Homeಮುಖಪುಟಅಜಾದ್‌ ಜಾಮೀನು ಅರ್ಜಿ ವಿಚಾರಣೆ: ದೆಹಲಿ ಪೊಲೀಸರ ಬೆವರಿಳಿಸಿದ ನ್ಯಾಯಾಧೀಶರು..

ಅಜಾದ್‌ ಜಾಮೀನು ಅರ್ಜಿ ವಿಚಾರಣೆ: ದೆಹಲಿ ಪೊಲೀಸರ ಬೆವರಿಳಿಸಿದ ನ್ಯಾಯಾಧೀಶರು..

ನೀವು ಜಮಾ ಮಸೀದಿ ಪಾಕಿಸ್ತಾನದಲ್ಲಿದೆ ಎಂಬಂತೆ ವರ್ತಿಸುತ್ತಿದ್ದೀರಿ. ಅದು ಪಾಕಿಸ್ತಾನವಾಗಿದ್ದರೂ ಸಹ ನೀವು ಅಲ್ಲಿಗೆ ಹೋಗಿ ಪ್ರತಿಭಟಿಸಬಹುದು. ಎಕೆಂದರೆ ಪಾಕಿಸ್ತಾನವು ಅವಿಭಜಿತ ಭಾರತದ ಒಂದು ಭಾಗವಾಗಿತ್ತು

- Advertisement -
- Advertisement -

ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಅಜಾದ್‌ರವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದೆಹಲಿಯ ಟಿಸ್‌ ಹಜಾರಿಯಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಡಾ.ಕಾಮಿನಿ ಲಾವು ಪಬ್ಲಿಕ್‌ ಪ್ರಾಸಿಕ್ಯೂಟರ್‌ರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಜಾಮೀನು ಅರ್ಜಿಯನ್ನು ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿರೋಧಿಸಿದ್ದು, ಆಜಾದ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದರು. ಆದರೆ ಪ್ರಾಸಿಕ್ಯೂಟರ್ ಆರಂಭದಲ್ಲಿ ಆಜಾದ್ ಅವರ ವಕೀಲರಾದ ಮಹಮೂದ್ ಪ್ರಚಾ ಅವರೊಂದಿಗೆ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ನಿರಾಕರಿಸಿದರು. ಆದರೆ ಯಾವುದೇ ಆರೋಪ ಮಾಡವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಳ್ಳುವುದು ಅಗತ್ಯ ಎಂದು ನ್ಯಾಯಾಧೀಶರು ಕಟುವಾಗಿ ಪ್ರಾಸಿಕ್ಯೂಟರ್‌ಗೆ ಹೇಳಿದರು

ಈ ಕುರಿತು, ಪ್ರಾಸಿಕ್ಯೂಟರ್ ಕೆಲವು ಪೋಸ್ಟ್‌ಗಳನ್ನು ಓದಿದರು. ಆಗ ಸಿಎಎ ಎನ್‌ಆರ್‌ಸಿಯನ್ನು ವಿರೋಧಿಸಲು ಜಮಾ ಮಸೀದಿ ಬಳಿ ಆಜಾದ್ ಪ್ರತಿಭಟನೆ ಮತ್ತು ಧರಣಿಗಾಗಿ ಕರೆ ನೀಡಿದ್ದನ್ನು ಉಲ್ಲೇಖಿಸಿ, ನ್ಯಾಯಾಧೀಶರು “ಧರಣೆ ಮಾಡುವುದರಲ್ಲಿ ಏನು ತಪ್ಪಾಗಿದೆ? ಪ್ರತಿಭಟಿಸುವುದರಲ್ಲಿ ಏನು ತಪ್ಪಿದೆ? ಪ್ರತಿಭಟಿಸುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು” ಎಂದು ಹೇಳಿದ್ದಾರೆ.

ಆ ಪ್ರತಿಭಟನೆಯಲ್ಲಿ ಹಿಂಸೆ ಎಲ್ಲಿದೆ? ಈ ಯಾವುದೇ ಪೋಸ್ಟ್‌ಗಳಲ್ಲಿ ಏನು ತಪ್ಪಾಗಿದೆ? ನೀವು ಪ್ರತಿಭಟಿಸಲು ಸಾಧ್ಯವಿಲ್ಲ ಎಂದು ಹೇಗೆ ಹೇಳುತ್ತೀರಿ? ನೀವು ಸಂವಿಧಾನವನ್ನು ಓದಿದ್ದೀರಾ?  ಎಂದು ಪ್ರಾಸಿಕ್ಯೂಟರ್‌ಗೆ ಪ್ರಶ್ನಿಸಿದ್ದಾರೆ.

“ನೀವು ಜಮಾ ಮಸೀದಿ ಪಾಕಿಸ್ತಾನದಲ್ಲಿದೆ ಎಂಬಂತೆ ವರ್ತಿಸುತ್ತಿದ್ದೀರಿ. ಅದು ಪಾಕಿಸ್ತಾನವಾಗಿದ್ದರೂ ಸಹ ನೀವು ಅಲ್ಲಿಗೆ ಹೋಗಿ ಪ್ರತಿಭಟಿಸಬಹುದು. ಎಕೆಂದರೆ ಪಾಕಿಸ್ತಾನವು ಅವಿಭಜಿತ ಭಾರತದ ಒಂದು ಭಾಗವಾಗಿತ್ತು” ಎಂದು ನ್ಯಾಯಾಧೀಶರು ಪ್ರಾಸಿಕ್ಯೂಟರ್‌ಗೆ ತಿಳಿಸಿದರು. ಆಜಾದ್ ಅವರ ಯಾವುದೇ ಪೋಸ್ಟ್‌ಗಳು ಅಸಂವಿಧಾನಿಕವಲ್ಲ ಎಂದ ನ್ಯಾಯಾಧೀಶರು ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೆ ಇದೆ ಎಂದು ಪ್ರಾಸಿಕ್ಯೂಟರ್‌ಗೆ ನೆನಪಿಸಿದರು.

ಪ್ರತಿಭಟನೆಗೆ ಅನುಮತಿ ತೆಗೆದುಕೊಳ್ಳಬೇಕು ಎಂದು ಪ್ರಾಸಿಕ್ಯೂಟರ್ ಉತ್ತರಿಸಿದಾಗ, ನ್ಯಾಯಾಧೀಶರು “ಏನು ಅನುಮತಿ? 144 ಅನ್ನು ಪದೇ ಪದೇ ಬಳಸುವುದು ದುರುಪಯೋಗ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ (ಇತ್ತೀಚಿನ ಕಾಶ್ಮೀರ ಪ್ರಕರಣದ ನಿರ್ಧಾರವನ್ನು ಉಲ್ಲೇಖಿಸಿ) ಎಂಬುದು ನಿಮಗೆ ಗೊತ್ತೆ ಎಂದು ಪ್ರಶ್ನಿಸಿದ್ದಾರೆ. ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ಅನೇಕ ಜನರನ್ನು ನಾನು ನೋಡಿದ್ದೇನೆ. ಮುಂದೆ ಅವರು ನಾಯಕರು ಮತ್ತು ಮಂತ್ರಿಗಳಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೇ ನಂತರ ಆಜಾದ್ ಕೂಡ “ಉದಯೋನ್ಮುಖ ರಾಜಕಾರಣಿ”ಯಾಗಿದ್ದು ಅವರು ಸಹ ಪ್ರತಿಭಟಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

“ಧಾರ್ಮಿಕ ಸ್ಥಳಗಳ ಹೊರಗೆ ಪ್ರತಿಭಟಿಸುವುದನ್ನು ಯಾವ ಕಾನೂನಿನಡಿಯಲ್ಲಿ ನಿಷೇಧಿಸಲಾಗಿದೆ ಎಂದು ನೀವು ನನಗೆ ತೋರಿಸಬೇಕೆಂದು, ಆಜಾದ್ ಅವರ ಹಿಂಸಾಚಾರಕ್ಕೆ ಯಾವುದೇ ಪುರಾವೆಗಳಿವೆಯೇ ಎಂದು ನ್ಯಾಯಾಧೀಶರು ಪ್ರಾಸಿಕ್ಯೂಟರ್ ಅವರನ್ನು ಕೇಳಿದರು.

ಅಂದರೆ ಪುರಾವೆಗಳನ್ನು ಸಂಗ್ರಹಿಸಲಾರದಷ್ಟು ನಮ್ಮ ದೆಹಲಿ ಪೊಲೀಸರು ಹಿಂದುಳಿದಿದ್ದಾರೆಯೇ? ಎಂತಹ ಸಣ್ಣ ಕೇಸುಗಳನ್ನು ಸಾಕ್ಷಿಗಳನ್ನು ಸಂಗ್ರಹಿಸುವ ಪೊಲೀಸರು ಈ ಕೇಸಿನಲ್ಲಿ ಯಾಕೆ ಸಂಗ್ರಹಿಸಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಚಂದ್ರಶೇಖರ್‌ ಅಜಾದ್‌ರನ್ನು ಬಂಧಿಸುವಂತಹ ಯಾವುದೇ ಪ್ರಕರಣಗಳು ನಡೆದಿಲ್ಲ, ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಬಂಧಿಸಲಾಗಿದೆ ಎಂದು ಆಜಾದ್ ಪರ ವಕೀಲ ಪ್ರಾಚಾ ವಾದ ಮಂಡಿಸಿದರು.

ಈ ಸಮಯದಲ್ಲಿ ಪ್ರಾಸಿಕ್ಯೂಟರ್, ಆಜಾದ್ ಉಗ್ರ ಭಾಷಣಗಳನ್ನು ಮಾಡಿದ ಬಗ್ಗೆ “ಡ್ರೋನ್ ಫೂಟೇಜ್” ಪುರಾವೆಗಳಿವೆ ಎಂದು ಹೇಳಿದರು. ಇದನ್ನು ನಿರಾಕರಿಸಿದ ಪ್ರಾಚಾ, ಧರಣದ ಸಮಯದಲ್ಲಿ ಆಜಾದ್ ಕೇವಲ ಸಂವಿಧಾನವನ್ನು ಓದುತ್ತಿದ್ದಾನೆ ಮತ್ತು ಸಿಎಎ, ಎನ್‌ಆರ್‌ಸಿ ವಿರುದ್ಧ ಮಾತನಾಡುತ್ತಿದ್ದಾನೆ ಎಂದು ಹೇಳಿದರು.

“ವಸಾಹತುಶಾಹಿ ಯುಗದಲ್ಲಿ ಪ್ರತಿಭಟನೆಗಳು ರಸ್ತೆಗಿಳಿದವು. ಆದರೆ ನಿಮ್ಮ ಪ್ರತಿಭಟನೆಯು ನ್ಯಾಯಾಲಯಗಳ ಒಳಗೆ ಕಾನೂನುಬದ್ಧವಾಗಿರಬಹುದು. ಸಂಸತ್ತಿನ ಒಳಗೆ ಹೇಳಬೇಕಾದ ವಿಷಯಗಳನ್ನು ಹೇಳಲಾಗಿಲ್ಲ ಮತ್ತು ಅದಕ್ಕಾಗಿಯೇ ಜನರು ಬೀದಿಗಿಳಿದಿದ್ದಾರೆ. ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂಪೂರ್ಣ ಹಕ್ಕು ನಮಗಿದೆ ಆದರೆ ನಮ್ಮ ದೇಶವನ್ನು ನಾಶಮಾಡಲು ಸಾಧ್ಯವಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಅಜಾದ್‌ಗೆ ಉದ್ದೇಶಪೂರ್ವಕವಾಗಿ ಹಾನಿಯಾಗುತ್ತಿದೆ ಎಂದು ಆಜಾದ್ ವಕೀಲ ಪ್ರಾಚಾ ಹೇಳಿದ್ದಾರೆ. ನ್ಯಾಯಾಲಯದ ನಿರ್ದೇಶನವಿದ್ದರೂ ಸಹ ಅಜಾದ್‌ಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆ ಸಹ ನೀಡಲಾಗಿಲ್ಲ ಎಂದು ಪ್ರಚಾ ಗಮನಸೆಳೆದರು.

ನಂತರ ನ್ಯಾಯಾಧೀಶರು ಪ್ರಾಸಿಕ್ಯೂಟರ್ ಕೋರಿಕೆಯ ಮೇರೆಗೆ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2 ರವರೆಗೆ ಮುಂದೂಡಿದರು.. ಬಹುಶಃ ನಾಳೆ ಅಜಾದ್‌ಗೆ ಜಾಮೀನು ದೊರೆಯುವ ಸಾಧ್ಯತೆ ನಿಚ್ಚಳವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ದೇಶದಲ್ಲಿ ಸಂವಿಧಾನದಡಿಯಲ್ಲಿ ಹೋರಾಟ ಮಾಡುವವರು ಕಡಿಮೆ ಅದರಲ್ಲೂ ವಿಶೇಷ ಸಂದರ್ಶನ ಭೀಮ್ ಆರ್ಮಿ ಚೀಫ್ ಚಂದ್ರಶೇಖರ್ ರಾವಣ್ ಆಜಾದ್ ರವರು
    ನ್ಯಾಯಬದ್ಧ ಕಾನೂನಿನ ಚೌಕಟ್ಟು ಒಳಪಡುವ ಸಂವಿಧಾನದ ಹಕ್ಕುಗಳಿಗೆ ನ್ಯಾಯ ತವಾಗಿ ಹೋರಾಡುತ್ತಿದ್ದಾರೆ ಅವರ ಏಳಿಗೆಯ ಸೈರಿಸಲಾರದವರು
    ಉದ್ದೇಶಪೂರ್ವಕವಾಗಿ ಬಂದೀಖಾನೆಯಲ್ಲಿ ಇಡುವ ವ್ಯವಸ್ಥೆಯನ್ನು ಸಂವಿಧಾನದ ವಿರುದ್ಧ ರೂಪಿಸಿಕೊಂಡಿರುತ್ತದೆ ಹೊರತು ನ್ಯಾಯಯುತವಲ್ಲ

    ಬೇನಾಮಿ ಆಸ್ತಿ ಬ್ಲಾಕ್ಮನಿ ಅಕ್ರಮ ಹಣ ವರ್ಗಾವಣೆ ಸಂವಿಧಾನದ ಅಡಿಯಲ್ಲಿ ನ್ಯಾಯಕ್ಕೆ ವಿರುದ್ಧವಾಗಿರುವ ಎಲ್ಲರಿಗೂ ದೋಷಮುಕ್ತರಾಗಿ ಹೊರಗೆ ಬರುತ್ತಾರೆ

    ಸಾರ್ವಜನಿಕರಿಗಾಗಿ ಸಂವಿಧಾನದ ಕಾನೂನಿನ ಮಾರ್ಗದರ್ಶಕರಾಗಿ ಸಮಾಜ ನಾಗರಿಕರಿಗೆ ತಿಳಿಯಪಡಿಸುವ ವ್ಯಕ್ತಿಯನ್ನು ಅಕ್ರಮವಾಗಿ ಬಂದೀಖಾನೆಗೆ ರವಾನಿಸುತ್ತಾರೆ

    ಜೈ ಭೀಮ್ ಜೈ ಚಂದ್ರಶೇಖರ್ ರಾವಣ್ಆಜಾದ್ ಸರ್
    ಜೈ ಸಂವಿಧಾನ

LEAVE A REPLY

Please enter your comment!
Please enter your name here

- Advertisment -

ಪೊಲೀಸ್ ತುರ್ತು ವಾಹನದ ಚಾಲಕ ಸೇರಿ ಐವರಿಂದ ಯುವತಿ ಮೇಲೆ ಅತ್ಯಾಚಾರ!

ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ...

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...