Homeಕರ್ನಾಟಕಯುವಜನರೊಂದಿಗೆ ಸಮಾನತೆಯ ಆಶಯದೊಂದಿಗೆ ಸಂವಾದಕ್ಕಿಳಿದ 'ಮತ್ತೆ ಕಲ್ಯಾಣ'ದ ಪ್ರಯೋಗ ಜನಪರವಲ್ಲವೇ?

ಯುವಜನರೊಂದಿಗೆ ಸಮಾನತೆಯ ಆಶಯದೊಂದಿಗೆ ಸಂವಾದಕ್ಕಿಳಿದ ‘ಮತ್ತೆ ಕಲ್ಯಾಣ’ದ ಪ್ರಯೋಗ ಜನಪರವಲ್ಲವೇ?

- Advertisement -
- Advertisement -

ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳುವಳಿಯ ಆಶಯಗಳನ್ನು ಜನಸಾಮಾನ್ಯರು ಮತ್ತು ಯುವಜನರ ಬಳಿ ಮತ್ತೆ ತೆಗೆದುಕೊಂಡು ಹೋಗಬೇಕೆನ್ನುವ ಆಶಯದೊಂದಿಗೆ ಒಂದು ವಿಶಿಷ್ಟ ಕಾರ್ಯಕ್ರಮ ಶುರುವಾಗಿದೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮಿಜಿಗಳ ನೇತೃತ್ವದಲ್ಲಿ ವಿವಿಧ ಸ್ವಾಮೀಜಿಗಳು, ಜನಪರ ಸಂಘಟನೆಗಳ ಸಹಯೋಗದಲ್ಲಿ ಮತ್ತೆ ಕಲ್ಯಾಣ ಎಂಬ ಆಂದೋಲನ ನಡೆಯುತ್ತಿದೆ.

ಮತ್ತೆ ಕಲ್ಯಾಣದ ಪರಿಕಲ್ಪನೆ ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ಮಾನವೀಯ ಮೌಲ್ಯಗಳನ್ನು ಮುನ್ನೆಲೆಗೆ ತಂದ ಶರಣ ಚಳುವಳಿಯ ಆಶಯಗಳನ್ನು ಸಮಾಜದ ಮಧ್ಯೆ ತೆಗೆದುಕೊಂಡು ಹೋಗಲು ಹುಟ್ಟಿಕೊಂಡ ಒಂದು ಆಂದೋಲನವಾಗಿದೆ. ಈ ಆಂದೋಲನವು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕಾರ್ಯಕ್ರಮವನ್ನು ನಡೆಸುತ್ತಿದ್ದು ಯುವಜನರೊಂದಿಗೆ ಸಂವಾದ ನಡೆಸುವುದು ಇದರ ಮುಖ್ಯವಾದ ಭಾಗವಾಗಿದೆ.

ನಾವು ಮುಖ್ಯವಾಗಿ ಗಮನಿಸಬೇಕೇರುವುದು ಬಹುಪಾಲು ವಾಟ್ಸಪ್ , ಫೇಸ್‌ಬುಕ್ ಪದವಿಧರರಾಗಿರುವ ಯುವಜನರ ಜೊತೆ ಈ ಆಂದೋಲನ ಎದುರಾಗುತ್ತಿರುವುದು. ಇಲ್ಲಿ ಸ್ವಾಮೀಜಿಯವರನ್ನು ಒಳಗೊಂಡಂತೆ ಇಬ್ಬರು ಚಿಂತಕರಿಗೆ ಬಂದಂತಹ ಹೆಚ್ಚಿನ ಪ್ರಶ್ನೆಗಳಾವುವು ನೋಡಬೇಕು. ಎಲ್ಲಾ ಕಡೆ ಎದುರಾಗುತ್ತಿರುವ ಪ್ರಶ್ನೆ ಎಂದರೆ ಮೀಸಲಾತಿಯಿಂದ ಮೇಲ್ಜಾತಿಯವರಿಗೆ ಅನ್ಯಾಯವಾಗುತ್ತಿದೆ. ಈ ಮೀಸಲಾತಿಯನ್ನು ಕೊನೆಗಾಣಿಸಬೇಕಲ್ಲವೆ ಎಂಬುದು. ಈ ರೀತಿಯ ಯೋಚನೆಗಳು ಇತ್ತೀಚಿಗೆ ಹೆಚ್ಚು ಕೇಳಿ ಬರುತ್ತಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣ ಬಲಪಂಥೀಯ ಶಕ್ತಿಗಳು ಸೋಷೀಯಲ್ ಮೀಡೀಯಾದಲ್ಲಿ ಇದನ್ನು ಒಂದು ನಿರಂತರ ಅಜೆಂಡಾವಾಗಿ ಮಾಡಿಕೊಂಡು ಅಭಿಪ್ರಾಯ ರೂಪಿಸಲು ಸತತವಾಗಿ ಪ್ರಯತ್ನಪಡುತ್ತಲೇ ಇವೆ. ಮೀಸಲಾತಿಯಿಂದಲೇ ಈ ದೇಶ ಹಿಂದುಳಿದಿದೆ ಎನ್ನುವಂತಹ ಮನಸ್ಥಿತಿಯನ್ನು ರೂಪಿಸುವಲ್ಲಿ ಒಂದು ಮಟ್ಟಿಗೆ ಯಶಸ್ಸನ್ನೂ ಪಡೆದಿದ್ದಾರೆ. ದುರಂತವೆಂದರೆ ಎಸ್.ಸಿ/ ಎಸ್.ಟಿ ಸಮುದಾಯಗಳಂತೆ ಮೀಸಲಾತಿಯ ಫಲಾನುಭವಿಗಳಾದಂತಹ ಒ.ಬಿ.ಸಿ ಸಮುದಾಯದ ಯುವಜನರಲ್ಲೇ  ಹೆಚ್ಚು ಈ ರೀತಿಯ ಮನಸ್ಥಿತಿ ಬೆಳೆಯುತ್ತಿದೆ.

ಈ ಪ್ರಶ್ನೆಯನ್ನು ಸಮರ್ಥವಾಗಿ ಎದುರಿಸುತ್ತಿರುವ ಪಂಡಿತಾರಾಧ್ಯ ಸ್ವಾಮೀಜಿಗಳು ಜಾತಿ ಇರುವವರೆಗೂ, ಅಸಮಾನತೆ ತೊಲಗುವವರೆಗೂ ಮೀಸಲಾತಿ ಅವಶ್ಯಕ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ನಿಜವಾಗಲೂ ಸಮಾನತೆ ಬಂದಮೇಲೆ ಮೀಸಲಾತಿ, ಬಡ್ತಿ ಮೀಸಲಾತಿಯ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದ್ದರು. ಈ ಸುಧ್ದಿ ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಕಟವಾಗಿ ನಂತರ ಸ್ವಾಮೀಜಿಯವರು ಸ್ಫಷ್ಟನೆ ನೀಡಬೇಕಾಗಿ ಬಂದಿತು. ಈ ಮಧ್ಯೆ ಸಾಕಷ್ಟು ಜನರ ಟೀಕೆಗಳು ಬಂದು ಹೋದವು. ಈಗ ಅರ್ಧ ಜಿಲ್ಲೆಗಳಲ್ಲಿ ಕಾರ್ಯಕ್ರಮ ಮುಗಿಯುತ್ತಾ ಬಂದಿದೆ. ಎಲ್ಲಾ ಜಿಲ್ಲೆಗಳಲ್ಲೂ ಬಂದ ಜಾತಿ ಬಗೆಗಿನ, ಮೀಸಲಾತಿ ಬಗೆಗಿನ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿದ್ದಾರೆ ಮತ್ತು ಲಿಂಗಾಯತ ಜಾತಿವಾದಿಗಳು ಸಹ ಕಟು ವಾಸ್ತವಗಳನ್ನು ಕೇಳಿಸಿಕೊಂಡಿದ್ದಾರೆ.

ತರಿಕೆರೆಯಲ್ಲಿ ಸ್ವಾಮೀಜಿಗಳಿಗೆ ಒಬ್ಬ ವಿದ್ಯಾರ್ಥಿ ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಮತ್ತು ಹನ್ನೆರಡನೆ ಶತಮಾನದ ಶರಣರ ಕೊಲೆಗಳು ಒಂದೇನಾ ? ಅನ್ನುವ ಪ್ರಶ್ನೆಗೆ ಇದು ಭಿನ್ನವಾದ ಸಂದರ್ಭದಲ್ಲಿ ನಡೆದ ಹತ್ಯೆಗಳಾದರೂ, ಹತ್ಯೆ ಮಾಡಿದರು ಒಂದೇ ವಂಶಜರು, ಪಟ್ಟಭದ್ರ ಹಿತಾಸಕ್ತಿಗಳಿಂದಲೇ ನಡೆಯಿತು ಎಂದು ಉತ್ತರಿಸಿದರು. ಈ ರೀತಿ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಮತ್ತೆ ಕಲ್ಯಾಣ ತಂಡ ಎದುರಿಸುತ್ತಾ ಯಶಸ್ವಿಯಾಗಿ ಇಂದಿಗೆ ೧೯ ಜಿಲ್ಲೆಗಳನ್ನು ಮುಕ್ತಾಯ ಮಾಡಿದೆ. ಈ ತಿಂಗಳಾದ್ಯಂತ ಆಂದೋಲನ ಮುಂದುವರೆಯಲಿದ್ದು ಈ ಪೀಳಿಗೆಯ ಯುವಜನರ ಪ್ರಶ್ನೆಗಳನ್ನು ಎದುರಿಸುತ್ತಾ ಪರಸ್ಪರ ಮುಖಾಮುಖಿಯು ಹೊಸದನ್ನು ಕಲಿಸುವ ಸಾಧ್ಯತೆಯಿದೆ.

ಮಂಗಳೂರಿಗೆ ಮೋಹನ್ ಆಳ್ವಾ ಅಂತ ವ್ಯಕ್ತಿಯನ್ನ ಒಳಗೊಂಡಿದ್ದು ಸಹಾ ವಿಮರ್ಶೆಗೊಳಗಾಯಿತು. ವಿಮರ್ಶೆಯ ಕಣ್ಣಿನಿಂದಲೇ ಈ ಆಂದೋಲನದ ಜೊತೆ ಇರುವ ಅವಶ್ಯಕತೆ ಖಂಡಿತ ಇದೆ ಎಂದು ಎನಿಸುತ್ತದೆ. ತಮಗೆ ನೂರೆಂಟು ಮಿತಿಗಳನ್ನು ಹಾಕಿಕೊಂಡು, ಮಠಗಳನ್ನು ತಮ್ಮ ಸಮುದಾಯಗಳವರ ಹಿತಕ್ಕಾಗಿ, ಮಠದ ಆಸ್ತಿ ಮಾಡಲು ಮತ್ತು ರಾಜಕೀಯ ಮಾಡುವುದೇ ಉದ್ದೇಶವಾಗಿ ನಡೆಸುತ್ತಿರುವ ಹಲವು ಮಠಾಧೀಶರ ನಡುವೆ ನಿಜವಾಗಲೂ ಬಸವ ತತ್ವ ಪ್ರಚಾರಕರಾಗಿ ಮಾಡಬೇಕಾದ ಕೆಲಸವನ್ನು ಮತ್ತೆ ಕಲ್ಯಾಣದ ಮೂಲಕ ಪಂಡಿತಾರಾಧ್ಯ ಸ್ವಾಮೀಜಿಯವರು ವಿಭಿನ್ನವಾದ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎನಿಸುತ್ತಿದೆ.

ಇಂತಹ ಪ್ರಯೋಗಗಳನ್ನು ನಡೆಸುವಾಗ ಬಹಳ ಎಚ್ಚರದಿಂದ ಹೆಜ್ಜೆ ಹಾಕಬೇಕಾಗುತ್ತದೆ. ನೀವು ಎಂತದ್ದೇ ಜನಪರವಾದ ಕಾರ್ಯಕ್ರಮವನ್ನು ಬೀದಿಗೆ ಬಂದು ಮಾಡಿ ಅದು ಆಳುವ ವರ್ಗದ ಪರವಿಲ್ಲದಿದ್ದರೆ ಅದಕ್ಕೆ ಕೊಡಬೇಕಾದಷ್ಟು ಪ್ರಾಶಾಸ್ತ್ಯವನ್ನು  ಮಾರಿಕೊಂಡ ಮಾಧ್ಯಮಗಳು ಕೊಡುವುದಿಲ್ಲ. ಇದು ಬೀದಿಗಿಳಿದು ಜನಪರ ಕೆಲಸ ಮಾಡುವ ದಲಿತ, ಜೀವಪರ ಹೋರಾಟಗಾರರ ಅನುಭವಕ್ಕೆ ಬಂದಿರುತ್ತದೆ. ಬಲಪಂಥೀಯ ಶಕ್ತಿಗಳು ಪದೇ ಪದೇ ಹಲವು ವಿಚಾರಗಳಲ್ಲಿ ಗೆಲುವು ಸಾಧಿಸಿದಾಗ ಯುವಜನರನ್ನು ಒಳಗೊಳ್ಳಬೇಕು ಎನ್ನುವ ಸಾಕಷ್ಟು ಮಾತು ಇದುವರೆಗೆ ನಡೆದಿದೆ.

ಬುದ್ಧಿವಂತರು ಯುವಜನರ ಜೊತೆ ಕೆಲಸ ಮಾಡುವಂತಹ ಜೀವಪರರಿಗೆ ಬೆಂಬಲಿಸದೆ ಜೊತೆ ನಿಲ್ಲದೆ ಇರುವ ಎಷ್ಟೋ ಉದಾಹರಣೆಗಳಿವೆ. ಮತ್ತೆ ಕಲ್ಯಾಣ ಯಾವುದೇ ವಿಮರ್ಶೆಗೆ ಅತೀತವಾದದ್ದಲ್ಲ. ಒಂದು ಮಠದ ಹಿನ್ನಲೆಯ ಸ್ವಾಮೀಜಿಯ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಾದ್ದರಿಂದ ಅನುಮಾನದಿಂದಲೇ ನೋಡಬೇಕಾದ ಅವಶ್ಯಕತೆ ಖಂಡಿತ ಇದೆ. ಆದರೆ ಇದೇ ವಿಚಾರವಾಗಿ ಆ ಆಂದೋಲನ ಎಲ್ಲರನ್ನು ಒಳಗೊಳ್ಳುವ ಮೂಲಕ ಏನನ್ನು ಹೇಳಲು ಹೊರಟಿದೆ ಎನ್ನುವುದನ್ನು ಯೋಚಿಸಬೇಕಿದೆ. ಈ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಹುಸಿ ದೇಶ/ದ್ವೇಷಭಕ್ತಿಯನ್ನೆ ಮನಸ್ಸಲ್ಲಿ ತುಂಬಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ನಮ್ಮದೇ ನೆಲದಲ್ಲಿ ಒಂದು ಮಾನವೀಯ ತತ್ವಗಳ ಆಧಾರದಲ್ಲಿ ಹನ್ನೆರಡನೆ ಶತಮಾನದಲ್ಲಿ  ಒಂದು ಸಿದ್ದಾಂತ ಹುಟ್ಟಿತ್ತು, ಅದು ಸರ್ವ ಜಾತಿಗಳ ನಡುವೆ ಸಮಾನತೆಯನ್ನು ಬಯಸಿತ್ತು, ಕಾಯಕ ಘನತೆಯನ್ನು ಎತ್ತಿ ಹಿಡಿದಿತ್ತು, ಅಂತರ್ಜಾತಿ ವಿವಾಹಗಳನ್ನು ಮಾಡಲು ಸಂಘರ್ಷ ನಡೆಸಿತ್ತು, ಅದನ್ನು ನಾವು ಮತ್ತೆ ನೆನೆಪಿಸಿಕೊಳ್ಳಬೇಕಿದೆ ಎನಿಸುತ್ತದೆ.

ಇದರ ಅನುಭವದ ಹಿನ್ನೆಲೆಯಲ್ಲಿ ಜಾತಿವಿನಾಶದಂತಹ ದೊಡ್ಡ ಹೆಜ್ಜೆಗಳನ್ನಿಡಲು ಬಸವ ತತ್ವದಲ್ಲಿರುವ ಅಂಶಗಳು ಯಾವುವು, ಕರ್ಮಠತನಕ್ಕೆ ಒಗ್ಗಿಕೊಂಡ ಲಿಂಗಾಯತ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ ಎಂದು ಮುಂದಿನ ದಿನಗಳಲ್ಲಿ ಚಿಂತಿಸಬೇಕಿದೆ. ಈಗ ನಡೆಯುತ್ತಿರುವ ಆಂದೋಲನವನ್ನು ನಾವು ನೋಡಬೇಕಾದ ರೀತಿ ಹೇಗೆ ಎಂದು ಮರುಚಿಂತಿಸಬೇಕಿದೆ ಎನಿಸುತ್ತದೆ. ಶರಣರು ಸಾಮಾಜಿಕ ಸಮಸ್ಯೆಗಳಿಗೆ ಸೂಚಿಸಿದ ಮೌಲ್ಯಾಧಾರಿತ ಪರಿಹಾರಗಳು, ಅವರು ವಿಚಾರಗಳನ್ನು ಸರಳ ವಚನಗಳ ರೂಪದಲ್ಲಿ ಮನಸ್ಸಿನಾಳಕ್ಕೆ ಇಳಿಸಿದ ಬಗ್ಗೆ ಇನ್ನಷ್ಟು ಸಂಶೋಧನೆ, ಅಧ್ಯಯನವನ್ನು ಪ್ರಜ್ಞಾವಂತ ವಲಯ ಮಾಡಬೇಕಿದೆ. ನಮ್ಮದೇ ನೆಲದ ಬಸವ ಚಿಂತನೆಯನ್ನು ಇಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನಗಳಿಗೆ ಬಲ ತುಂಬ ಬೇಕಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...