ರಾಜ್ಯದಾದ್ಯಂತ ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಈ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಪ್ರವಾಹ ಪರಿಶೀಲನೆಯ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಸಚಿವ ಅಶೋಕ್ ಅವರು ನಿದ್ದೆಗೆ ಜಾರಿದ್ದಾರೆ ಎಂದು ಆರೋಪಿಸಲಾಗಿದೆ.
ನೆರೆ ನಿರ್ವಹಣೆಯ ಕುರಿತು ರಾಜ್ಯ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ಮುಖ್ಯಮಂತ್ರಿ ನಡೆಸುತ್ತಿರುವ ಸಭೆಯೊಂದರಲ್ಲಿ ಅಶೋಕ್ ನಿದ್ದೆಗೆ ಜಾರಿರುವ ಫೋಟೊಗಳು ವೈರಲ್ ಆಗಿದೆ. ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ‘ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ನಿದ್ದೆ’ ಎಂದು ವಾಗ್ದಾಳಿ ನಡೆಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಮುಳುಗುವುದರಲ್ಲಿ ಹಲವು ವಿಧಗಳಿವೆ! ರಾಜ್ಯದ ಜನ ಮಳೆಯಲ್ಲಿ ಮುಳುಗಿದ್ದಾರೆ, ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ!” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬೆಂಗಳೂರು ಮುಳುಗುತ್ತಿರುವಾಗ ‘ಬೆಣ್ಣೆ ದೋಸೆ ಮಾರಿದ’ ಬಿಜೆಪಿ ಸಂಸದ ತೇಜಸ್ವಿ ಸೂರ್ಯ!
“ಪ್ರವಾಹ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವ ಆರ್. ಅಶೋಕ್ ಅವರ ಭರ್ಜರಿ ನಿದ್ದೆ. ‘ಹಲಾಲ್ ಕಟ್’ ಎಂದರೆ ಥಟ್‌ನೆ ಎಚ್ಚರಾಗುತ್ತಾರೆ! ‘ಚಿಂತೆ ಇಲ್ಲದವಗೆ ಸಂತೆಲೂ ನಿದ್ದೆ’ ಎಂಬ ಮಾತು ಸಚಿವರಿಗೇ ಹೇಳಿದ್ದೇನೋ!” ಎಂದು ವ್ಯಂಗ್ಯವಾಡಿದೆ.
ಮುಳುಗುವುದರಲ್ಲಿ ಹಲವು ವಿಧಗಳಿವೆ!
ರಾಜ್ಯದ ಜನ ಮಳೆಯಲ್ಲಿ ಮುಳುಗಿದ್ದಾರೆ,
ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ!ಪ್ರವಾಹ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವ @RAshokaBJP ಅವರ ಭರ್ಜರಿ ನಿದ್ದೆ.
'ಹಲಾಲ್ ಕಟ್' ಎಂದರೆ ಥಟ್‌ನೆ ಎಚ್ಚರಾಗುತ್ತಾರೆ!'ಚಿಂತೆ ಇಲ್ಲದವಗೆ ಸಂತೆಲೂ ನಿದ್ದೆ' ಎಂಬ ಮಾತು ಸಚಿವರಿಗೇ ಹೇಳಿದ್ದೇನೋ! pic.twitter.com/e11pzCibwZ
— Karnataka Congress (@INCKarnataka) September 6, 2022
ಇಷ್ಟೆ ಅಲ್ಲದೆ ಸಂಸದ ತೇಜಸ್ವಿ ಸೂರ್ಯ ಅವರ ಮೇಲೆ ಕೂಡಾ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, “ಮತಿ ‘ದೋಷ’ ಇರುವವರನ್ನು ಆಯ್ಕೆ ಮಾಡಿದರೆ, ಜನ ಮುಳುಗುವಾಗ ‘ದೋಸೆ’ ತಿನ್ನಲು ಹೋಗುತ್ತಾರೆ!” ಎಂದು ಹೇಳಿದೆ. ಜನರು ಮಳೆಯ ಸಂಕಷ್ಟಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಮಾಡಿ ಹರಿ ಬಿಡುತ್ತಿರುವಾಗ, ಸಂಸದ ತೇಜಸ್ವಿ ಸೂರ್ಯ ಅವರು ಇನ್ಸ್‌ಟಾಗ್ರಾಂನಲ್ಲಿ ದೋಸೆಯ ಚಿತ್ರವನ್ನು ನೋಡಿ ಅದನ್ನು ಸವಿಯಲು ಹೋಗಿದ್ದಾಗಿ ಎಂದು ಹೇಳುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಇದನ್ನೂ ಓದಿ: ಕ್ರಿಕೆಟಿಗ ಅರ್ಷದೀಪ್‌ರನ್ನು ಖಾಲಿಸ್ತಾನಿ ಎಂದವರ ಟ್ವೀಟ್ ಪತ್ತೆ ಹಚ್ಚಿದ್ದಕ್ಕೆ ಜುಬೇರ್ ವಿರುದ್ಧ ದೂರು ದಾಖಲು!
“ಬೆಂಗಳೂರು ಮುಳುಗಿದೆ, ಜನತೆ ಪರದಾಡುತ್ತಿದ್ದಾರೆ, ಆದರೆ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರು ದೋಸೆ ತಿನ್ನುವ ಟೆಂಪ್ಟ್ ಆಗಿದ್ಯಂತೆ! ಮಕ್ಕಳಾಟ ಆಡಿಕೊಂಡಿದ್ದ ಅಪ್ರಬುದ್ಧರನ್ನು ಸಂಸದರನ್ನಾಗಿಸಿದರೆ ಇನ್ನೇನು ನಿರೀಕ್ಷಿಸಲು ಸಾಧ್ಯ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.



ಕಲಾಪಗಳಲ್ಲಿ ನಿದ್ದೆ ಮಾಡದೆ ಇನ್ನೇನು …….ಅವರ ಮನೆಯೊಳಗೆ ಐದು ಆರು ಅಡಿ ನೀರು ಹೋಗುತ್ತಿದ್ದರೆ ಅವರಿಗೂ ನಿದ್ದೆ ಬರುತ್ತಿರಲಿಲ್ಲ …….ಬೇರೆಯವರ ಮನೆಗೆ ನೀರು ಹೋಗಿದ್ದು ತಾನೇ……