Homeಫ್ಯಾಕ್ಟ್‌ಚೆಕ್‘ಪಾಕಿಸ್ತಾನ್‌ ಮುರ್ದಾಬಾದ್‌’ ಘೋಷಣೆಯೊಂದಿಗೆ ಕಸದಬುಟ್ಟಿ ತಯಾರಿಸಿತೆ ನೀಲ್ ಕಮಲ್ ಸಂಸ್ಥೆ?

‘ಪಾಕಿಸ್ತಾನ್‌ ಮುರ್ದಾಬಾದ್‌’ ಘೋಷಣೆಯೊಂದಿಗೆ ಕಸದಬುಟ್ಟಿ ತಯಾರಿಸಿತೆ ನೀಲ್ ಕಮಲ್ ಸಂಸ್ಥೆ?

- Advertisement -
- Advertisement -

ನೀಲ್ ಕಮಲ್ ಸಂಸ್ಥೆಯು ‘ಪಾಕಿಸ್ತಾನ್ ಮುರ್ದಾಬಾದ್’ (ಪಾಕಿಸ್ತಾನಕ್ಕೆ ಧಿಕ್ಕಾರ) ಘೋಷಣೆಯನ್ನು ಪಾಕಿಸ್ತಾನದ ಬಾವುಟದೊಂದಿಗೆ ತನ್ನ ಉತ್ಪನ್ನದ ಮೇಲೆ ಮುದ್ರಿಸಿದೆ ಎಂಬ ಚಿತ್ರವೊಂದು ಇತ್ತೀಚೆಗೆ ವೈರಲ್‌ ಆಗಿದೆ.

ರೈಲ್ವೆ ನಿಲ್ದಾಣವೊಂದರ ಕಸದಬುಟ್ಟಿಯ ಮೇಲೆ ಈ ರೀತಿಯ ಘೋಷಣೆ ಹಾಗೂ ಭಾವುಟದ ಚಿತ್ರವಿದ್ದು, ಶಿಪ್ರಾ ದತ್‌ ಎಂಬುವವರು, “ಪ್ಲಾಸ್ಟಿಕ್ ಉತ್ಪನ್ನ ಸಂಸ್ಥೆ ನೀಲ್ ಕಮಲ್, ಬಹಳ ಸಂತೋಷ ತರುವ ಕೆಲಸ ಮಾಡಿದೆ” ಎಂಬ ಒಕ್ಕಣೆಯಲ್ಲಿ ತಮ್ಮ ಟ್ಟಿಟರ್‌ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದನ್ನು ತಕ್ಷಣದಲ್ಲೇ ನೂರಾರು ಮಂದಿ ರೀಟ್ವೀಟ್‌ ಮಾಡಿದ್ದಾರೆ.

ಬಿಜೆಪಿಯ ಪರ ಸದಾ ಬ್ಯಾಟಿಂಗ್ ಮಾಡುವ ನಟಿ ಕಂಗನಾ ರಣಾವತ್‌ ಅಭಿಮಾನಿಗಳು, ಇದೇ ಅರ್ಥದಲ್ಲಿಯೇ ಚಿತ್ರವನ್ನು ತಮ್ಮ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಗುಂಜೇಶ್‌ ಗೌತಮ್ ಝಾ, ಹಮ್‌ಲೋಗ್ ಇಂಡಿಯಾ, ಪಿ.ಎನ್.ರಾಯ್, ಜೀತೇಂದ್ರ ಭಾರದ್ವಾಜ್ ಸೇರಿದಂತೆ ಇನ್ನಿತರರೂ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೇಸ್ ಬುಕ್‌ನಲ್ಲೂ ಚಿತ್ರ ವೈರಲ್ ಆಗಿದೆ.

ಸತ್ಯಾಂಶವೇನು?

ನಿಜಾಂಶವನ್ನು ಬೇಧಿಸಿರುವ ಆಲ್ಟ್ ನ್ಯೂಸ್‌‌, ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಿರುವಂತೆ, ’ನೀಲ್ ಕಮಲ್ ಸಂಸ್ಥೆ ಈ ರೀತಿಯ ಘೋಷಣೆಯೊಂದಿಗೆ ಕಸದಬುಟ್ಟಿಯನ್ನು ಉತ್ಪಾದಿಸಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಫೆ.22, 2019ರಲ್ಲಿ ಈ ಚಿತ್ರ ’ಪತ್ರಿಕಾ’ ಜಾಲತಾಣದಲ್ಲಿ ವರದಿಯಾಗಿದೆ. ಪುಲ್ವಾಮ ದಾಳಿಯಾದ ಹಿನ್ನೆಲೆಯಲ್ಲಿ ಯಾರೋ ಅಪರಿಚಿತರು, ’ಪಾಕಿಸ್ತಾನ ಮುರ್ದಾಬಾದ್’ ಸ್ಟಿಕ್ಕರ್‌ಗಳನ್ನು 10ರಿಂದ 12 ಕಸದಬುಟ್ಟಿಗಳ ಮೇಲೆ ಉದಯಪುರ್ ರೈಲ್ವೆ ನಿಲ್ದಾಣದಲ್ಲಿ ಅಂಟಿಸಿದ್ದಾರೆ. ಅಧಿಕಾರಿಗಳು ಸೂಚನೆ ನೀಡಿದ ಬಳಿಕ ಆ ಸ್ಟಿಕ್ಕರ್ಗಳನ್ನು ತೆರವು ಮಾಡಲಾಗಿದೆ. ಸ್ಟಿಕ್ಕರ್ ಅಂಟಿಸಿರುವ ಸಂಬಂಧ ಸ್ಥಳೀಯ ಮಾಧ್ಯಮ ’ಉದಯಪುರ್ ಟೈಮ್ಸ್’ ಕೂಡ ವರದಿ ಮಾಡಿತ್ತು. 2019ರ ವರದಿಯನ್ನು ತಿರುಚಿ, ಬೇರೊಂದು ಒಕ್ಕಣೆಯೊಂದಿಗೆ ಇತ್ತೀಚೆಗೆ ಈ ಚಿತ್ರವನ್ನು ವೈರಲ್ ಮಾಡಲಾಗಿದೆ.

ಇದನ್ನೂ ಓದಿ: ಇದು ಭಯೋತ್ಪಾದಕರನ್ನು ಬಂಧಿಸುವ ದೃಶ್ಯವಲ್ಲ!

ನೀಲ್ ಕಮಲ್ ಸಂಸ್ಥೆಯು, “ಈ ಥರದ ಯಾವುದೇ ಉತ್ಪನ್ನಗಳನ್ನು ನಾವು ತಯಾರಿಸಿಲ್ಲ. ಯಾವುದೇ ಸ್ಟಿಕ್ಕರ್‍ಗಳನ್ನೂ ಅಂಟಿಸಿಲ್ಲ” ಎಂದು ಆಲ್ಟ್ ನ್ಯೂಸ್‌ಗೆ ತಿಳಿಸಿದೆ. ಕಂಪೆನಿಯ ಹೆಸರು, ಲೋಗೋ, ಸಂಪರ್ಕ ಮಾಹಿತಿ ಮಾತ್ರ ಉತ್ಪನ್ನದ ಮೇಲೆ ಮುದ್ರಿಸಿರುವುದಾಗಿ ಸ್ಪಷ್ಟಪಡಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಜೊತೆಗಿನ ಮಾತುಕತೆಗಳು ಫಲಪ್ರದವಾಗಿವೆ, ಐದು ದಿನಗಳ ಕಾಲ ದಾಳಿ ಮಾಡದಂತೆ ಸೂಚಿಸಿದ್ದೇನೆ : ಟ್ರಂಪ್

ಕಳೆದ ಎರಡು ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮಾತುಕತೆಗಳು ಫಲಪ್ರದವಾಗಿವೆ. ಆದ್ದರಿಂದ ಇರಾನ್‌ನ ಇಂಧನ ಕೇಂದ್ರಗಳ ಮೇಲಿನ ಅಮೆರಿಕದ ದಾಳಿಯನ್ನು ಐದು ದಿನಗಳವರೆಗೆ ಮುಂದೂಡಲು ಸೂಚಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್...

ಎಸ್‌ಐಆರ್ ದೂರಾಲೋಚನೆ ಅಲ್ಲ, ಸಿಎಎ-ಎನ್‌ಆರ್‌ಸಿ ಜಾರಿಗೊಳಿಸುವ ದುರಾಲೋಚನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು 'ದೂರಾಲೋಚನೆ'ಯಲ್ಲ, ಬದಲಿಗೆ ಅದು ಸಿಎಎ-ಎನ್‌ಅರ್‌ಸಿಯನ್ನು ಜಾರಿಗೊಳಿಸುವ 'ದುರಾಲೋಚನೆ'ಯನ್ನು ತನ್ನ ಒಡಲಲ್ಲಿಟ್ಟಿಕೊಂಡಿದೆ. ಮೊಕದ್ದಮೆಗಳ ವಿಚಾರಣೆಯು ಸುಪ್ರೀಂ ಕೋರ್ಟಿನಲ್ಲಿರುವಾಗ ಕರ್ನಾಟಕದಲ್ಲಿ ತರಾರುರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಬಾರದು...

ಸ್ವಘೋಷಿತ ದೇವಮಾನವನ ಖರಾತ್ ವಿರುದ್ಧ ಮತ್ತೆರಡು ಎಫ್‌ಐಆರ್ : ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ ಆರೋಪ

ಅತ್ಯಾಚಾರ ಸೇರಿದಂತೆ ಹಲವು ಕ್ರಿಮಿನಲ್ ಆರೋಪಗಳ ಮೇಲೆ ಈಗಾಗಲೇ ಬಂಧಿತನಾಗಿರುವ ಸ್ವಘೋಷಿತ ದೇವಮಾನವ ಹಾಗೂ ಜ್ಯೋತಿಷಿ ಅಶೋಕ್ ಖರಾತ್ ವಿರುದ್ಧ ಮಹಾರಾಷ್ಟ್ರದ ನಾಸಿಕ್‌ನ ಸರ್ಕಾರವಾಡಾ ಪೊಲೀಸರು ಶನಿವಾರ (ಮಾ.21) ಎರಡು ಹೊಸ ಅತ್ಯಾಚಾರ...

ದಲಿತ ಮಹಿಳೆ ಮೇಲೆ ಸಾರ್ವಜನಿಕವಾಗಿ ಹಲ್ಲೆ; ಹಾಡಗಲೇ ಕೂದಲಿಡಿದು ಎಳೆದಾಡಿದ ಪಂಜಾಬ್ ಪೊಲೀಸರು

ಪಂಜಾಬ್‌ನ ಜಲಂಧರ್‌ನಲ್ಲಿ ಕಳೆದ ಶುಕ್ರವಾರ (ಮಾ.20), ಪೊಲೀಸ್ ಅಧಿಕಾರಿಯೊಬ್ಬರು ದಲಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಕೂದಲು ಹಿಡಿದು ಎಳೆದಾಡಿದ್ದಾರೆ ಎಂದು 'ಸಿಯಾಸಾಟ್.ಕಾಮ್' ವರದಿ ಮಾಡಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ...

ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ; ಇಬ್ಬರು ಸಾವು

ಭಾನುವಾರ ತಡರಾತ್ರಿ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಸುಮಾರು 76 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವು ನೆಲದ ಮೇಲೆ ಚಲಿಸುತ್ತಿದ್ದ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪೈಲಟ್ ಮತ್ತು...

‘ತೀರ್ಮಾನಿಸಲು ಏನೂ ಉಳಿದಿಲ್ಲ’ : ಸೋನಮ್ ವಾಂಗ್ಚುಕ್ ಬಂಧನ ಪ್ರಶ್ನಿಸಿದ್ದ ಅರ್ಜಿ ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್

ಲಡಾಖ್‌ನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಮಾ.23)...

ಡೋನಾಲ್ಡ್‌ ಟ್ರಂಪ್ ಕಠಿಣ ವೀಸಾ ನೀತಿಗಳಿಂದ ಸಂಕಷ್ಟಕ್ಕೆ ಸಿಲುಕಿದ ಭಾರತ-ಚೀನಾ

ಡೊನಾಲ್ಡ್‌ ಟ್ರಂಪ್ ಆಡಳಿತವು ಅನಾವರಣಗೊಳಿಸಿದ ಕಠಿಣ ವಲಸೆ ನೀತಿಯ ಗರಿಷ್ಠ ಹೊರೆಯು ಭಾರತ ಮತ್ತು ಚೀನಾ ದೇಶಗಳ ಮೇಲೆ ಬಿದ್ದಿದೆ. 2024 ರ ಅದೇ ಅವಧಿಗೆ ಹೋಲಿಸಿದರೆ 2025 ರ ಮೊದಲ ಎಂಟು...

ಉತ್ತರಾಖಂಡ| ಪೌರಿಯಲ್ಲಿ ಅಂಬೇಡ್ಕರ್ ಪ್ರತಿಮೆ ವಿರೂಪ; ದೂರು ದಾಖಲು

ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ನಂತರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು (ಮಾ.22) ತಿಳಿಸಿದ್ದಾರೆ. ಮಾರ್ಚ್ 21 ರ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಅಲಕನಂದಾ...

ಅಸ್ಸಾಂ : ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಚಿವೆ ನಂದಿತಾ ಗರ್ಲೋಸಾ

ಅಸ್ಸಾಂನ ಬಿಜೆಪಿ ಸರ್ಕಾರದಲ್ಲಿ ಸಚಿವೆಯಾಗಿದ್ದ ನಂದಿತಾ ಗರ್ಲೋಸಾ ಅವರು ಭಾನುವಾರ (ಮಾ.22) ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ವಿಧಾನಸಭೆ ಚುನಾವಣೆಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆ ನಂದಿತಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ನಂದಿತಾ ಅವರು ಪ್ರತಿನಿಧಿಸುತ್ತಿದ್ದ...

ಉತ್ತರ ಪ್ರದೇಶ| ವಾಲ್ಮೀಕಿ ಸಮುದಾಯದ ವಿರುದ್ಧ ಹೇಳಿಕೆ; ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಬಂಧನ

ವಾಲ್ಮೀಕಿ ಸಮುದಾಯದ ವಿರುದ್ಧ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನೀಡಿದ ಆಕ್ಷೇಪಾರ್ಹ ಹೇಳಿಕೆ ಆಕ್ರೋಶ ವ್ಯಕ್ತವಾಗಿದ್ದು, ಸಮುದಾಯದಿಂದ ಪ್ರತಿಭಟನೆ ಮತ್ತು ರಸ್ತೆ ತಡೆಗೆ ಕಾರಣವಾದ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೌಗವಾನ್ ಪಕ್ಡಿಯಾ...