ಎಂಬುದು ಅಣಕ ಎಂಬುದನ್ನು ಹೇಳುತ್ತದೆ.

ಭಾರತೀಯರಲ್ಲಿ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ಸೂಕ್ತವಾಗಿ ನಡೆಸಬೇಕು ಎಂಬ ನಂಬಿಕೆಯಿದೆ. ಇದಕ್ಕೆ ಚ್ಯುತಿ ಬಂದರೆ ಆ ನೋವು ದೀರ್ಘಕಾಲ ಉಳಿಯುತ್ತದೆ. ಮಣ್ಣು ಮಾಡಿದ ನಂತರ ನಡೆಸುವ ವಿಧಿವಿಧಾನಗಳಿರುತ್ತವೆ. ಸತ್ತವರ ಸಮಾಧಿ ಮುಂದೆ ಅವುಗಳನ್ನು ನಡೆಸಲಾಗುತ್ತದೆ. ಆದರೆ ಸತ್ತವರ ಸಮಾಧಿ ಯಾವುದು, ಎಲ್ಲಿದೆ ಎಂದು ತಿಳಿಯದಿದ್ದರೆ ….

ಇದನ್ನೂ ಓದಿ: ಆರ್ಟಿಕಲ್ 15: ಭಾರತದ ಜಾತಿವ್ಯವಸ್ಥೆಯ ಕರಾಳ ಮುಖಗಳ ಸಮರ್ಥ ಅನಾವರಣ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...