ಭಾರತದ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರಾದ ಮಿಲ್ಖಾ ಸಿಂಗ್ ಅವರು ಕೊರೊನಾ ಸಂಬಂಧಿತ ತೊಂದರೆಗಳಿಂದಾಗಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ‘ಫ್ಲೈಯಿಂಗ್ ಸಿಖ್’ ಎಂದೇ ಜನಪ್ರಿಯವಾಗಿರುವ ಮಿಲ್ಖಾ ಸಿಂಗ್ ನಾಲ್ಕು ಏಷ್ಯನ್ ಚಿನ್ನದ ಪದಕಗಳನ್ನು ಗೆದ್ದಿದ್ದರು. 1960 ರ ರೋಮ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.
ಅವರ ಕುರಿತು 2013 ರಲ್ಲಿ ‘ಭಾಗ್ ಮಿಲ್ಖಾ ಭಾಗ್’ ಎಂಬ ಬಾಲಿವುಡ್ ಸಿನಿಮಾವನ್ನು ಮಾಡಲಾಗಿತ್ತು.
ಮಿಲ್ಖಾ ಅವರ ಪತ್ನಿ, ವಾಲಿಬಾಲ್ ತಂಡದ ಮಾಜಿ ನಾಯಕಿ ನಿರ್ಮಲ್ ಕೌರ್ ಕೂಡಾ ಈ ವಾರದ ಆರಂಭದಲ್ಲಿ ಕೊರೊನಾ ಸೋಂಕಿಗೆ ನಿಧನರಾಗಿದ್ದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಕಳೆದ ತಿಂಗಳು ಕೊರೊನಾಗೆ ತುತ್ತಾಗಿದ್ದ ಮಿಲ್ಖಾ ಸೋಂಕಿನ ತೊಂದರೆಗಳಿಗಾಗಿ ಚಂಡೀಗಡದ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ತಡರಾತ್ರಿ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇದನ್ನೂ ಓದಿ: ಎಚ್. ಎಸ್. ದೊರೆಸ್ವಾಮಿ ಸದಾ ಜಾಗೃತವಾಗಿರುತ್ತಿದ್ದ ಪ್ರಜ್ಞೆ: ಡಾ. ಎ ಎಸ್ ಪ್ರಭಾಕರ್
ಮಿಲ್ಖಾ ಸಿಂಗ್ ಅವರನ್ನು ಸ್ವತಂತ್ರ ಭಾರತದ ಮೊದಲ ಕ್ರೀಡಾ ಸೂಪರ್ ಸ್ಟಾರ್ ಎಂದೇ ಬಣ್ಣಿಸಲಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸಲ್ಲಿಸಿದ್ದಾರೆ.

ಪ್ರಧಾನಿ ತನ್ನ ಟ್ವೀಟ್‌ನಲ್ಲಿ, “ನಾನು ಕೆಲವು ದಿನಗಳ ಹಿಂದೆ ಮಿಲ್ಖಾ ಸಿಂಗ್ ಅವರೊಂದಿಗೆ ಮಾತನಾಡಿದ್ದೆ. ಇದುವೆ ನಮ್ಮ ಕೊನೆಯ ಸಂಭಾಷಣೆ ಎಂದು ನನಗೆ ತಿಳಿದಿರಲಿಲ್ಲ. ಹಲವಾರು ಉದಯೋನ್ಮುಖ ಕ್ರೀಡಾಪಟುಗಳು ಅವರಿಂದ ಪ್ರಭಾವಿತರಾಗಿದ್ದಾರೆ. ಅವರ ಕುಟುಂಬ ಮತ್ತು ಪ್ರಪಂಚದಾದ್ಯಂತ ಇರುವ ಅವರ ಅನೇಕ ಅಭಿಮಾನಿಗಳಿಗೆ ನನ್ನ ಸಂತಾಪ” ಎಂದು ಬರೆದಿದ್ದಾರೆ.
I had spoken to Shri Milkha Singh Ji just a few days ago. Little did I know that it would be our last conversation. Several budding athletes will derive strength from his life journey. My condolences to his family and many admirers all over the world.
— Narendra Modi (@narendramodi) June 18, 2021
ಟ್ರ್ಯಾಕ್ ಮತ್ತು ಮೈದಾನದಲ್ಲಿ ಮಿಲ್ಖಾ ಅವರ ಸಾಧನೆಯು ಭಾರತದಲ್ಲಿ ಒಂದು ದಂತಕತೆಯಾಗಿದೆ. ಅವರು ಅಂತರ್‌ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಐದು ಚಿನ್ನ ಗೆದ್ದಿದ್ದಾರೆ. ತನ್ನ 80 ಅಂತರರಾಷ್ಟ್ರೀಯ ರೇಸ್‌ಗಳಲ್ಲಿ 77 ಪಂದ್ಯಗಳನ್ನು ಗೆದ್ದಿದ್ದಕ್ಕಾಗಿ 1959 ರಲ್ಲಿ “ಹೆಲ್ಮ್ಸ್ ವರ್ಲ್ಡ್ ಟ್ರೋಫಿ”ಯನ್ನು ಪಡೆದ್ದಾರೆ. 1958 ರಲ್ಲಿ ಅವರು ಭಾರತದ ಮೊದಲ ಕಾಮನ್ವೆಲ್ತ್ ಚಿನ್ನವನ್ನೂ ಗೆದ್ದಿದ್ದಾರೆ.
ಇದನ್ನೂ ಓದಿ: ಭಾರತದ ಅಥ್ಲೆಟಿಕ್ ದಂತಕಥೆ ಮಿಲ್ಕಾ ಸಿಂಗ್ ಆರೋಗ್ಯ ಸ್ಥಿತಿ ಮತ್ತೆ ಗಂಭೀರ


