Homeಮುಖಪುಟ15 ಹಾಲಿ ಶಾಸಕರಿಗೆ ಗೇಟ್‌ಪಾಸ್‌, 23 ಹೊಸಮುಖಗಳಿಗೆ ಟಿಕೆಟ್‌: ಏನಿದು ಕೇಜ್ರಿವಾಲ್‌ ತಂತ್ರ?

15 ಹಾಲಿ ಶಾಸಕರಿಗೆ ಗೇಟ್‌ಪಾಸ್‌, 23 ಹೊಸಮುಖಗಳಿಗೆ ಟಿಕೆಟ್‌: ಏನಿದು ಕೇಜ್ರಿವಾಲ್‌ ತಂತ್ರ?

- Advertisement -
- Advertisement -

ಫೆಬ್ರವರಿ 8 ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಎಲ್ಲಾ 70 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಬಿಡುಗಡೆ ಮಾಡಿದೆ.

ಆಶ್ಚರ್‍ಯಕರ ರೀತಿಯಲ್ಲಿ 15 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿರುವ ಆಮ್‌ ಆದ್ಮಿ ಪಕ್ಷವು ಹೊಸದಾಗಿ 23 ಹೊಸಮುಖಗಳಿಗೆ ಮಣೆ ಹಾಕುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಕಳೆದ ಬಾರಿ 67 ಸ್ಥಾನಗಳನ್ನು ಗೆದ್ದಿದ್ದ ಆಪ್‌ ಪಕ್ಷದಿಂದ ಕೆಲವು ಶಾಸಕರು ಪಕ್ಷ ಬಿಟ್ಟು ಹೋದರೆ ಮತ್ತೆ ಕೆಲವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹಾಗಾಗಿ 23 ಹೊಸಮುಖಗಳು ಸ್ಪರ್ಧಿಸಲು ಅವಕಾಶವಾಗಿದ್ದು 15 ಹಾಲಿ ಶಾಸಕರಿಗೆ ಕೋಕ್‌ ನೀಡಲಾಗಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವದೆಹಲಿಯಿಂದ ಸ್ಪರ್ಧಿಸಲಿದ್ದರೆ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪಟ್ಪರ್ಗಂಜ್ ನಿಂದ ಸ್ಪರ್ಧಿಸಲಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಯುವ ನಾಯಕರಾದ ಮತ್ತು ರಾಘವ್ ಚಡ್ಡಾ ಮತ್ತು ಅತಿಶಿ ಕೂಡ ಈ ಬಾರಿ ವಿಧಾನಸಭೆಯಲ್ಲಿ ಕಣಕ್ಕಿಳಿದಿದ್ದಾರೆ.

ರಾಜೇಂದರ್ ನಗರದಿಂದ ರಾಘವ್ ಚಡ್ಡಾ ಸ್ಪರ್ಧಿಸಲಿದ್ದರೆ, ಅತೀಶಿ ಕಲ್ಕಾಜಿಯಿಂದ ಹೋರಾಡಲಿದ್ದಾರೆ. ಪೂರ್ವ ದೆಹಲಿ ಕ್ಷೇತ್ರದಿಂದ ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅತಿಶಿ ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ ಸೋತಿದ್ದರೆ, ರಾಘವ್ ಚಡ್ಡಾ ದಕ್ಷಿಣ ದೆಹಲಿಯ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಸೋತಿದ್ದರು.

ದೆಹಲಿ ವಿಧಾನಸಭಾ ಚುನಾವಣೆಗೆ ಎಲ್ಲಾ 70 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಅನುಮೋದಿಸಿದೆ. ಹಾಲಿ ಶಾಸಕರು 46 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ. 70 ಜನರಲ್ಲಿ 8 ಮಹಿಳೆಯರು ಇದ್ದಾರೆ. 2015 ರಲ್ಲಿ 6 ಮಹಿಳೆಯರು ಇದ್ದರು ಎಂದು ಸಿಸೋಡಿಯಾ ಹೇಳಿದರು ..

ಮಾಟಿಯಾ ಮಹಲ್ ಕ್ಷೇತ್ರದಿಂದ ಐದು ಅವಧಿಗೆ ಶಾಸಕರಾಗಿದ್ದ, ಕಳೆದ ವಾರ ಕಾಂಗ್ರೆಸ್ ನಿಂದ ಎಎಪಿಗೆ ಸೇರ್ಪಡೆಯಾದ ಶೋಯೆಬ್ ಇಕ್ಬಾಲ್ ಕೂಡ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ..

2015 ರಲ್ಲಿ 67 ಸ್ಥಾನಗಳನ್ನು ಎಎಪಿ ಗೆದ್ದರೆ, ಕೇವಲ ಮೂರು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಮತ್ತು ಕಾಂಗ್ರೆಸ್‌ ಶೂನ್ಯ ಸಂಪಾದನೆ ಮಾಡಿತ್ತು.

ಮುಖ್ಯಮಂತ್ರಿ ಕೇಜ್ರಿವಾಲ್ ಅವರ ನಾಯಕತ್ವದಲ್ಲಿ ಹೋರಾಡುತ್ತಿರುವ ಎಎಪಿ, ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಲು ಬಿಜೆಪಿಗೆ ಸವಾಲು ಹಾಕಿದೆ. ಬಿಜೆಪಿ ಸಂಸದ ಮನೋಜ್ ತಿವಾರಿ ಕೇಜ್ರಿವಾಲ್ ಅವರು ಕೇಸರಿ ಪಕ್ಷದ ಪ್ರತಿಸ್ಪರ್ಧಿ ಎಂದು ವ್ಯಾಪಕವಾಗಿ ನಂಬಲಾಗಿದ್ದರೂ, ಬಿಜೆಪಿ ಅವರನ್ನು ಇನ್ನೂ ಸಿಎಂ ಅಭ್ಯರ್ಥಿಗಳೆಂದು ಹೆಸರಿಸಿಲ್ಲ.

ಫೆಬ್ರವರಿ 11 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...