Homeಮುಖಪುಟಮಸ್ಕಿಯಲ್ಲಿ ಬಿಜೆಪಿಯಿಂದ 2 ಚೀಲ ಹಣ ಸಾಗಣೆ, ಪಿಎಸ್‌ಐ ಶಾಮೀಲು ಆರೋಪ: ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ...

ಮಸ್ಕಿಯಲ್ಲಿ ಬಿಜೆಪಿಯಿಂದ 2 ಚೀಲ ಹಣ ಸಾಗಣೆ, ಪಿಎಸ್‌ಐ ಶಾಮೀಲು ಆರೋಪ: ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಆಯೋಗಕ್ಕೆ ದೂರು

- Advertisement -
- Advertisement -

ಮಸ್ಕಿ ಉಪಚುನಾವಣೆಯಲ್ಲಿ ಅವ್ಯಾಹತವಾಗಿ ಬಿಜೆಪಿ ಹಣ ಹಂಚುತ್ತಿರುವ ಆರೋಪಗಳು ಮೇಲಿಂದ ಮೇಲೆ ಕೇಳಿ ಬರುತ್ತಿರುವ ಬೆನ್ನಿಗೇ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಿಯೋಗವು ಮಸ್ಕಿಯಲ್ಲಿ ಚುನಾವಣಾಧಿಕಾರಿಗೆ ದೂರು ಸಲ್ಲಿಸಿತು.

ಚುನಾವಣೆ ಅಕ್ರಮ ಸಂಬಂಧ ಮುದಗಲ್ ಪಿಎಸ್‌ಐ ಡಾಕೇಶ್ ಹಾಗೂ ಬಿಜೆಪಿ ವಿರುದ್ಧ ದೂರು ಸಲ್ಲಿಸಲಾಗಿದ್ದು, ಮಟ್ಟೂರು ಗ್ರಾಮದಲ್ಲಿ ಎರಡು ಚೀಲಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಹಣ ಸಾಗಣೆ ನಡೆದಿದ್ದು, ಕ್ರಮ ಕೈಗೊಳ್ಳಬೇಕಿದ್ದ ಮುದಗಲ್ ಪಿಎಸ್‌ಐ ಡಾಕೇಶ್ ಅದರಲ್ಲಿ ಒಂದು ಚೀಲವನ್ನು ಬೇರೆಡೆ ಸಾಗಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮಸ್ಕಿಯ ತಾಲೂಕು ಪಂಚಾಯತಿ ಕಚೇರಿಯಲ್ಲಿರುವ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ದೂರು ದಾಖಲಿಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಮಸ್ಕಿಯಲ್ಲಿ ಉಪಚುನಾವಣೆ ಕಾನೂನುಬದ್ಧವಾಗಿ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಮಾಜಿ ಸಂಸದ ಉಗ್ರಪ್ಪ, ಶಾಸಕ ಬಸನಗೌಡ ದದ್ದಲ್, ಮಾಜಿ ಶಾಸಕ ಭೋಸರಾಜ್, ಯುವ ಮುಖಂಡ ಬಸವನಗೌಡ ಬಾದರ್ಲಿ ನಿಯೋಗದಲ್ಲಿದ್ದರು.

ನಿನ್ನೆಯಷ್ಟೇ ತುರ್ವಿಹಾಳದಲ್ಲಿ ಹಾಸನದ ಮೂವರು ಯುವಕರು ಬಿಜೆಪಿ ಪರ ಹಣ ಹಂಚುವಾಗ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಕೊಟ್ಟಿದ್ದರು. ಈ ಕುರಿತು ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಯುವಕರಿಂದ 81 ಸಾವಿರ ರೂ. ವಶಪಡಿಸಿಕೊಳ್ಳಲಾಗಿತ್ತು.

ಯುವಕರಿಗೆ ಸ್ಥಳೀಯರು ಒಂದೆರಡು ಏಟು ನೀಡಿ, ಅಂಗಿ ಹರಿದ ವಿಡಿಯೋ ವೈರಲ್ ಆಗಿದೆ. ಈ ಹಿಂದೆಯೂ ಬೆನಕಲ್, ಹಂಚಿನಾಳ ಮುಂತಾದ ಕಡೆ ಬಿಜೆಪಿ ಪರ ಹಣ ಹಂಚುವ ನಾಲ್ಕೈದು ವಿಡಿಯೊಗಳು ವೈರಲ್ ಆಗಿದ್ದವು.

‘ಚುನಾವಣಾ ಆಯೋಗ ಮತ್ತು ಪೊಲೀಸರು ಸರಿಯಾದ ಕ್ರಮ ಜರುಗಿಸುತ್ತಿಲ್ಲ. ಬಿಜೆಪಿ ಹಣ ನೀಡಿ ಚುನಾವಣೆಯ ಎದುರಿಸುತ್ತಿದೆ’ ಎಂದು ರೈತ ಹೋರಾಟಗಾರರು ಮತ್ತು ಕಾಂಗ್ರೆಸ್‌ನ ಸ್ಥಳೀಯ ನಾಯಕರು ಅಪಾದಿಸುತ್ತಲೇ ಬಂದಿದ್ದಾರೆ.


ಇದನ್ನೂ ಓದಿ: ಮಸ್ಕಿ: ಬಿಜೆಪಿ ಪರ ಹಣ ಹಂಚಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಹಾಸನದ ಯುವಕರ ಬಂಧನ; 81 ಸಾವಿರ ರೂ….

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...