ಫ್ಯಾಕ್ಟ್‌‌ಚೆಕ್‌: ಇದು ಭಯೋತ್ಪಾದಕರನ್ನು ಬಂಧಿಸುವ ದೃಶ್ಯವಲ್ಲ! | Naanu gauri

‘ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರನ್ನು ಸೆರೆಹಿಡಿಯುತ್ತಿರುವ ಪೊಲೀಸ್ ಸಿಬ್ಬಂದಿಯ ಲೈವ್ ದೃಶ್ಯಾವಳಿ’ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಕೆಲವು ಕಡೆಯಲ್ಲಿ ಇದೇ ವಿಡಿಯೋವನ್ನು, ‘ಉತ್ತರ ಪ್ರದೇಶ ಪೊಲೀಸರು ಗಾಜಿಯಾಬಾದ್‌ನಲ್ಲಿ ಕಳ್ಳನನ್ನು ಹಿಡಿಯುವ ದೃಶ್ಯಗಳು’ ಎಂದು ಹೇಳಿ ಶೇರ್‌ ಮಾಡಲಾಗುತ್ತಿದೆ.

ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕನನ್ನು ಬಂಧಿಸಿತ್ತು. ಈ ವರದಿಗಳ ನಡುವೆ, ಈ ವೈರಲ್‌ ವಿಡಿಯೊ ಮತ್ತು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್‌

ವಾಸ್ತವದಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೋ, ಬ್ರೆಜಿಲ್ ಪೊಲೀಸ್ ಸಿಬ್ಬಂದಿ 17 ವರ್ಷದ ಯುವ ಬೈಕ್ ಸವಾರನನ್ನು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಿರುವ ವಿಡಿಯೊವಾಗಿದೆ. ಈ ಘಟನೆ 2021 ಆಗಸ್ಟ್ 01 ರಂದು ಬ್ರೆಜಿಲ್‌ನ ಪೆರೋಲಾ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌ | ನೆದರ್‌ಲ್ಯಾಂಡ್ಸ್‌‌ನ ಡಚ್‌‌‌‌‌ ವಿದ್ಯಾರ್ಥಿಗಳಿಗೆ 5 ನೇ ತರಗತಿಯಿಂದ ಭಗವದ್ಗೀತೆ ಕಡ್ಡಾಯ! – ನಿಜವೆ?

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡುಕಾಡಿದಾಗ, ಇದೇ ರೀತಿಯ ದೃಶ್ಯಾವಳಿಗಳು ‘ಪರಾನಾ ನೋ ಅರ್’ ಸುದ್ದಿ ಚಾನೆಲ್, 03 ಆಗಸ್ಟ್ 2021 ರಂದು ಪ್ರಕಟಿಸಿದ ವೀಡಿಯೊದಲ್ಲಿ ಕಂಡುಬಂದಿವೆ. ‘ಪರಾನಾ ನೋ ಆರ್’ ಒಂದು ಸುದ್ದಿ ಕಾರ್ಯಕ್ರಮವಾಗಿದ್ದು, ಬ್ರೆಜಿಲ್‌ ಮೂಲದ ‘ರಿಮೈಸ್‌’ ಸುದ್ದಿ ಮಾಧ್ಯಮದಲ್ಲಿ ನಿಯಮಿತವಾಗಿ ಪ್ರಸಾರವಾಗುತ್ತದೆ.

ಬ್ರೆಜಿಲ್‌ನ ಪೆರೋಲಾದಲ್ಲಿ ಬ್ರೆಜಿಲ್ ಪೊಲೀಸರು ಯುವ ಬೈಕ್ ಸವಾರನನ್ನು ಹಿಡಿಯುವ ದೃಶ್ಯಾವಳಿಗಳು ಎಂದು ಈ ವೀಡಿಯೊ ವರದಿ ಹೇಳಿದೆ. ಈ ಘಟನೆ 01 ಆಗಸ್ಟ್ 2021 ರಂದು ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆಯ ಸಂಪೂರ್ಣ ವಿವರಗಳನ್ನು ‘ರಿಕ್ಮೈಸ್’ ಸುದ್ದಿ ವೆಬ್‌ಸೈಟ್ 2021 ರ ಆಗಸ್ಟ್ 02 ರಂದು ಒಂದು ಲೇಖನವನ್ನು ಪ್ರಕಟಿಸಿತ್ತು. ಈ ಲೇಖನದಲ್ಲಿ 17 ವರ್ಷದ ಯುವ ಬೈಕ್‌‌ ಸವಾರನನ್ನು ಪೆರೋಲಾ ಮಿಲಿಟರಿ ಪೋಲಿಸ್‌ನಿಂದ ತಪ್ಪಿಸಿಕೊಂಡಿದ್ದಕ್ಕಾಗಿ ಬಂಧಿಸಲಾಯಿತು ಎಂದು ವರದಿ ಮಾಡಿದೆ. ಲೇಖನದ ಪ್ರಕಾರ, ಪೆರೋಲಾ ಮಿಲಿಟರಿ ಪೋಲಿಸ್ ಗಸ್ತು ನಡೆಸುತ್ತಿದ್ದಾಗ ಯುವ ಬೈಕ್‌‌ ಸವಾರನು ಅನುಮಾನಾಸ್ಪದ ರೀತಿಯಲ್ಲಿ ಪೊಲೀಸ್ ಕಾರನ್ನು ಹಿಂದಿಕ್ಕಿ ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್: ಆರೆಸ್ಸೆಸ್ಸಿನ ಸ್ವಯಂ ಸೇವಕಿ ಪಾಕಿಸ್ತಾನದ ಕುಸ್ತಿಪಟುವಿಗೆ ಹೊಡೆದ್ದಾರೆಂದು ವೈರಲ್‌ ಆದ ಈ ವಿಡಿಯೊ ಸುಳ್ಳು

ಪೆರೋಲಾ ಪೊಲೀಸ್ ಸಿಬ್ಬಂದಿ ಪರ್ಲ್ ಅವೆನ್ಯೂ ಬೈಂಗ್ಟನ್‌ನಲ್ಲಿ ಈ ಬೈಕ್ ಸವಾರನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಯುವಕನು ಬೈಕ್‌ನಿಂದ  ಬಿದ್ದ ನಂತರ ಮತ್ತೆ ಎದ್ದು ಓಡಲು ಪ್ರಯತ್ನಿಸಿದಾಗ ಪೋಲಿಸ್ ಅಧಿಕಾರಿಯು ಹಾರಿ ಬಂದು ಕಾಲಲ್ಲಿ ಒದ್ದು ಮತ್ತೆ ಕೆಡವುತ್ತಾರೆ.

ಪರವಾನಗಿ ಇಲ್ಲದೆ ಚಾಲನೆ, ನಿಲ್ಲಿಸುವಂತೆ ಕೇಳಿಕೊಂಡ ಆದೇಶಗಳನ್ನು ಪಾಲಿಸದಿರುವುದು, ಅಪಾಯಕಾರಿ ಚಾಲನೆ, ತಪ್ಪಾದ ದಾರಿಯಲ್ಲಿ ಓಡಿಸಿದ ಆರೋಪಗಳೊಂದಿಗೆ ಯುವಕನನ್ನು ಬಂಧಿಸಲಾಗಿದೆ. ಈ ಘಟನೆಯ ವಿವರಗಳನ್ನು ಹಲವಾರು ಸುದ್ದಿ ವೆಬ್‌ಸೈಟ್‌ಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಈ ಎಲ್ಲ ಸಾಕ್ಷ್ಯಾಧಾರಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಭಾರತದ  ಶ್ರೀನಗರದ ವಿಡಿಯೊ ಅಲ್ಲ, ಬ್ರೆಜಿಲ್‌ನದ್ದು ಎಂದು ತೀರ್ಮಾನಿಸಬಹುದು. ಒಟ್ಟಾರೆಯಾಗಿ ಹೇಳುವುದಾದರೆ, ಶ್ರೀನಗರದಲ್ಲಿ ಭಯೋತ್ಪಾದಕರನ್ನು ಬಂಧಿಸುವ ದೃಶ್ಯಗಳು ಎಂದು ಬ್ರೆಜಿಲ್‌ನಲ್ಲಿ ನಡೆದ ಘಟನೆಯ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ‘ಪಿಎಂ ಕನ್ಯಾ ಯೋಜನೆ’ ಅಡಿಯಲ್ಲಿ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ₹2000 ಸಿಗುವುದು ನಿಜವೆ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here