Homeಅಂತರಾಷ್ಟ್ರೀಯ‘ಮೆಟಾ’ | ‘ಫೇಸ್‌ಬುಕ್ ಇನ್ಕ್’ ಹೆಸರು ಬದಲಾವಣೆ; ಏನಿದು ಮೆಟಾವರ್ಸ್?

‘ಮೆಟಾ’ | ‘ಫೇಸ್‌ಬುಕ್ ಇನ್ಕ್’ ಹೆಸರು ಬದಲಾವಣೆ; ಏನಿದು ಮೆಟಾವರ್ಸ್?

- Advertisement -
- Advertisement -

ಸಾಮಾಜಿಕ ಜಾಲತಾಣಗಳ ದಿಗ್ಗಜ ‘ಪೇಸ್‌ಬುಕ್ ಇನ್ಕ್‌’(Facebook Inc) ತನ್ನ ಹೆಸರನ್ನು ‘ಮೆಟಾ’ (Meta) ಎಂದು ಬದಲಾಯಿಸಲಿದೆ ಎಂದು ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಜ಼ಕರ್‌ಬರ್ಗ್‌ (Mark Zukerberg) ಪ್ರಕಟಿಸಿದ್ದರೆ. ‘ಮೆಟಾ’ ಸಾಮಾಜಿಕ ಜಾಲತಾಣಗಳನ್ನು ಇನ್ನೊಂದು ಹಂತಕ್ಕೆ ಒಯ್ಯಲಿದೆ ಎಂದು ಅವರು ಹೇಳಿದ್ದಾರೆ.

ಗುರುವಾರ ಡೆವಲಪರ್‌ಗಳ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಾಮಾಜಿಕ ವಿಷಯಗಳ ಜೊತೆಗಿನ ಜಂಜಾಟಗಳಿಂದ ಸಾಕಷ್ಟು ಕಲಿತಿದ್ದೇವೆ. ನಾವು ಕಲಿತಿದ್ದು ಹೊಸ ಅಧ್ಯಾಯ ರೂಪಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 2019ರ ಲೋಕಸಭೆ ಚುನಾವಣೆಯಲ್ಲಿ ಸುಳ್ಳುಸುದ್ದಿಗಳು ಹೆಚ್ಚಾಗಿದ್ದವು: ಫೇಸ್‌ಬುಕ್‌

ತಮ್ಮ ಅಪ್ಲಿಕೇಷನ್‌ಗಳು ಮತ್ತು ಬ್ರಾಂಡ್‌ಗಳ ಹೆಸರುಗಳು ಹಾಗೆಯೆ ಇರಲಿದ್ದು, ಅವುಗಳ ಮಾತೃ ಸಂಸ್ಥೆಯಾದ ‘ಫೇಸ್‌ಬುಕ್ ಇನ್ಕ್‌’ ಹೆಸರಷ್ಟೇ ಬದಲಾಗಲಿದೆ ಎಂದು ಮಾರ್ಕ್‌ ಜ಼ಕರ್‌ಬರ್ಗ್‌‌‌ ಹೇಳಿದ್ದಾರೆ. ಫೇಸ್‌ಬುಕ್ ಇನ್ಕ್‌ ಅಡಿಯಲ್ಲಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸಪ್, ಮೆಸೆಂಜರ್‌, ಓಕ್ಲಾಸ್, ವರ್ಕ್‌ಪ್ಲೇಸ್‌, ಪೋರ್ಟಾಲ್, ಡಿಯಮ್ ಬ್ರಾಂಡ್ ಮತ್ತು ಅಪ್ಲಿಕೇಷನ್ ಇವೆ.

“ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ರೂಪಿಸುವ ಕಂಪನಿ ನಮ್ಮದಾಗಿದೆ. ಈ ಕಾರ್ಯದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಹೀಗಾಗಿಯೆ ನಮ್ಮ ಕಂಪನಿ ಜನರ ಸಂಪರ್ಕದ ಕೇಂದ್ರವಾಗಿದ್ದು, ನಾವೆಲ್ಲರೂ ಒಟ್ಟಾಗಿ ಬೃಹತ್‌ ಪ್ರಮಾಣದ ಆರ್ಥಿಕತೆಯನ್ನು ಸೃಷ್ಟಿಸಬಹುದು. ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್‌ 100 ಕೋಟಿ ಜನರನ್ನು ತಲುಪಲಿದೆ” ಎಂದು ಜ಼ಕರ್‌ಬರ್ಗ್‌‌‌ ಹೇಳಿದ್ದಾರೆ.

ಏನಿದು ‘ಮೆಟಾವರ್ಸ್’?

‘ಮೆಟಾವಸ್‌’ ಎಂಬ ಪದವನ್ನು ಮೊದಲ ಬಾರಿಗೆ ಅಮೆರಿಕದ ಕಾದಂಬರಿಕಾರ ‘ನೀಲ್ ಸ್ಟೆಫನ್ಸನ್’ ಎನ್ನುವವರು ಮೊದಲ ಬಾರಿಗೆ ಬಳಸಿದ್ದರು. ನೈಜ ಪ್ರಪಂಚದಿಂದ ತಪ್ಪಿಸಿಕೊಳ್ಳುವ ವರ್ಚುವಲ್‌ ಪ್ರಪಂಚದ ಜನರನ್ನು ಉದ್ದೇಶಿಸಿ ಅವರು ಈ ಪದವನ್ನು ಬಳಸಿದ್ದರು. ಇದೇ ಹೆಸರನ್ನು ತನ್ನ ಕಂಪೆನಿಗೆ ಮರುನಾಮಕರಣ ಮಾಡುವುದಾಗಿ ಜ಼ಕರ್‌ಬರ್ಗ್‌‌‌ ಹೇಳಿದ್ದಾರೆ.

ಇದನ್ನೂ ಓದಿ: 2023ರವರೆಗೆ ಟ್ರಂಪ್‌ ಖಾತೆ ಬ್ಯಾನ್‌ ವಿಸ್ತರಿಸಿದ ಫೇಸ್‌ಬುಕ್: ಅವಮಾನವೆಂದ ಟ್ರಂಪ್

ಫೇಸ್‌ಬುಕ್ ಇನ್ಕ್‌ ತನ್ನ ‘ಮೆಟಾವರ್ಸ್‌’ ನಿರ್ಮಿಸುವ ಯೋಜನೆಯನ್ನು ಕಳೆದ ತಿಂಗಳು ಬಹಿರಂಗ ಪಡಿಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೆಟಾವರ್ಸ್‌ ವೇದಿಕೆಯು ಜನರ ಸಂವಹನ, ಕೆಲಸ, ಉತ್ಪನ್ನಗಳಿಗೆ ಮಾರುಕಟ್ಟೆ, ವಿವಿಧ ವಿಷಯಗಳ ಕುರಿತ ರಚನೆ ಅವಕಾಶ ನೀಡಲಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿಸಿಕೊಡಲಿದೆ ಎಂದು ಜ಼ಕರ್‌ಬರ್ಗ್‌‌‌ ಹೇಳಿದ್ದಾರೆ.

ವಿಶ್ವದ ಹಲವು ದೇಶಗಳಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ ವಿರುದ್ಧ ಶಾಸಕಾಂಗದ ಕ್ರಮ ಮತ್ತು ನಿಯಂತ್ರಣವನ್ನು ಎದುರಿಸುತ್ತಿರುವಾಗ ತಮ್ಮ ಕಂಪನಿಗೆ ಹೊಸ ನಾಮಕರಣದ ನಿರ್ಧಾರವನ್ನು ಜ಼ಕರ್‌ಬರ್ಗ್‌‌‌ ಮಾಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕೋರ್ಟ್‌ಗೆ ಶರಣಾದ RSS ಮುಖಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...