HomeಮುಖಪುಟJNU ದಾಳಿಯ ಯೋಜನೆ ರೂಪಿಸಿದ ವಾಟ್ಸಾಪ್‌ ಗುಂಪಿನ ಸದಸ್ಯರ ಫೋನ್‌ ವಶಪಡಿಸಿಕೊಳ್ಳಿ: ಹೈಕೋರ್ಟ್

JNU ದಾಳಿಯ ಯೋಜನೆ ರೂಪಿಸಿದ ವಾಟ್ಸಾಪ್‌ ಗುಂಪಿನ ಸದಸ್ಯರ ಫೋನ್‌ ವಶಪಡಿಸಿಕೊಳ್ಳಿ: ಹೈಕೋರ್ಟ್

Friends of RSS ಮತ್ತು Unity against left ಎಂಬ ಎರಡು ಗುಂಪುಗಳನ್ನು ದಾಳಿಯ ವೇಳೆಯ ಬಳಸಲಾಯಿತು ಎಂದು ಪ್ರಾಧ್ಯಾಪಕರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

ಜೆಎನ್‌ಯು ಹಿಂಸಾಚಾರಕ್ಕೆ ಸಂಬಂಧಿಸಿರುವ ವಾಟ್ಸಾಪ್ ಗುಂಪಿನ ಸದಸ್ಯರನ್ನು ಕರೆಸಿ, ಅವರ ಫೋನ್‌ಗಳನ್ನು ವಶಪಡಿಸಿಕೊಳ್ಳಿ ಎಂದು ದೆಹಲಿ ಹೈಕೋರ್ಟ್‌ಗೆ ಆದೇಶಿಸಿದೆ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿರುವ ಎರಡು ವಾಟ್ಸಾಪ್ ಗುಂಪುಗಳ ಎಲ್ಲ ಸದಸ್ಯರನ್ನು ಕರೆಸಿ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ ಮಂಗಳವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಜನವರಿ 5 ರ ದಾಳಿಯಲ್ಲಿ ಗಾಯಗೊಂಡ ಮೂವರು ಜೆಎನ್‌ಯು ಪ್ರಾಧ್ಯಾಪಕರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಹೈಕೋರ್ಟ್ ಆದೇಶ ಬಂದಿದೆ. ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಎಸ್ಥೆಟಿಕ್ಸ್‌ನ ಪ್ರಾಧ್ಯಾಪಕ ಅಮೀತ್ ಪರಮೇಶ್ವರನ್, ಪ್ರಾದೇಶಿಕ ಅಭಿವೃದ್ಧಿ, ಸ್ಕೂಲ್ ಆಫ್ ಸೋಶಿಯಲ್ ಸೈನ್ಸಸ್‌ನ ಸೆಂಟರ್ ಫಾರ್ ಸ್ಟಡಿ ಪ್ರಾಧ್ಯಾಪಕ ಅತುಲ್ ಸೂದ್ ಮತ್ತು ಸ್ಕೂಲ್ ಆಫ್ ಆರ್ಟ್ಸ್ ಮತ್ತು ಸೌಂದರ್ಯಶಾಸ್ತ್ರದ ಪ್ರಾಧ್ಯಾಪಕ ಶುಕ್ಲಾ ವಿನಾಯಕ್ ಸಾವಂತ್ ತಮ್ಮ ಮನವಿಯಲ್ಲಿ ಈ ದಾಳಿಗಳು ಪೂರ್ವನಿಯೋಜಿತವಾಗಿದ್ದು ಮತ್ತು ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

Friends of RSS ಮತ್ತು Unity against left ಎಂಬ ಎರಡು ಗುಂಪುಗಳನ್ನು ದಾಳಿಯ ವೇಳೆಯ ಬಳಸಲಾಯಿತು ಎಂದು ಪ್ರಾಧ್ಯಾಪಕರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಹಿಂಸಾಚಾರದ ನಂತರ, ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ, ವಿಶೇಷವಾಗಿ ವಾಟ್ಸಾಪ್‌ನಲ್ಲಿ ದಾಳಿಯ ಕುರತಾಗಿ ನಡೆದ ಚಾಟ್‌ಗಳ ಕುರಿತಾಗಿ ವೀಡಿಯೊಗಳು ಮತ್ತು ಸ್ಕ್ರೀನ್ ಶಾಟ್‌ಗಳು ಹೊರಹೊಮ್ಮಿದವು. ಇದು ದಾಳಿಯ ಪೂರ್ವನಿಯೋಜಿತ ಸ್ವರೂಪ ಮತ್ತು ಪಿತೂರಿ ಸ್ವರೂಪವನ್ನು ಸೂಚಿಸುತ್ತದೆ.

ತಮ್ಮ ನೀತಿಗಳಿಗೆ ಅನುಗುಣವಾಗಿ ಡೇಟಾವನ್ನು ಸಂರಕ್ಷಿಸುವಂತೆ ದೆಹಲಿ ಹೈಕೋರ್ಟ್ ವಾಟ್ಸಾಪ್ ಮತ್ತು ಗೂಗಲ್‌ಗೆ ನಿರ್ದೇಶನ ನೀಡಿತು. ನ್ಯಾಯಾಲಯಕ್ಕೆ ಉತ್ತರಿಸಿದ ವಾಟ್ಸಾಪ್ ಅನ್ನು ಪ್ರತಿನಿಧಿಸುವ ವಕೀಲರು ಕಂಪನಿಯು ತನ್ನ ಸರ್ವರ್‌ನಲ್ಲಿ ಸಂದೇಶಗಳನ್ನು ಉಳಿಸುವುದಿಲ್ಲ ಮತ್ತು ಸದಸ್ಯರ ಮೂಲಕ ಮಾತ್ರ ಅದನ್ನು ಪಡೆಯಬಹುದು ಎಂದು ಹೇಳಿದರು.

ಈ ವಾದದ ನಂತರ ಎರಡು ವಾಟ್ಸಾಪ್ ಗುಂಪುಗಳ ಎಲ್ಲ ಸದಸ್ಯರನ್ನು ಕರೆದು ಅವರ ಫೋನ್‌ಗಳನ್ನು ವಶಪಡಿಸಿಕೊಳ್ಳಲು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...