Homeಕರೋನಾ ತಲ್ಲಣಭಾರತದ ಅಥ್ಲೆಟಿಕ್ ದಂತಕಥೆ ಮಿಲ್ಕಾ ಸಿಂಗ್ ಆರೋಗ್ಯ ಸ್ಥಿತಿ ಮತ್ತೆ ಗಂಭೀರ

ಭಾರತದ ಅಥ್ಲೆಟಿಕ್ ದಂತಕಥೆ ಮಿಲ್ಕಾ ಸಿಂಗ್ ಆರೋಗ್ಯ ಸ್ಥಿತಿ ಮತ್ತೆ ಗಂಭೀರ

- Advertisement -
- Advertisement -

ಅಂತರಾಷ್ಟ್ರೀಯ ಕ್ರೀಡಾಪಟು ಮತ್ತು ಅಥ್ಲೆಟಿಕ್ ದಂತಕಥೆ 91 ಮಿಲ್ಕಾ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೊರೊನಾ ಸೋಂಕಿನಿಂದ ಚಂಡಿಗಢದ ಪೋಸ್ಟ್ ಗ್ರಾಜುವೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು 2 ದಿನಗಳ ಹಿಂದೆ ಐಸಿಯು ನಿಂದ ಸಾಮಾನ್ಯ ವಾರ್ಡಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಅವರಿಗೆ ಮತ್ತೆ ತೀವ್ರ ಜ್ವರ ಮತ್ತು ಆಕ್ಸಿಜನ್ ಸಮಸ್ಯೆ ಕಾಣಿಸಿಕೊಂಡಿದೆ. ಗುರುವಾರ ಸಂಜೆಯಿಂದಲೇ ಮಿಲ್ಕಾ ಸಿಂಗ್ ಅವರ ದೇಹದ ಆಕ್ಸಿಜನ್ ಪ್ರಮಾಣದಲ್ಲಿ ಏರುಪೇರು ಕಂಡುಬಂದಿತ್ತು. ಇಂದು ಬೆಳಗ್ಗೆ ಮಿಲ್ಕಾ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದೆ.

ಬುಧವಾರ ಮಿಲ್ಕಾಸಿಂಗ್ ಅವರನ್ನು ಕೋವಿಡೇತರ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಕೊರೊನಾ ಸೋಂಕಿನಿಂದ ಮಿಲ್ಕಾ ಸಿಂಗ್ ಗುಣಮುಖರಾದರೆಂದು ಬುಧವಾರ ಹೇಳಲಾಗಿತ್ತು. ಆದರೆ ಈಗ ಮತ್ತೆ ಮಿಲ್ಕಾ ಆರೊಗ್ಯ ಬಿಗಡಾಯಿಸಿದೆ. ಈ ಸಂಬಂಧ ಆಸ್ಪತ್ರೆ ಯಾವುದೇ ಹೇಳಿಕೆಗಳನ್ನು ಬಿಡುಗಡೆ ಮಾಡಿಲ್ಲ. ಮಿಲ್ಕಾ ಸಿಂಗ್ ಆರೋಗ್ಯ ಸೂಕ್ಷ್ಮವಾಗಿದೆ. ವೈದ್ಯರ ತಂಡ ಅವರ ಆರೊಗ್ಯದ ಮೇಲೆ ನಿಗಾ ಇರಿಸಿದೆ ಎಂದಷ್ಟೇ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕಳೆದ ಭಾನುವಾರ ಮಿಲ್ಕಾ ಸಿಂಗ್ ಅವರ ಪತ್ನಿ 85 ವರ್ಷದ ನಿರ್ಮಲ್ ಅವರು ಕೊರೊನಾ ಸೋಂಕಿನ ವಿರುದ್ಧ ಸೆಣೆಸುತ್ತಲೇ ಮೃತ ಪಟ್ಟಿದ್ದರು.


ಇದನ್ನೂ ಓದಿ : ಯುಎಪಿಎ ಕಾಯ್ದೆಯಡಿ ಬಂಧಿತ ಪತ್ರಕರ್ತ ಸಿದ್ದಿಕಿ ಕಪ್ಪನ್ ತಾಯಿ ನಿಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿಯಲ್ಲಿ ‘ಅಬ್ ಕಿ ಬಾರ್ ರಾಬರ್ಟ್ ವಾದ್ರಾ’ ಪೋಸ್ಟರ್; ಪ್ರಿಯಾಂಕಾ ಪತಿ ಸ್ಪರ್ಧೆಗೆ ಹೆಚ್ಚಿದ...

0
2019ರ ಲೋಕಸಭಾ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ತಮ್ಮ ಕ್ಷೇತ್ರವನ್ನು ಅಮೇಥಿಯಿಂದ ಕೇರಳದ ವಯನಾಡಿಗೆ ಸ್ಥಳಾಂತರಿಸಿದ್ದಾರೆ. ಆದರೆ, ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಯಾರು...