Homeಅಂತರಾಷ್ಟ್ರೀಯಕೊರೊನಾ ಲಸಿಕೆ ಪೇಟೆಂಟ್‌ ಬಿಟ್ಟುಬಿಡಲು ನೊಬೆಲ್ ಪ್ರಶಸ್ತಿ ವಿಜೇತರು, ವಿಶ್ವದ ಮಾಜಿ ನಾಯಕರಿಂದ ಜೋ ಬೈಡನ್‌ಗೆ...

ಕೊರೊನಾ ಲಸಿಕೆ ಪೇಟೆಂಟ್‌ ಬಿಟ್ಟುಬಿಡಲು ನೊಬೆಲ್ ಪ್ರಶಸ್ತಿ ವಿಜೇತರು, ವಿಶ್ವದ ಮಾಜಿ ನಾಯಕರಿಂದ ಜೋ ಬೈಡನ್‌ಗೆ ಪತ್ರ

- Advertisement -
- Advertisement -

ಯುಎಸ್ ಇಂಟಲೆಕ್ಚುಯಲ್ ಪ್ರಾಪರ್ಟಿ ನಿಯಮಗಳನ್ನು ಬಿಡುವ ಮೂಲಕ ಕೊರೊನಾ ಲಸಿಕೆಗಳನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಕೋರಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ಗೆ 170 ಕ್ಕೂ ಹೆಚ್ಚು ಮಾಜಿ ವಿಶ್ವ ನಾಯಕರು ಮತ್ತು ನೊಬೆಲ್ ಪ್ರಶಸ್ತಿ ವಿಜೇತರು ಪತ್ರ ಬರೆದಿದ್ದಾರೆ.

ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಕೋವಿಡ್ -19 ಲಸಿಕೆ ಪೇಟೆಂಟ್‌ಗಳನ್ನು ತಾತ್ಕಾಲಿಕವಾಗಿ ಬಿಟ್ಟುಬಿಡುವಂತೆ ಮಾಡುವಂತೆ ಒತ್ತಾಯಿಸಿ ದಕ್ಷಿಣ ಆಫ್ರಿಕಾ ಮತ್ತು ಭಾರತ ಮುಂದಾಳತ್ವ ವಹಿಸಿರುವ ಪ್ರಸ್ತಾವನೆಗೆ 170 ಕ್ಕೂ ಪ್ರಸಿದ್ಧರು ಸಹಿ ಹಾಕಿದ್ದಾರೆ. ಈ ಬಹಿರಂಗ ಪತ್ರವನ್ನು ಬುಧವಾರ ಆಕ್ಸ್‌ಫ್ಯಾಮ್ ಹಂಚಿಕೊಂಡಿದೆ.

ಬಹಿರಂಗ ಪತ್ರಕ್ಕೆ ಸಹಿ ಮಾಡಿದವರಲ್ಲಿ ಬ್ರಿಟನ್ ಮಾಜಿ ಪ್ರಧಾನಿ ಗಾರ್ಡನ್ ಬ್ರೌನ್, ಮಾಜಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಮತ್ತು ಶಾಂತಿ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಕೂಡ ಸೇರಿದ್ದಾರೆ.

ಇದನ್ನೂ ಓದಿ: ‘ಬಿಜೆಪಿಯು ಟಿಎಂಸಿ ಮುಕ್ತ ಭಾರತಕ್ಕೆ ಕರೆ ನೀಡುವುದಿಲ್ಲ ಏಕೆ’: ರಾಹುಲ್ ಗಾಂಧಿ ಪ್ರಶ್ನೆ

“ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳ ಅಭೂತಪೂರ್ವ ಬೆಳವಣಿಗೆಯನ್ನು ಜಗತ್ತು ಕಂಡಿತು. ಇದಕ್ಕೆ ಅಮೆರಿಕದ ಸಾರ್ವಜನಿಕ ಹೂಡಿಕೆಗಾಗಿ ಧನ್ಯವಾದಗಳು. ಅಮೆರಿಕ ಮತ್ತು ಅನೇಕ ಶ್ರೀಮಂತ ದೇಶಗಳಲ್ಲಿ ಲಸಿಕೆ ಹಂಚಿಕೆ ಮತ್ತು ಉತ್ಪಾದನೆ ತಮ್ಮ ನಾಗರಿಕರಿಗೆ ಭರವಸೆಯನ್ನು ನೀಡುತ್ತಿದೆ. ಆದರೆ ವಿಶ್ವದ ಬಹುಪಾಲು ಜನರಿಗೆ ಅದೇ ಭರವಸೆ ಇನ್ನೂ ಸಿಕ್ಕಿಲ್ಲ. ಈಗ ಪ್ರಪಂಚದಾದ್ಯಂತ ಹೊಸ ಕೊರೊನಾ ಅಲೆಗಳು ಹೆಚ್ಚಾಗುತ್ತಿವೆ. ನಮ್ಮ ಜಾಗತಿಕ ಆರ್ಥಿಕತೆಯು ಈ ವೈರಸ್‌ಗೆ ಗುರಿಯಾದರೆ ಅದನ್ನು ಮತ್ತೆ ಪುನರ್ನಿರ್ಮಿಸಲು ಸಾಧ್ಯವಿಲ್ಲ”ಎಂದು  ಪತ್ರದಲ್ಲಿ ಬರೆದಿದ್ದಾರೆ.

“ಡಬ್ಲ್ಯುಟಿಒ ಕೋವಿಡ್ -19 ಲಸಿಕೆ ಪೇಟೆಂಟ್‌ಗಳನ್ನು ತಾತ್ಕಾಲಿಕವಾಗಿ ಮನ್ನಾ ಮಾಡುವುದು, ಈ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಒಂದು ಪ್ರಮುಖ ಮತ್ತು ಅಗತ್ಯವಾದ ಹೆಜ್ಜೆಯಾಗಿದೆ. ಲಸಿಕೆ ಜ್ಞಾನ ಮತ್ತು ತಂತ್ರಜ್ಞಾನವನ್ನು ಬಹಿರಂಗವಾಗಿ ಹಂಚಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುವುದರೊಂದಿಗೆ ಇದನ್ನು ಸಂಯೋಜಿಸಬೇಕು. ಇದು ಮತ್ತಷ್ಟು ಜೀವಗಳನ್ನು ಉಳಿಸುತ್ತದೆ”ಎಂದು ಬರೆಯಲಾಗಿದೆ.

ಫೆಬ್ರವರಿಯಲ್ಲಿ, ಯುಎಸ್‌ನಲ್ಲಿ ನೂರಾರು ನಾಗರಿಕ ಸಮಾಜ ಗುಂಪುಗಳು, ಹಲವಾರು ಪ್ರಗತಿಪರ ಶಾಸಕರು, ಕೋವಿಡ್ -19 ಲಸಿಕೆಗಳ ಮೇಲಿನ ಪೇಟೆಂಟ್ ಮನ್ನಾವನ್ನು ಬೆಂಬಲಿಸುವಂತೆ ಜೋ ಬೈಡನ್ ಆಡಳಿತದ ಮೇಲೆ ಒತ್ತಡ ಹೇರಿದ್ದರು.

ಕೋವಿಡ್ -19 ಸಂಬಂಧಿತ ಬೌದ್ಧಿಕ ಆಸ್ತಿ ನಿಯಮಗಳ (intellectual property rules) ತುರ್ತು ಮನ್ನಾವನ್ನು ಬೆಂಬಲಿಸುವುದರಿಂದ ಜಗತ್ತಿನಾದ್ಯಂತದ ಜನರು ಈ ಸಾಂಕ್ರಾಮಿಕ ವೈರಸ್‌ನಿಂದ ಮುಕ್ತರಾಗುವ ಅವಕಾಶ ಸಿಗುತ್ತದೆ ಎಂದು ವಿಶ್ವ ನಾಯಕರು ಹೇಳಿದ್ದಾರೆ.

ಕೋವಿಡ್ -19 ಲಸಿಕೆ ಪೇಟೆಂಟ್‌ಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಮನ್ನಾ ಮಾಡುವ ಭಾರತ ಮತ್ತು ದಕ್ಷಿಣ ಆಫ್ರಿಕಾದ ಜಂಟಿ ಪ್ರಸ್ತಾಪವನ್ನು ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರು ಬೆಂಬಲಿಸಿದ್ದಾರೆ. ಯುರೋಪಿಯನ್ ಪಾರ್ಲಿಮೆಂಟ್ (ಎಂಇಪಿ) ಯ 14 ಸದಸ್ಯರು ಕೋವಿಡ್ -19 ಲಸಿಕೆ ಪೇಟೆಂಟ್‌ಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಮಸ್ಕಿಯಲ್ಲಿ ಮಟಮಟ ಮಧ್ಯಾಹ್ನವೇ ಕಾಂಚಾಣ ಝಣಝಣ: ಬಿಜೆಪಿ ಪರ ಪ್ರಚಾರಕ್ಕಿಳಿದ ಗಾಯಕಿ ಮಂಗ್ಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...